ಮೂಕಾಂಬಿಕಾ ದೇವಾಲಯ, ಘನ್ ಸೋಲಿ

ವಿಕಿಪೀಡಿಯ ಇಂದ
Jump to navigation Jump to search
'ಘನ್ ಸೋಲಿಯಲ್ಲಿರುವ ಮೂಕಾಂಬಿಕಾ ದೇವಸ್ಥಾನ'

'ನ್ಯೂ ಮುಂಬಯಿ'ಯೆಂದು ಹೆಸರು ಪಡೆದಿರುವ, 'ವಾಶಿ'ಗೆ ಸಮೀಪದಲ್ಲಿ ಇರುವ 'ಘನ್ ಸೋಲಿ' ಯಲ್ಲಿ, ''ಮೂಕಾಂಬಿಕಾ ದೇವಸ್ಥಾನ'ವನ್ನು ಬಹಳ ಹಿಂದೆಯೇ ಸ್ಥಾಪಿಸಿರುತ್ತಾರೆ. ಈ ಪ್ರದೇಶ, 'ಥಾಣೆ/ವಾಶಿ ರೈಲ್ವೆ ಸಂಪರ್ಕ ಮಾರ್ಗ ಗಳಿಸಿದ ನಂತರ ಇಲ್ಲಿಗೆ ಬಂದು ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಹಿರಿಯ ನಾಗರಿಕರು, ಅಮ್ಮನವರ ದೇವಾಲಯವನ್ನು ಹುಡುಕಿಕೊಂಡು ಬರುತ್ತಿದ್ದಾರೆ. 'ಘನ್ ಸೋಲಿ ರೈಲ್ವೆ ನಿಲ್ದಾಣ'ದ ಅತಿ ಸಮೀಪದಲ್ಲೇ ದೇವಾಲಯವಿರುವುದರಿಂದ ಹೆಣ್ಣುಮಕ್ಕಳಿಗೆ, ವಯಸ್ಸಾದವರಿಗೆ, ಮತ್ತು ಮಕ್ಕಳಿಗೆ ದೇವಿಯ ಸನ್ನಿಧಿಗೆ ಬಂದು ಸೇವೆಗಳನ್ನು ಮಾಡಿಸಲು ಸುಲಭವಾಗಿದೆ.

ದೇವಾಲಯದ ಟ್ರಸ್ಟ್[ಬದಲಾಯಿಸಿ]

'ಮೂಕಾಂಬಿಕಾ ದೇವಿ'

ಶ್ರೀ ಸಂತೋಷಿಮಾತಾ ದೇವಾಲಯ ಟ್ರಸ್ಟ್ ನವರ ವತಿಯಿಂದ ಸೆಕ್ಟರ್ ೨ ರ, ಪ್ಲಾಟ್ ನಂ. ೪ ರಲ್ಲಿ, ಸ್ಟಾಂಡರ್ಡ್ ಆಲ್ಕಲಿ ಕಂಪೆನಿಯ ಎದುರಿಗೆ, ಈ ದೇವಾಲಯವನ್ನು ೮ ವರ್ಷಗಳ ಹಿಂದೆ, ನಿರ್ಮಿಸಲಾಯಿತು.

೮ ನೇ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವ[ಬದಲಾಯಿಸಿ]

ಶ್ರೀ ಮೂಕಾಂಬಿಕ, ಶ್ರೀ ಮಹಾಗಣಪತಿ, ಶ್ರೀ ನಾಗದೇವರ, ಪ್ರತಿಷ್ಠಾಪನದ ಎಂಟನೇ ವಾಷಿಕ ಮಹೋತ್ಸವವು, ಸನ್ ೨೦೧೧ ರ ಮಾರ್ಚ್, ೧೭ ರಿಂದ(ಗುರುವಾರ), ೨೧ ರ(ಸೋಮವಾರ)ವರೆಗೆ, ಜರುಗುತ್ತವೆ. ಈ ಕಾರ್ಯಕ್ರಮಗಳನ್ನು, ವಾಶಿಯ ಶ್ರೀ ಕೃಷ್ಣಮೂರ್ತಿ ಭಟ್ ರವರ ನೇತೃತ್ವದಲ್ಲಿ, ಎಲ್ಲಾ ದೇವತಾ ವೈದಿಕ ಕಾರ್ಯಕ್ರಮಗಳು, ತಂತ್ರಿಗಳಾದ ವಿದ್ವಾನ್ ರಾಮಚಂದ್ರ ಬಾಯಾರ್ ರವರ 'ಪೌರೋಹಿತ್ಯ'ದಲ್ಲಿ ನಡೆಯಲಿವೆ.

ನಡೆಯತಕ್ಕ ಸೇವಾ ವಿವರಗಳು[ಬದಲಾಯಿಸಿ]

 • ಸರ್ವಸೇವೆ
 • ಚಂಡಿಕಾಯಾಗ,
 • ದುರ್ಗಾ ಹೋಮ,
 • ರಂಗ ಪೂಜೆ,
 • ದುರ್ಗಾ ನಮಸ್ಕಾರ,
 • ಹೂವಿನ ಪೂಜೆ,
 • ಸಹಸ್ರ ನಾಮಾರ್ಚನೆ,
 • ಪಂಚಾಮೃತಾಭಿಷೇಕ
 • ತೀರ್ಥ ಸ್ನಾನ,
 • ಕ್ಷೀರ ಪಾಯಸ,
 • ಅಷ್ಟೋತ್ತರ,
 • ಕುಂಕುಮಾರ್ಚನೆ,
 • ಲಕ್ಷ್ಮೀಫಲ,
 • ಗುಡಾನ್ನ ನೈವೇದ್ಯ,
 • ಶ್ರೀ ಮಹಾಗಣಪತಿ ಹೋಮ,
 • ಪಂಚಾಮೃತಾಭಿಷೇಕ,
 • ನಾಗದೇವರಿಗೆ ತಂಬಿಲ,
 • ಆಷ್ಲೇಷ ಬಲಿ,
 • ವಾಹನ ಪೂಜೆ,