ಮೋಟ್ಸರೆಲ್ಲಾ ಚೀಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Mozzarella di bufala3.jpg

ಮೋಟ್ಸರೆಲ್ಲಾ ಚೀಸ್ ಸಾಂಪ್ರದಾಯಿಕವಾಗಿ ಇಟ್ಯಾಲಿಯನ್ ಎಮ್ಮೆ ಹಾಲಿನಿಂದ ಪಾಸ್ತಾ ಫಿಲ್ಯಾಟಾ ವಿಧಾನದಿಂದ ತಯಾರಿಸಲಾದ ದಕ್ಷಿಣ ಇಟಲಿಯ ಒಂದು ಗಿಣ್ಣು. ತಾಜಾ ಮೋಟ್ಸರೆಲ್ಲಾ ಸಾಮಾನ್ಯವಾಗಿ ಬಿಳಿಯಾಗಿರುತ್ತದೆ, ಆದರೆ ಋತುಮಾನಕ್ಕನುಗುಣವಾಗಿ ಪ್ರಾಣಿಯ ಆಹಾರಕ್ರಮವನ್ನು ಆಧರಿಸಿ ಸ್ವಲ್ಪ ಹಳದಿಗೆ ಬದಲಾಗಬಹುದು. ಅದು ಒಂದು ಅರೆಮೃದು ಗಿಣ್ಣು. ಅದರ ಹೆಚ್ಚಿನ ತೇವಾಂಶದ ಕಾರಣ, ಅದನ್ನು ಸಾಂಪ್ರದಾಯಿಕವಾಗಿ ತಯಾರಿಸಲಾದ ಒಂದು ದಿನದ ನಂತರ ಬಡಿಸಲಾಗುತ್ತದೆ, ಆದರೆ ಉಪ್ಪುನೀರಿನಲ್ಲಿ ಒಂದು ವಾರದವರೆಗೆ ಇಡಬಹುದು, ಅಥವಾ ನಿರ್ವಾತ ಮುದ್ರೆಯ ಪೊಟ್ಟಣಗಳಲ್ಲಿ ಮಾರಾಟಮಾಡಿದಾಗ ಇನ್ನೂ ಹೆಚ್ಚು ದಿನ ಇಡಬಹುದು.