ವಿಷಯಕ್ಕೆ ಹೋಗು

ಮೂಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೂಸೆಯು (ಕೋವೆ) ಲೋಹಗಳು ಅಥವಾ ಇತರ ವಸ್ತುಗಳನ್ನು ಕರಗಿಸಲು ಅಥವಾ ಬಹಳ ಅಧಿಕ ತಾಪಮಾನಗಳಿಗೆ ಒಳಪಡಿಸಲು ಬಳಸಲಾಗುವ ಪಿಂಗಾಣಿ ಅಥವಾ ಲೋಹದ ಧಾರಕ. ಐತಿಹಾಸಿಕವಾಗಿ ಮೂಸೆಗಳನ್ನು ಸಾಮಾನ್ಯವಾಗಿ ಜೇಡಿಮಣ್ಣಿನಿಂದ ತಯಾರಿಸಲಾಗುತ್ತಿತ್ತಾದರೂ,[೧] ಅವುಗಳನ್ನು ಅದರ ಒಳವಸ್ತುವನ್ನು ಕರಗಿಸುವಷ್ಟು ಅಥವಾ ಮಾರ್ಪಡಿಸುವಷ್ಟು ಹೆಚ್ಚಿರುವ ತಾಪಮಾನಗಳನ್ನು ತಡೆದುಕೊಳ್ಳಬಲ್ಲ ಯಾವುದೇ ವಸ್ತುವಿನಿಂದ ತಯಾರಿಸಬಹುದು. ಅತಿ ಹೆಚ್ಚು ತಾಪಮಾನಗಳಿಗೆ ಕಾಯಿಸಲಾದ ರಾಸಾಯನಿಕ ಸಂಯುಕ್ತಗಳನ್ನು ಹಿಡಿದಿಡಲು ಮೂಸೆಗಳನ್ನು ಪ್ರಯೋಗಾಲಯದಲ್ಲಿ ಬಳಸಲಾಗುತ್ತದೆ. ಮೂಸೆಗಳು ಹಲವಾರು ಗಾತ್ರಗಳಲ್ಲಿ ಲಭ್ಯವಿವೆ ಮತ್ತು ಸಾಮಾನ್ಯವಾಗಿ ಅವುಗಳಿಗೆ ಅನುಗುಣವಾದ ಗಾತ್ರದ ಮುಚ್ಚಳದೊಂದಿಗೆ ಬರುತ್ತವೆ. ಜ್ವಾಲೆಯ ಮೇಲೆ ಕಾಯಿಸಿದಾಗ, ಮೂಸೆಯನ್ನು ಹಲವುವೇಳೆ ಚುಂಗಾಣಿ ಜೇಡಿಯ ತ್ರಿಕೋಣದೊಳಗೆ ಹಿಡಿದಿಡಲಾಗುತ್ತದೆ. ಈ ಜೇಡಿಯ ತ್ರಿಕೋಣವನ್ನು ಸ್ವತಃ ತ್ರಿಪಾದಿಯ ಮೇಲೆ ಇರಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Percy, John. Natural Refractory Materials Employed in the Construction of Crucibles, Retorts, Forunaces &c. Metallurgy. London: W. Clowes and Sons, 1861. 208–09. Print.
"https://kn.wikipedia.org/w/index.php?title=ಮೂಸೆ&oldid=892261" ಇಂದ ಪಡೆಯಲ್ಪಟ್ಟಿದೆ