ಮೋಹಪರವಶತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ಹಿಂದೂ ಮಹಾಕಾವ್ಯದ ಈ ಚಿತ್ರಣದಲ್ಲಿ ಉಲೂಚಿ ಎಂಬ ನಾಗ ರಾಜಕುಮಾರಿಯು ಅರ್ಜುನನಿಂದ ಮೋಹಪರವಶಳಾಗುತ್ತಾಳೆ.

ಮೋಹಪರವಶತೆ (ರಾಗೋನ್ಮತ್ತತೆ, ವ್ಯಾಮೋಹ) ಎಂದರೆ ಸಾಮಾನ್ಯವಾಗಿ ವಿವೇಚನೆಯಿಲ್ಲದ ಭಾವೋದ್ವೇಗದಿಂದ ಮತ್ತೊಬ್ಬ ವ್ಯಕ್ತಿಯ ವಿಷಯದಲ್ಲಿ ಅತಿಯಾಗಿ ಒಳಗೊಳ್ಳುವ ಸ್ಥಿತಿ. ಆ ವ್ಯಕ್ತಿಗಾಗಿ ಒಬ್ಬರು ಪ್ರಬಲ ಪ್ರಣಯ ಸಂಬಂಧಿ ಅಥವಾ ನಿಷ್ಕಾಮ ಅನಿಸಿಕೆಗಳನ್ನು ಬೆಳೆಸಿಕೊಂಡಿರುತ್ತಾರೆ. ಮೋಹಪರವಶತೆಯು ಪ್ರೌಢ ಪ್ರೀತಿಯಾಗಿ ಕೂಡ ಅಭಿವೃದ್ಧಿಯಾಗಬಹುದು. ಗೋಲ್ಡ್‌ಸ್ಟೈನ್ ಮತ್ತು ಬ್ರ್ಯಾಂಡನ್ ಮೋಹಪರವಶತೆಯನ್ನು ಪ್ರೌಢವಾದ ಅನ್ಯೋನ್ಯತೆಯಾಗಿ ವಿಕಸನವಾಗುವ ಮೊದಲು ಒಂದು ಸಂಬಂಧದಲ್ಲಿನ ಮೊದಲ ಹಂತವೆಂದು ವಿವರಿಸುತ್ತಾರೆ. ಪ್ರೀತಿಯು ಮತ್ತೊಬ್ಬ ವ್ಯಕ್ತಿಯ ಬಗ್ಗೆ ಪ್ರೇಮಯುಕ್ತ ಅನುರಾಗ, ಉತ್ಸಾಹ ಅಥವಾ ಭಕ್ತಿಯಾಗಿರುತ್ತದೆ. ಆದರೆ ಮೋಹಪರವಶತೆಯು ಒಬ್ಬರ ಅಥವಾ ಒಂದರ ವಿಷಯದಲ್ಲಿ ಮೂರ್ಖ ಅಥವಾ ಗೀಳಿನಂಥ ಪ್ರಬಲವಾದ ಪ್ರೀತಿಯ, ಮೆಚ್ಚುಗೆ, ಅಥವಾ ಆಸಕ್ತಿಯ ಅನಿಸಿಕೆ. ಇದು ಒಂದು ಸಂಬಂಧದಲ್ಲಿ ಹೆಚ್ಚು ಆಳವಲ್ಲದ "ಮಧುಚಂದ್ರದ ಹಂತ"ವಾಗಿರುತ್ತದೆ.[೧]

ಉಲ್ಲೇಖಗಳು[ಬದಲಾಯಿಸಿ]

  1. Adebowale, Temi (28 June 2019). "What's the Difference Between Love and Infatuation?". www.menshealth.com. Men's Health. Retrieved 27 October 2019.