ವಿಷಯಕ್ಕೆ ಹೋಗು

ಮೊಹಾಲಿ ಕ್ರಿಕೆಟ್ ಸ್ಟೇಡಿಯಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೊಹಾಲಿ ಕ್ರಿಕೆಟ್ ಸ್ಟೇಡಿಯಂ

ಹಿಂದೆ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ ಎಂದು ಕರೆಯಲ್ಪಡುತ್ತಿದ್ದ ಮೊಹಾಲಿ ಕ್ರಿಕೆಟ್ ಸ್ಟೇಡಿಯಂ ದೇಶದ ದೊಡ್ಡ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಒಂದು. 1993 ರಲ್ಲಿ ಪ್ರಾರಂಭವಾದ ಈ ಸ್ಟೇಡಿಯಂ ಅತ್ಯುತ್ತಮ ಸೌಲಭ್ಯಗಳ ಜೊತೆ ಕ್ರಿಕೆಟ್ ಅಭ್ಯಾಸಕ್ಕೆ ದೊಡ್ಡ ಜಾಗ, ಪಂದ್ಯಾವಳಿ ಗ್ರೌಂಡ್ ಮತ್ತು 45000 ವೀಕ್ಷಕರು ಕುಳಿತುಕೊಳ್ಳುವ ಆಸನಗಳನ್ನು ಒಳಗೊಂಡಿದೆ. ರಾಜ್ಯದ ಕ್ರಿಕೆಟ್ ಆಟಗಾರರಿಗೆ ತರಬೇತಿ ನೀಡುವ ಉತ್ತಮ ಸ್ಟೇಡಿಯಂಗಳಲ್ಲಿ ಮೊಹಾಲಿ ಕೂಡ ಒಂದಾಗಿದೆ.[]

1993 ನವೆಂಬರ್ 22 ರಂದು ನಡೆದ ಭಾರತ - ದಕ್ಷಿಣ ಆಫ್ರಿಕ ಹೀರೋ ಕಪ್ ಅಂತಾರಾಷ್ಟ್ರೀಯ ಆಟ ಮೊಹಾಲಿ ಸ್ಟೇಡಿಯಂನಲ್ಲಿ ನಡೆದ ಮೊದಲ ಆಟವಾಗಿದೆ. 1994 ಡಿಸೆಂಬರ್ ನಲ್ಲಿ ಮೊಹಾಲಿ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನ ಮೊದಲ ಟೆಸ್ಟ್ ಮ್ಯಾಚ್ ನಡೆಯಿತು. ಇಂದು ಈ ಸ್ಟೇಡಿಯಂ ಐಪಿಲ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದವರಿಗೆ ಮನೆಯಂತಾಗಿದೆ.

ಇಲ್ಲಿ ಹೊನಲು ಬೆಳಕಿನ ದೀಪಗಳು ಇತರ ಕ್ರಿಕೆಟ್ ಕ್ರೀಡಾಂಗಣಗಳಿಗಿಂತ ಅಸಾಂಪ್ರದಾಯಿಕವಾಗಿ ಇದೆ. ಹತ್ತಿರದಲ್ಲೇ ಚಂಡೀಘಢ ವಿಮಾನ ನಿಲ್ದಾಣ ಇರುವ ಕಾರಣವೇ ಬೆಳಕು ಕಂಬಗಳ ಎತ್ತರ ಕಡಿಮೆ ಇದೆ ಮತ್ತು ೧೬ ಹೊನಲು ದೀಪಗಳನ್ನು ಹೊಂದಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-06-08. Retrieved 2016-07-03.