ಯಡಿಯೂರ್ ಟರ್ಮಿನಸ್

ವಿಕಿಪೀಡಿಯ ಇಂದ
Jump to navigation Jump to search

'ಯಡಿಯೂರ್ ಟರ್ಮಿನಸ್',[೧] ದಕ್ಷಿಣ ಬೆಂಗಳೂರಿನ 'ವೆಸ್ಟ್ ಎಂಡ್,' ಎಂದು ಹೇಳುವ, ಬಸ್ ಸ್ಟಾಂಡ್ ನ ಹಿಂದಿನ ಸ್ಟಾಪ್ ಎಂದು ಗುರುತಿಸಬಹುದು. ಈ ರಸ್ತೆಯಲ್ಲೇ 'ಶಾಂತಿ ಸಿನೆಮಾ ಥಿಯೇಟರ್,' ಇದೆ. 'ಮಾಡೆಲ್ ಹೌಸ್ ಸ್ಟ್ರೀಟ್,' ಯಡಿಯೂರ್ ಟರ್ಮಿನಸ್ ಬದಿಯಲ್ಲಿದೆ. ನಾವು ನಡೆದು, 'ಕೃಷ್ಣರಾವ್ ಪಾರ್ಕ್,' ನಿಂದ ಕಕ್ಷಿಣಕ್ಕೆ ಬಂದರೆ, 'ರತ್ನವಿಲಾಸ ರಸ್ತೆ', 'ರಿಸರ್ವಾಯರ್ ರಸ್ತೆ,' ಯನಂತರ, ಇಲ್ಲಿಂದ ಮುಂದೆ, 'ಚೆನ್ನಮ್ಮನ ಕೆರೆ', 'ಏಡಿಯೂರ್ ಕೆರೆ', 'ಜಯನಗರ ಕಾಲೇಜ್,' 'ಜೆ.ಬಿ.ಎಸ್. ನರ್ಸಿಂಗ್ ಹೋಮ್', ನಂತರ 'ಶಿವರಾತ್ರೇಶ್ವರ ಸ್ಮಾಮಿಗಳ ಕಾಲೇಜ್', ಮತ್ತು ಅಂತ್ಯದಲ್ಲಿ 'ಬನಶಂಕರಿ ಟರ್ಮಿನಸ್' ಬರುತ್ತದೆ.

'ಜಯನಗರಬಡಾವಣೆ', ಯನಂತರ 'ಯಡಿಯೂರ್ ಟರ್ಮಿನಸ್' ಕೇಂದ್ರಸ್ಥಾನವಾಯಿತು[ಬದಲಾಯಿಸಿ]

೧೯೭೦ ರ ಸಮಯದಲ್ಲಿ, 'ಯಡಿಯೂರ್ ಟರ್ಮಿನಸ್' ಆಗತಾನೇ ಅಸ್ತಿತ್ವಕ್ಕೆ ಬಂದಿದ್ದ, ಜಯನಗರ ಉಪನಗರದ, ಕೊನೆಯ ಬಸ್ ನಿಲ್ದಾಣವಾಗಿತ್ತು. ಇಲ್ಲಿಂದ '೬೧- ಎ, ಬಸ್ ಶುರುವಾಗಿ 'ಮಲ್ಲೇಶ್ವರ' ದ ವರೆಗೆ ಹೋಗುತ್ತಿತ್ತು. ಆ ಬಸ್ಸಿನ ಮಾರ್ಗ, 'ಡಿ. ವಿ. ಜಿ' ರಸ್ತೆ, ಮುಖಾಂತರ 'ನೆಟ್ಕಲ್ಲಪ್ಪ ವೃತ್ತ', 'ಟ್ಯಾಗೋರ್ ವೃತ್ತ', 'ಜಯನಗರ ಪೋಲೀಸ್ ಸ್ಟೇಷನ್', 'ಗಾಂಧಿಬಝಾರ್', 'ಸಿಟಿಮಾರ್ಕೆಟ್' ಗೆ ಹೋಗಿ ಅಲ್ಲಿಂದ ಮುಂದೆ ಸಾಗುತ್ತಿತ್ತು, ಸಿಟಿ ರೈಲ್ವೆ ಸ್ಟೇಷನ್ ಮತ್ತು ಕೊನೆಗೆ, ಮಲ್ಲೇಶ್ವರಂ ೧೮ ನೇ ಕ್ರಾಸ್. ಈ ಟರ್ಮಿನಸ್ ಬಳಿಯೇ 'ಮಾಜೀ ನ್ಯಾಯಾಧೀಶ ನಿವೃತ್ತ ನಿಟ್ಟೂರ್ ಶ್ರೀನಿವಾಸರಾವ್,' ರವರ ಬಂಗಲೆ ಇದೆ. 'ಲಾಲ್ ಬಾಗ್', 'ರಾಷ್ಟ್ರೀಯ ವಿದ್ಯಾಲಯ' ಕೂಡಾ ತೀರಾ ಹತ್ತಿರ.

ಇಂಡಿಯನ್ ಇನ್ ಸ್ಟಿ ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್,'ಕೃಷ್ಣರಾವ್ ಪಾರ್ಕ್, ನ ಎದುರಿಗೇ ಇದೆ[ಬದಲಾಯಿಸಿ]

ಕೃಷ್ಣರಾವ್ ಪಾರ್ಕ್ ಬಳಿಯ 'ಬಿ. ಪಿ. ವಾಡಿಯಾ ರಸ್ತೆ,' ಯಲ್ಲಿ, ಸುಪ್ರಸಿದ್ಧ, 'ಇಂಡಿಯನ್ ಇನ್ ಸ್ಟಿ ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್,' 'ಲೈಬ್ರೆರಿ,', ಮತ್ತು, 'ಯುನೈಟೆಡ್ ಲಾಡ್ಜ್ ಆಫ್ ಥಿಯಸಾಫಿಸ್ಟ್ಸ್,' ಇದೆ. ಪ್ರತಿ ವಾರದಲ್ಲಿಯೂ ಅತ್ಯಂತ ಪ್ರಮುಖ-ವ್ಯಕ್ತಿಗಳ, ಭಾಷಣ, ವ್ಯಾಖ್ಯಾನ, ಸಂಗೀತ ಮುಂತಾದ ಕಾರ್ಯಕ್ರಮಗಳು ಇರುತ್ತವೆ. ಅವೆಲ್ಲಾ ಉಚಿತ.

ಉಲ್ಲೇಖಗಳು[ಬದಲಾಯಿಸಿ]