ಮೂಕಜ್ಜಿ, ಮೂಕಾಂಬಿಕಾ ಐತಾಳ

ವಿಕಿಪೀಡಿಯ ಇಂದ
Jump to navigation Jump to search

ಮೂಕಾಂಬಿಕಾ, ಉಳ್ಳೂರು ಮೂಕಾಂಬಿಕಾ ಐತಾಳ (ಮೂಕಜ್ಜಿ,ಮೂಕಾಂಬು), ಕುಂದಾಪುರ[ಬದಲಾಯಿಸಿ]

ಜನನ: ೨೮-೦೮-೧೯೦೮, ಉಳ್ಳೂರು (ಕುಂದಾಪುರ) ವೃತ್ತಿ: ಆಶು ಕವಯಿತ್ರಿ, ಹಾಡಿನಜ್ಜಿ ರಾಷ್ಟ್ರೀಯತೆ: ಭಾರತೀಯ ಪ್ರಕಾರ/ಶೈಲಿ: ವಿಷಯ:ಕನ್ನಡ

ಜನನ,ಜೀವನ:[ಬದಲಾಯಿಸಿ]

ಬತ್ತದ ಕಂಠದ, ಹಾಡಿನ ಜೋಳಿಗೆ, ಹಾಡಿನ ಮರವೆಂದು ಹೆಸರಾದ ಆಶುಕವಯಿತ್ರಿ ಮೂಕಜ್ಜಿ (ಮೂಕಾಂಬು, ಮೂಕಾಂಬಿಕಾ, ಉಳ್ಳೂರು ಮೂಕಾಂಬಿಕಾ ಐತಾಳ, ಕುಂದಾಪುರ) ಕುಂದಾಪುರ ತಾಲ್ಲೂಕಿನ ಉಳ್ಳೂರಿನಲ್ಲಿ ೨೮-೦೮-೧೯೦೮ರಲ್ಲಿ ಜನಿಸಿದರು. ಇವರ ತಂದೆ ಉಳ್ಳೂರಿನ ನಾಗಪ್ಪ ಉಡುಪ, ತಾಯಿ ಸರಸ್ವತಿಯಮ್ಮ. ತಮ್ಮ ಹತ್ತನೇ ವಯಸ್ಸಿನಲ್ಲಿ ನಾಗೂರು ನಾರಾಯಣ ಐತಾಳರೊಂದಿಗೆ ವಿವಾಹ. ೧೫ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನನವಿತ್ತರು. ೧೬ನೇ ವಯಸ್ಸಿಗೆ ಪತಿಯ ಆಕಸ್ಮಿಕ ಮರಣವಾಯಿತು.

ಮೂಕಜ್ಜಿಯ ಹಾಡುಗಳು[ಬದಲಾಯಿಸಿ]

ವಾರ್ಧಕ ಷಟ್ಪದಿ[ಬದಲಾಯಿಸಿ]

 1. ಆತ್ಮ ನಿವೇದನೆ (೩)
 2. ಸಂಕಟಗೀತೆ (೩)
 3. ವೈಭವ (೫)
 4. ಶ್ರೀ ಶಾರದಾ ಕಾಲೇಜು ರಾಸೇಯೋ (೧೩)
 5. ಕೊಲ್ಲೂರು ಮಣಿಗಾರರು (೧೦)
 6. ಆಕಾಶವಾಣಿ(೫)
 7. ಆಕಾಶವಾಣಿ ಕರೆಬಂದಾಗ (೩)
 8. ಶ್ರೀ ಎಸ್.ಜನಾರ್ಧನರು (೩)
 9. ನಾವಡ ದಂಪತಿಗಳು (೨)
 10. ಶಿವಾನಂದ ಮಳೀಮಠ (೨)
 11. ಐರೋಡಿ ರಾಮಗಾಣಿಗರು (೧೦)
 12. ಕೊಲ್ಲೂರು ದೇವಸ್ಥಾನ (೭)
 13. ನನ್ನ ಪರಿಸರ (೩)
 14. ಗಂಡುಗಲಿ ಜವಾಹರ (೧)

ಭಾಮಿನಿ ಷಟ್ಪದಿ[ಬದಲಾಯಿಸಿ]

 1. ಅಣ್ಣ ನಿನ್ನನಗಲ್ಕೆ (೫)
 2. ಚರಮಗೀತೆ (೫)
 3. ದುಃಖಸಪ್ತಕ (೭)
 4. ಹಾಡೆ ಸುಸ್ವರವಿಲ್ಲ (೪)
 5. ನೀತಿಪದ್ಯ (೧೦)
 6. ಡಾ.ಛಾಯಾ (೩)
 7. ದೇಶಭಕ್ತಿಗೀತೆ (೩)
 8. ಬಾಂಗ್ಲಾವಿಜಯ (೧೨)
 9. ಪಶ್ಚಾತ್ತಾಪ (೪)

ತ್ರಿಪದಿಗಳು[ಬದಲಾಯಿಸಿ]

 1. ಬದುಕು (೩)
 2. ಪರಿಸರ (೮)
 3. ಕೊಲ್ಲೂರ ಶಾಲೆ (೩)
 4. ಓಸಿ (೩)
 5. ಮಡಿ (೨)
 6. ಝಾನ್ಸಿರಾಣಿ (೧೮)
 7. ಇಂದಿರಾಗಾಂಧಿ (೫)

ಕಂಠಸ್ಥ ತ್ರಿಪದಿಗಳು ನೂರಾರು

ಚೌಪದಗಳು[ಬದಲಾಯಿಸಿ]

 1. ನನ್ನ ಬದುಕು (೬)
 2. ಮುದುಕನ ಪ್ರಾರ್ಥನೆ (೯)
 3. ಮೊಮ್ಮಗನ ಭಾವಚಿತ್ರ ನೋಡಿ (೪)
 4. ವಿಜಯಾಬ್ಯಾಂಕ್ (೪)
 5. ಶಾಲೆ (೩)

ಕೀರ್ತನೆಯ ಮಾದರಿ[ಬದಲಾಯಿಸಿ]

 1. ಋಣಬಾಧೆ (೩ ಚರಣ)
 2. ಸ್ತ್ರೀವರ್ಣನೆ ಅಪವಾದ (೬)
 3. ಮನುಜನಾಗಿ ಜನಿಸಿ (೩)
 4. ಶಾರದಾ ಪ್ರಾರ್ಥನೆ (೩)
 5. ಭ್ರಾಂತಿ (೩)
 6. ನಾನು ನಾನೆಂದು (೫)
 7. ಸಂಸಾರದೊಳು ಸುಖವ ಕಾಣೆ
 8. ಮಂಗಲಪದ್ಯ - ೧, ೨, ೩ (೮)

ಲಾವಣಿಗಳು[ಬದಲಾಯಿಸಿ]

 1. ಹಳ್ಳಿಯ ಸ್ಟೋರು (೯)
 2. ಯುವ ಜನಾಂಗ (೧೪)
 3. ಕುಟುಂಬ ಯೋಜನೆ (೧೪)
 4. ಕೋತಿಯ ತೆರ

ಶೋಭಾನೆ ಹಾಡುಗಳು[ಬದಲಾಯಿಸಿ]

 1. ಜೋಗುಳ - ೧,೨
 2. ಹಸೆಗೆ ಕರೆವುದು
 3. ಅರಳು ಹೊಯ್ಯುವುದು
 4. ಚಟ್ಟು ಹೊಯ್ಯುವುದು
 5. ಅರಸಿನ ಹಚ್ಚುವುದು - ೧,೨
 6. ಹರಸುವುದು

ವಿಶಿಷ್ಟ ಕಂಠಸ್ಥ ಹಾಡುಗಳು[ಬದಲಾಯಿಸಿ]

 1. ಗಂಡನೊಡನೆ ಹೇಗೆ ಬಾಳಲಿ (೨೧ ಚರಣಗಳು)
 2. ಕೃಷ್ಣಲೀಲೆ (೮ ಚರಣಗಳು)

ಇತರ[ಬದಲಾಯಿಸಿ]

 1. ವಿದ್ಯೆಯ ಮಹತ್ವ (೩ ಸಾಂಗತ್ಯ)
 2. ಸೂರು (೮ ದ್ವಿಪದಿಗಳು)
 3. ಪೋಗೋಣ (೫ ದ್ವಿಪದಿಗಳು)
 4. ಭಾರತ ಮಾತೆ ಮತ್ತು ಗಾಂಧಿ (೧೦)
 5. ಕುಂದಾಪ್ರಿಗೆ ನಾನೀಗಳೆ ಹೋಯ್ಕ್ (೬ ಚರಣ)
 6. ಮೀನುಗಾರ (೯ ಚರಣಗಳು)
 7. ಸರೋಜಿನಿ ನಾಯ್ಡು (೮ ಚರಣಗಳು)
 8. ನೆಹರೂ (೩)
 9. ಚುನಾವಣೆ (೩)
 10. ಮೂರ್ಖರೊಳು
 11. ಬೋಧನೆ
 12. ಏಸು ಸ್ವಾಮಿ

ದೊರೆತ ಮನ್ನಣೆಗಳು[ಬದಲಾಯಿಸಿ]

 • ೧೯೮೩ರಲ್ಲಿ ಕೋಟದಲ್ಲಿ ನಡೆದ ಜಾನಪದ ಸಮ್ಮೇಳನದಲ್ಲಿ ಸನ್ಮಾನ[೧]
 • ೧೯೯೩ರಲ್ಲಿ ಕುಂದಾಪುರದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ[೨]
 • ೧೯೯೪ರ ಉಪ್ಪುಂದದ ಕುಂದಾಪುರ ತಾಲ್ಲೂಕು ೩ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನ.[೨]
 • ೧೯೯೬ರ ಕುಂದಾಪುರ ತಾಲ್ಲೂಕು ರಾಜ್ಯೋತ್ಸವದ ಸಂದರ್ಭದಲ್ಲಿ ಸನ್ಮಾನ [೨]

ಬೆಂಗಳೂರು ದೂರದರ್ಶನದ 'ಸಿರಿಗಂಧ' ಧಾರಾವಾಹಿಯಲ್ಲಿ ಮೂಕಜ್ಜಿಯ ಪರಿಚಯ.[೨]

ಮೂಕಜ್ಜಿಯವರ ಕೆಲವು ಚಿಂತನೆಗಳು

 1. ಮಡಿ ಎಂದರೇನೆಂದು ಹುಡುಗಿ ನೀನೇನ್ ಬಲ್ಲೆ

ಒಡಲು ಚೊಕ್ಕದಲಿ ಇರಬೇಕು ಒಡಲು ಚೊಕ್ಕದಲಿ ಇರಬೇಕು - ನಿತ್ಯದಿ ತೊಳೆದಾರಿದ ಸೀರೆ ಉಡಬೇಕು [೩]

 1. ಮಂಡಿ ಕೂದ್ಲಿಗೂ ಪಾತಿವ್ರತ್ಯಕ್ಕೂ ಏನ್ ಸಂಬಂಧ? ಕೂದ್ಲ್ ಕತ್ತರ್ಸಿ ಕಾಮ ಅಡ್ಡಕಟ್ಟುಕಾತಿಲ್ಲೆ [೩]

===ಮೂಕಜ್ಜಿಯ ಕುರಿತು ಪ್ರಕಟವಾದ ಲೇಖನ ಮತ್ತು ಕೃತಿಗಳು===[೪]

 1. ಮೂಕಜ್ಜಿ, ಪ್ರೊ.ಕನರಾಡಿ ವಾದಿರಾಜ ಭಟ್ಟ, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ,ಮಂಗಳಗಂಗೋತ್ರಿ, ೧೯೯೮
 2. ಕವಿ ಪ್ರತಿಭೆಯ ಸಾಕಾರ - ಕನಾರಾಡಿ ವಾದಿರಾಜ ಭಟ್ಟ - ಶಾರದಾವಾಣಿ, ಬಸ್ರೂರು, ೧೯೭೮
 3. ಜನಪದ ಕವಯಿತ್ರಿ - ಕನಾರಾಡಿ ವಾದಿರಾಜ ಭಟ್ಟ - ಜಾನಪದ ಜಗತ್ತು, ಬೆಂಗಳೂರು, ಮೇ ೧೯೮೦
 4. ಮೂಕಜ್ಜಿ - ಬದುಕು, ಸಾಹಿತ್ಯ - ಗಾಯತ್ರಿ ನಾವಡ - ಪ್ರಾದೇಶಿಕ ವ್ಯಾಸಂಗ, ಕುಂದಾಪುರ, ೧೯೮೮
 5. ಬರೆಯಲು ಬಾರದ ಬಾಯಿ ಸಾಹಿತಿ - ವೈರಸ, ಶಿರಾಲಿ - ಪ್ರಜಾಮತ, ಬೆಂಗಳೂರು, ೨೨-೫-೧೯೮೮
 6. ಮೂಕಜ್ಜಿಯ ನನಸುಗಳು - ಎ.ಎಸ್.ಎನ್.ಹೆಬ್ಬಾರ್ - ಪ್ರಜಾಮತ, ಬೆಂಗಳೂರು, ೨೫-೬-೧೯೮೮
 7. ಆಶುಕವಿ ಮೂಕಜ್ಜಿ - ಗಾಯತ್ರಿ ನಾವಡ - ಮುಂಗಾರು, ಮಂಗಳೂರು, ೧೧-೧೧-೧೯೮೮
 8. ಅಸಾಧಾರಣ ಪ್ರತಿಭೆಯ ಹಾಡಿನ ಮರ - ಎ.ಎನ್.ಎಸ್.ಹೆಬ್ಬಾರ್ - ಪ್ರಜಾವಾಣಿ, ಬೆಂಗಳೂರು, ೨೬-೧೧-೧೯೮೮
 9. ಮೂಕಜ್ಜಿ - ಬದುಕು ಸಾಹಿತ್ಯ (ವಿಮರ್ಶೆ) - ಲೀಲಾ ಭಟ್ಟ - ತರಂಗ, ಮಣಿಪಾಲ ೨೫-೧೨-೧೯೮೮
 10. ಸಮ್ಮೇಳನಾಧ್ಯಕ್ಷೆ ಮೂಕಜ್ಜಿ - ಎ.ಎಸ್.ಎನ್.ಹೆಬಾರ್ - ಉದಯವಾಣಿ, ಮಣಿಪಾಲ ೧೨-೩-೧೯೯೪
 11. ಕನ್ನಡ ಜನ ಅಂತರಂಗ, ಮಂಗಳೂರು ೧೩-೩-೧೯೯೪
 12. ಮೂಕಜ್ಜಿ - ಸಂ.ಯು.ರಮೇಶ ವೈದ್ಯ - ಸಿಂಗಾರ, ಉಪ್ಪುಂದ, ೨೦-೩-೧೯೯೪
 13. ಶ್ರೀಮತಿ ಮೂಕಾಂಬಿಕಾ ಅಮ್ಮ - ಕೋ ಶಿವಾನಂದ ಕಾರಂತ - ಕುಂದಪ್ರಭ, ಕುಂದಾಪುರ ೨೧-೩-೧೯೯೪
 14. ಖ್ಯಾತ ಆಶುಕವಿ ಮೂಕಾಂಬಿಕಾ ಅಮ್ಮನೊಡನೆ - ಕಿಶೋರ್ ಪಡುಕೋಣೆ - ಜನಪ್ರತಿನಿಧಿ ೧-೩-೧೯೯೭
 15. ಖ್ಯಾತ ಆಶುಕವಿ ಮೂಕಾಂಬಿಕಾ ಅಮ್ಮನೊಡನೆ - ಕಿಶೋರ್ ಪಡುಕೋಣೆ - ಜನಪ್ರತಿನಿಧಿ ೧-೪-೧೯೯೭
 16. ಆಶುಕವಯಿತ್ರಿ ಮೂಕಜ್ಜಿಯ ಅನನ್ಯತೆ - ರೇಖಾ ವಿ.ಬನ್ನಾಡಿ - ಉದಯವಾಣಿ ೨೩-೩-೧೯೯೮

ಉಲ್ಲೇಖ[ಬದಲಾಯಿಸಿ]

<Refrence/>

 1. ಮೂಕಜ್ಜಿ, ಪ್ರೊ.ಕನರಾಡಿ ವಾದಿರಾಜ ಭಟ್ಟ, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ, ೧೯೯೮, ಪು.೧೭
 2. ೨.೦ ೨.೧ ೨.೨ ೨.೩ ಮೂಕಜ್ಜಿ, ಪ್ರೊ.ಕನರಾಡಿ ವಾದಿರಾಜ ಭಟ್ಟ, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ, ೧೯೯೮, ಪು.೧೮
 3. ೩.೦ ೩.೧ ಮೂಕಜ್ಜಿ, ಪ್ರೊ.ಕನರಾಡಿ ವಾದಿರಾಜ ಭಟ್ಟ, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ, ೧೯೯೮, ಪು.೧೦
 4. ಮೂಕಜ್ಜಿ, ಪ್ರೊ.ಕನರಾಡಿ ವಾದಿರಾಜ ಭಟ್ಟ, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ, ೧೯೯೮, ಪು.೬೨