ಮೇಸಿಯೆ ಪಟ್ಟಿ
ಎಡ್ಮಂಡ್ ಹ್ಯಾಲಿ ( Edmond Halley 1656 - 1742) ಧೂಮಕೇತುಗಳನ್ನು ವಿವರವಾಗಿ ಅಭ್ಯಾಸ ಮಾಡಿ ಅವುಗಳ ಗಣೀತೀಯ ವೃತ್ತಾಂತ ಬರೆದಿಟ್ಟ. 1682ರಲ್ಲಿ ಪ್ರತ್ಯಕ್ಷವಾದ ಧೂಮಕೇತುವೊಂದರ (ಅದೇ ಪ್ರಖ್ಯಾತವಾದ ಹ್ಯಾಲಿ ಧೂಮಕೇತು) ಕಕ್ಷೆ 1531 ಮತ್ತು 1607ರಲ್ಲಿ ಕಾಣಿಸಿಕೊಂಡಿದ್ದ ಧೂಮಕೇತುಗಳ ಕಕ್ಷೆಗೆ ಯಥಾವತ್ತಾಗಿ ಹೋಲುವುದನ್ನು ಗಮನಿಸಿ, ಆ ಧೂಮಕೇತುಗಳು ಬೇರೆ ಬೇರೆಯಲ್ಲದೆ, ಒಂದೇ ಧೂಮಕೇತುವೆಂದು, ಆ ಧೂಮಕೇತು ಪ್ರತಿ 76 ವರ್ಷಗಳಿಗೊಮ್ಮೆ ಸೂರ್ಯನನ್ನು ಒಂದು ಸುತ್ತು ಬರುವುದೆಂದು, 1758ರ ಹೊತ್ತಿಗೆ ಆ ಧೂಮಕೇತು ಮತ್ತೆ ಕಾಣಿಸಿಕೊಳ್ಳುವುದೆಂದು ಬರೆದಿಟ್ಟ. ಆದರೆ 1758ರಲ್ಲಿ ಆ ಧೂಮಕೇತುವನ್ನು ನೋಡಲು ಹ್ಯಾಲಿ ಬದುಕಿರಲಿಲ್ಲ.
ಹ್ಯಾಲಿ ಬರೆದಿಟ್ಟಂತೆ 1758ರಲ್ಲಿ ಕಾಣಿಸಿಕೊಳ್ಳಲಿದ್ದ ಧೂಮಕೇತುವನ್ನು ಹುಡುಕ ಹೊರಟವರಲ್ಲಿ ಚಾರ್ಲ್ಸ್ ಮೇಸಿಯೆ ( Charles Messier 1730 - 1817) ಎಂಬುವನೂ ಒಬ್ಬ. ಆ ಹುಡುಕಾಟದ ಸಂದರ್ಭದಲ್ಲಿ ಮೇಸಿಯೆ ಗುರುತಿಸಿದ, ನಕ್ಷತ್ರದಂತೆ ಚುಕ್ಕೆಯಲ್ಲದ, ಮಬ್ಬಾದ ಕಾಯಗಳು ಧೂಮಕೇತುಗಳೇ ಎಂಬಂತೆ ಭ್ರಮೆ ಹುಟ್ಟಿಸುತ್ತಿದ್ದವು. ಇಂಥಹ ಕಾಯಗಳ ಪಟ್ಟಿಯೊಂದನ್ನು ಮೇಸಿಯೆ ತಯಾರಿಸಿದ. ಆ ಪಟ್ಟಿಗೆ ಮೇಸಿಯೆ ಪಟ್ಟಿಯೆಂದು (Messier object) ಕರೆಯುತ್ತಾರೆ. ಇದರಲ್ಲಿನ ಪ್ರತಿ ಕಾಯಗಳಿಗೆ ಒಂದರಿಂದ ಸಂಖ್ಯೆಗಳನ್ನು ನೀಡಲಾಗಿದೆ. ಸಂಖ್ಯೆಯ ಮೊದಲು ಇಂಗ್ಲೀಷಿನ M ಅಕ್ಷರವನ್ನು ಸೇರಿಸಲಾಗುತ್ತದೆ. M ಎಂದರೆ ಮೇಸಿಯೆ. ಉದಾಹರಣೆಗಾಗಿ ಹೇಳಬೇಕಾದರೆ ಕ್ರಿ.ಶ.1054ರಲ್ಲಿ ಸ್ಪೋಟಿಸಿದ ಸೂಪರ್ನೋವಾದ ಉಳಿಕೆ ಕ್ರ್ಯಾಬ್ ನೆಬ್ಯೂಲಾ. ಇದು ಮೇಸಿಯೆ ಪಟ್ಟಿಯಲ್ಲಿನ ಮೊದಲ ಕಾಯ. ಇದನ್ನು M1 ಎಂದು ಗುರುತಿಸಲಾಗುತ್ತದೆ. ಪರಿಷ್ಕೃತ ಆವೃತ್ತಿಯಂತೆ ಈಗ ಒಟ್ಟು 110 ಕಾಯಗಳು ಮೇಸಿಯೆ ಪಟ್ಟಿಯಲ್ಲಿವೆ.
ಡಾ|| B.S.ಶೈಲಜಾ, ಜವಹರಲಾಲ್ ನೆಹರೂ ತಾರಾಲಯ, ಬೆಂಗಳೂರು, ಇವರು 14 ಜನವರಿ, 2009ರಿಂದ ಮೇಸಿಯೆ ಪಟ್ಟಿಯ ಕಾಯಗಳ ಪರಿಚಯವನ್ನು ’ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರತಿ ಬುಧವಾರದ ’ವಿಜ್ಞಾನ-ತಂತ್ರಜ್ಞಾನ’ ಪುರವಣಿಯಲ್ಲಿ ಕನ್ನಡದಲ್ಲಿ ಪರಿಚಯ ಮಾಡಿಕೊಡುತ್ತಿದ್ದಾರೆ.
ಮೇಸಿಯೆ ಪಟ್ಟಿಯ ಆಕಾಶಕಾಯಗಳು
[ಬದಲಾಯಿಸಿ]M1 | M2 | M3 | M4 | M5 | M6 | M7 | M8 | M9 | M10 | M11 | M12 | M13 | M14 | M15 | M16 | M17 | M18 | M19 | M20 | M21 | M22 |
M23 | M24 | M25 | M26 | M27 | M28 | M29 | M30 | M31 | M32 | M33 | M34 | M35 | M36 | M37 | M38 | M39 | M40 | M41 | M42 | M43 | M44 |
M45 | M46 | M47 | M48 | M49 | M50 | M51 | M52 | M53 | M54 | M55 | M56 | M57 | M58 | M59 | M60 | M61 | M62 | M63 | M64 | M65 | M66 |
M67 | M68 | M69 | M70 | M71 | M72 | M73 | M74 | M75 | M76 | M77 | M78 | M79 | M80 | M81 | M82 | M84 | M85 | M86 | M87 | M88 | M88 |
M89 | M90 | M91 | M92 | M93 | M94 | M95 | M96 | M97 | M98 | M99 | M100 | M101 | M102 | M103 | M104 | M105 | M106 | M107 | M108 | M109 | M110 |