ಮುನ್ನಾರ್
ಮುನ್ನಾರ್
മൂന്നാർ ದಕ್ಷಿಣ ಭಾರತದ ಕಾಶೀರ | |
|---|---|
ಮುನ್ನಾರ್ ಪಟ್ಟಣ | |
| Coordinates: 10°05′21″N 77°03′35″E / 10.08917°N 77.05972°E | |
| ದೇಶ | ಭಾರತ |
| ರಾಜ್ಯ | ಕೇರಳ |
| ಜಿಲ್ಲೆ | ಇಡುಕ್ಕಿ ಜಿಲ್ಲೆ |
| Named after | ಚಹಾ ತೋಟ, ತಂಪಾದ ವಾತಾವರಣ |
| Government | |
| • Type | ಪಂಚಾಯತ್ |
| • Body | ಮುನ್ನಾರ್ ಗ್ರಾಮ ಪಂಚಾಯತ್ |
| Area | |
• Total | ೧೮೭ km2 (೭೨ sq mi) |
| Elevation | ೧೭೦೦ m (೫೬೦೦ ft) |
| Population (೨೦೦೧) | |
• Total | ೩೮,೪೭೧ |
| • Density | ೨೧೦/km2 (೫೩೦/sq mi) |
| ಭಾಷೆಗಳು | |
| • ಅಧಿಕೃತ | ಮಳಯಾಳಂ, ಇಂಗ್ಲೀಷ್ |
| Time zone | UTC+5:30 (ಭಾರತದ ನಿರ್ದಿಷ್ಟ ಕಾಲಮಾನ) |
| ಪಿನ್ ಕೋಡ್ | ೬೮೫೬೧೨ |
| ದೂರವಾಣಿ ಕೋಡ್ | ೦೪೮೬೫ |
| Vehicle registration | ಕೆಎಲ್-68, ಕೆಎಲ್-06 |
| ಸಾಕ್ಷರತೆ | ೭೬% |
| Website | keralatourism |
ಮುನ್ನಾರ್ (ಮಲಯಾಳಂ:മൂന്നാർ) ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾದ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಒಂದು ಪಟ್ಟಣ ಮತ್ತು ಗಿರಿಧಾಮ. ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳಲ್ಲಿ ಒಂದಾದ ಮುನ್ನಾರ್ ಸಮುದ್ರ ಮಟ್ಟದಿಂದ 1,600 metres (5,200 ft) ಎತ್ತರದಲ್ಲಿದೆ[೨].
ವ್ಯುತ್ಪತ್ತಿಶಾಸ್ತ್ರ
[ಬದಲಾಯಿಸಿ]ಮುನ್ನಾರ್ ಎಂಬ ಹೆಸರು "ಮೂರು ನದಿ"ಗಳನ್ನು ಬಿಂಬಿಸುತ್ತದೆ ಎಂದು ನಂಬಲಾಗುತ್ತದೆ[೩], ಅಂದರೆ ಮುದಿರಪುಜ಼, ನಲ್ಲತನ್ನಿ ಮತ್ತು ಕುನ್ಡಲಿ ನದಿಗಳ ಸಂಗಮವನ್ನು ಉಲ್ಲೇಖಿಸುತ್ತದೆ.[೪]
ಸ್ಥಳ
[ಬದಲಾಯಿಸಿ]ಮುನ್ನಾರ್ ನ ಭೌಗೋಳಿಕ ನಿರ್ದೇಶಾಂಕಗಳು 10°05′21″N 77°03′35″E. ಮುನ್ನಾರ್ ಪಟ್ಟಣವು ಕಣ್ಣನ್ ದೆವನ್ ಬೆಟ್ಟಗಳ ದೆವಿಕುಲ್ಲಮ್ ತಾಲ್ಲೂಕಿನ ಕಣ್ಣನ್ ದೆವನ್ ಬೆಟ್ಟಗಳ ಹಳ್ಳಿಯ ಮೇಲೆ ನೆಲೆಗೊಂಡಿದೆ ಮತ್ತು ಇಡುಕ್ಕಿ ಜಿಲ್ಲೆಯ ಅತಿ ದೊಡ್ಡ ಪಂಚಾಯತ್.
ರಸ್ತೆ
[ಬದಲಾಯಿಸಿ]ಮುನ್ನಾರ್ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಗಳ ಮೂಲಕ ಚೆನ್ನಾಗಿ ಸಂಪರ್ಕಗೊಂಡಿದೆ. ಮುನ್ನಾರ್ ಪಟ್ಟಣವು ಕೊಚ್ಚಿ - ಧನುಷ್ಕೋಡಿ ರಾಷ್ಟೀಯ ಹೆದ್ದಾರಿಯಲ್ಲಿ(N.H 49),ಕೊಚ್ಚಿಯಿಂದ ಸುಮಾರು ೧೩೦ಮೈಲಿ, ಅದಿಮಲಿಯಿಂದ ೩೧ಮೈಲಿ, ತಮಿಳುನಾಡಿನ ಉದುಮಲ್ಪೆಟ್ಟು ಇಂದ ೮೫ಮೈಲಿ ಮತ್ತು ನೆರಿಯಮನ್ಗಲಮ್ ೬೦ಮೈಲಿ ದೂರದಲ್ಲಿದೆ.
ಪ್ರಮುಖ ನಗರಗಳಿಂದ ದೂರ
- ಕೊಚ್ಚಿ ಇಂದ- ಎರ್ನಾಕುಳಮ್ ಇಂದ- 150 km
ವಿಮಾನ ನಿಲ್ದಾಣ
[ಬದಲಾಯಿಸಿ]110 kilometres (68 mi) ದೂರದಲ್ಲಿರುವ ಕೊಚ್ಚಿ ಅಂತರ್ರಾಷ್ಟೀಯ ವಿಮಾನ ನಿಲ್ದಾಣವು ಹತ್ತಿರದ ನಿಲ್ದಾಣ. ಮುನ್ನಾರ್ನಿಂದ ಕೊಯಂಬತ್ತೂರು ಮತ್ತು ಮದುರೈ ವಿಮಾನ ನಿಲ್ದಾಣವು ೧೬೫km ದೂರದಲ್ಲಿದೆ.
ಆಡಳಿತ
[ಬದಲಾಯಿಸಿ]೧೯೬೨ ಜನವರಿ ೨೪ರಂದು ನಿರ್ಮಿತವಾದ ಮುನ್ನಾರ್ ಪಂಚಾಯತ್ ೨೧ ವಾರ್ಡ್ಗಳಾಗಿ ವಿಂಗಡಿಸಲಾಗಿದೆ. ಉತ್ತರ ದಿಕ್ಕಿಗೆ ಕೊಯಂಬತ್ತೂರು ಜಿಲ್ಲೆಯು, ದಕ್ಷಿಣಕ್ಕೆ ಪಲ್ಲಿವಸಲ್, ಪೂರ್ವಕ್ಕೆ ದೆವಿಕುಳಮ್ ಮತ್ತು ಮರಯೂರ್ ಮತ್ತು ಮನುಕುಳಮ್, ಪಶ್ಚಿಮಕ್ಕಿ ಕುಟ್ಟಮ್ಪುಜ಼ ಪಂಚಾಯತ್ ಇದೆ.
|
|
ಆಕರ್ಷಕ ಸ್ಥಳಗಳು
[ಬದಲಾಯಿಸಿ]
- ಎರವಿಕುಳಮ್ ರಾಷ್ಟೀಯ ಉದ್ಯಾನವನ
- ಅನ್ನಮುಡಿ ಉತ್ತುಂಗ
- ಮಟ್ಟುಪೆಟ್ಟಿ ಅಣೆಕಟ್ಟು
- ಪಲ್ಲಿವಸಲ್
- ಚಿನ್ನಕನಾಲ್ ಮತ್ತು ಅನಯಿರನ್ಗಳ್
- ಟಾಪ್ ಸ್ಟೇಷನ್
- ಮುನ್ನಾರ್ ಟೀ ಮ್ಯೂಸಿಯಂ
- ಕುನ್ಡ್ಲಾ ಅಣೆಕಟ್ಟು
ಉಲ್ಲೇಖಗಳು
[ಬದಲಾಯಿಸಿ]- ↑ Munnar
- ↑ "Munnar - the Hill Station of Kerala in Idukki | Kerala Tourism". Archived from the original on 2014-01-18. Retrieved 2017-05-10.
- ↑ "Munnar History". Archived from the original on 2018-01-30. Retrieved 2017-05-10.
- ↑ "Munnar". Archived from the original on 2014-01-18. Retrieved 2017-05-10.