ಯಶೋದಮ್ಮ ಸಿದ್ಬಟ್ಟೆ
ಇವರು ಸರಕಾರಿ ಶಿಕ್ಷಕಿಯಾಗಿ ವೃತ್ತಿಯನ್ನು ಪ್ರಾರಂಭಿಸಿದರು. ವೃತ್ತಿ ನೈಪುಣ್ಯತೆಯಿಂದ ಜಿಲ್ಲಾ ಮಟ್ಟದ, ರಾಜ್ಯ ಮತ್ತು ರಾಷ್ರ್ಟಪ್ರಶಸ್ತಿಗಳನ್ನು ಕರ್ನಾಟಕ ಹಾಗೂ ಭಾರತ ಸರ್ಕಾರದಿಂದ ಪಡೆದ ಮಹಿಳೆಯಾಗಿದ್ದಾರೆ[೧].
ಶಿಕ್ಷಣ
[ಬದಲಾಯಿಸಿ]ಶಿಕ್ಷಕವೃತ್ತಿಯ ಪ್ರಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರಸಿದ್ಧರಾದವರು. ಅಕ್ಕಮಹಾದೇವಿ ಕಾಲೇಜಿನ ಪ್ರಾರಂಭದ ಮೊದಲ ವಿದ್ಯಾರ್ಥಿಯಾಗಿ ಸೇರಿಕೊಂಡರು ನಂತರ ಮೈಸೂರಿಗೆ ವರ್ಗವಾಗಿ ಹೋಗಿ ಅಧ್ಯಯನ-ಅಧ್ಯಾಪನ ಜೊತೆಯಾಗಿ ಮಾಡಿ ಮೈಸೂರು ವಿಶ್ವವಿದ್ಯಾಲಯ ಬಿ.ಎ., ಎಂ.ಎ., ಪದವಿ ಪಡೆದುಕೊಂಡರು.
ಕೆಲಸ
[ಬದಲಾಯಿಸಿ]ಮರಳಿ ಬೀದರಿಗೆ ಬಂದಾಗ ಉಪನ್ಯಾಸ, ಕತೆ, ಕವನ, ಹರಟೆ ಮೊದಲಾದುವುಗಳನ್ನು ಬೀದರಿನ ಪತ್ರಿಕೆಗಳಲ್ಲಿ "ಯಬಿಸಿ" ಕಾವ್ಯನಾಮದಿಂದ ಬರೆದರು. ಇವರು "ಮಂಗಳಾ" ಕಾದಂಬರಿ ಬರೆದಿದ್ದಾರೆ. ಎಲ್ಲರ ಬಾಯಲ್ಲಿ "ಮಂಗಳಾ" ಚಿರವಾಗಿ ಪತ್ರಿಕೆಯಲ್ಲಿ ಧಾರಾವಾಹಿಯಾಗಿ (ಪತ್ರಿಕೆಯ ಸಂಪಾದಕ ಜಿ.ಎಚ್. ಶೋಭಾ) ಪ್ರಕಟವಾಗಿದೆ. ಇವರು "ಪ್ರಗತಿ ಪಥದಲ್ಲಿ ಭಾರತೀಯ ನಾರಿ" ಎಂಬ ಲೇಖನಗಳ ಸಂಕಲನ ಕೃತಿ ಬಿಡುಗಡೆ ಮಾಡಿರುತ್ತಾರೆ. ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾಷಾಬೋಧಕಿಯಾಗಿ ಕಾರ್ಯನಿರ್ವಹಿಸಿ ವೃತ್ತಿಯಿಂದ ನಿವೃತ್ತರಾಗಿ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ.
ಕೃತಿಗಳು
[ಬದಲಾಯಿಸಿ]ಯಶೋದಮ್ಮ ಸಿದ್‍ಬಟ್ಟೆ ಅವರ ಕೃತಿಗಳು
ಗೌರವ
[ಬದಲಾಯಿಸಿ]- ಕರ್ನಾಟಕ ಲೇಖಕಿಯರ ಸಂಘದಿಂದ ಗೌರವ , ೨೦೦೭[೪]
ಉಲ್ಲೇಖ
[ಬದಲಾಯಿಸಿ]- ↑ http://kannada.oneindia.com/news/2000/09/06/naward.html
- ↑ "ಆರ್ಕೈವ್ ನಕಲು". Archived from the original on 2016-03-04. Retrieved 2015-12-04.
- ↑ ೩.೦ ೩.೧ https://www.sapnaonline.com/shop/Author/yashodamma-sidbatte
- ↑ ಡೆಕ್ಕನ್ ಹೆರಾಲ್ಡ್ ವರದಿ https://web.archive.org/web/20151204152454/http://archive.deccanherald.com/DeccanHerald.com/Content/Nov212007/state2007112136894.asp