ವಿಷಯಕ್ಕೆ ಹೋಗು

ಯಾದವಾಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯಾದವಾಡ
ಯಾದವಾಡ
village
Population
 (೨೦೧೧)
 • Total೧೫೦೦೦


ಯಾದವಾಡ ಒಂದು ಗ್ರಾಮ ಹಾಗೂ ಪುಣ್ಯಕ್ಷೇತ್ರ. ಯಾದವಾಡ ಗ್ರಾಮವು ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನಲ್ಲಿದೆ. ಯಾದವಾಡ ಗ್ರಾಮವು ಜಿಲ್ಲಾ ಕೇಂದ್ರ ಬೆಳಗಾವಿದಿಂದ ಸುಮಾರು ೭೦ ಕಿ.ಮಿ. ಇದೆ.

ಚರಿತ್ರೆ

[ಬದಲಾಯಿಸಿ]

ಗ್ರಾಮದಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆ ಕೇಂದ್ರ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಸಿಂಡಿಕೇಟ್ ಬ್ಯಾಂಕ್ ಹಾಗೂ ಇತರೆ ಕಚೇರಿಗಳಿವೆ.

ದೇವಾಲಯಗಳು

[ಬದಲಾಯಿಸಿ]

ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಪಾಂಡುರಂಗ - ವಿಠ್ಠಲ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಮುಖ್ಯ ದೇವಸ್ಥಾನಗಳು, ಘಟ್ಟಗಿ ಬಸವ ದೇವಸ್ಥಾನ, ಗ್ರಾಮ ದೇವತೆ ತಾಯಿ ಹೊನ್ನಮ್ಮ ದೇವಾಯಗಳು ಪ್ರಸಿದ್ಧ.

ಮಸೀದಿಗಳು

[ಬದಲಾಯಿಸಿ]

ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ

[ಬದಲಾಯಿಸಿ]

ಗ್ರಾಮದ ಪ್ರತಿಶತ ೭೫ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಹಬ್ಬಗಳು

[ಬದಲಾಯಿಸಿ]

ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ. ಪ್ರತೀ ವರ್ಷ ಹನುಮ ಜಯಂತಿಯ ದಿನದಂದು ಘಟ್ಟಗಿ ಬಸವೇಶನ ಜಾತ್ರಾ ಮಹೋತ್ಸವ ಜರುಗುತ್ತದೆ. ೨೦೨೩ರ ವಿಜಯದಶಮಿ ದಿನದಿಂದ ಗ್ರಾಮ ದೇವತೆ ಹೊನ್ನಮ್ಮ ತಾಯಿಯ ಜಾತ್ರೆ ಮತ್ತು ರಥೋತ್ಸವ ಪ್ರಾರಂಭಗೊಂಡಿದೆ, ಈ ರತೋತ್ಸವವು ಪ್ರತೀ ವರ್ಷ ವಿಜಯದಶಮಿಯ ದಿನದಂದು ಆಚರಿಸಲಾಗುವುದು.

ಶಿಕ್ಷಣ

[ಬದಲಾಯಿಸಿ]

ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಗೂ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ಇವೆ.

ಆರೋಗ್ಯ

[ಬದಲಾಯಿಸಿ]

ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ.

ಉದ್ಯೋಗ

[ಬದಲಾಯಿಸಿ]

ಯಾದವಾಡ ಗ್ರಾಮದಲ್ಲಿ ವಿವಿಧ ಖಾಸಗಿ ಸಿಮೆಂಟ್ ಕಾರಖಾನೆಗಳು ಸ್ಥಾಪಿಸಲಾಗಿದ್ದು, ದೇಶದ ವಿವಿಧ ಭಾಗಗಳ ಉದ್ಯೋಗಾಕಾಂಕ್ಷಿಗಳು ಬರುತ್ತಾರೆ. ದಾಲ್ಮಿಯಾ ಸಿಮೆಂಟ್, ರತ್ನ ಸಿಮೆಂಟ್, ಕಟ್ವಾ ಸಿಮೆಂಟ್ ಹಲವಾರು ಕಾರ್ಖಾನೆಗಳಿವೆ

ಆರಕ್ಷಕ (ಪೋಲಿಸ್) ಠಾಣೆ

[ಬದಲಾಯಿಸಿ]

ಗ್ರಾಮದಿಂದ ಸುಮಾರು ೧೫ ಕಿಲೋ ಮೀಟರ್ ಕೂಲಗೊಡನಲ್ಲಿ ಇದೆ.

"https://kn.wikipedia.org/w/index.php?title=ಯಾದವಾಡ&oldid=1202676" ಇಂದ ಪಡೆಯಲ್ಪಟ್ಟಿದೆ