ಮೂಲಭೂತ ಕರ್ತವ್ಯಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ಪ್ರಜೆಗಳ ಮೂಲಭೂತ ಕರ್ತವ್ಯಗಳು[ಬದಲಾಯಿಸಿ]

                 " ಮೂಲಭೂತ ಕರ್ತವ್ಯಗಳು" ಎಂಬ ಪರಿಕಲ್ಪನೆಯನ್ನು  'ರಷ್ಯಾ' ದೇಶದ ಸಂವಿಧಾನದಿಂದ

ಎರವಲಾಗಿ ಪಡೆದುಕೊಳ್ಳಲಾಗಿದೆ. '1976' ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿ ತರುವ ಮೂಲಕ ಸಂವಿಧಾನಕ್ಕೆ "4A" ಎಂಬ ಭಾಗ ಮತ್ತು "51ಎ" ಎಂಬ ಪರಿಚ್ಛೇದದಡಿಯಲ್ಲಿ 10 ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಯಿತು. ಪ್ರಸ್ತುತ ಭಾರತದ ಸಂವಿಧಾನವು 11 ಮೂಲಭೂತ ಕರ್ತವ್ಯಗಳನ್ನು ಒಳಗೊಂಡಿದೆ. ಅವು ಈ ಕೆಳಗಿನಂತಿವೆ:

  • ಸಂವಿಧಾನವನ್ನು ಪಾಲಿಸುವುದು, ಅದರ ಆಶಯಗಳನ್ನು ಗೌರವಿಸುವುದು. ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು.
  • ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ಕೊಟ್ಟ ಆದರ್ಶಗಳನ್ನು ಗೌರವಿಸುವುದು ಮತ್ತು ಪಾಲಿಸುವುದು.
  • ಭಾರತದ ಸಾರ್ವಭೌಮತ್ವ, ಅಖಂಡತೆ ಮತ್ತು ಏಕತೆಯನ್ನು ಎತ್ತಿ ಹಿಡಿಯುವುದು ಮತ್ತು ಕಾಪಾಡುವುದು.
  • ದೇಶವನ್ನು ರಕ್ಷಿಸುವುದು ಮತ್ತು ದೇಶಸೇವೆಗೆ ಸಿದ್ಧರಿರುವುದು.
  • ವಿವಿಧ ಧರ್ಮ, ಭಾಷೆ ಮತ್ತು ಪ್ರಾಂತ್ಯಗಳ ಜನರೊಂದಿಗೆ ಸೌಹಾರ್ದದಿಂದ ಇರುವುದು; ಮಹಿಳೆಯರಿಗೆ ಅಗೌರವ ತೋರುವ ಪದ್ದತಿಗಳನ್ನು ತಿರಸ್ಕರಿಸುವುದು.
  • ನಮ್ಮ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವುದು ಮತ್ತು ಕಾಪಾಡುವುದು.
  • ದೇಶದ ಕಾಡು, ವನ್ಯ ಜೀವಿಗಳು, ನದಿಗಳು ಸೇರಿದಂತೆ ಪರಿಸರವನ್ನು ಉಳಿಸಿ ಬೆಳೆಸುವುದು.
  • ವೈಙ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳುವುದು; ಪ್ರಶ್ನೆ ಮಾಡುವ ಮತ್ತು ಬದಲಾವಣೆಗೆ ಒಡ್ಡಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳುವುದು.
  • ಸಾರ್ವಜನಿಕ ಸ್ವತ್ತನ್ನು ಕಾಪಾಡಿಕೊಳ್ಳುವುದು; ಹಿಂಸೆಯನ್ನು ತೊರೆಯುವುದು.
  • ಎಲ್ಲಾ ವೈಯಕ್ತಿಕ ಮತ್ತು ಸಾಮೂಹಿಕ ಚಟುವಟಿಕೆಗಳಲ್ಲಿ ಉನ್ನತಿಯನ್ನು ಸಾಧಿಸಲು ಪ್ರಯತ್ನಿಸಿ ದೇಶದ ಪ್ರಗತಿಗಾಗಿ ಶ್ರಮಿಸುವುದು.
  • ಎಲ್ಲಾ ತಂದೆ-ತಾಯಿಯರು/ಪಾಲಕರು/ಪೋಷಕರು

6 ರಿಂದ14 ವರ್ಷ ವಯಸ್ಸಿನ ಶಿಕ್ಷಣ ಪಡೆಯುವ ಅವ೩ಕಾಶ ನೀಡತಕ್ಕದ್ದು.

                          ಮೂಲಭೂತ ಕರ್ತವ್ಯಗಳು ನ್ಯಾಯರಕ್ಷಿತವಲ್ಲ. ಆದರೆ ಕರ್ತವ್ಯ ಉಲ್ಲಂಘನೆಯಾದರೆ 

ಅವರನ್ನು ಶಿಕ್ಷಿಸಬಹುದು. ಮೂಲಭೂತ ಹಕ್ಕುಗಳು ಕೇಳುವಂತೆ ಕರ್ತವ್ಯಗಳನ್ನು ಪಾಲಿಸುವುದು ಪ್ರತಿಯೊಬ್ಬ ಪೌರನ ಆದ್ಯ ಕರ್ತವ್ಯವಾಗಿದೆ.

                          ******

ಈ ಲೇಖನವನ್ನು ಭಾರತೀಯ ಮೂಲಭೂತ ಹಕ್ಕುಗಳು‎ ಲೇಖನದ ಜೊತೆ ಸೇರಿಸಲು ಕೋರಿದೆ. ಅದರಲ್ಲಿಯೇ ಈ ವಿಷಯ ತುಂಬಲಾಗಿದೆ.