ವಿಷಯಕ್ಕೆ ಹೋಗು

ಮೆಡಿಕಲ್ ಕೌನ್ಸಿಲ್ ಆಫ಼್ ಇಂಡಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೆಡಿಕಲ್ ಕೌನ್ಸಿಲ್ ಆಫ಼್ ಇಂಡಿಯ
ಸಂಕ್ಷಿಪ್ತ ಹೆಸರುಎಂ.ಸಿ.ಐ.
ಪ್ರಧಾನ ಕಚೇರಿನವ ದೆಹಲಿ
Leaderಡಾ. ಜಯಶ್ರೀಬೆನ್ ಮೆಹ್ತಾ
ಮುಖ್ಯ ಭಾಗ
ಕಾನ್ಸಿಲ್
ಅಧಿಕೃತ ಜಾಲತಾಣ[https://www.mciindia.org

ಮೆಡಿಕಲ್ ಕೌನ್ಸಿಲ್ ಆಫ಼್ ಇಂಡಿಯಾ ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ನಿಯಂತ್ರಿಸಲು ಕಾನೂನು ಬದ್ದವಾಗಿ ಸ್ಥಾಪನೆಗೊಂಡ ಸಂಸ್ಥೆ. ದೇಶಾದ್ಯಂತ ಜನರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಹಾಗು ಏಕರೂಪದ ಹಾಗು ಉತ್ತಮ ಗುಣಮಟ್ಟದ ವೈದ್ಯಕೀಯ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವುದು ಇದರ ಮೂಲ ಕಾರ್ಯ. ಹೊಸ ಕಾಲೇಜು ಆರಂಭಿಸಲು ಪರವಾನಗಿ ನೀಡುವುದು, ವೈದ್ಯರಿಗೆ ಅಭ್ಯಾಸ ಮಾಡಲು ನೊಂದಣಿ ನೀಡುವುದು ಹಾಗು ವೈದ್ಯಕೀಯ ಕ್ಷೇತ್ರದ ಮೇಲ್ವಿಚಾರಣೆ ಇದರ ಕಾರ್ಯವ್ಯಾಪ್ತಿಯಲ್ಲಿ ಬರುತ್ತದೆ. ಸುಪ್ರೀಂಕೋರ್ಟ್ ಒಪ್ಪಿಗೆ ಪಡೆದು ಹಾಗು ನೀತಿ ಆಯೋಗದ ಶಿಫ಼ಾರಸಿನಂತೆ ಮೆಡಿಕಲ್ ಕೌನ್ಸಿಲ್ ಆಫ಼್ ಇಂಡಿಯಾದ ಬದಲು ನ್ಯಾಷನಲ್ ಮೆಡಿಕಲ್ ಕಮಿಶನ್ ಅನ್ನು ಸ್ಥಾಪಿಸಲು ಭಾರತ ಸರ್ಕಾರ ತೀರ್ಮಾನಿಸಿದೆ. ಅದರಂತೆ ಲೋಕಸಭೆಯಲ್ಲಿ ಹೊಸ ಕಾಯ್ದೆಯನ್ನು ಮಂಡಿಸಲಾಗಿದೆ. ಸದ್ಯ ಸಂಸದೀಯ ಸಮಿತಿಯ ಪರಿಶಿಲನೆಯಲ್ಲಿದೆ.

ಇತಿಹಾಸ[ಬದಲಾಯಿಸಿ]

೧೯೩೩ರ ಮೆಡಿಕಲ್ ಕೌನ್ಸಿಲ್ ಕಾಯ್ದೆ ಯ ಅನ್ವಯ ಮೆಡಿಕಲ್ ಕೌನ್ಸಿಲ್ ಆಫ಼್ ಇಂಡಿಯಾವನ್ನು ೧೯೩೪ ರಲ್ಲಿ ಸ್ಥಾಪಿಸಲಾಯಿತು. ಸ್ವಾತಂತ್ರಾನಂತರ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಹೊಸ ಕಾಯ್ದೆಯನ್ನು ೧೯೫೬ರಲ್ಲಿ ತರಲಾಯಿತು. ಈ ಕಾಯ್ದೆಯನ್ನು ೧೯೬೪, ೧೯೯೩ ಹಾಗು ೨೦೦೧ ರಲ್ಲಿ ಮಾರ್ಪಡಿಸಲಾಯಿತು. ಈಗ ಈ ಕಾಯ್ದೆಯನ್ನು ರದ್ದುಗೊಳಿಸಲಾಗಿದೆ. ಪ್ರಸ್ತುತ, ೨೦೧೧ರಲ್ಲಿ ಸರ್ಕಾರದ ಆದೇಶದಂತೆ ನೇಮಕಗೊಂಡಿರುವ ಸಮಿತಿ ಕಾರ್ಯಭಾರ ಮಾಡುತ್ತಿದೆ.

ಉದ್ದೇಶಗಳು[ಬದಲಾಯಿಸಿ]

ಮೆಡಿಕಲ್ ಕೌನ್ಸಿಲ್ ಆಫ಼್ ಇಂಡಿಯಾ ಈ ಕೆಳ ಕಂಡ ಉದ್ದೇಶಗಳನ್ನು ಹೊಂದಿದೆ

 1. ಪದವಿ ಹಾಗು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದಲ್ಲಿ ದೇಶಾದ್ಯಂತ ಏಕರೂಪದ ಗುಣಮಟ್ಟವನ್ನು ಕಾಯ್ದುಕೊಳ್ಳುವುದು.
 2. ಭಾರತದ ಅಥವಾ ವಿದೇಶದ ವೈದ್ಯಕೀಯ ಸಂಸ್ಥೆಗಳು ನೀಡುವ ಪದವಿಗಳನ್ನುಅಂಗಿಕರಿಸಲು / ತಿರಸ್ಕರಿಸಲು ಶಿಫ಼ಾರಸು ಮಾಡುವುದು.
 3. ಅಂಗಿಕೃತ ಸಂಸ್ಠೆಗಳಲ್ಲಿ ಪದವಿ ಪಡೆದ ವೈದ್ಯರಿಗೆ ಪರವಾನಗಿ ನೀಡುವುದು
 4. ಬೇರೆ ಬೇರೆ ದೇಶಗಳ ಜೊತೆ ವೈದ್ಯಕೀಯ ಪದವಿಗಳನ್ನು ಪರಸ್ಪರ ಅಂಗೀಕಾರ ನೀಡುವ ಕಾರ್ಯ

ವಿವಾದಗಳು[ಬದಲಾಯಿಸಿ]

ಏಪ್ರಿಲ್ ೨೨, ೨೦೧೦ರಂದು ಮೆಡಿಕಲ್ ಕೌನ್ಸಿಲ್ ನ ಅಂದಿನ ಅದ್ಯಕ್ಷರಾದ ಕೇತನ್ ದೇಸಾಯಿಯವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂದಿಸಲಾಯಿತು. ಅವರ ಮೇಲೆ ಹೊಸ ವೈದ್ಯಕೀಯ ಕಾಲೇಜಿಗೆ ಪರವಾನಗಿ ನೀಡಲು ೨ ಕೋಟಿ ಲಂಚ ಪಡೆದ ಆರೋಪದ ಮೇಲೆ ಬಂದಿಸಲಾಯಿತು. ಇವರ ಜೊತೆ ಜೆ.ಪಿ. ಸಿಂಗ್, ಸುಖ್ವಿಂದರ್ ಸಿಂಗ್ ಹಾಗು ಕನ್ವಲ್ ಜಿತ್ ಸಿಂಗೆ ರವರನ್ನು ಸಹ ಬಂದಿಸಲಾಯಿತು. ಸಿಬಿಐ ಕೇತನ್ ದೇಸಾಯಿಯವರ ಮನೆಯಿಂದ ೧.೫ ಕಿಲೋ ಬಂಗಾರ, ೮೦ ಕಿಲೋ ಬೆಳ್ಳಿಹಾಗು ಅವರ ಲಾಕರ್ ನಿಂದ ೩೫ ಲಕ್ಷ ಮೌಲ್ಯದ ಬಂಗಾರವನ್ನು ವಶಕ್ಕೆ ಪಡೆಯಿತು. ಅವರನ್ನು ಕೌನ್ಸಿಲ್ ನಿಂದ ಉಚ್ಚಾಟಿಸಲಾಯಿತು ಮತ್ತು ಅವರ ವೈದ್ಯಕೀಯ ಪರವಾನಗಿಯನ್ನು ರದ್ಧು ಗೊಳಿಸಲಾಯಿತು.

ಮೇ೧೫, ೨೦೧೦ ರಂದು ಪೂರ್ಣ ಕೌನ್ಸಿಲನ್ನು ಉಚ್ಚಾಟಿಸಲಾಯಿತು. ತದ ನಂತರ ಮೆಡಿಕಲ್ ಕೌನ್ಸಿಲ್ ನ ಸುಧಾರಣೆ ಮಾಡಲು ಕೂಗು ಕೇಳಿಬಂತು. ಸುಪ್ರೀಮ್ ಕೊರ್ಟ್ ಈ ವಿಶಯದಲ್ಲಿ ಪ್ರವೇಶಿಸಿ, ಇಂದಿನ ಅಗತ್ಯಕ್ಕೆ ತಕ್ಕಂತೆ ಹೊಸ್ ಕಾನೂನನ್ನು ತರಲು ಸರ್ಕಾರಕ್ಕೆ ಸೂಚಿಸಿತು. ಈಗ ತರಲು ಉದ್ದೇಶಿಸಿರುವ ನ್ಯಾಷನಲ್ ಮೆಡಿಕಲ್ ಕಮಿಶನ್ ಇದರ ಫ಼ಲಶೃತಿ.

ನೀಡುವ ಪ್ರಶಸ್ತಿಗಳು[ಬದಲಾಯಿಸಿ]

 1. ಡಾ ಬಿ.ಸಿ. ರಾಯ್ ಪ್ರಶಸ್ತಿ : ಬಿ.ಸಿ. ರಾಯ್ ನೆನಪಿನಲ್ಲಿ ಅವರ ಹೆಸರನ್ನು ಶಾಶ್ವತವಾಗಿಸಲು ಈ ಪ್ರಶಸ್ತಿಯನ್ನು ೧೯೬೨ರಲ್ಲಿ ಸ್ಥಾಪಿಸಲಾಯಿತು. ಇದೇ ಉದ್ದೇಶಕ್ಕಾಗಿ ಒಂದು ಸೊಸೈಟಿಯನ್ನು ಸ್ಥಾಪಿಸಲಾಗಿದೆ. ಈ ಪ್ರಶಸ್ತಿ ಒಂದು ಲಕ್ಷ ರೂಪಾಯಿ ಹಾಗು ರಜತ ಪ್ರಶಸ್ತಿಯನ್ನು ಒಳಗೊಂಡಿದೆ. ಈ ಪ್ರಶಸ್ತಿಯನ್ನು ಈ ಕೆಳಕಂಡ ಕಾರ್ಯಗಳಿಗೆ ನೀಡಲಾಗುತ್ತದೆ.
  1. ಅತ್ಯುತ್ತಮ ರಾಜ ನೀತಿಜ್ನಿಯನ್ನು ಪ್ರದರ್ಶಿಸಿದವರಿಗೆ
  2. ವೈದ್ಯಕೀಯ ಕ್ಷೇತ್ರ ಹಾಗು ರಾಜ ತಾಂತ್ರಜ್ನ ಎರಡರಲ್ಲೂ ಸಾಧನೆ ಮಾಡಿದವರಿಗೆ
  3. ವೈದ್ಯಕೀಯ ಕ್ಷೇತ್ರದ ಹೆಚ್ಚಿನ ಸಾಧನೆ ಮಾಡಿದವರಿಗೆ
  4. ತತ್ವ ಶಾಸ್ತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದವರಿಗೆ
  5. ಕಲಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದವರಿಗೆ
 1. ಹರಿ ಒಂ ಆಶ್ರಮ ಅಲೆಂಬಿಕ್ ಸಂಶೋದನಾ ಪ್ರಶಸ್ತಿ: ಹರಿ ಒಂ ಆಶ್ರಮ ಅಲೆಂಬಿಕ್ ಸಂಶೋದನಾ ಪ್ರಶಸ್ತಿಯನ್ನು ಈ ಕೆಳಕಂಡ ಕ್ಷೇತ್ರದಲ್ಲಿ ನೀಡಲಾಗುತ್ತದೆ
  1. ವೈದ್ಯಕೀಯ ಕ್ಷೇತ್ರದಲ್ಲಿ ಮೂಲಭೂತ ಸಂಶೋದನೆ
  2. ಪ್ರಾಯೋಗಿಕ ಸಂಶೋದನೆ
  3. ಕಾರ್ಯಾಚರಣೆಯಲ್ಲಿ ಸಂಶೋದನೆ
 1. ರಜತ ಮಹೋತ್ಸವ ಸಂಶೋದನಾ ಪ್ರಶಸ್ತಿ: ಈ ಪ್ರಶಸ್ತಿ ನೀಡಲು ಪ್ರತೇಕ ನಿಧಿಯೊಂದನ್ನು ರಚಿಸಲಾಗಿದೆ. ಈ ಪ್ರಶಸ್ತಿಯನ್ನು ಈ ಕೆಳಕಂಡವರಿಗೆ ನೀಡಲಾಗುತ್ತದೆ.
  1. ವೈದ್ಯಕೀಯ ಮತ್ತು ಸಹಯೋಗಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ
  2. ವೈದ್ಯಕೀಯ ಶಿಕ್ಷಣ ಹಾಗು ಸಂಶೋದನೆಯಲ್ಲಿ ನಿರತರಾಗಿರುವ ಸಂಸ್ಥೆ/ವೈದ್ಯಕೀಯ ಕಾಲೇಜು ಗಳಿಗೆ ಸಹಾಯ ಧನ್ ನೀಡುವುದೆ
  3. ಟ್ರಾವೆಲ್ ಫ಼ೆಲೋಶಿಪ್

ಉಲ್ಲೇಖಗಳು[ಬದಲಾಯಿಸಿ]

[೧] [೨]

 1. "ಆರ್ಕೈವ್ ನಕಲು". Archived from the original on 2021-08-16. Retrieved 2021-09-27.
 2. "ಆರ್ಕೈವ್ ನಕಲು". Archived from the original on 2016-03-05. Retrieved 2018-01-21.