ಮೊಬೈಲ್ ಸಂಖ್ಯೆ ವರ್ಗಾವಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೊಬೈಲ್ ದೂರವಾಣಿ ಸಂಖ್ಯೆಯನ್ನು ಬದಲಿಸದೇ, ಮೊಬೈಲ್ ಸೇವೆಯನ್ನು ಕೊಡುವ ಸಂಸ್ಥೆಯನ್ನು ಬದಲಿಸುವುದನ್ನು ಮೊಬೈಲ್ ಸಂಖ್ಯೆ ವರ್ಗಾವಣೆ (Mobile Number Portability - MNP) ಎಂದು ಕರೆಯುತ್ತಾರೆ. ಇದನ್ನು ಭಾರತದಾದ್ಯಂತ ಜನವರಿ ೨೦, ೨೦೧೧ರಂದು ಜಾರಿಗೊಳಿಸಲಾಯಿತು.

ಭಾರತದಲ್ಲಿ ಮೊಬೈಲ್ ಸಂಖ್ಯೆ ವರ್ಗಾವಣೆ[ಬದಲಾಯಿಸಿ]

ನಿಬಂಧನೆಗಳು[ಬದಲಾಯಿಸಿ]

  • ಈ ಸೇವೆಯನ್ನು ಬಳಸಿಕೊಳ್ಳಲು ನೀವು ಒಂದು ಸೇವಾದಾರ ಸಂಸ್ಥೆಯ ಚಂದಾದಾರರಾಗಿದ್ದು ಕನಿಷ್ಠ ೯೦ ದಿನಗಳಾಗಿರಬೇಕು.

ವಿಧಾನ[ಬದಲಾಯಿಸಿ]

  • ನಿಮ್ಮ ಸಂಚಾರಿ ದೂರವಾಣಿಯಿಂದ PORT<space>ನಿಮ್ಮ ಹತ್ತು ಅಂಕೆಯ ದೂರವಾಣಿ ಸಂಖ್ಯೆ ಎಂಬ ಸಂದೇಶವನ್ನು ನಮೂದಿಸಿ ೧೯೦೦ ಸಂಖ್ಯೆಗೆ ಕಳುಹಿಸಬೇಕು
  • ನಿಮಗೆ ಕೆಲವು ಕ್ಷಣಗಳ ನಂತರ ೧೯೦೧ ಸಂಖ್ಯೆಯಿಂದ ಒಂದು ಸಂಕೇತ ಹೊಂದಿದ ಸಂದೇಶ ಬರುತ್ತದೆ.
  • ಅದನ್ನು ನೀವು ಬದಲಾಯಿಸಲಿಚ್ಛಿಸುವ ಸೇವಾದಾರರಿಂದ ಮೊಬೈಲ್ ಸೇವೆ ವರ್ಗಾವಣೆಯ ಅರ್ಜಿ ತುಂಬಿ, ೧೯ ರೂಪಾಯಿ ಪಾವತಿಸಿ ಹೊಸ ಸೇವಾದಾರ ಸಂಸ್ಥೆಯ ಸೇವೆ ಪಡೆಯಬಹುದಾಗಿದೆ.

ಸೇವೆ ಬದಲಾಗಲು ಒಂದು ವಾರದಿಂದ ಹದಿನೈದು ದಿನಗಳ ಕಾಲಾವಧಿಯಿದ್ದು ಬದಲಾಗುವ ಕೆಲವು ಗಂಟೆಗಳು ನೀವು ಯಾವುದೇ ಸೇವೆ ಪಡೆಯಲು ಸಾಧ್ಯವಾಗದ ಸ್ಥಿತಿಗೆ ಬಂದು, ನಂತರ ಹೊಸ ಸೇವೆ ಆರಂಭವಾಗುತ್ತದೆ. (ರಾತ್ರಿ ಹತ್ತರಿಂದ ಮುಂಜಾನೆ ಐದರೊಳಗೆ ಈ ಸ್ಥಿತಿಯಲ್ಲಿ ನಿಮ್ಮ ದೂರವಾಣಿ ಇರುತ್ತದೆ ಎಂದು ಸೇವಾದಾರರ ಕೆಲವು ಅಂತರಜಾಲ ಪುಟದಲ್ಲಿ ನಮೂದಾಗಿರುತ್ತದೆ)[೧][೨].

ಉಲ್ಲೇಖಗಳು[ಬದಲಾಯಿಸಿ]