ವಿಷಯಕ್ಕೆ ಹೋಗು

ಮೋಹನದಾಸ (೨೦೧೯)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Mohandas
ನಿರ್ದೇಶನP. Sheshadri
ನಿರ್ಮಾಪಕM/S Mitra Chitra
ಚಿತ್ರಕಥೆP. Sheshadri
ಆಧಾರPapu Gandhi, Bapu Gandhi Aada Kathe: The Story of Mahatma Gandhi 
by Bolwar Mahammad Kunhi
&
The Story of My Experiments with Truth 
by Mahatma Gandhi
ಪಾತ್ರವರ್ಗParam Swamy
Samarth R. Hombal
Shruti
Anant Mahadevan
ಸಂಗೀತPravin Godkhindi
ಛಾಯಾಗ್ರಹಣG. S. Bhaskar
ಸಂಕಲನB. S. Kemparaju
ಬಿಡುಗಡೆಯಾಗಿದ್ದು
  • 2 ಅಕ್ಟೋಬರ್ 2019 (2019-10-02)
ದೇಶIndia
ಭಾಷೆKannada, Hindi, English
ಬಂಡವಾಳ 5 crores

‘ಮೋಹನದಾಸ’ ಮಹಾತ್ಮ ಗಾಂಧಿಯವರ ಬಾಲ್ಯವನ್ನು ಆಧರಿಸಿದ ಚಲನಚಿತ್ರ.  ಇದು ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನಿರ್ಮಾಣವಾಗಿದೆ.  ಇದರ ನಿರ್ದೇಶಕರು ಒಂಬತ್ತು ಭಾರಿ ರಾಷ್ಟ್ರೀಯ ಚಲನಪ್ರಶಸ್ತಿ ಪಡೆದ ಪಿ.ಶೇಷಾದ್ರಿ.

ಇದು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕ ಬೊಳುವಾರು ಮಹಮದ್ ಕುಂಞ್ ಅವರ "ಪಾಪು ಗಾಂಧಿ, ಬಾಪು ಗಾಂಧಿ ಆದಾ ಕಥೆ" ಮತ್ತು ಮಹಾತ್ಮ ಗಾಂಧಿಯವರ ಆತ್ಮಚರಿತ್ರೆ ಸತ್ಯದೊಂದಿಗೆ ನನ್ನ ಪ್ರಯೋಗಗಳು ಕೃತಿಗಳನ್ನು ಆಧರಿಸಿದೆ.

‘ಮೋಹನದಾಸ’ ಚಲನಚಿತ್ರದಲ್ಲಿ ಮೋಹನದಾಸನ ಆರು ವರ್ಷದ ಬಾಲ್ಯದಿಂದ ಹದಿನಾಲ್ಕು ವರ್ಷದ ಬಾಲ್ಯದವರೆಗಿನ ಕತೆ ಇದೆ.  ಆರು ವರ್ಷದ ಬಾಲಕನ ಪಾತ್ರವನ್ನು ಪರಮ್ ಸ್ವಾಮಿ ಮತ್ತು ಹದಿನಾಲ್ಕು ವರ್ಷದ ಬಾಲಕನ ಪಾತ್ರವನ್ನು ಸಮರ್ಥ ಅಭಿನಯಿಸಿದ್ದಾರೆ,  ತಾಯಿಯ ಪ್ರಾತ್ರದಲ್ಲಿ ಕನ್ನಡದ ಖ್ಯಾತ ನಟಿ ಶೃತಿ ಮತ್ತು ಕರಮಚಂದರ ಪಾತ್ರದಲ್ಲಿ ಅನಂತ್ ಮಹದೇವನ್ ಅಭಿನಯಿಸಿದ್ದಾರೆ.

ಕಥಾಸಾರಾಂಶ

[ಬದಲಾಯಿಸಿ]

ಸಾಮಾನ್ಯ ಮಗುವೊಂದು ಪರಿಪೂರ್ಣ ಮನುಷ್ಯನಾಗಿ ಬೆಳೆಯಲು, ಮಹಾತ್ಮನೆಂದು ಕರೆಸಿಕೊಳ್ಳಲು ಹೇಗೆ ಬದುಕಿ ಬಾಳಬೇಕು ಎಂಬುದನ್ನು ಗಾಂಧೀಜಿಯವರ ಬಾಲ್ಯದ ಕೆಲವು ಘಟನೆಗಳಿಂದ ನಿರೂಪಿಸಲ್ಪಟ್ಟ ರೂಪಕ ಈ ‘ಮೋಹನದಾಸ’.     

ನಿರ್ಮಾಣ

[ಬದಲಾಯಿಸಿ]

ಚಿತ್ರೀಕರಣ

[ಬದಲಾಯಿಸಿ]

ಚಿತ್ರದ ಬಹುಪಾಲು ಭಾಗವನ್ನು ಪೋರ್ಬಂದರ್ ಮತ್ತು ರಾಜ್‌ಕೋಟ್‌ನಲ್ಲಿ ಚಿತ್ರೀಕರಿಸಲಾಗಿದೆ.

ಈ ಕಥೆಯನ್ನು ಹೆಚ್ಚು ಪ್ರೇಕ್ಷಕರನ್ನು ತಲುಪಲು ಶೇಷಾದ್ರಿ ಉದ್ದೇಶಿಸಿರುವುದರಿಂದ ಈ ಚಿತ್ರವನ್ನು ಇಂಗ್ಲಿಷ್ ಕನ್ನಡ ಮತ್ತು ಹಿಂದಿ ಎಂಬ ಮೂರು ಭಾಷೆಗಳಲ್ಲಿ ಚಿತ್ರೀಕರಿಸಲಾಗಿದೆ. []

ಬಿಡುಗಡೆ

[ಬದಲಾಯಿಸಿ]

ಈ ಚಿತ್ರವು ಮಹಾತ್ಮ ಗಾಂಧಿಯವರ ಜನ್ಮ ದಿನದ ಮುನ್ನಾದಿನ ೨೦೨೧ ರ ಅಕ್ಟೋಬರ್ ೧ ರಂದು ವ್ಯಾಪಕವಾಗಿ ಚಲನಚಿತ್ರಗಳಲ್ಲಿ ಬಿಡುಗಡೆಯಾಯಿತು. ( ಎರಡು ವರ್ಷಗಳ ಹಿಂದೆ ಕೇವಲ ಎರಡು ಪ್ರದರ್ಶನಗಳನ್ನು ವ್ಯವಸ್ಥೆ ಮಾಡಲು ಸಾಧ್ಯವಾಗಿತ್ತು).[]

ಉಲ್ಲೇಖಗಳು

[ಬದಲಾಯಿಸಿ]
  1. https://www.theweek.in/theweek/cover/2019/06/27/Finding-Mohandas-A-filmmaker-attempt-to-capture-childhood-of-Gandhi.html
  2. https://www.vijayavani.net/mohanada-gandhi-life-story/

ಬಾಹ್ಯ ಲಿಂಕ್‌ಗಳು

[ಬದಲಾಯಿಸಿ]