ಮೈಕಲ್ ಜ್ಯಾಕ್ಸನ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
'ಮೈಕಲ್ ಜ್ಯಾಕ್ಸನ್'

(ಆಗಸ್ಟ್ ೨೯, ೧೯೫೮-೨೦೦೯)

ಅಮೇರಿಕದ ಪಾಪ್ ಶೈಲಿಯ ಮಹಾರಾಜ (king of pop) ಎಂದೇ ಪ್ರಸಿದ್ಧರು. ಜಗತ್ತಿನ ಮೂಲೆಮೂಲೆಗಳಲ್ಲೂ ಜನಪ್ರಿಯರಾಗಿರುವ ಪಾಪ್ ಸಂಗೀತ, ಬ್ರೇಕ್ ಡ್ಯಾನ್ಸ್ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ತಂದು, 'ಪಾಪ್ ಸಂಗೀತ' ಅದ ಆಸ್ತಿಯಂತಿರುವ, ಪ್ರಾಣಿಪ್ರಿಯರೂ ಆದ 'ಮೈಕಲ್ ಜ್ಯಾಕ್ಸನ್' (' ಎಮ್. ಜೆ') ರ, ಸಂಗೀತದ ಕೊಡುಗೆ ಅನನ್ಯವಾಗಿದೆ. ಚಿಕ್ಕ ವಯಸ್ಸಿನಲ್ಲೇ ಅತ್ಯಂತ ಪ್ರತಿಭಾನ್ವಿತರಾಗಿದ್ದ 'ಜಾಕ್ ಸನ್' ತಮ್ಮ ಹರೆಯದ ವಯಸ್ಸಿಗೇ ಜಗತ್ಪ್ರಸಿದ್ಧರಾದರು. ಥ್ರಿಲರ್, 'ಡೇಂಜರಸ್', 'ಹಿಸ್ಟರಿ', 'ಇನ್ ವಿನ್ಸಿಬಲ್', 'ಬ್ಲಡ್ ಆನ್ ದ ಡಾನ್ಸ್ ಫ್ಲೋರ್,' ಇವರ ಸಂಗೀತ ಸುರುಳಿಗಳಲ್ಲಿ ಪ್ರಮುಖವಾಗಿವೆ. want you back,' ಅತಿ ಕಿರಿಯ ವಯಸ್ಸಿನಲ್ಲಿ ಮನ್ನಣೆ ತಂದ ಆಲ್ಬಮ್, Off the wall,' ಅವರ ಸಂಗೀತಾಭಿಮಾನಿಗಳ ಹೃದಯದಲ್ಲಿ ತರಂಗಗಳನ್ನೆಬ್ಬಿಸಿತು.

'ಎಮ್. ಜೆ.,' ರವರ,ಜನನ ಹಾಗೂ ಬಾಲ್ಯ[ಬದಲಾಯಿಸಿ]

ವಿಶ್ವದ 'ಪಾಪ್ ಸಂಗೀತ,' 'ಬ್ರೇಕ್ ಡ್ಯಾನ್ಸ್,' ರಸಿಕರ ಜಾದೂಗಾರನೆಂದು ಪ್ರಸಿದ್ಧರಾಗಿರುವ, ಜ್ಯಾಕ್ಸನ್ನರು, ಅಮೇರಿಕಾದ ಇಂಡಿಯಾನಾ ರಾಜ್ಯದ "ಗ್ಯಾರಿ" ಪಟ್ಟಣದಲ್ಲಿ, ಸಂಗೀತ ಪ್ರಿಯ ಕುಟುಂಬವೊಂದರಲ್ಲಿ ಜನಿಸಿದರು. ಉಕ್ಕಿನ ಕಾರ್ಖಾನೆಯಲ್ಲಿ ಕೆಲಸಮಾಡುವ ಕಾರ್ಮಿಕ 'ಜೋಯ್ ಜಾಕ್ಸನ್,' ಮತ್ತು ಆವರ ಪತ್ನಿ 'ಕ್ಯಾಥರಿನ್,' ಗೆ ೯ ಮಂದಿ ಮಕ್ಕಳಲ್ಲಿ ೭ ನೇ ಮಗುವಾಗಿ ಆಗಸ್ಟ್ ೨೯, ೧೯೫೮ ರಲ್ಲಿ ಜನಿಸಿದರು. ಬಾಲ್ಯದಲ್ಲಿ ಜಗತ್ತಿಗೆ ಅವರು ಕೇವಲ ಒಬ್ಬ 'ಆಫ್ರಿಕನ್ ಅಮೆರಿಕನ್ ಹುಡುಗ,' ನಂತೆ ಕಂಡರು. ೧೯೮೪ ನಂತರ ಅವರಲ್ಲಾದ ಅದ್ಭುತಬದಲಾವಣೆಯನ್ನು ಗುರುತಿಸಲು, ಅವರ ಹತ್ತಿರದ ಸಂಬಂಧಿಗಳಿಗೂ, ಕುಟುಂಬದ ಸದಸ್ಯರಿಗೂ ತೊಡಕಾಗಿತ್ತು. ಅವರ ಸಂಗೀತಾಭಿಮಾನಿಗಳು ಕರೆದಾಗ ಬಂದು ಅವರಿಗೆ ಬೇಕಾದ ಹಾಡುಗಳನ್ನು ಹಾಡಿ-ಕುಣಿದು ಅವರಮನಸ್ಸನ್ನು ರಂಜಿಸಿ ಮೆರೆದ, 'ಪಾಪ್ ಸಂಗೀತ ಸಾಮ್ರಾಟನ,' ೧೪ ನಿಮಿಷಗಳ ಕಿರುಚಿತ್ರ, 'ಮೂನ್ ವಾಕ್,' ಅಪಾರ ಜನಪ್ರಿಯತೆಯನ್ನು ಪಡೆಯಿತು. 'ಬ್ರೇಕ್ ಡ್ಯಾನ್ಸ್' ಹಾಗೂ 'ಮೂನ್ ವಾಕ್' ಗಳಿಗೆ ನಿಜವಾದ ಬೆಲೆಸಿಕ್ಕಿದ್ದು, ಜ್ಯಾಕ್ಸನ್ ರಿಂದಲೇ. ಜಗತ್ತನ್ನೇ ತಲ್ಲಣ ಗೊಳಿದುವ ಅದ್ಭುತ ಪ್ರತಿಭಾವಂತ. ೧೯೭೮ ರಲ್ಲಿ, 'Jackson the Viz,' ಸಿನಿಮಾ ಅವತರಣಿಕೆಯಲ್ಲಿ ಕಾಣಿಸಿಕೊಂಡರು. ಎಲ್ಲರೂ ಗಮನಿಸಬೇಕಾದ ಪ್ರಮುಖ ಸಂಗತಿ ಎಂದರೆ, ಮೈಕಲ್ ಜ್ಯಾಕ್ಸನ್ ತನ್ನ ಬಾಲ್ಯದಲ್ಲಿ, ಅಡುಗೆಮನೆಯಲ್ಲಿ ತನ್ನ ಅಮ್ಮ ಪಾತ್ರೆಗಳನ್ನು ಜೋಡಿಸುವಾಗ ತಪ್ಪಿ ಪಾತ್ರೆಗಳು ಕೆಳಗೆ ಬಿದ್ದರೆ, ಆ ಶಬ್ದಕ್ಕೆ ಜಾಕ್ಸನ್ ಕುಣಿತವನ್ನು ಹಾಕುತ್ತಿದ್ದರು.!!

ಮೈಕಲ್ ಜ್ಯಾಕ್ಸನ್ (ಎಮ್. ಜೆ) ಮ್ಯೂಸಿಕ್ ತಂಡ[ಬದಲಾಯಿಸಿ]

ಜಾಕ್ಸನ್, ತಮ್ಮ ಸೋದರರ ಜೊತೆಸೇರಿ ಒಂದು 'ಜ್ಯಾಕ್ಸನ್ ಬ್ರದರ್ಸ್' ಎಂಬ ತಂಡವನ್ನು ಕಟ್ಟಿಕೊಂಡು ತಮ್ಮ ವೃತ್ತಿಜೀವನವನ್ನು ಶುರುಮಾಡಿದರು. ಮೊದಲು ಪುಟ್ಟದಾಗಿ ಪ್ರಾರಂಭಿಸಿದ 'ಬ್ರೇಕ್ ಡ್ಯಾನ್ಸ್' 'ಪಾಪ್ ಸಂಗೀತ' ಮತ್ತು ಅವುಗಳಲ್ಲಿ ಹೊಸ ಆವಿಷ್ಕಾರಗಳನ್ನು ತಮ್ಮ ಜೀವನದಲ್ಲಿ ಯಶಸ್ಸಿನ ನಡಿಗೆಯನ್ನು ಆರಂಭಿಸಿದರು. ಅವರ 'ಥ್ರಿಲ್ಲರ್ ಆಲ್ಬಮ್ ', ೧೯೮೨ ರಲ್ಲಿ, ಪೆಪ್ಸಿ ಕಂ. ಗಾಗಿ ಜಾಹಿರಾತಿಗೆ, ನಟಿಸಿದಾಗ, ಕೂದಲಿಗೆ ಬೆಂಕಿ ತಗುಲಿ, ಗಂಭೀರವಾದ ಗಾಯವಾಗಿತ್ತು. 'ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ' ೨೮ ಬಾರಿ ಅಮೆರಿಕನ್ ರೆಕಾರ್ಡಿಂಗ್ ಅಸೋಸಿಯೇಷನ್ ಮೂಲಕ, ೨೮ ಬಾರಿ ಯಶಸ್ಸಿನ ಪ್ರಮಾಣಪತ್ರಗಳನ್ನು ಹಾಸಲುಮಾಡಿದೆ. ಎಲ್ಲಾ ಸಮಯದಲ್ಲೂ ಅತ್ಯಂತ ಹೆಚ್ಚು ಮಾರಾಟವಾದ ಹೆಸರುಮಾಡಿದೆ. ವೃತ್ತಿಯ ಕೆಲವು ಸಮಸ್ಯೆಗಳಿಂದಾಗಿ ಅವರು, ತಮ್ಮ ಸೋದರರಿಂದ ಕೆಲಕಾಲ ದೂರವಿದ್ದರು. ಮತ್ತೆ ತಮ್ಮ ಸೋದರರನ್ನು ಮರುವಿಲೀನಗೊಳಿಸಿದ್ದು, ಅವರ 'ಥ್ರಿಲ್ಲರ್ ಆಲ್ಬಮ್,' ಅದರ ಯಶಸ್ಸಿನಿಂದ ವಿಶ್ವದಾದ್ಯಂತ ಓಡಾಡಿದಾಗ. ೨೦೦೧ ರಲ್ಲಿ ೩೦ ಮಿಲಿಯನ್ ಡಾಲರ್ ಖರ್ಚಿನಿಂದ ತಯಾರುಮಾಡಿದ ಆಲ್ಬಮ್, 'ಇನ್ವಿನ್ಸಿಬಲ್' ನಿರೀಕ್ಷಿಸಿದಷ್ಟು ಯಶಸ್ಸು ಕಾಣಲಿಲ್ಲ. ಹೀಗೆ ಜ್ಯಾಕ್ಸನ್ ಗಳಿಸಿದ್ದು ಎಷ್ಟೋ, ಕಳೆದುಕೊಂಡಿದ್ದೂ ವಿಪರೀತ. ೧೯೮೮ ರಲ್ಲಿ ಕ್ಯಾಲಿಫೋರ್ನಿಯದ 'ಲಾಸ್ ಒಲಿವೋಸ್,' ನಲ್ಲಿ ೨,೬೦೦ ಎಕರೆ ಜಮೀನನ್ನು ೧೭ ಮಿ ಡಾಲರ್ ಕೊಟ್ಟು ಖರೀದಿಸಿದರು. ಅದಕ್ಕೆ ಮತ್ತೆ, ೩೫ ಮಿಲಿಯನ್ ಡಾಲರ್ ವ್ಯಯಮಾಡಿ, ವಿಶಾಲವಾದ ಪಾರ್ಕ್, ಪ್ರಾಣಿಸಂಗ್ರಹಾಲಯ, '೫೦ ಆಸನಗಳ ಥಿಯೇಟರ್,' ನಿರ್ಮಿಸಿದ್ದರು. ಇದು ನಂತರ 'ನೆವರ್ ಲ್ಯಾಂಡ್ ರ್ಯಾಂಚ್ ,' ಎಂದು ಹೆಸರಾಯಿತು. ತಮ್ಮ ಜೀವನ ಶೈಲಿಗೆ, ಹಾಗೂ ಪ್ರಸಿದ್ಧಿಗೆ, ಅಪಾರ ಹಣ ಖರ್ಚುಮಾಡುತ್ತಿದ್ದರು. ಅದಕ್ಕಾಗಿ ಬೇರೆಬೇರೆ ಮೂಲಗಳಿಂದ ಹಣವನ್ನು ಸಾಲಪಡೆದಿದ್ದರು. ೨ ಬಾರಿ 'ರಾಕ್ ಅಂಡ್ ರೋಲ್ ಹಾಲ್ ಆಫ್ ಫೇಮ್,' ಗೆ ಸೇರ್ಪಡೆಯಾಗಿದ್ದರು.

'ಪಾಪ್ ಮೂಸಿಕ್,' 'ಬ್ರೇಕ್ ಡ್ಯಾನ್ಸ್,' ಹಾಗೂ ಹೈಟೆಕ್ ಮ್ಯೂಸಿಕ್ ಕಾರ್ಯಕ್ರಮಗಳು[ಬದಲಾಯಿಸಿ]

೧೯೯೬ ರಲ್ಲಿ ಮುಂಬೈಗೆ ಬಂದಿದ್ದರು. ವಿಮಾನನಿಲ್ದಾಣದಿಂದ ಉಪನಗರ 'ಅಂಧೇರಿಯ ಸ್ಪೋರ್ಟ್ಸ್ ಕಾಂಪ್ಲೆಕ್ಸ್' ವರೆಗೆ ಭಾರತೀಯ ಸಂಸ್ಕೃತಿಯಂತೆ ಮಾಡಿದ ಸ್ವಾಗತ ಅವರಿಗೆ ಬಹಳವಾಗಿ ಹಿಡಿಸಿತಂತೆ. ಪ್ರೇಕ್ಷಕರು, ಅವರನ್ನು ಉಪಗ್ರಹ ನೌಕೆಯ ಮೂಲಕ ವೇದಿಕೆಯಮೇಲೆ ಥಟ್ಟನೆ ಕಾಣಿಸಿಕೊಂಡಾಗ ಯವುದೋ ಮಾಯಾಲೋಕದಲ್ಲಿ ವಿಹರಿಸುತ್ತಿರುವಂತೆ ಭಾಸವಾಗಿತ್ತಂತೆ. ಶೋಷಿತ ಮಕ್ಕಳಿಗಾಗಿ ತಾವು ಇಳಿದುಕೊಂಡಿದ್ದ 'ಒಬೆರಾಯ್ ಹೋಟೆಲ್' ನಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡು, ಮೈಕ್ ಇಲ್ಲದೆ, ಹಾಡಿದ, ಮ್ಯೂಸಿಕ್ ನೀಡದೆ ಮಕ್ಕಳೊಡನೆ ಕುಣಿದು ಕುಪ್ಪಳಿಸಿ, ಮಕ್ಕಳಿಗೆ ಉಡುಗೊರೆಗಳನ್ನು ನೀಡಿದ ಸಹಜ ಅಭಿನಯ ಇತಿಹಾಸ ಸೃಷ್ಟಿಸಿದರು. ವಾರ್ಷಿಕ ಆದಾಯ, ೭೫೦ ಮಿ. ಡಾ. ಪಾಪ್ ಸಂಗೀತದಿಂದಲೇ ೫೦ ಮಿ. ಡಾ. ಆದರೆ ಮರಣಕ್ಕೆ ಮೊದಲು ಸುಮಾರು ೫೦೦ ಮಿ.ಡಾ. ಸಾಲವನ್ನು ಬಿಟ್ಟುಹೋಗಿರುವುದು ಎಲ್ಲರ ಹುಬ್ಬು ಏರಿಸಿದೆ. ತನ್ನ ಪ್ರಚಾರಕ್ಕಾಗಿ ಮಾಡುತ್ತಿದ್ದ ಹಣ ಅತಿಯಾಗಿತ್ತು. ೧೯೮೦ ರಿಂದ ಅಂದಾಜು ೪೦೦ಕ್ಕು ಹೆಚ್ಚು ಮಿಲಿಯನ್ ಪೌಂಡ್ ಗಳ ಆದಾಯ ಹೊಂದಿದ್ದರು. ಕಾನೂನು ಸಂಘರ್ಷಗಳಿಗಾಗಿ ವ್ಯಯ.

== ಮ್ಯೂಸಿಕ್ ವಲಯದಲ್ಲಿ ಮಾಡಿಕೊಂಡ ಒಪ್ಪಂದಗಳು ಹಾಗೂ ಹಣ-ಗಳಿಕೆ ==

Michael Jackson in 1988.jpg

'ಬ್ರೇಕ್ ಡ್ಯಾನ್ಸ್' ಮತ್ತು 'ಪಾಪ್ ಡ್ಯಾನ್ಸ್' ಕಾರ್ಯಕ್ರಮಗಳನ್ನು ತಮ್ಮ ಜೀವನದ ವೆಂದು ೪೦ ವರ್ಷಗಳ ಸಾರ್ವಜನಿಕರ ಪ್ರೀತ್ಯಾದರಗಳಿಗೆ, ಯಶಸ್ಸಿನ ಪ್ರತೀಕ. ೧೯೮೫ ರಲ್ಲಿ 'ಬೀಟ್ ಲೆಸ್ ಸಾಂಗ್,' ಗಳ ಪ್ರಕಾರ ಹಕ್ಕನ್ನು ೪೭.೫ ಪೌಂಡ್ ಗಳಿಗೆ ಖರೀದಿಸಿದ್ದರು. 'ಸೋನಿ ಮ್ಯೂಸಿಕ್ ಸಂಸ್ಥೆ'ಯ ಜೊತೆಗೆ ಮಾಡಿಕೊಂಡ ಒಪ್ಪಂದ ಪಾಲುಗಾರಿಕೆ ವ್ಯವಹಾರ, ಮ್ಯೂಸಿಕ್ ಕ್ಷೇತ್ರದಲ್ಲಿ ಅತ್ಯಂತ ದೊಡ್ಡದಾಗಿತ್ತು. ಅವರ 'ಯೆಸ್ಟರ್ ಡೇ' ಮತ್ತು 'ಲೆಟ್ ಇಟ್ ಬಿ' ಸಾಂಗ್ಸ್ ಅತಿ ಬೇಡಿಕೆಯ ಹಾಡುಗಳು. ಅವರಿಂದಾಗಿ ಪಾಪ್ ಸಂಗೀತ, ಆಧುನಿಕ ಸಂಗೀತದ ಒಂದು ವಿಶೇಶಭಾಗವೆಂಬ ಭಾವನೆಯನ್ನು ಅವರ ಕೇಳುಗರಲ್ಲಿ ಮೂಡಿಸಿ 'ಹೈಟೆಕ್ ಸಂಗೀತ,' ವನ್ನಾಗಿ ಪರಿವರ್ತಿಸಿದ ಶ್ರೇಯಸ್ಸು ಅವರದು. ಅತಿ ಚಿಕ್ಕ ವಯಸ್ಸಿನಲ್ಲಿ ಅವರಿಗೆ ಕೀರ್ತಿತಂದ ಆಲ್ಬಮ್ ಗಳು, 'want you back,' and ' Off the wall' ಮೊಟ್ಟಮೊದಲನೆಯವು. ೮ ತಿಂಗಳಕಾಲ ಜನರೆಲ್ಲರ ಬಾಯಿನಲ್ಲಿ ಆಡುತ್ತಿತ್ತು. ನಂಬರ್ ೧ ಎಂದು ಹೆಸರುಮಾಡಿದವು. ತಮ್ಮ ೧೯೭೦ ರಲ್ಲಿ ೧೩ ನೇ ವಯಸ್ಸಿನಲ್ಲೇ ವೃತ್ತಿಜೀವನ ಆರಂಭ. ಏಳಿಗೆಯಲ್ಲಿ ಸೋದರರ ಪರಿಶ್ರಮವೂ ಇತ್ತು. ಐಷಾರಾಮಿ ಬದುಕನ್ನು ಸಾಗಿಸಲು ಇಚ್ಛಿಸಿದ ವ್ಯಕ್ತಿ. ಅದಕ್ಕಾಗಿ ಮಿಲಿಯಗಟ್ಟಲೆ ವ್ಯವಹಾರ ನಡೆಸಿ, ಅದರಲ್ಲಿ ಸಿದ್ಧಿಸಿಗಲಿಲ್ಲ. 'ನೆವೆರ್ ಲನ್ದ್ ಎಸ್ಟೇಟ್' ಗೆ ಅಪಾರ ಹಣ ಖರ್ಚುಮಾಡಿದ್ದರು. ಅವರ ಸಾಧನೆಗೆ ವಿಶ್ವದಾದ್ಯಂತ, ಸಿಕ್ಕ ಮನ್ನಣೆ, ಗೌರವಗಳು ಅಪಾರ.

ಆರೋಗ್ಯವನ್ನು ನಿರ್ಲಕ್ಷಿಸಿ, ಡ್ರಗ್ಸ್-ವ್ಯಸನಕ್ಕೆ ಬಲಿಯಾದರು[ಬದಲಾಯಿಸಿ]

ಜೀವಮಾನ ಸಾಧನೆಯ ಅತ್ಯಂತ ಮಹತ್ವದ ಮ್ಯೂಸಿಕ್ ಆಲ್ಬಂಗಳು[ಬದಲಾಯಿಸಿ]

  • "Billie Jean"
  • "Beat It",
  • "Wanna Be Startin' Somethin"
  • "smooth criminal"
  • "black or white"


'ರಾಕ್ ಮ್ಯೂಸಿಕ್,' ಕ್ಷೇತ್ರದಲ್ಲಿ ಎಮ್ ಜೆ ಯವರಿಗೆ, ದಕ್ಕಿದ ಪ್ರಶಸ್ತಿಗಳು[ಬದಲಾಯಿಸಿ]

ಎಮ್. ಜೆ ಯವರಿಗೆ ಪ್ರತಿಷ್ಠಿತ, ೧೩ 'ಗ್ರಾಮೀ ಅವಾರ್ಡ್,' ಗಳು ಬಂದಿವೆ. ೧೯೯೩ ರ ಫೆಬ್ರವರಿ, ೨೪ ರಂದು, ಪಾಪ್ ಸಂಗೀತದ ಸಾಧನೆಗಾಗಿ, ಲಾಸ್ ಎಂಜಲೀಸ್ ನಗರದಲ್ಲಿ ನಡೆದ, ೩೫ ನೇ 'ಗ್ರಾಮ್ಮೀ ಪ್ರಶಸ್ತಿ ವಿತರಣಾ ಸಮಾರಂಭ,' ದಲ್ಲಿ ಅತ್ಯುತ್ತಮ ಗೌರವಾದಿಗಳನ್ನು ನೀಡಿ ಸತ್ಕರಿಸಿದ್ದರು.

ವೃತ್ತಿಜೀವನದ ಅಗತ್ಯತೆಗಳು- ಮೈಕಲ್ ಜಾನ್ಸನ್ ಕಂಡಂತೆ[ಬದಲಾಯಿಸಿ]

ಅವರದೇ ಆದ ಕೆಲವು ಶೈಲಿಯ ಜೀವನಕ್ರಮವನ್ನು ಅವರು ಆರಿಸಿಕೊಂಡು ಅದನ್ನು ಪೋಶಿಸುತ್ತಿದ್ದರು. ತಮ್ಮ ವಾಸ್ತವ್ಯದ ಕೊಠಡಿಯ ತಾಪಮಾನ ಗರಿಷ್ಟ-ತಾಪಮಾನದ ಮಿತಿಯಲ್ಲಿರಬೇಕು. ತಮಗೆ ಸರಿಕಂಡ ಕೇಶವಿನ್ಯಾಸವನ್ನು ಅವರು ಬಳಸುತ್ತಿದ್ದರು. ೧೯೭೯ ರಲ್ಲಿ ನಡೆಸಿದ ಸಂಗೀತ ಕಾರ್ಯಕ್ರಮದಲ್ಲಿ ಮೂಗಿಗೆ ಪೆಟ್ಟುಬಿದ್ದು, ಶಸ್ತ್ರಚಿಕಿತ್ಸೆ ಮಾಡಿ ಸರಿಪಡಿಸಬೇಕಾಯಿತು. ಆದರೆ ಉಸಿರಾಟದ ತೊಂದರೆ ಆಗಾಗ ಕಾಣಿಸಿಕೊಳ್ಳುತ್ತಿತ್ತು. ಅತಾರಾಷ್ಟ್ರೀಯಮಟ್ಟದ ಸಂಗೀತಗಾರನಾದರೂ ದೈಹಿಕವಾಗಿ ಅವರು ಬೆಳೆಯಲು ಸಾಧ್ಯವಾಗದೆ ಹೋಯಿತು. ಅದಕ್ಕೆ ಕಾರಣಗಳು ಹಲವಾರು. ಪ್ರತಿ ಹೋಟೆಲ್ ಗೆ ಹೋದಾಗಲೂ, ಒಂದು ಕನ್ನಡಿಯನ್ನು ಅಳವಡಿಸಲು ಸಿಬ್ಬಂದಿವರ್ಗಕ್ಕೆ ತಿಳಿಸುತ್ತಿದ್ದರು. ನಿರ್ಗಮಿಸುವ ಮೊದಲು, ತಲೆದಿಂಬು ಮತ್ತು ಕನ್ನಡಿಯಮೇಲೆ ಹಸ್ತಾಕ್ಶರವನ್ನು ಬಿಟ್ಟುಹೋಗುತ್ತಿದ್ದರು. ಆ ಪದಾರ್ಥಗಳನ್ನು ಹರಾಜುಮಾಡಿ ಅದರಿಂದ ಬಂದ ಹಣವನ್ನು ಚ್ಯಾರಿಟಿಗಾಗಿ ವಿನಿಯೋಗಿಸುತ್ತಿದ್ದರು. ಜಾ ರ ಮೆಚ್ಚಿನ ತಿಂಡಿ, ಮಸಾಲದೋಸೆ, ಮತ್ತು ಮಾಂಸಾಷಾರದಲ್ಲಿ ಚಿಕನ್ ಟಿಕ್ಕ. ಪ್ಲಾಸ್ಟಿಕ್ ಸರ್ಜರಿ ಮತ್ತು ವಿಭಿನ್ನ ರೀತಿಯ ತಲೆಕೂದಲಿನ ವಿನ್ಯಾಸಕ್ಕಾಗಿ ಗೆಳೆಯರ ಟೀಕೆಗಳಿಗೆ ಗುರಿಯಾಗಿದ್ದರು. ವಿವಾದಗಳು, ಅಪಪ್ರಚಾರ ಅವರಿಗೆ ಚೆನ್ನಾಗಿ ಅಭ್ಯಾಸವಾಗಿತ್ತು. ತಲೆಗೆ ಹಚ್ಚಿಕೊಳ್ಳುತ್ತಿರಲಿಲ್ಲ. ಕೆಲವೊಮ್ಮೆ ತಮ್ಮ ಉಪಹಾರಕ್ಕಾಗಿ ಅವರೇ ಸ್ವತಃ ದೋಸೆ ತಯಾರಿಸುತ್ತಿದ್ದರಂತೆ.

ಮೈಕೆಲ್ ಜಾಕ್ಸನ್ ಅವರು ಬ್ಯಾಡ್ ವೀಡಿಯೊದಲ್ಲಿ ಧರಿಸಿರುವ ಜಾಕೆಟ್ ಮತ್ತು ಬೆಲ್ಟ್

ಲೈಂಗಿಕ ದೌರ್ಜನ್ಯದ ಅಪಾದನೆ, ಮತ್ತು ಹಲವಾರು ಅಪವಾದಗಳು[ಬದಲಾಯಿಸಿ]

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕ, ಆರೋಪಮಾಡಿದ. ಮದ್ಯಕುಡಿಸಿ, ಆತನಮೇಲೆ ಅನೇಕಬಾರಿ ದೌರ್ಜನ್ಯಮಾಡಿದನೆಂದು ದೂರುಕೊಟ್ಟ. ಆತನ ಸೋದರನೂ ಅದನ್ನು ಅನುಮೋದಿಸಿ ಕೋರ್ಟಿನಲ್ಲಿ ಸಾಕ್ಷ್ಯನುಡಿದಿದ್ದ. ವಿವಾದ ಹೊಸ ತಿರುವನ್ನು ಪಡೆದುಕೊಂಡು, ಸುಮಾರು ೧೫ ವಾರಗಳ ವಿಚಾರಣೆಯ ನಂತರ, ಸಾಂದರ್ಭಿಕ ಸಾಕ್ಷ್ಯದ ಕೊರೆತೆಯಿಂದಾಗಿ, ಜ್ಯಾಕ್ಸನ್ ರನ್ನು ದೋಷಮುಕ್ತಮಾಡಿತ್ತು. ಅನೇಕಬಾರಿ ಜನಪ್ರಿಯತೆ ಕುಸಿದುಹೋಗಿ ಅವರು ಮುಕ್ತರಾಗಿ ಮತ್ತೆ ಹೊರಗೆ ಬರುವತನಕ, ಅಮೆರಿಕ ಬಿಟ್ಟು ಬೆಹ್ರೆನ್ ಗೆ ಹೋಗಿದ್ದರು. ಅಲ್ಲಿನ ದೊರೆಯ ಮಗ, ಶೇಖ್ ಅಬ್ದುಲ್ಲಾರವರ ಪ್ರೋತ್ಸಾಹ, ಸಹಾಯದಿಂದ ತಮ್ಮ ಮೊದಲಿನ ಸ್ಥಿತಿಯನ್ನು ಪಡೆದರು. ವಿವಾದದ ಸಂಕಷ್ಟದ ಸಮಯದಲ್ಲೂ ಅವರ ಸಂಗೀತಾರಾಧಕರು, ಅಭಿಮಾನಿಗಳು ಸಮರ್ಥಿಸಿದ್ದರಿಂದ ತಮ್ಮ ಖ್ಯಾತಿಯನ್ನು ಜ್ಯಾಕ್ಸನ್ ಕೊನೆಯಗಳಿಗೆಯ ವರೆಗೂ ಕಾಪಾಡಿಕೊಳ್ಳಲು ಅವಕಾಶವಾಯಿತು.

'ಎಮ್. ಜೆ,' ರವರ, ವೈವಾಹಿಕ ಜೀವನ[ಬದಲಾಯಿಸಿ]

ಪ್ರವೇಶಿಸಿದ್ದು, ೧೯೯೪ ರಲ್ಲಿ. ಗುಪ್ತಸಂಬಂಧವೆಂದು ಮೀಡಿಯಾಗಳು ವರದಿಮಾಡಿವೆ. ಅಮೆರಿಕದ ದಿವಂಗತ, ಖ್ಯಾತ ಪಾಪ್ ಸಿಂಗರ್, ಎಲ್ವಿಸ್ ಪ್ರಿಸ್ಲೆಯವರ ಪುತ್ರಿ, 'ಲಿಸಾಮೇರಿ ಪ್ರಿಸ್ಲೆ,' ಯವರನ್ನು ಮದುವೆಯಾಗಿ ೩ ವರ್ಷಗಳ ಬಳಿಕ ವಿವಾಹ ವಿಚ್ಛೇದಮಾಡಿಕೊಂಡಿದ್ದರು. ೧೯೯೬ ರಲ್ಲಿ, ನವೆಂಬರ್ ೧೩ ನೇ ತಾರೀಖು, 'ಡೆಬ್ಬಿ ರೋವೆ,' ಎಂಬಾಕೆಯೊಡನೆ ವಿವಾಹ. ೧೯೯೯ ರಲ್ಲಿ ವಿಚ್ಛೇದನ. ಆಕೆಯ ಇಬ್ಬರು ಮಕ್ಕಳಾದ 'ಪ್ರಿನ್ಸ್ ಮತ್ತು ಪ್ಯಾರಿಸ್ ಕ್ಯಾಥರಿನ್', ಜಾನ್ಸನ್ ರವರ ಸುಪರ್ದಿಗೆ ಒಪ್ಪಿಸಿದ್ದಳು. ಜ್ಯಾಕ್ಸನ್ ರ ತಾಯಿಯವರು ಆ ಮಕ್ಕಳನ್ನು ಪಾಲಿಸುವ ಜವಾಬ್ದಾರಿಯನ್ನು ಹೊತ್ತುಕೊಂಡರು.

ಅತಿ ಶೀಘ್ರ ಮರಣ[ಬದಲಾಯಿಸಿ]

ಅವರು ಲಾಸ್ ಎಂಜಲೀಸ್ ನಗರದ ಆಸ್ಪತ್ರೆಯೊಂದರಲ್ಲಿ, ಹೃದಯಾಘಾತದಿಂದ ಜೂನ್ 25 2009 ರಂದು ಮರಣಹೊಂದಿದರು. ಕೇವಲ ೫೦ ವರ್ಷದ ಪ್ರಾಯದಲ್ಲಿ ವಿಶ್ವದ ಯುವಜನರನ್ನು ಕುಣಿಸಿ ಸಂಭ್ರಮಿಸಿದ 'ಪಾಪ್ ಹಾಡುಗಾರ, ಎಮ್. ಜೆ, ವಿಶ್ವದಿಂದ ಕಣ್ಮರೆಯಾದರು.