ಮುರೇಗಾರ ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಠಿಕೆ[ಬದಲಾಯಿಸಿ]

ಉತ್ತರ ಕನ್ನಡದಲ್ಲಿ ಪ್ರಸಿದ್ಧಿ ಹೊಂದಿದ ಜಲಪಾತಗಳಲ್ಲಿ ಮುರೇಗಾರ್ ಜಲಪಾತವೂ ಒಂದು. ಈ ಜಲಪಾತವು ದಟ್ಟವಾದ ಅರಣ್ಯಗಳ ಮಧ್ಯದ ಪ್ರದೇಶದಲ್ಲಿ ಹರಿಯುತ್ತದೆ. ಉತ್ತರ ಕನ್ನಡದ ಸಿರ್ಸಿ ತಾಲ್ಲೂಕಿನಿಂದ ೨೧ ಕಿಲೋ ಮೀಟರ್ ದೂರದಲ್ಲಿದೆ ಈ ಜಲಪಾತ. ಇದು ಯಾವುದೇ ಅಪಾಯ ಸ್ಥಳವನ್ನು ಹೊಂದಿರದ ಜಲಪಾತ. ಸುತ್ತಮುತ್ತಲಿನ ಪ್ರದೇಶವು ಜಲಪಾತಕ್ಕೆ ಸ್ವರ್ಗದ ಸೌಂದರ್ಯವನ್ನು ನೀಡುತ್ತದೆ.

ತಲುಪುವ ಮಾರ್ಗ[ಬದಲಾಯಿಸಿ]

ಮುರೇಗಾರ್ ಜಲಪಾತವು ಸಿರ್ಸಿ ಯಿಂದ ೨೧ ಕಿಲೋ ಮೀಟರ್ ದೂರವಿದೆ. ಸಿರ್ಸಿ ಯಿಂದ ಹುಲ್ಲೆಕಲ್ ಎಂಬ ಹಳ್ಳಿಯನ್ನು ಸಾಗುವ ರಸ್ತೆಯ ಮಾರ್ಗದಲ್ಲಿ ಸಾಗುತ್ತಿದ್ದಂತೆ ೯ ಕಿಲೋ ಮೀಟರ್ ದೂರದಲ್ಲಿ ಸಾಲ್ಕಣಿ ಎಂಬ ಊರು ಸಿಗುವುದು. ಸಾಲ್ಕಣಿಯಿಂದ ಹಾದು ಹೋಗುವ ಹುಲ್ಲೆಕಲ್ ರಸ್ತೆಯ ಮಾರ್ಗವಾಗಿಯೇ ಮುರೇಗಾರ್ ಜಲಪಾತಕ್ಕೆ ಸಾಗಬೇಕು. ಅಲ್ಲಿ ೬ ಕಿಲೋಮೀಟರಿಗೆ ಬಲಕ್ಕೆ ತಿರುಗಬೇಕು. ಪ್ರವಾಸಿಗರಿಗಾಗಿಯೇ ಮುರೇಗಾರ್ ಫಾಲ್ಸ್ ನ ಸೈನ್ ಬೋರ್ಡ್ ಒಂದನ್ನು ನಿರ್ಮಿಸಲಾಗಿದೆ. ಅದರ ಮೂಲಕ ಮುರೇಗಾರ್ ಜಲಪಾತವನ್ನು ತಲುಪಬಹುದು.

ಹೆಸರು ಬರಲು ಕಾರಣ[ಬದಲಾಯಿಸಿ]

ಸಾಲ್ಕಣಿಯಿಂದ ಹುಲ್ಲೆಕಲ್ ಮಾರ್ಗದಲ್ಲಿ ಮುಂದೆ ಸಿಗುವ ಊರು ಮುರೇಗಾರ್. ಇದೊಂದು ಚಿಕ್ಕ ಗ್ರಾಮ. ಈ ಊರಿನ ಮಧ್ಯದಲ್ಲಿ ಕಂಡು ಬರುವುದೇ ಈ ಜಲಪಾತ. ಊರಿನ ಮಾರ್ಗದಲ್ಲಿ ಸ್ವಚ್ಛಂದವಾಗಿ ಸ್ವಚ್ಛ ಮನಸ್ಸಿನಿಂದ ಹರಿಯುವ ಈ ನದಿಗೆ ಊರಿನದೇ ಹೆಸರು ಬಂದಿದೆ. ಊರಿನ ಮಧ್ಯದಲ್ಲಿ ತನ್ನ ಪಾಡಿಗೆ ತಾನು ಸರಾಗವಾಗಿ ಶಾಂತ ರೀತಿಯಿಂದ ಹರಿಯುತ್ತದೆ. ಆದ್ದರಿಂದ ಈ ಜಲಪಾತಕ್ಕೆ ಊರಿನ ಹೆಸರಿನಿಂದಲೇ ಮುರೇಗಾರ್ ಜಲಪಾತ ಎಂಬ ಹೆಸರು ಬಂದಿತು.

ಉಳಿಯುವ ವ್ಯವಸ್ಥೆ[ಬದಲಾಯಿಸಿ]

ಹತ್ತಿರದಲ್ಲಿ ಯಾವುದೇ ರೆಸಾರ್ಟ್ ಗಳಿಲ್ಲ. ಹೋಮ್ ಸ್ಟೇಗಳೂ ಇಲ್ಲವಾದ್ದರಿಂದ, ಉಳಿಯಬೇಕಾದರೆ ಸಿರ್ಸಿಯನ್ನೇ ತಲುಪಬೇಕು. ಸಿರ್ಸಿಯಲ್ಲಿ ಹಲವಾರು ಹೋಟೆಲ್‌ಗಳೂ ರೆಸಾರ್ಟ್ಗಳು ಸಿಗುವುದು.

ಊಟ ಉಪಹಾರ[ಬದಲಾಯಿಸಿ]

ಊರಿನ ಮಧ್ಯದಲ್ಲಿ ಹರಿಯುವುದರಿಂದ ಯಾವುದೇ ಗೂಡಂಗಡಿಗಳಾಗಲೀ, ಉಟೋಪಚಾರಗಳಿಗಾಗಿ ಯಾವುದೇ ಹೋಟೆಲ್ ಗಳಾಗಲಿ ಸಿಗುವುದಿಲ್ಲ. ಆದ್ದರಿಂದ ಪ್ರವಾಸಿಗರು ಮಧ್ಯಾಹ್ನಕ್ಕಾಗಿ ಊಟದ ಬುತ್ತಿಯನ್ನು ಕೊಂಡೊಯ್ಯುವುದು ಉತ್ತಮ. ಸುತ್ತಲು ದಟ್ಟ ಕಾಡು ಹಾಗೂ ಮರಗಿಡಗಳಿಂದ ತುಂಬಿರುವುದರಿಂದ ಕುಳಿತು ಊಟಮಾಡಲು ಮರದ ನೆರಳುಗಳು ಸಿಗುತ್ತವೆ. ಕುಟುಂಬ ಸಮೇತರಾಗಿ ತೆರಳಿ ಮೋಜು ಮಸ್ತಿಯಿಂದ ಖುಷಿ ಕಾಣಲು ಉತ್ತಮ ಸ್ಥಳ ಇದಾಗಿದೆ. ಸುತ್ತಲೂ ಸ್ವಚ್ಛತೆಯನ್ನು ಜನರು ಕಾಪಾಡಿಕೊಂಡು ಬಂದಿದ್ದಾರೆ. ಯಾವುದೇ ಅಪಾಯಕಾರಿ ಸ್ಥಳಗಳು ಇಲ್ಲವಾದ್ದರಿಂದ ಮಕ್ಕಳಿಂದ ಹಿಡಿದು ವಯಸ್ಕರ ತನಕ ಎಲ್ಲರೂ ಖುಷಿಯಿಂದ ನೀರಿನಲ್ಲಿ ಆಟವಾಡಬಹುದು.

ತೆರಳಲು ಸೂಕ್ತ ಸಮಯ[ಬದಲಾಯಿಸಿ]

ಅಗಸ್ಟ್ ತಿಂಗಳನ್ನು ಹೊರತುಪಡಿಸಿ ಬೇರೆ ಎಲ್ಲ ಸಮಯದಲ್ಲಿಯೂ ಈ ಜಲಪಾತಕ್ಕೆ ತೆರಳಬಹುದು. ಹಾಗಾಗಿಯೂ ಜಲಪಾತವನ್ನು ವೀಕ್ಷಿಸಲು ಉತ್ತಮ ಸಮಯವೆಂದರೆ ಸಪ್ಟೆಂಬರಿನಿಂದ ಡಿಸೆಂಬರ್ ತಿಂಗಳು.

ಉಲ್ಲೇಖಗಳು[ಬದಲಾಯಿಸಿ]

  1. https://m.etvbharat.com/kannada/karnataka/videos/state/there-is-no-roadway-to-muregar-falls-at-sirsi/ka20190915235959577[ಶಾಶ್ವತವಾಗಿ ಮಡಿದ ಕೊಂಡಿ]
  2. http://dhunt.in/7bXWM?s=a&ss=pd[ಶಾಶ್ವತವಾಗಿ ಮಡಿದ ಕೊಂಡಿ]