ವಿಷಯಕ್ಕೆ ಹೋಗು

ಮೇರು ಪರ್ವತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೇರು ಪರ್ವತವು (ಸುಮೇರು, ಮಹಾಮೇರು) ಹಿಂದೂ, ಜೈನ ಮತ್ತು ಬೌದ್ಧ ವಿಶ್ವವಿಜ್ಞಾನದ ಪವಿತ್ರ ಐದು ಶಿಖರಗಳ ಪರ್ವತ. ಇದನ್ನು ಎಲ್ಲ ಭೌತಿಕ, ತತ್ವ ಮೀಮಾಂಸೆ ಹಾಗೂ ಆಧ್ಯಾತ್ಮಿಕ ಬ್ರಹ್ಮಾಂಡಗಳ ಕೇಂದ್ರವೆಂದು ಪರಿಗಣಿಸಲಾಗುತ್ತದೆ.

ಭೌಗೋಳಿಕ

[ಬದಲಾಯಿಸಿ]

ಮೇರು ಪರ್ವತವು ಭೂಮಿಯ ಮಧ್ಯದಲ್ಲಿ ಜಂಬೂದ್ವೀಪದಲ್ಲಿ ಸ್ಥಿತವಾಗಿದೆ ಎಂದು ಸೂರ್ಯಸಿದ್ಧಾಂತವು ಹೇಳುತ್ತದೆ. ಯಾಮಲ ತಂತ್ರದ ಬಹುತೇಕವಾಗಿ ಅಪ್ರಕಟಿತ ಪಠ್ಯಗಳನ್ನು ಆಧರಿಸಿ, ಒಂಭತ್ತನೇ ಶತಮಾನದ ಒಂದು ಪಠ್ಯವಾದ ನರಪತಿಜಯಚರ್ಯವು, "ಸುಮೇರು ಭೂಮಿಯ ಮಧ್ಯದಲ್ಲಿ ಇದೆ ಎಂದು ಕೇಳಲ್ಪಟ್ಟಿದೆ, ಆದರೆ ಅಲ್ಲಿ ಕಾಣಿಸುವುದಿಲ್ಲ" ಎಂದು ಹೇಳುತ್ತದೆ.

ಅಸ್ತಿತ್ವದಲ್ಲಿರುವ ಹಿಂದೂ ಪಠ್ಯಗಳಲ್ಲಿ ವಿಶ್ವವಿಜ್ಞಾನದ ಹಲವಾರು ನಿರೂಪಣೆಗಳು ಇವೆ. ಅವುಗಳಲ್ಲಿ ಒಂದರಲ್ಲಿ, ಬ್ರಹ್ಮಾಂಡೀಯವಾಗಿ, ಮೇರು ಪರ್ವತವು ಪೂರ್ವದಲ್ಲಿ ಮಂದರಾಚಲ ಪರ್ವತದಿಂದ, ಪಶ್ಚಿಮದಲ್ಲಿ ಸುಪಸರ್ವ ಪರ್ವತದಿಂದ, ಉತ್ತರದಲ್ಲಿ ಕುಮುದ ಪರ್ವತದಿಂದ ಮತ್ತು ದಕ್ಷಿಣದಲ್ಲಿ ಕೈಲಾಸಪರ್ವತದಿಂದ ಸುತ್ತುವರಿಯಲ್ಪಟ್ಟಿದೆ ಎಂದೂ ವರ್ಣಿಸಲಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. J.P. Mittal, History of Ancient India: From 7300 BC to 4250 BC, page 3