ಮೇಘಾ ಸುರೇಂದ್ರ ಕುಮಾರ್ ಹೆಗ್ಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

'ಮೇಘಾ ಸುರೇಂದ್ರ ಕುಮಾರ್ ಹೆಗ್ಡೆ' , ಮುಂಬೈನ ಅಂಧೇರಿ ಉಪನಗರದಲ್ಲಿ ವಾಸಿಸುತ್ತಿರುವ ಒಬ್ಬ ೧೯ ವರ್ಷದ ಬಾಲಿಕೆ, ರೈಫಲ್ ಶೂಟಿಂಗ್ ನಲ್ಲಿ ವಿಕ್ರಮವನ್ನು ಸಾಧಿಸಿದ್ದಾಳೆ. ತನ್ನ ಶೈಕ್ಷಣಿಕ ಕ್ಷೇತ್ರದಲ್ಲೂ ಮುಂದಿರುವ 'ಮೇಘಾ' ಒಬ್ಬ ಪ್ರಗತಿಶೀಲ ವಿದ್ಯಾರ್ಥಿನಿಯಾಗಿದ್ದಾಳೆ.

ತಂದೆ ತಾಯಂದಿರು ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

ಮುಂಬೈನ ಅಂಧೇರಿ(ಪೂ) ಉಪನಗರದ 'ಕೊನಾನಿ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್ 'ನಲ್ಲಿ ೧೧ ನೆಯ ತರಗತಿಯಲ್ಲಿ ಓದುತ್ತಿದ್ದಾಳೆ. ಇವಳು ಕೈಗಾರಿಕೋದ್ಯಮಿ ಹಾಗೂ 'ಹಿರಿಯ ರಂಗ ಕಲಾವಿದ', 'ಮಹಾರಾಷ್ಟ್ರ ಕನ್ನಡ ಕಲಾವಿದರ ಪರಿಷತ್ತು' ಮತ್ತು 'ಸನಾತನ ವೇದಿಕೆಯ ಅಧ್ಯಕ್ಷ'ರಾದ ಸುರೇಂದ್ರ ಕುಮಾರ್ ಹೆಗ್ಡೆ ಹಾಗೂ ವಿನೋದಿನಿ ಹೆಗ್ಡೆಯವರ ಸುಪುತ್ರಿ. 'ಯಕ್ಷಗಾನ' ಹಾಗೂ 'ಭರತನಾಟ್ಯ'ದಲ್ಲಿ ಕಲಾವಿದೆ. 'ಬಾಂದ್ರ-ಬೋರಿವಲಿ ವಲಯದ ಕಲಾಜಗತ್ತು', 'ಚಿಣ್ಣರ ಬಿಂಬ ಸಂಸ್ಥೆಯ ಗೌರವ ಕಾರ್ಯದರ್ಶಿ'. ಶೈಕ್ಷಣಿಕ ಕ್ಷೇತ್ರದಲ್ಲಿ ಮಂಚೂಣಿಯಲ್ಲಿರುವ ಮೇಘಾ, 'ಐ.ಸಿ.ಎಸ್.ಇ ಬೋರ್ಡ್ ಪರೀಕ್ಷೆ' ಯಲ್ಲಿ ಶೇ.೯೪% ಅಂಕ ಗಳಿಸಿರುತ್ತಾಳೆ.

ರಾಷ್ಟ್ರೀಯ ರೈಫಲ್ ಶೂಟಿಂಗ್ ಛಾಂಪಿಯನ್[ಬದಲಾಯಿಸಿ]

'ಪುಣೆನಗರದ ಶಿವಛತ್ರಪತಿ ಕ್ರೀಡಾಂಗಣ, ಬಾಲೆವಾಡಿ'ಯಲ್ಲಿ ಜರುಗಿದ ೨೦೧೧-೧೨ ರ ಸಾಲಿನ, ರಾಷ್ಟ್ರೀಯ ಏರ್ ರೈಫಲ್ ಶೂಟಿಂಗ್ ಛಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ 'ಮಹಾರಾಷ್ಟ್ರ'ವನ್ನು ಪ್ರತಿನಿಧಿಸಿದ್ದಳು. ಕು.ಮೇಘಾ ಸುರೇಂದ್ರ ಕುಮಾರ್ ಹೆಗ್ಡೆ ಕ್ರಮವಾಗಿ 'ಕಂಚು' ಹಾಗೂ 'ಚಿನ್ನದ ಪದಕ'ಗಳನ್ನು ಪಡೆದುಕೊಂಡಿದ್ದಾಳೆ . ಈ ಪ್ರಶಸ್ತಿ ೧೯ ವರ್ಷದ ಕೆಳಗಿನ ಹರೆಯದ ಹುಡುಗಿಯರ ವೈಯಕ್ತಿಕ ಹಾಗೂ ಅವರು ಪ್ರತಿನಿಧಿಸುವ ತಂಡ ಛಾಂಪಿಯನ್ ಶಿಪ್ ಸ್ಪರ್ಧೆಗಾಗಿ ಪ್ರತಿವರ್ಷವೂ ಕೊಡಲಾಗುತ್ತಿದೆ.