ವಿಷಯಕ್ಕೆ ಹೋಗು

ಮೊಬೈಲ್ ಸುದ್ದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೊಬೈಲ್ ಫೋನಿನಲ್ಲಿ ಸುದ್ದಿಗಳನ್ನು ವೀಕ್ಷಿಸುವುದು ಮತ್ತು/ಅಥವಾ ಸಂಗ್ರಹಿಸುವುದು

ಮೊಬೈಲ್ ಸುದ್ದಿಯು ಮೊಬೈಲ್‌ ಸಾಧನಗಳನ್ನು ಬಳಸಿಕೊಂಡು ಸುದ್ದಿಗಳ ವಿತರಣೆ ಮತ್ತು ಸೃಷ್ಟಿ ಮಾಡುವುದನ್ನು ಸೂಚಿಸುತ್ತದೆ.

ವಿತರಣೆ

[ಬದಲಾಯಿಸಿ]

ಇಂದು, ಮೊಬೈಲ್ ಸುದ್ದಿ ವಿತರಣೆಯನ್ನು ಎಸ್ಎಂಎಸ್ ಮೂಲಕ, ವಿಶೇಷ ಅಪ್ಲಿಕೇಶನ್‌ಗಳ ಮೂಲಕ ಅಥವಾ ಮಾಧ್ಯಮ ಜಾಲತಾಣಗಳ ಮೊಬೈಲ್ ಆವೃತ್ತಿಗಳನ್ನು ಬಳಸಿ ಮಾಡಬಹುದು. ಆರು ದೇಶಗಳಲ್ಲಿ (ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್, ಯುಕೆ, ಮತ್ತು ಯುಎಸ್ಎ) ನಡೆದ ಇತ್ತೀಚಿನ ಮಾರುಕಟ್ಟೆ ಅಧ್ಯಯನದ ಪ್ರಕಾರ, ೧೬.೯% ಗ್ರಾಹಕರು ಮೊಬೈಲ್ ಸಾಧನಗಳ ಮೂಲಕ ಸುದ್ದಿ ಮತ್ತು ಮಾಹಿತಿಯನ್ನು ಹುಡುಕುತ್ತಾರೆ ಮತ್ತು ಡೌನ್ಲೋಡ್ ಮಾಡಿಕೊಳ್ಳುತ್ತಾರೆ. ಅವರು ಅಪ್ಲಿಕೇಶನ್ ಅಥವಾ ಎಸ್ಎಂಎಸ್ ಎಚ್ಚರಿಕೆಗಳ ಮೂಲಕವೂ ಸುದ್ದಿಗಳನ್ನು ಹುಡುಕುತ್ತಾರೆ.[]

ಮೊಬೈಲ್ ಸುದ್ದಿ ವಿತರಣೆಗೆ ಬೇಡಿಕೆಯು ತ್ವರಿತವಾಗಿ ಬೆಳೆಯುತ್ತಿದೆ, ಕಳೆದ ವರ್ಷವಷ್ಟೇ ಮೊಬೈಲ್ ಸುದ್ದಿಗಳಿಗೆ ದೈನಂದಿನ ಪ್ರವೇಶದಲ್ಲಿ ೧೦೭ ಪ್ರತಿಶತದಷ್ಟು ಬೆಳವಣಿಗೆ ಕಂಡುಬಂದಿದೆ.[] ಉದಾಹರಣೆಗೆ, ನ್ಯೂಯಾರ್ಕ್ ಟೈಮ್ಸ್ ಮೊಬೈಲ್ ತಾಣವು ಜನವರಿ ೨೦೦೭ರಲ್ಲಿದ್ದ ೫೦೦,೦೦೦ ವೀಕ್ಷಣೆಗಳಿಗೆ ಹೋಲಿಸಿದರೆ, ಮೇ ೨೦೦೮ ರಲ್ಲಿ ೧೯ ದಶಲಕ್ಷ ವೀಕ್ಷಣೆಗಳನ್ನು ದಾಖಲಿಸಿದೆ.[]

ಜುಲೈ ೧೮, ೨೦೧೧ ರಂದು, "ಸಿಎನ್ಎನ್ ಮತ್ತು ಹೆಡ್ಲೈನ್ ನ್ಯೂಸ್‌ನಿಂದ ಸುದ್ದಿ ಪ್ರಸಾರವನ್ನು ಅಂತರ್ಜಾಲದಲ್ಲಿ ನೇರ ಪ್ರಸಾರ ಮಾಡಲಾಗುವುದು ಮತ್ತು ಜನರು ತಮ್ಮ ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ ಫೋನ್‌ಗಳು ಅಥವಾ ಟ್ಯಾಬ್ಲೆಟ್‌ಗಳಲ್ಲಿ ಕೆಲವು ಪಾವತಿಸಿದ ಟಿವಿ ಸೇವೆಗಳಿಗೆ ಚಂದಾದಾರರಾಗಿದ್ದರೆ ವೀಕ್ಷಿಸಲು ಲಭ್ಯವಿರುತ್ತದೆ" ಎಂದು ಟೈಮ್ ವಾರ್ನರ್ ಘೋಷಿಸಿದರು.[]

೨೦೧೪ ರಿಂದ ಅನೇಕ ಮಾಧ್ಯಮ ಕಂಪನಿಗಳು ತ್ವರಿತ ಮತ್ತು ಸಣ್ಣ ಸುದ್ದಿಗಳನ್ನು ನೀಡುವ ಮೂಲಕ ಜಾಗತಿಕ ಬಳಕೆದಾರರು ನ್ಯೂಸ್ ಡ್ಯಾಶ್ Archived 2018-04-20 ವೇಬ್ಯಾಕ್ ಮೆಷಿನ್ ನಲ್ಲಿ. ಸೇರಿದಂತೆ ತಮ್ಮ ಸ್ಥಳೀಯ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದವು.

ಸುದ್ದಿಗಳ ಉತ್ಪತ್ತಿ

[ಬದಲಾಯಿಸಿ]

ಮೊಬೈಲ್ ಸುದ್ದಿಯು, ಚಿಕ್ಕ ಸಮುದಾಯಗಳಿಗೆ ಬ್ರೇಕಿಂಗ್ ನ್ಯೂಸ್‌ಗಳಂತಹ ಸಣ್ಣ ಸುದ್ದಿಗಳನ್ನು ವರದಿ ಮಾಡುವ ಸಾಮರ್ಥ್ಯವನ್ನು ಒದಗಿಸುತ್ತದೆ. ರೇಡಿಯೋ, ಟಿವಿ ಅಥವಾ ಪತ್ರಿಕೆಗಳಂತಹ ಸಾಂಪ್ರದಾಯಿಕ ಮಾಧ್ಯಮಗಳಿಗೆ ಹೋಲಿಸಿದರೆ ಮೊಬೈಲ್ ಫೋನ್‌ಗಳ ಬಳಕೆಯ ಸುಲಭತೆಯಿಂದಾಗಿ ಬಳಕೆದಾರರಲ್ಲಿ ಉತ್ತಮವಾದ ಮಾಹಿತಿಯ ವಿನಿಮಯವನ್ನು ಸುಗಮಗೊಳಿಸುತ್ತದೆ. ಗುಣಮಟ್ಟ, ಪತ್ರಿಕೋದ್ಯಮ ಮಾನದಂಡಗಳು ಮತ್ತು ವೃತ್ತಿಪರತೆಯ ಸಮಸ್ಯೆಗಳು ಕೆಲವು ವಿಮರ್ಶಕರಿಗೆ ಕಳವಳವನ್ನುಂಟುಮಾಡುತ್ತವೆ. []

ಮೊಬೈಲ್, ದೂರವಾಣಿ ಮತ್ತು ವೈಶಿಷ್ಟ್ಯಪೂರ್ಣ ಮೊಬೈಲ್ ಸಾಧನಗಳು ಸಕ್ರಿಯತೆ ಮತ್ತು ನಾಗರಿಕ ಪತ್ರಿಕೋದ್ಯಮಕ್ಕೆ ಅನುಕೂಲ ಮಾಡಿಕೊಡುತ್ತವೆ. ವೈಯಕ್ತಿಕ ಪ್ರಯತ್ನಗಳ ಜೊತೆಗೆ, ಸಿಎನ್ಎನ್, ರಾಯಿಟರ್ಸ್ ಮತ್ತು ಯಾಹೂ ಪ್ರಮುಖ ಮಾಧ್ಯಮಗಳು ನಾಗರಿಕ ಪತ್ರಕರ್ತರ ಶಕ್ತಿಯನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ.

ಮೊಬೈಲ್ ಸುದ್ದಿಗಳ ಸೃಷ್ಟಿಯು ಮೊದಲು ಪಠ್ಯ ಎಚ್ಚರಿಕೆಗಳನ್ನು ಸ್ವೀಕರಿಸುವ ಜನಪ್ರಿಯತೆಯಿಂದ ಉತ್ತೇಜಿಸಲ್ಪಟ್ಟಿತು, ಮತ್ತು ನಂತರ ಮೊಬೈಲ್ ಕಂಪನಿಗಳು ಸಾಮಾಜಿಕ ಮಾಧ್ಯಮವನ್ನು ಸ್ವೀಕರಿಸಿದಾಗ, ವಿಷಯ ರಚನೆಯನ್ನು ಸುಲಭವಾಗಿ ಪ್ರವೇಶಿಸುವಂತೆ ಮಾಡಿತು.


ಉಲ್ಲೇಖಗಳು

[ಬದಲಾಯಿಸಿ]
  1. Mobile news statistics Archived 2011-05-26 ವೇಬ್ಯಾಕ್ ಮೆಷಿನ್ ನಲ್ಲಿ. Accessed 2009-04-03
  2. Demand for news on the go growing quickly
  3. US Mobile nearing maturity Accessed 2009-04-03
  4. Marguerite Reardon, CNET. "CNN live news comes to iPad, other mobile devices." Jul 18, 2011. Retrieved Jul 18, 2011.
  5. Mortensen, Tara Buehner; Keshelashvili, Ana (2013-07-01). "If Everyone with a Camera Can Do This, Then What? Professional Photojournalists' Sense of Professional Threat in the Face of Citizen Photojournalism". Visual Communication Quarterly. 20 (3): 144–158. doi:10.1080/15551393.2013.820587. ISSN 1555-1393.