ಮೆನ್ಹಾಟನ್ ಅಸೋಸಿಯೇಟ್ಸ್
ಮೆನ್ಹಾಟನ್ ಅಸೋಸಿಯೇಟ್ಸ್ 'ಸಪ್ಲೈ ಚೈನ್ ಮಾನೇಜ್ಮೆಂಟ್' (ಸರಬರಾಜು ಸರಪಣಿ ನಿರ್ವಹಣೆ) ಸಾಫ್ಟ್-ವೇರ್ ಗಳನ್ನು ಜಗತ್ತಿಗೆ ಪರಿಚಯಿಸಿದ ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲಿ ಒಂದು. ೧೯೯೦ ರಲ್ಲಿ ನ್ಯೂ ಯಾರ್ಕ್ ನಗರದ ಮೆನ್ಹಾಟನ್ ಕಡಲತೀರದಲ್ಲಿ ಸ್ಥಾಪಿಸಲ್ಪಟ್ಟ ಇದು ಆ ಕಡಲತೀರದ ಹೆಸರಿನಿಂದಲೇ ತನ್ನ ಹೆಸರನ್ನು ಪಡೆದುಕೊಂಡಿದೆ. ೧೯೯೫ ರಿಂದ ಜಾರ್ಜಿಯದ ಅಂಟ್ಲಾಂಟದಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿರುವ ಇದು ಇಲ್ಲಿಂದಲೇ ವಿಶ್ವದ ಇತರ ಕಛೇರಿಗಳೊಂದಿಗೆ ಕಾರ್ಯನಿವೃತ್ತವಾಗಿದೆ.
ಇತಿಹಾಸ
[ಬದಲಾಯಿಸಿ]ಮೂಲದಲ್ಲಿ ಈ ಕಂಪನಿಯು ಐ.ಬಿ.ಎಮ್ ಎ.ಎಸ್/೪೦೦ನಿಂದ ತಯಾರಿತ ವೇರ್ ಹೌಸ್ ಮಾನೇಜ್ಮೆಂಟ್ (ಗೋದಾಮು ನಿರ್ವಹಣೆ) ಸಾಫ್ಟ್-ವೇರಿನೊಂದಿಗೆ ತನ್ನ ಬುನಾದಿಯನ್ನು ಕಂಡುಕೊಂಡಿತು. ಬಟ್ಟೆ ಬರೆ ಕೈಗಾರಿಕೆಗಾಗಿ ಅಭಿವೃದ್ಧಿ ಪಡಿಸಲಾದ ಈ ಸಾಫ್ಟ್-ವೇರಿಗೆ ಪಿಕ್-ಟಿಕೆಟ್ ಮಾನೇಜ್ಮೆಂಟ್ ಸಿಸ್ಟಮ್ (ಪಿ.ಕೆ.ಎಮ್.ಎಸ್) ಎಂದು ಹೆಸರಿಡಲಾಯಿತು.
ಬೆಂಗಳೂರು ಕಛೇರಿ
[ಬದಲಾಯಿಸಿ]ಮೆನ್ಹಾಟನ್ ಅಸೋಸಿಯೇಟ್ಸ್ ನ ಭಾರತದ ಕಛೇರಿ ಬೆಂಗಳೂರಿನಲ್ಲಿದೆ. ಮೊದಲು ಐ.ಟಿ.ಪಿ.ಎಲ್.ನಲ್ಲಿ ಕಛೇರಿಯನ್ನು ಹೊಂದಿದ್ದ ಇದು ಈಗ ವೈಟ್-ಫೀಲ್ಡ್ ನಲ್ಲಿ ತನ್ನ ಸ್ವಂತ ಕಟ್ಟಡವನ್ನು ಹೊಂದಿದೆ.