ವಿಷಯಕ್ಕೆ ಹೋಗು

ಮೈನವಿರೇಳುವಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೈನವಿರೆದ್ದ ಸ್ಥಿತಿ

ಮೈನವಿರೇಳುವಿಕೆಯ ಸ್ಥಿತಿಯಲ್ಲಿ ವ್ಯಕ್ತಿಯ ಮೈ ಮೇಲಿನ ಕೂದಲುಗಳ ಬುಡದಲ್ಲಿ ಚರ್ಮದ ಮೇಲೆ ಉಬ್ಬುಗಳು ಉಂಟಾಗುತ್ತವೆ. ವ್ಯಕ್ತಿಗೆ ಕಚಗುಳಿ ಇಟ್ಟಾಗ, ಅಥವಾ ತಂಪಾದಾಗ ಅಥವಾ ವ್ಯಕ್ತಿಯು ಭಯ, ಆನಂದಾತಿಶಯ ಅಥವಾ ಲೈಂಗಿಕ ಪ್ರಚೋದನೆಯಂತಹ ಪ್ರಬಲ ಭಾವನೆಗಳನ್ನು ಅನುಭವಿಸಿದಾಗ ಇವು ಕಾಣಿಸಿಕೊಳ್ಳುತ್ತವೆ.[೧]

ಒತ್ತಡದಲ್ಲಿದ್ದಾಗ ಮನುಷ್ಯರಲ್ಲಿ ಮೈನವಿರೇಳುವುದು ಉಳಿದುಕೊಂಡಿರುವ ನಿರಿಚ್ಛಾ ಪ್ರತಿಕ್ರಿಯೆ ಎಂದು ಪರಿಗಣಿಸಲ್ಪಟ್ಟಿದೆ; ಮತ್ತು ಇತರ ಏಪಗಳಲ್ಲಿ ದೇಹದ ಕೂದಲನ್ನು ನೆಟ್ಟಗೆ ನಿಲ್ಲಿಸುವುದು ಇದರ ಕಾರ್ಯವಾಗಿದೆ ಮತ್ತು ಇದು ಪರಭಕ್ಷಕರನ್ನು ಹೆದರಿಸುವ ಉದ್ದೇಶಕ್ಕಾಗಿ ನಮ್ಮ ಮಾನವ ಪೂರ್ವಜರು ಹೆಚ್ಚು ದೊಡ್ಡದಾಗಿ ಕಾಣಿಸುವಂತೆ ಮಾಡಿರುತ್ತಿತ್ತು ಅಥವಾ ತುಪ್ಪಳವನ್ನು ಹೆಚ್ಚು ನಿರೋಧಕವಾಗಿಸಲು ಅದರಲ್ಲಿ ಸಿಲುಕಿಕೊಂಡಿರುವ ಗಾಳಿಯ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶ ಹೊಂದಿತ್ತು. ಮೈನವಿರೇಳಿಸುವಿಕೆಯನ್ನು ಉಂಟುಮಾಡುವ ನಿರಿಚ್ಛಾ ಪ್ರತಿಕ್ರಿಯೆಯನ್ನು ಪೈಲೊಎರೆಕ್ಷನ್ ಅಥವಾ ಪೈಲೊಮೋಟರ್ ರೀಫ಼್ಲೆಕ್ಸ್ ಎಂದು ಕರೆಯಲಾಗುತ್ತದೆ. ಇದು ಅನೇಕ ಸಸ್ತನಿಗಳಲ್ಲಿ ಉಂಟಾಗುತ್ತದೆ; ಒಂದು ಗಮನಾರ್ಹ ಉದಾಹರಣೆಯೆಂದರೆ ಮುಳ್ಳುಹಂದಿ. ಇದಕ್ಕೆ ಬೆದರಿಕೆಯುಂಟಾದಾಗ ತನ್ನ ಮುಳ್ಳುಗಳನ್ನು ಮೇಲೆಬ್ಬಿಸುತ್ತದೆ. ಕಡಲ ಉದ್ರಗಳಿಗೆ ತಿಮಿಂಗಿಲಗಳು ಅಥವಾ ಇತರ ಪರಭಕ್ಷಕ ಪ್ರಾಣಿಗಳು ಎದುರಾದಾಗ ಹೀಗೆ ಮಾಡುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. "Science of Music: Why Does Music Give Me Goose Bumps? | Exploratorium". Exploratorium.edu. Retrieved 2013-05-14.