ವಿಷಯಕ್ಕೆ ಹೋಗು

ಮೋಡ ಬಿತ್ತನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೋಡ ಬಿತ್ತನೆಯನ್ನು ಭೂ ಉತ್ಪಾದಕ ಉಪಕರಣಗಳು, ವಿಮಾನ, ಅಥವಾ ರಾಕೆಟ್‍ನಿಂದ ಮಾಡಬಹುದು

ಮೋಡ ಬಿತ್ತನೆ ಒಂದು ಬಗೆಯ ಹವಾಮಾನ ಬದಲಾವಣೆ, ವಾತಾವರಣದಲ್ಲಿ ವಸ್ತುಗಳನ್ನು ಹರಡಿ ಮೋಡಗಳಿಂದ ಬೀಳುವ ಅವಕ್ಷೇಪನದ ಪ್ರಮಾಣ ಅಥವಾ ಪ್ರಕಾರವನ್ನು ಬದಲಾಯಿಸುವ ಒಂದು ರೀತಿ. ಈ ವಸ್ತುಗಳು ಮೋಡ ಘನೀಕರಣ ಅಥವಾ ಮಂಜುಗಡ್ಡೆ ನಾಭಿಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಮೋಡದೊಳಗಿನ ಸೂಕ್ಷ್ಮಭೌತಿಕ ಪ್ರಕ್ರಿಯೆಗಳನ್ನು ಮಾರ್ಪಾಡು ಮಾಡುತ್ತವೆ. ಅವಕ್ಷೇಪನವನ್ನು (ಮಳೆ ಅಥವಾ ಹಿಮ) ಹೆಚ್ಚಿಸುವುದು ಇದರ ಸಾಮಾನ್ಯ ಉದ್ದೇಶವಾಗಿದೆ, ಆದರೆ ವಿಮಾನ ನಿಲ್ದಾಣಗಳಲ್ಲಿ ಆಲಿಕಲ್ಲು ಮತ್ತು ಮಂಜಿನ ನಿರೋಧವನ್ನೂ ವ್ಯಾಪಕವಾಗಿ ನಡೆಸಲಾಗುತ್ತದೆ.

ಮೋಡ ಬಿತ್ತನೆಯು ಪ್ರಕೃತಿಯಲ್ಲಿನ ಮಂಜುಗಡ್ಡೆ ಬೀಜಕಾರಕಗಳಿಂದಲೂ ಸಂಭವಿಸುತ್ತದೆ, ಇವುಗಳಲ್ಲಿ ಬಹುತೇಕ ಬ್ಯಾಕ್ಟೀರಿಯಾ ಜನ್ಯವಾಗಿರುತ್ತವೆ.[]

ಮೋಡ ಬಿತ್ತನೆಗೆ ಬಳಸಲ್ಪಡುವ ಅತ್ಯಂತ ಸಾಮಾನ್ಯ ರಾಸಾಯನಿಕಗಳೆಂದರೆ ಸಿಲ್ವರ್ ಅಯೊಡೈಡ್, ಪೊಟ್ಯಾಷಿಯಂ ಅಯೊಡೈಡ್ ಮತ್ತು ಘನೀಭವಿಸಿದ ಕಾರ್ಬನ್ ಡೈಆಕ್ಸೈಡ್. ಒಂದು ಅನಿಲವಾಗಿ ಹಿಗ್ಗುವ ದ್ರವ ಪ್ರೋಪೇನ್ ಅನ್ನೂ ಬಳಸಲಾಗಿದೆ. ಇದು ಸಿಲ್ವರ್ ಅಯೊಡೈಡ್‍ಗಿಂತ ಹೆಚ್ಚಿನ ತಾಪಮಾನಗಳಲ್ಲಿ ಮಂಜುಗಡ್ಡೆ ಹರಳುಗಳನ್ನು ಉತ್ಪಾದಿಸಬಲ್ಲದು. ಭರವಸೆಯ ಸಂಶೋಧನೆಯ ನಂತರ, ಪುಡಿ ಉಪ್ಪಿನಂತಹ ಆರ್ದ್ರಚೋಷಕ ವಸ್ತುಗಳ ಬಳಕೆ ಹೆಚ್ಚು ಜನಪ್ರಿಯವಾಗುತ್ತಿದೆ. ಮೋಡ ಬಿತ್ತನೆ ಮಾಡುವಾಗ, ಮೋಡಗಳೊಳಗಿನ ತಾಪಮಾನ -೭ ಮತ್ತು -೨೦ °ಸೆ ನಡುವಿದ್ದಾಗ ಹೆಚ್ಚಿನ ಹಿಮಪಾತ ಸಂಭವಿಸುತ್ತದೆ. ಸಿಲ್ವರ್ ಅಯೊಡೈಡ್‍ನಂತಹ ವಸ್ತುವಿನ ಒಳಸೇರಿಸುವಿಕೆಯು ಘನೀಕರಣ ಬೀಜೀಕರಣವನ್ನು ಉಂಟುಮಾಡುತ್ತದೆ.

ಮಧ್ಯಮ ಎತ್ತರದ ಮೋಡಗಳಲ್ಲಿ, ಸಾಮಾನ್ಯ ಬಿತ್ತನಾ ಕಾರ್ಯವಿಧಾನವು ಸಮತೋಲನ ಆವಿ ಒತ್ತಡ ನೀರಿಗಿಂತ ಮಂಜುಗಡ್ಡೆ ಮೇಲೆ ಕಡಿಮೆಯಿರುತ್ತದೆ ಎಂಬ ವಾಸ್ತವಾಂಶದ ಮೇಲೆ ಆಧಾರಿತವಾಗಿದೆ. ಅತ್ಯಂತ ಶೀತಲ ಮೋಡಗಳಲ್ಲಿ ಮಂಜುಗಡ್ಡೆ ಕಣಗಳ ರಚನೆಯು ದ್ರವ ಹನಿಗಳನ್ನು ಕಡಿಮೆಮಾಡಿ ಮಂಜುಗಡ್ಡೆ ಕಣಗಳು ಬೆಳೆಯುವುದಕ್ಕೆ ಅವಕಾಶ ನೀಡುತ್ತದೆ. ಸಾಕಷ್ಟು ಬೆಳವಣಿಗೆಯಾದರೆ, ಈ ಕಣಗಳು ಸಾಕಷ್ಟು ಭಾರವಾಗಿ ಮೋಡಗಳಿಂದ ಅವಕ್ಷೇಪನವಾಗಿ ಭೂಮಿಗೆ ಬೀಳುತ್ತವೆ. ಹೀಗೆ ಮಾಡದಿದ್ದರೆ ಮೋಡಗಳು ಮಳೆ ಅಥವಾ ಹಿಮವನ್ನು ಸುರಿಸದಿರಬಹುದು. ಈ ಪ್ರಕ್ರಿಯೆಯನ್ನು ಸ್ಥಾಯಿ ಬಿತ್ತನೆ ಎಂದು ಕರೆಯಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Christner BC, Morris CE, Foreman CM, Cai R, Sands DC (2008). "Ubiquity of biological ice nucleators in snowfall". Science. 319 (5867): 1214. Bibcode:2008Sci...319.1214C. doi:10.1126/science.1149757. PMID 18309078.


ಬಾಹ್ಯ ಕೊಂಡಿಗಳು

[ಬದಲಾಯಿಸಿ]