ವಿಷಯಕ್ಕೆ ಹೋಗು

ಮೈಸೂರು ಹಿರಿಯಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:ProfMHiriyanna.jpg
'ಪ್ರೊ.ಮೈಸೂರು ಹಿರಿಯಣ್ಣನವರು'

ಪ್ರೊ.ಹಿರಿಯಣ್ಣನವರು,(೧೮೭೧-೧೯೫೦) [] ಆಂಗ್ಲ ಭಾಷೆಯಲ್ಲಿ ರಚಿಸಿದ ಗ್ರಂಥ (Essentials of Indian Philosophy), [] 'ಭಾರತೀಯ ತತ್ವಶಾಸ್ತ್ರದ ತಿರುಳು,' ಸಮರ್ಥವಾಗಿ, ವಿದ್ವತ್ಪೂರ್ಣವಾಗಿ ಬರೆದ ಪುಸ್ತಕಗಳಲ್ಲೊಂದಾಗಿದೆ.ಅವರ ಪುಸ್ತಕ ಇಂದಿಗೂ ವಿಶ್ವದ ಭಾರತೀಯ ತತ್ವಶಾಸ್ತ್ರವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ, ಪಠ್ಯ ಪುಸ್ತಕವಾಗಿದೆ. ಪ್ರೊ.ಹಿರಿಯಣ್ಣನವರು ಸಂಸ್ಕೃತ ಭಾಷೆಯಲ್ಲಿ ಪಂಡಿತರು. ಅವರ ಇಂಗ್ಲೀಷ್ ವ್ಯಾಖ್ಯಾನ, ಎಲ್ಲರ ಮೆಚ್ಚುಗೆಯನ್ನು ಗಳಿಸಿದೆ. ಹಿರಿಯಣ್ಣನವರು [] 'ಮೃದು-ಭಾಷಿ', ಹಾಗೂ 'ಸಮರ್ಥ ಚಿಂತಕರು'. 'ಭಾರತೀಯ ತತ್ವಶಾಸ್ತ್ರ'ವನ್ನು ತಮ್ಮ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದರು.

ಜನನ/ಬಾಲ್ಯ ಮತ್ತು ಮನೆಯ ಪರಿಸರ

[ಬದಲಾಯಿಸಿ]

ಹಿರಿಯಣ್ಣನವರು ಮೇ ೭, ೧೮೭೧ರಲ್ಲಿ ಜನಿಸಿದರು. ತಂದೆ. 'ಶ್ರೀ ನಂಜುಂಡಯ್ಯನವರು'. ಅವರಿಗೆ ೩ ಗಂಡುಮಕ್ಕಳು. ಅವರಲ್ಲಿ ಹಿರಿಯಣ್ಣನವರು ಎರಡನೆಯವರು. ಇವರ ಒಬ್ಬ ಸೋದರ, ಶ್ರೀ.ಎಂ.ಎನ್.ಕೃಷ್ಟರಾಯರು. ಇವರು ಹಿಂದಿನ ಮೈಸೂರು ಸಂಸ್ಥಾನದ ಸರ್ಕಾರಿ ಹುದ್ದೆಯಲ್ಲಿ ಹಲವಾರು ಶಾಖೆಗಳಲ್ಲಿ ದುಡಿದು, ಕೊನೆಗೆ, ದಿವಾನರಾಗಿ ನಿವೃತ್ತರಾದವರು. ಇವರ ಹೆಸರಿನಲ್ಲೇ, ಬೆಂಗಳೂರಿನ ಬಸವನಗುಡಿ ಬಡಾವಣೆಯಲ್ಲಿ ವಿಶಾಲವಾದ, (ಕೃಷ್ಣರಾವ್ ಪಾರ್ಕ್) ಉದ್ಯಾನವನವಿದೆ. ಹಿರಿಯಣ್ಣನವರ ಪೂರ್ವಜರು ಮತ್ತು ತಂದೆತಾಯಿಗಳು, ಮೈಸೂರಿನಲ್ಲೇ ತಮ್ಮ ಜೀವಿತದ ಎಲ್ಲಾ ಸ್ತರಗಳನ್ನೂ ಕಳೆದರು. ಅಗಿನ ಕಾಲದಲ್ಲಿ ಸ್ಥಿತಿವಂತರಾಗಿದ್ದ 'ನಂಜುಂಡಯ್ಯನವರು', ತಮ್ಮ ೩ ಮಕ್ಕಳನ್ನೂ ಮೈಸೂರಿನ 'ಸದ್ವಿದ್ಯ ಶಾಲೆ,' ಯಲ್ಲಿ ಓದಿಸಿದರು. ಈ ಸಂಸ್ಕೃತ ಶಾಲೆಯನ್ನು, ಆಗ ಪೆರಿಯಸ್ವಾಮಿ ತಿರುಮಲಾಚಾರ್ಯರು ನಡೆಸುತ್ತಿದ್ದರು.

ವೃತ್ತಿ

[ಬದಲಾಯಿಸಿ]

೧೮೯೦ ರ ಹೊತ್ತಿಗೆ ವಿದ್ಯಾಭ್ಯಾಸ ಮುಗಿಯಿತು. ೧೮೯೩ ರಲ್ಲಿ, 'ಮೈಸೂರಿನಲ್ಲೇ ನಾರ್ಮಲ್ ಸ್ಕೂಲಿ'ನಲ್ಲಿ ಉಪಾಧ್ಯಾಯ ವೃತ್ತಿ ಸಿಕ್ಕಿತು. ಇದು ಕನ್ನಡ ಉಪಾಧ್ಯಾಯರಿಗೆ ಶಿಕ್ಷಣ ಕೊಡುವ ಸಂಸ್ಥೆಯಾಗಿತ್ತು. ಇಲ್ಲಿ ಹಿರಿಯಣ್ಣನವರು ಸುಮಾರು ೧೧ ವರ್ಷ ಸೇವೆ ಸಲ್ಲಿಸಿದರು. ೧೮೯೯ ರಲ್ಲಿ ಮಹಾರಾಜ ಕಾಲೇಜಿನಲ್ಲಿ, 'ಬಿ.ಎ. ಪದವಿ'ಯನ್ನು ಪ್ರಾರಂಭ ಮಾಡಿದ ಮೇಲೆ ಅದು 'ಮೊದಲ ಪ್ರಥಮ ದರ್ಜೆ ಕಾಲೇಜಾಯಿತು'. ೧೯೦೭ ರಲ್ಲಿ ಇವರು ಮುಖ್ಯೋಪಾಧ್ಯಾಯರಾದರು. 'ಮೈಸೂರಿನ ಓರಿಯೆಂಟಲ್ ಲೈಬ್ರರಿಯಲ್ಲಿ ಗ್ರಂಥಪಾಲಕ'ರಾಗಿ ಕೆಲಸ ಮಾಡಿದರು. ಅವರು ಪಾದಾರ್ಪಣೆ ಮಾಡಿದಾಗ ಅಲ್ಲಿದ್ದ ಒಟ್ಟು ಪುಸ್ತಕಗಳು, ಸುಮಾರು,೩,೦೦೦. ಅದರಲ್ಲಿ ಸುಮಾರು ೧,೬೫೩ ಪುಸ್ತಕಗಳು ಅಚ್ಚಾಗಿದ್ದವು. ೧,೩೫೮ 'ಕೈಬರಹದ ತಾಳೆಗರಿ ಲೇಖನದ ಪುಸ್ತಕಗಳು'.

ಮೈಸೂರಿನಿಂದ ಬೆಂಗಳೂರಿಗೆ

[ಬದಲಾಯಿಸಿ]

ಆ ಕೆಲಸದಲ್ಲಿ ಸಿಕ್ಕುತ್ತಿದ್ದ ಹಣದಲ್ಲಿ ತಮ್ಮ ಪರಿವಾರದ ಆವಶ್ಯಕತೆಗಳನ್ನು ಪೂರೈಸುವುದು ಕಷ್ಟವಾದ್ದರಿಂದ ಅವರು ಬೆಂಗಳೂರಿಗೆ ಹೋಗಿ ಅಲ್ಲಿ 'ಕಾರಕೂನ'ರಾಗಿ ಕೆಲಸ ಮಾಡಿದರು. ೧೯೧೨ ರಲ್ಲಿ ವಿಶ್ವವಿದ್ಯಾಲಯದಿಂದ ಅವರಿಗೆ ಕೆಲಸಕ್ಕೆ ಆಹ್ವಾನ ಬಂತು. ೧೯೧೬ ರಲ್ಲಿ ಮೈಸೂರು ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂತು. ೧೯೧೭ ರಲ್ಲಿ ಸಂಸ್ಕೃತ ಪ್ರೊಫೆಸರ್ ಆದರು. ಪ್ರೊಫೆಸರ್ ಹುದ್ದೆಗೆ ಎಲ್.ಟಿ ; ಪದವಿಯ ಅಗತ್ಯವಿತ್ತು ; ಅದಕ್ಕಾಗಿ ಅವರನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯವರೇ ತೀರ್ಮಾನಿಸಿ ಕಳಿಸಿಕೊಟ್ಟರು. ಆದರೆ 'ಭಾರತೀಯ ತತ್ವಶಾಸ್ತ್ರ'ದ ಬಗ್ಗೆ ತಿಳಿದ ವ್ಯಕ್ತಿಗಳು ಕೆಲವರೇ ಇದ್ದರು.

ಹಿರಿಯಣ್ಣನವರ ಉಡುಪು

[ಬದಲಾಯಿಸಿ]

'ಕಚ್ಚೆಪಂಚೆ', 'ಕೆನೆಬಣ್ಣದ ನಿಲುವಂಗಿ', 'ಸರಿಗೆ ಇಲ್ಲದ ರುಮಾಲು'. 'ಪೂನಾ ಜೋಡು'. ಉಡುತ್ತಿದ್ದ ಪೋಷಾಕಿನಲ್ಲಿ ಸ್ವಲ್ಪವೂ ಕಲೆ ಇರಕೂಡದು.[] ಎಲ್ಲದರಲ್ಲೂ 'ಅಚ್ಚುಕಟ್ಟು' ಮತ್ತು 'ಸರಳತೆ' ಕಾಣುತ್ತಿತ್ತು.

ಹುದ್ದೆಗಳು

[ಬದಲಾಯಿಸಿ]

೧೯೧೮ ರಲ್ಲಿ ವಿಶ್ವವಿದ್ಯಾಲಯ ಆರಿಸಿದ್ದು, ಪ್ರೊ. ಎಸ್. ರಾಧಾಕೃಷ್ಣನ್ಅವರನ್ನು. [೧೮೮೮-೧೯೭೫] ಮುಂದೆ, ರಾಧಾಕೃಷ್ಣನ್ ರವರು 'ಆಕ್ಸ್ ಫರ್ಡ್,' ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆದರು. ಆದರೂ ಹಿರಿಯಣ್ಣನವರೂ ಮತ್ತು ಅವರ ಸಹೋದ್ಯೋಗಿಶ್ರೀ ವಾಡಿಯಾರವರು ಎಂದಿನಂತೆ, ತಮ್ಮ ಕೆಲಸವನ್ನು ಮಾಡುತ್ತಿದ್ದರು. ೧೯೨೭ ರಲ್ಲಿ ಅವರಿಗೆ ತಮ್ಮ ವೃತ್ತಿಯಲ್ಲಿ ಸ್ವಲ್ಪ ಅಸಮಧಾನ ತಲೆದೋರಿತು. ಸ್ವ-ಇಚ್ಛೆಯಿಂದ ತಾವಾಗಿಯೇ ನಿವೃತ್ತರಾದರು. ಹಿರಿಯಣ್ಣನವರು ನಿವೃತ್ತರಾದ ಮೇಲೆ ಅನೇಕ ಸಂಸ್ಥೆಗಳು ಅವರನ್ನು ಸ್ವಾಗತಿಸಿದವು. ಆದರೆ ಅವರು ಹೋಗಲಿಲ್ಲ. ಒಬ್ಬ ಮಗಳಿಗೆ ಮದುವೆ ಮಾಡಿ, ಮೈಸೂರಿನಲ್ಲೇ ನೆಲಸಿದರು. ಹಿರಿಯಣ್ಣನವರ ನಿಧನದ ನಂತರ, ಅವರ ಕೆಲವು ಪ್ರಮುಖ ಪುಸ್ತಕಗಳು ಪ್ರಕಟಿಸಲ್ಪಟ್ಟವು.

ಕೃತಿಗಳು

[ಬದಲಾಯಿಸಿ]
  • 'Kenopanishad'-೧೯೧೨
  • 'ಭಾರತೀಯ ತತ್ವಶಾಸ್ತ್ರದ ರೂಪುರೇಖೆ'-೧೯೩೨.
  • 'ಭಾರತೀಯ ತತ್ವಶಾಸ್ತ್ರದ ಸಾರ'-೧೯೪೯
  • 'Art experience'(೧೦ ಪ್ರಬಂಧಗಳಿವೆ)-೧೯೫೪
  • 'Popular Essays in Indian Philosophy'-೧೯೫೨
  • 'Indian Philosophical Studies'-೧೯೫೭-೧೯೭೨ []
  • 'Kenopanishad, Text in Devanagari, with Roman Characters'-೧೯೭೪
  • 'Isavasyopanishad', Text in Devanagari, in Roman Characters -with the Commentary of 'ShrI. ShrI. Shankaracharya'.

ಪ್ರಶಸ್ತಿಗಳು

[ಬದಲಾಯಿಸಿ]

೧. ೧೯೩೮ ರಲ್ಲಿ, 'ಮದ್ರಾಸ್ ಸರ್ಕಾರ'ದ, 'ಸಂಸ್ಕೃತ ಅಕ್ಯಾಡೆಮಿ' ಎಂಬ ವಿದ್ಯಾಸಂಸ್ಥೆ ಹಿರಿಯಣ್ಣನವರಿಗೆ, 'ಸಂಸ್ಕೃತ ಸೇವಾಧುರೀಣ' ಎಂಬ ಪ್ರಶಸ್ತಿಯನ್ನು ಪ್ರದಾನಮಾಡಲಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. ಪ್ರೊಫೆಸರ್ ಹಿರಿಯಣ್ಣ ಪು. ೧೮, ನೇಸರು, ಡಿಸೆಂಬರ್, ೨೦೧೦-ಬೆಂಗಳೂರಿನ ಗೋಖಲೆ ಸಾರ್ವಜನಿಕ ಸಂಸ್ಥೆಯ ಸೌಜನ್ಯದಿಂದ
  2. "The Essentials of Indian Philosoph-M. Hiriyanna M.A;". Archived from the original on 2013-10-17. Retrieved 2014-11-22.
  3. "ಪ್ರೊ. ಹಿರಿಯಣ್ಣ. ಎಂ. ಕಣಜ". Archived from the original on 2016-03-05. Retrieved 2014-07-18.
  4. ಪ್ರೊ.ಎಂ.ಹಿರಿಯಣ್ಣ
  5. /openlibrary.org, Mysore Hiriyanna 1871-1950, 9 works

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  1. 'ಬ್ಲಾಗಾಯಣ', ಪ್ರೊ.ಮೈಸೂರು ಹಿರಿಯಣ್ಣನವರ ಭಾವ ಚಿತ್ರ. ಚಿತ್ರ ಕೃಪೆ :'ಗೋಖಲೆ ಸಾರ್ವಜನಿಕ ಸಂಸ್ಥೆ'
  2. Prof. M. Hiriyanna: The Socrates Of Mysore,Colums of Mysore memories, starofmysore.com,July 25, 2018
  3. ಪ್ರೊ.ಮೈಸೂರು ಹಿರಿಯಣ್ಣನವರು (೧೮೭೧-೧೯೫೦)