ಮೊಲೆಯುಣಿಸುವುದು
ಮೊಲೆಯುಣಿಸುವುದು ಪ್ರಕೃತಿ ನಿಯಮ. ಯಾವುದೇ ಒಂದು ಪ್ರಾಣಿ ಅದರ ಮರಿಗಳಿಗೆ ಮೊಲೆಯುಣಿಸುವುದು ಸಾಮಾನ್ಯ ಕ್ರಿಯೆ.ಒಂದು ಮಹಿಳೆ ಪ್ರಸವದ ಕೂಡಲೆ ಮಗುವಿಗೆ ಮೊಲೆಯುಣಿಸುವುದು ಮಗುವಿಗೆ ಆರೋಗ್ಯಕ್ಕೆ ಒಳ್ಳೆದು ಯಾಕೆಂದರೆ ತಾಯಿಯ ಮೊದಲ ಹಾಲಿನಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಇರುತ್ತದೆ, ತಾಯಿಯ ಸುರುವಿನ ಮೊಲೆಹಾಲು ಮಂದವಾಗಿ ಹಳದಿ ಬಣ್ಣದಲ್ಲಿ ಇರುತ್ತದೆ ಇದನ್ನು ಕೊಲಸ್ಟ್ರಮ್ ಎಂದು ಕರೆಯುತ್ತಾರೆ.ವೈಜ್ಞಾನಿಕ ಅಧ್ಯಯನದ ಪ್ರಕಾರ ನವಜಾತ ಶಿಶುವು ಹುಟ್ಟಿದ ಕೂಡಲೆ ತಾಯಿಯ ಎದೆಯ ಮೇಲೆ ಬರಿ ಮೈಯಲ್ಲಿ ಮಗುವನ್ನು ಮಲಗಿಸಿ ಮೊಲೆಯುಣಿಸಿದರೆ ಒಳ್ಳೆದು ತಾಯಿಯ ಎದೆ ಬಡಿತವನ್ನು ಮಗು ಗುರುತಿಸುವುದರೊಂದಿಗೆ ಬೇರೆಯವರ ಸಹಾಯವಿಲ್ಲದೆ ತಾನೆ ಮೊಲೆ ತೊಟ್ಟುನು ಬಾಯಿಗೆ ಹಾಕುವುದನ್ನು ಅಭ್ಯಾಸ ಮಾಡುತ್ತದೆ[೧] ಹೆಣ್ಣು ಗರ್ಭಾವಸ್ಥೆಯ ಅವಧಿಯಲ್ಲಿ, ಎಸ್ಟ್ರೋಜನ್‍ಗಳು, ಪ್ರೊಜೆಸ್ಟರಾನ್, ಮತ್ತು ಪ್ರೋಲ್ಯಾಕ್ಟಿನ್ ಸೇರಿದಂತೆ ಹಾರ್ಮೋನುಗಳ ಸಂಕೀರ್ಣವಾದ ಪರಸ್ಪರ ಕ್ರಿಯೆಗೆ ಮೊಲೆಯು ಪ್ರತಿಕ್ರಿಯಿಸುತ್ತದೆ. ಇವು ಹಾಲೂಡಿಕೆ ಮತ್ತು ಸ್ತನ್ಯಪಾನದ ತಯಾರಿಯಲ್ಲಿ ಮೊಲೆಯ ಬೆಳವಣಿಗೆಯ ಸಮಾಪ್ತಿಯಲ್ಲಿ ಮಧ್ಯಸ್ಥಿಕೆ ವಹಿಸುತ್ತವೆ, ಅಂದರೆ ಕಿರುಹಾಲೆಕಿರುಗುಳಿ ಪಕ್ವತೆಯಲ್ಲಿ.
ಮೊಲೆಹಾಲು ಕುಡಿಯುದರಿಂದ ಮಗುವಿಗೆ ಉಪಯೋಗ
[ಬದಲಾಯಿಸಿ]- ಮಗುವಿಗೆ ಮೊದಲ ೬ ತಿಂಗಳು ಒಳ್ಳೆ ಪ್ರೋಟೀನ್ ಇರುವ ಆಹಾರ ತಾಯಿ ಮೊಲೆಹಾಲು[೨]
- ಮಗುವಿನ ಬಾಯಾರಿಕೆ ತಣಿಯುತ್ತದೆ
- ಮಗುವಿನ ಮೆದುಳು ,ಕಣ್ಣ್, ಶರೀರದ ಬೆಳವಣಿಗೆಗೆ ತಾಯಿ ಮೊಲೆಹಾಲು ಉತ್ತಮವಾಗಿದೆ
- ಮೊಲೆಹಾಲು ಕುಡಿದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಇರುತ್ತದೆ
- ಮಗುವಿನ ಶರೀರದ ತೂಕವನ್ನು ಸಮತೋಲನದಲ್ಲಿಡಲು ತಾಯಿಕಹಾಲು ಉತ್ತಮ ಹೊರಗಿನ ಹಾಲಿನಿಂದ ಬೊಜ್ಜು ಬೆಳೆಯುವ ಸಾಧ್ಯತೆ ಜಾಸ್ತಿ* ಮಿರೆಪೇರ್ ಕಡಿಮೆ ಖರ್ಚಿಡ್ ಆಪುಂಡು ಪಿದಯಿದ ಪೇರ್‌ಗ್ ಮಸ್ತ್ ಬಿಲೆ ಕೊರೊಡಾಪುಂಡು
- ಮಗುವಿನ ಹಲ್ಲಿನ ಬೆಳವಣಿಗೆಗೆ ತಾಯಿ ಮೊಲೆಹಾಲು ಉತ್ತಮವಾಗಿದೆ
ಮೊಲೆಯುಣಿಸುವುದರಿಂದ ತಾಯಿಗೆ ಉಪಯೋಗ
[ಬದಲಾಯಿಸಿ]- ಮೊಲೆಹಾಲು ಕೊಟ್ಟು ಮಗುವನ್ನು ಬೇಗ ಸಂತೈಯಿಸ ಬಹುದು[೩]
- ಹಾಲುಣಿಸುವುದರಿಂದ ಪ್ರಸವದ ನಂತರದ ರಕ್ತ ಸ್ರಾವದಿಂದಾಗುವ ತೊಂದರೆ ಕಡಿಮೆಯಾಗುತ್ತದೆ
- .ಮಗು ಎದೆಹಾಲು ಕುಡಿಯುತ್ತಿರುವ ತಾಯಂದಿರಲ್ಲಿ ಪ್ರಸವದ ನಂತರದ ಋತುಚಕ್ರವು ನಿಧಾನವಾಗಿ ಆಗುತ್ತದೆ.ಆದುದರಿಂದ ಒಂದು ಪ್ರಸವದ ನಂತರ ಇನ್ನೊಂದು ಪ್ರಸವಕ್ಕೆ ಅಂತರ ಜಾಸ್ತಿಯಾಗುತ್ತದೆ
- ಮೊಲೆ ಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್‍ನ್ನು ಸುಲಭ ರೀತಿಯಲ್ಲಿ ತಡೆಗಟ್ಟ ಬಹುದು
- ಮೊಲೆ ಹಾಲು ಸುಲಭವಾಗಿ ತಾಯಿಯ ಶರೀರದಿಂದ ಸಿಗುವ ಕಾರಣ ಹೊರಗಿನ ಹಾಲಿಗಾಗಿ ದುಂದು ವೆಚ್ಚಮಾಡಬೇಕಾಗಿಲ್ಲ
ಹಾಲುಣಿಸುವ ಕ್ರಮ
[ಬದಲಾಯಿಸಿ].ನವಜಾತ ಶಿಶುವಿಗೆ ಒಂದು ತಿಂಗಳವರೆಗೆ ದಿವಸದಲ್ಲಿ ೮ರಿಂದ ೧೨ ಭಾರಿ ಮೊಲೆಯುಣಿಸಬೇಕಾಗುತ್ತದೆ.ಆರೋಗ್ಯವಂತ ನವಜಾತ ಶಿಶುವಿಗೆ ೪ ಗಂಟೆಗಿಂತ ಜಾಸ್ತಿ ಹೊತ್ತು ಮೊಲೆಯುಣಿಸದೆ ಇರುವುದು ಸಮಂಜಸವಲ್ಲ.ಸಾಮಾನ್ಯವಾಗಿ ೯೦ ನಿಮಿಷಕ್ಕೊಂದು ಸಲ ಹಾಲುಣಿಸಬೇಕು.ಮೊಲೆಹಾಲು ಬೇಗ ಜೀರ್ಣವಾಗುವ ಕಾರಣ ಮಗುವಿಗೆ ಬೇಗ ಹಸಿವಾಗುವುದರೊಂದಿಗೆ ಗಂಟಲು ಒಣಗುವ ಸಾಧ್ಯತೆ ಇರುವುದರಿಂದ ೯೦ನಿಮಿಷದಿಂದ ೩ಗಂಟೆಯ ಒಳಗೆ ಮಗುವಿಗೆ ಮೊಲೆಯುಣಿಸುವುದು ಉತ್ತಮ.ಒಂದು ತಿಂಗಳು ಕಳೆದ ನಂತರ ದಿವಸಕ್ಕೆ ೭-೮ ಸಲ ಮೊಲೆಯುಣಿಸಿದರೂ ಸಾಕಾಗುತ್ತದೆ..ಸಾಮಾನ್ಯವಾಗಿ ಮಗುವಿಗೆ ಹೊಟ್ಟೆ ತುಂಬುವ ತನಕ ಅಂದರೆ ಸುಮಾರು ೧೫ರಿಂದ ೨೦ ನಿಮಿಷದವರೆಗೆ.
ತೊಂದರೆ
[ಬದಲಾಯಿಸಿ].ಮೊಲೆಯುಣಿಸುವ ತಾಯಂದಿರು ಕೆಲವೊಂದು ತೊಂದರೆ ಅನುಭವಿಸಬೇಕಾಗುತ್ತದೆ ಯಾಕೆಂದರೆ ಮೊಲೆತೊಟ್ಟು ಮೆದುವಾಗಿರುವ ಕಾರಣ ಮೊದಲ ಪ್ರಸವದ ಸಮಯದಲ್ಲಿ ಮಗುವಿಗೆ ಮೊಲೆಯುನಣಿಸುವಾಗ ಮೊಲೆತೊಟ್ಟು ಒಡೆದು ರಕ್ತ ಬರುವುದರೊಂದಿಗೆ ನೋವು ಅನುಭವಿಸಬೇಕಾಗುತ್ತದೆ ಆ ಸಮಯದಲ್ಲಿ ಹಾಲುಣಿಸುವುದು ತುಂಬಾ ಕಷ್ಟವಾಗಿರುತ್ತದೆ.ಮೊದಲ ಪ್ರಸವದಲ್ಲಿ ತಾಯಿಯು ಮೊಲೆಯುಣಿಸುವ ಸರಿಯಾದ ವಿಧಾನ ತಿಳಿದಿರುವುದಿಲ್ಲ