ಮ್ಯಾಕ್ ಮೋಹನ್
(೧೯೩೮-೧೦ ಮೇ, ೨೦೧೦)
ಹಿಂದಿ-ಸಿನಿಮಾರಂಗದಲ್ಲಿ ಕುರುಚಲು ಗಡ್ಡದ, ಬಿಳಿಚಿದ ಮುಖದ, ಕತ್ತಿನ ಸುತ್ತ ಬಂದೂಕು ನೇತುಹಾಕಿಕೊಂಡು ಮ್ಯಾಕ್ ಮೋಹನ್, ಎಂದೇ ಗುರುತಿಸಲ್ಪಡುವ 'ಮೋಹನ್ ಮಖಿಜಾನಿ'ಯವರು, ಒಬ್ಬ ಪ್ರಭಾವಿತ ಪೋಷಕನಟನಾಗಿ, ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮ್ಮದೇ ಆದ ವಿಶೇಷ ಕಿರ್ದಾರ್ ಗಳಲ್ಲಿ ಪ್ರಖ್ಯಾತರಾಗಿರುವ ಮ್ಯಾಕ್ ಮೋಹನ್ ರವರು, ಅನೇಕ ಹಿಂದಿ ಚಿತ್ರಗಳಲ್ಲಿ, ಪ್ರಾಂತೀಯ ಭಾಷೆಗಳಲ್ಲಿ,ರಶ್ಯನ್ ಮತ್ತು ಸ್ಪಾನಿಷ್ ಭಾಷೆಗಳ ಚಿಲನಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಅವರು,ಉತ್ತರ ಪ್ರದೇಶದ ಲಖ್ನೊನಗರದಲ್ಲಿ ಜನಿಸಿದರು.
ಕ್ರಿಕೆಟಿಗನಾಗಲು ಬಂದ ಮ್ಯಾಕ್ ಮೋಹನ್, ಬಾಲಿವುಡ್ ನಟರಾದರು
[ಬದಲಾಯಿಸಿ]ಬೊಂಬಾಯಿಗೆ ಬಂದದ್ದು ಕ್ರಿಕೆಟ್ ಆಟಗಾರನಾಗುವ ಹಂಬಲದಿಂದ. ಹೇಗೋ ಚಲನಚಿತ್ರರಂಗಕ್ಕೆ ಪ್ರವೇಶಿಸಿ ಒಬ್ಬ ಸಮರ್ಥ ನಟರಾದರು. ಪುಣೆಯ 'ಟೆಲಿವಿಷನ್ ಅಂಡ್ ಫಿಲ್ಸ್ ಇನ್ಸ್ಟಿ ಟ್ಯೂಟ್' ಗೆ ದಾಖಲಾದರು. ಅವರ ಬ್ಯಾಚ್ ನಲ್ಲಿ ಅತ್ಯಂತ ಹೆಚ್ಚು ಅಂಕಗಳನ್ನು ಪಡೆದವರಲ್ಲೊಬ್ಬರಾಗಿದ್ದರು. ಕಲಿಕೆಯ ಬಳಿಕ, ಹಿಂದಿ ಚಲನಚಿತ್ರ ರಂಗಕ್ಕೆ ವಿನೋದ್ ಮೆಹ್ರಾರವರ ಸಹಪಾಠಿಯಾಗಿ, ಪಾದಾರ್ಪಣೆಮಾಡಿದರು. ಆಗಿನ ಕಾಲದಲ್ಲಿ ವಿನೋದ್ ಮೆಹ್ರಾ ತಮ್ಮನಾಯಕ ಅಭಿನಯದಿಂದ ರಸಿಕರ ಮನಸ್ಸನ್ನು ಗೆದ್ದಿದ್ದರು.
'ಹಕೀಕತ್ ಚಿತ್ರ'ದಿಂದ ಅವರ ಸಿನಿಮಾ-ನಟನಾಜೀವನ ಆರಂಭವಾಯಿತು
[ಬದಲಾಯಿಸಿ]೧೯೬೪. ರಲ್ಲಿ ಚೇತನ್ ಆನಂದ್ ನಿರ್ಮಿಸಿದ,'ಹಕೀಕತ್ ಚಿತ್ರ'ದಲ್ಲಿ ತಮ್ಮ ವೃತ್ತಿಯನ್ನು ಆರಂಬಿಸಿದರು. ನೋಡಲು ಅಷ್ಟೇನೂ ಸ್ಪ್ರುರದೃಪಿಯಲ್ಲದ ತಮ್ಮ ನಿಲುವಿನಿಂದಲೇ ವಿಭಿನ್ನವಾಗಿ ಕಾಣಿಸುವ ಮ್ಯಾಕ್ ಮೋಹನ್ ಬಾಲಿವುಡ್ ಸಿನಿಮಾವಲಯದಲ್ಲಿ ಸಣ್ಣದಾದರೂ ಪ್ರಾಮುಖ್ಯತೆ ಹೊಂದಿರುವ ನೂರಾರು ಪಾತ್ರಗಳಲ್ಲಿ ಕಾಣಿಸಿಕೊಂಡರು. ಮ್ಯಾಲಕ್ ಮೋಹನ್ ಒಟ್ಟಾರೆ ಅಭಿನಯಿಸಿದ್ದು, ೧೯೦ ಚಿತ್ರಗಳಲ್ಲಿ. ಆದರೆ ಅವರನ್ನು ಚಲನ-ಚಿತ್ರರಸಿಕರು ಗುರುತಿಸಿದ್ದು ,೧೯೭೫ ರಲ್ಲಿ ರಮೇಶ್ ಸಿಪ್ಪಿಯವರು ನಿರ್ಮಾಣಮಾಡಿದ,ಸೂಪರ್ ಹಿಟ್ ಚಿತ್ರ, ಶೋಲೆ, ಅವರ ಸಾಂಭಾ ಪಾತ್ರದಿಂದ. ಗಬ್ಬರ್ ಸಿಂಗ್ ತರಹ ಸಾಭಾಪಾತ್ರಧಾರಿ ಮ್ಯಾಕ್ ಮೋಹನ್ ರವರೂ ಮನೆಮಾತಾದರು.
'ಮ್ಯಾಕ್ ಮೋಹನ್' ರ ಕೊನೆಯ ಚಿತ್ರ
[ಬದಲಾಯಿಸಿ]೭೧ ವರ್ಷಹರೆಯದ 'ಮ್ಯಾಕ್ ಮೋಹನ್' ರವರ, ಕೊನೆಯ ಚಿತ್ರ, ಅತಿಥಿ ತುಮ್ ಕಬ್ ಜಾವೊಗೆ, ಚಿತ್ರದಲ್ಲಿ, ಅವರು 'ಗೆಸ್ಟ್ ಅಪಿಯರೆನ್ಸ್' ನಲ್ಲಿ, ಕಾಣಿಸಿಕೊಂಡಿದ್ದಾರೆ.
ಮರಣ, ಹಾಗೂ ಮರಣೋತ್ತರ ಕ್ರಿಯೆಗಳು
[ಬದಲಾಯಿಸಿ]೨೦೦೯ ರ ನವೆಂಬರ್ ನಲ್ಲಿ ಅಶ್ವಿನಿ ಧೀರ್ ನಿರ್ಮಾಣದ, 'ಅತಿಥಿ ತುಮ್ ಕಬ್ ಜಾವೊಗೆ' ಚಿತ್ರೀಕರಣದ ಸಮಯದಲ್ಲಿ, ಅಂಧೇರಿಯ, 'ಕೋಕಿಲಾ ಬೆನ್ ಧೀರುಭಾಯ್ ಅಂಬಾನಿ ಆಸ್ಪತ್ರೆ,' ಗೆ ಸೇರಿಸಲ್ಪಟ್ಟರು. 'ಮ್ಯಾಕ್ ಮೋಹನ್ ' ಶ್ವಾಶಕೋಶದ ಟ್ಯೂಮರ್ (ಕ್ಯಾನ್ಸರ್) ಉಲ್ಬಣಗೊಂಡ ಪರಿಣಾಮವಾಗಿ, ೭೧ ವರ್ಷಪ್ರಾಯದ ಮ್ಯಾಕ್ ಮೋಹನ್ ರವರು, ೧೦, ಮೇ, ೨೦೧೦ ರಂದು, ಮೃತರಾದರು. ಅವರ ಪಾರ್ಥಿವ ಶರೀರದ ಅಂತ್ಯ-ಕ್ರಿಯಾಕರ್ಮಗಳನ್ನು ಮುಂಬೈನ ದಾದರ್ ನ ಶಿವಾಜಿಪಾರ್ಕ್ ನಲ್ಲಿರುವ 'ಮೃತದೇಹ ದಹನಶಾಲೆ'ಯಲ್ಲಿ, ೧೧, ಮೇ, ೨೦೧೦ ರ ಮದ್ಯಾನ್ಹದಂದು ಅಪಾರ ಬಂಧುವರ್ಗ, ಹಾಗೂ ಸ್ನೇಹಿತ, ಹಿತೈಷಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು.
ವೈವಾಹಿಕ ಜೀವನ
[ಬದಲಾಯಿಸಿ]ಮ್ಯಾಕ್ ಮೋಹನ್ ಮದುವೆಯಾದದ್ದು, ಮಿನಿಯವರನ್ನು, ವಿನತಿ ಮತ್ತು ಮಂಜರಿಯೆಂಬ, ಇಬ್ಬರು ಮಗಳಿದ್ದಾರೆ. ಮಗ, ವಿಕ್ರಾಂತ್. ಮ್ಯಾಕ್ ಮೋಹನ್, ರವೀನ ಟಂಡನ್ ರವರ ಸೋದರಮಾವ.
ಮ್ಯಾಕ್ ಮೋಹನ್ ರವರ ಪಾತ್ರಾಭಿನಯದ ಚಲನಚಿತ್ರಗಳು
[ಬದಲಾಯಿಸಿ]- 1964- ಹಕೀಕತ್ ಚಿತ್ರದಲ್ಲಿ ರಾಮ್ ಸ್ವರೂಪ್ ರವರ ಕಿರಿಯ ತಮ್ಮನ ಪಾತ್ರದಲ್ಲಿ
- 1973- ಹಸ್ತೆ ಝಕಮ್ ಚಿತ್ರದಲ್ಲಿ ಬ್ರಗೆನ್ ಝಾ ರ ಪಾತ್ರದಲ್ಲಿ
- 1974- ಮಜ್ಬೂರ್ ಚಿತ್ರದಲ್ಲಿ ಪ್ರಕಾಶ್ ರವರ ಪಾತ್ರದಲ್ಲಿ
- 1975- ಸುಪ್ರಸಿದ್ಧ ಶೋಲೆ ಚಿತ್ರದಲ್ಲಿ ಸಾಂಬಾ ಪಾತ್ರದಲ್ಲಿ
- 1978- ಡಾನ್ ಚಿತ್ರದಲ್ಲಿ ಮ್ಯಾಕ್ ನ ಪಾತ್ರದಲ್ಲಿ
- 1980- ಶಾನ್ ಚಿತ್ರದಲ್ಲಿ ಶಾಕಾರವರ ಸಹಾಯಕ, ಜಗ್ಮೋಹನ್ ಪಾತ್ರದಲ್ಲಿ