ಮೋಹ
ಮೋಹ ಒಂದು ಸಂಸ್ಕೃತ ಶಬ್ದವಾಗಿದೆ. ಪ್ರಾಚೀನ ಪಠ್ಯಗಳಲ್ಲಿ ಈ ಶಬ್ದದ ಅರ್ಥ ದಿಗ್ಭ್ರಾಂತಿ ಅಥವಾ ಗೊಂದಲ. ಜೊತೆಗೆ ಗೊಂದಲ ಕಾರಣ, ಅಂದರೆ ಅವಿದ್ಯಾ ಅಥವಾ ಅಜ್ಞಾನ ಎಂಬ ಅರ್ಥವೂ ಇದೆ. ಹಿಂದಿಯಲ್ಲಿ ಇದನ್ನು ಆಸಕ್ತಿ ಎಂದೂ ಕರೆಯಲಾಗುತ್ತದೆ. ಇದನ್ನು ಜೀವನದಲ್ಲಿನ ಎಲ್ಲ ದುಃಖಗಳ ಮೂಲ ಕಾರಣವೆಂದು ಪರಿಗಣಿಸಲಾಗಿದೆ. ಹಿಂದೂ ಧಾರ್ಮಿಕ ಪಠ್ಯಗಳಲ್ಲಿ ಇದು ಅಜ್ಞಾನದ ಕಾರಣವೆಂದು ಹೇಳಲಾಗಿದೆ. ಪ್ರತಿಯಾಗಿ ಇದು ಮಾಯೆಯಿಂದ ಆಗಿದೆ ಎಂದು ಹೇಳಲಾಗಿದೆ. ಮತ್ತೊಂದು ಅರ್ಥದಲ್ಲಿ, ಇದರರ್ಥ ಪ್ರಾಪಂಚಿಕ ಭ್ರಮೆ, ವ್ಯಾಮೋಹದ ಜಾಲ. ಇದರ ಕ್ರಿಯೆಗಳು ಎರಡು: ಇದು ಸತ್ಯದ ಅರ್ಥಗ್ರಹಿಕೆಯನ್ನು ಮಬ್ಬುಗೊಳಿಸುತ್ತದೆ, ವಾಸ್ತವದ ಅರ್ಥಗ್ರಹಿಕೆಯನ್ನು ತಡೆಯುತ್ತದೆ, ಮತ್ತು ನಿರ್ಣಯ ಸಾಮರ್ಥ್ಯದಲ್ಲಿ ದೋಷವನ್ನು ಸೃಷ್ಟಿಸುತ್ತದೆ ಅಥವಾ ಮಿಥ್ಯಾ ಜ್ಞಾನಕ್ಕೆ ಕಾರಣವಾಗುತ್ತದೆ. ಮಾನವರು ತಮ್ಮ ಸ್ವಂತದ ಅಸ್ತಿತ್ವ ಅಥವಾ ಅಹಂಕಾರದ ಬಾಹ್ಯ ವಾಸ್ತವಿಕತೆಯಲ್ಲಿ ನಂಬಿಕೆ ಇಟ್ಟಿರುತ್ತಾರೆ; ಅವರು ತಪ್ಪಿರುವುದರಲ್ಲಿ ಸತ್ಯವನ್ನು ಕಾಣುತ್ತಾರೆ ಮತ್ತು ವೇದನೆಯನ್ನು ಉತ್ಪನ್ನ ಮಾಡುವುದರಲ್ಲಿ ಸುಖವನ್ನು ಅರಸುತ್ತಾರೆ.
ಗ್ರಂಥಸೂಚಿ
[ಬದಲಾಯಿಸಿ]- Sabadarth Sri Guru Granth Sahib. Amritsar, 1969
- Avtar Singh, Ethics of the Sikhs. Patiala, 1970
- Sher Singh, The Philosophy of Sikhism. Lahore, 1944
Above adapted from article By L. M. Joshi