ವಿಷಯಕ್ಕೆ ಹೋಗು

ಮುನಿರಾಜು ಗೌಡ ಪಿ ಎಂ (ತುಳಸಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುನಿರಾಜು ಗೌಡ ಪಿ ಎಂ (ತುಳಸಿ)

ಅಧಿಕಾರ ಅವಧಿ
2019 – Present

ಅಧಿಕಾರ ಅವಧಿ
2016 – 2019

ಅಧಿಕಾರ ಅವಧಿ
2013 – 2016
ವೈಯಕ್ತಿಕ ಮಾಹಿತಿ
ಜನನ (1978-10-03) ೩ ಅಕ್ಟೋಬರ್ ೧೯೭೮ (ವಯಸ್ಸು ೪೬)
ಬೆಂಗಳೂರು
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಭಾರತೀಯ ಜನತಾ ಪಾರ್ಟಿ
ವೃತ್ತಿ (ರಾಜ್ಯ ಕಾರ್ಯದರ್ಶಿ) ಭಾರತೀಯ ಜನತಾ ಪಾರ್ಟಿ ಕರ್ನಾಟಕ

ಕೆಳ ಮಧ್ಯಮ ವರ್ಗದ ರೈತ ದಿವಂಗತ ಪಾಪಣ್ಣ ಗೌಡ ಹಾಗೂ ಮಂಜುಳಮ್ಮ ಕುಟುಂಬದಲ್ಲಿ ಜನಿಸಿದ ಮುನಿರಾಜುಗೌಡ ಚಿಕ್ಕನಿಂದಲೇ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವ. ತನ್ನ ಪ್ರೌಢಶಾಲೆಯ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದ ನಂತರ ಭಗವಾಧ್ವಜದ ಅಪೇಕ್ಷೆಯಂತೆ ಇವರ ಜೀವನದ ಪಯಣ ತಾಯಿ ಭಾರತಾಂಬೆಯ ಸೇವೆಗೆ ಸಮರ್ಪಿಸಿಕೊಂಡು ಸಮಾಜವನ್ನು ಜಾಗೃತಗೊಳಿಸುವುದರ ಜೊತೆಗೆ ಸನಾತನ ಸಂಸ್ಕೃತಿಯ ಆಚಾರ ವಿಚಾರಗಳನ್ನು ಸಮಾಜದ ಮುಂದಿಡುವಂತಹ ಜವಾಬ್ದಾರಿ ಕೆಲಸದಲ್ಲಿ ನಿರತರಾದವರು. ದೇಶ ಮೊದಲು ಎಂಬ ಧ್ಯೇಯದೊಂದಿಗೆ ರಾಷ್ಟ್ರ ವಿರೋಧಿ ಶಕ್ತಿಗಳ ವಿರುದ್ಧ ಸೆಟೆದು ನಿಂತು ವಿರೋಧಿಸುವುದರಲ್ಲಿ ಒಂದು ಕೈ ಮುಂದೆ ಎಂಬುದು ಜಾಗೋ ಭಾರತ ಮೂಲಕ ಯುವ ಸಮಾವೇಶಗಳನ್ನು ಆಯೋಜನೆ ಮಾಡಿದಾಗಲೇ ಅರ್ಥವಾಗಿದ್ದು. ಸಂಘದ ಪ್ರಾಥಮಿಕ ಶಿಕ್ಷಣವನ್ನು ಪಡೆದು ಬೆಳೆದ ಮುನಿರಾಜುಗೌಡ ಎಂದರೆ ಪ್ರಮುಖರಿಗೆ ಅಚ್ಚುಮೆಚ್ಚಿನ ಸ್ವಯಂಸೇವಕ . ಚಾಕುಚಕ್ಯತೆಯಿಂದ ಕೆಲಸ ನಿರ್ವಹಿಸುವ ಇವರ ಬದ್ಧತೆಯನ್ನು ಕಂಡ ಸಂಘದ ಹಿರಿಯರು ಮಾರ್ಗದರ್ಶನ ಮಾಡುವ ಮೂಲಕ ದೇಶ ಭಕ್ತಿಯ ಯುವಕನನ್ನಾಗಿ ರೂಪಿಸದರು. ತಮ್ಮ ಕಾಲೇಜಿನ ದಿನಗಳಲ್ಲಿ ಸ್ವಾಮಿ ವಿವೇಕಾನಂದ ಯುವ ವೇದಿಕೆ ಎಂಬ ಸಂಘಟನೆಯ ಮೂಲಕ ಯುವಕರ ಹೃದಯದಲ್ಲಿ ರಾಷ್ಟ್ರ ಭಕ್ತಿಯನ್ನು ಬಿತ್ತುವಂತ ಹಾಗೂ ಅನೇಕ ಯುವಕರನ್ನು ಸಮಾಜ ಮುಖಿಯಾಗಿ ಚಿಂತಿಸುವಂತಹ ಭಯಕೆಯನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾದರು. ಅನೇಕ ಸಂಘರ್ಷಗಳ ನಂತರವೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವುದು, ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಪಸರಿಸುವಂತಹ, ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾದವರು. ತಮ್ಮ ಬಿ.ಎ. ವ್ಯಾಸಾಂಗದ ನಂತರ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಿದರು. ಅಷ್ಟರಲ್ಲಾಗಲೇ ಭಾರತೀಯ ಜನತಾ ಪಾರ್ಟಿ ಇವರನ್ನು ಕೈಬೀಸಿ ತನ್ನತ್ತ ಕರೆಯಲಾರಂಬಿಸಿತ್ತು. ಪಕ್ಷ ಅದೇ ತಾನೆ ರಾಜ್ಯದಲ್ಲಿ ತನ್ನ ಶಕ್ತಿಯನ್ನು ವಿಸ್ತರಿಸಲಾರಂಬಿಸಿತ್ತು. ಹಿರಿಯರ ಮಾರ್ಗದರ್ಶನದಂತೆ ಬೂತ್ ಮಟ್ಟದ ಹೊಣೆ ಹೊತ್ತು ಪಕ್ಷದ ಚಟುವಟಿಕೆಯಲ್ಲಿ ಧುಮುಕಿದರು. ಬೆಂಗಳೂರು ನಗರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿ ಅತೀ ಹೆಚ್ಚು ಯುವಕರನ್ನು ಸಂಘಟನೆಗೆ ಜೋಡಿಸಿದ ಕೀರ್ತಿ ಇವರಿಗೆ ಸಲ್ಲಲೇಬೇಕು. ಇವರ ಸಂಘಟನಾ ಚಾತುರ್ಯವನ್ನು ಕಂಡ ಪಕ್ಷದ ಹಿರಿಯರು ಹೆಚ್ಚಿನ ಜವಾಬ್ದಾರಿಯನ್ನು ನೀಡುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಕ್ಷಮತೆಯುಳ್ಳ ಬದ್ಧತೆಯ ಯುವಕನಿಗೆ ನಾಯಕತ್ವವನ್ನು ನೀಡಿದರು. ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಇವರು ಮಾಡಿದ ಕೆಲಸಕ್ಕೆ ಯುವ ಮೋರ್ಚಾ ರಾಜ್ಯದ ಅಧ್ಯಕ್ಷ ಗಾದಿ ಇವರಿಗೆ ಅರಸಿ ಬಂತು. ಯುವ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾದಾಗ ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರೀಯ ಯುವ ಮೋರ್ಚಾದಿಂದ ನಡೆದ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿ ಧ್ವಜಾರೋಹಣ ಮಾಡುವ ಮೂಲಕ ತನ್ನ ಗಟ್ಟಿ ಗುಂಡಿಗೆಯನ್ನು ಪ್ರದರ್ಶಿಸಿದರು. ಅದಕ್ಕಿಂತ ಪೂರ್ವದಲ್ಲಿ ಮಾಜಿ ಉಪಪ್ರಧಾನಿಗಳಾಗಿದ್ದ ಆಧರಣೀಯ ಲಾಲ್ ಕೃಷ್ಣ ಆಡ್ವಾಣಿಯವರು ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪ್ರಾರಂಭಿಸಿದ ಜನ ಚೇತನ ಯಾತ್ರೆಯ ನಿರ್ವಹಣಾ ತಂಡದ ಸದಸ್ಯನಾಗಿ 40 ದಿನಗಳಲ್ಲಿ ಸುಮಾರು 12000 ಕಿಲೋಮೀಟರ್ಗಳಷ್ಟು ದೇಶದ ಉದ್ದಗಲಕ್ಕೂ ಸಂಚರಿಸಿ ತನ್ನ ಕಾರ್ಯಕ್ಷಮತೆಯನ್ನು ಪ್ರಸ್ತುತ ಪಡಿಸುವ ಮೂಲಕ ಹೆಮ್ಮೆಯ ಯುವ ನಾಯಕನಾಗಿ ಹೊರಹೊಮ್ಮಿದ್ದರು. ಅಲ್ಲದೇ ಉತ್ತರ ಕರ್ನಾಟಕ ಪ್ರವಾಹದಿಂದ ತತ್ತರಿಸಿದ ಸಂದರ್ಭದಲ್ಲಿ ಅಲ್ಲೂರು ಎಸ್.ಪಿ ಗ್ರಾಮದ ರೈತಾಪಿ ಜನಗಳಿಗೆ 102 ಮನೆಗಳನ್ನು ಖುದ್ದಾಗಿ ನಿರ್ಮಿಸಿ ನಿರಾಶ್ರಿತರಿಗೆ ಹಂಚಿದ ಹೃದಯವಂತ ಮುನಿರಾಜುಗೌಡ. ಈ ಕಾರ್ಯವನ್ನು ಗಮನಿಸಿದ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪನವರು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕರಾದ ಪರಮಪೂಜ್ಯ ಶ್ರೀ ಮೋಹನ್ ಜೀ ಭಾಗವತ್ ಅವರು ಶ್ಲಾಘಿಸಿ ಸನ್ಮಾನಿಸಿದರು.

ಇವೆಲ್ಲ ಕಾರ್ಯಗಳ ಪರಿಣಾಮವಾಗಿಯೇ ಯುವ ಘಟಕದ ರಾಜ್ಯಾಧ್ಯಕ್ಷ ಪಟ್ಟ ಇವರನ್ನು ಹುಡುಕಿ ಬಂದಿದ್ದು ಎನ್ನುವುದು ಅಷ್ಟೇ ಸತ್ಯ. ಪಕ್ಷದ ಅತ್ಯಂತ ಕಷ್ಟದ ಸಂದರ್ಭದಲ್ಲಿ ಯುವ ಘಟಕದ ರಾಜ್ಯ ಅಧ್ಯಕ್ಷನಾಗಿ ಸಂಘಟನೆ ಮಾಡುವುದು ಅಷ್ಟು ಸುಲಭವಿರಲಿಲ್ಲ. ರಾಜ್ಯಾಧ್ಯಕ್ಷರಾದ ಶ್ರೀ ಪ್ರಲ್ಹಾದ ಜೋಶಿಯವ ಮುಂದಾಳತ್ವದಲ್ಲಿ, ಪರಿವಾರದ ಹಿರಿಯ ಮಾರ್ಗದರ್ಶನದಲ್ಲಿ ರಾಜ್ಯದ ಉದ್ದಗಲಕ್ಕೂ ಓಡಾಡಿ ಯವ ಪಡೆಯನ್ನು ಕಟ್ಟುತ್ತ ಪಕ್ಷಕ್ಕೆ ಹೊಸ ಯುವಕರನ್ನು ಆಕರ್ಶಿಸುವತ್ತ ಯಶಸ್ವಿಯಾದರು. ಇವರ ಕ್ರಿಯಾಶೀಲತೆ ಹಾಗೂ ಬದ್ಧತೆಯನ್ನು ಕಂಡ ರಾಜ್ಯದ ಅನೇಕ ಯುವಕರು ಪಕ್ಷದ ಚೌಕಟ್ಟಿಗೆ ಬಂದು ನಿಂತರು. ಅಂದು ಯುವ ಘಟಕದ ಅಧ್ಯಕ್ಷರಾಗಿ ಪಕ್ಷಕ್ಕೆ ಕರೆತಂದ ಅನೇಕ ಯುವಕರು ಇಂದು ಪಕ್ಷಕ್ಕೆ ದೊಡ್ಡ ಆಸ್ತಿಯಾಗಿದ್ದಾರೆ ಎಂಬುದು ಅತಿಶಯೋಕ್ತಿ ಆಗಲಾರದು. ಸ್ವಾಮಿ ವಿವೇಕಾನಂದರ 152 ನೇ ಜಯಂತಿಯ ಅಂಗವಾಗಿ ಯುವ ಚೈತನ್ಯ ರಥಯಾತ್ರೆ ಆಯೋಜಿಸಿ ಬೆಳಗಾವಿಯಿಂದ ಮೈಸೂರು ವರೆಗಿನ ಸುಮಾರು 1200 ಕಿಲೋಮೀಟರ್ ಯಾತ್ರೆಯನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ರಾಜ್ಯ ನಾಯಕರ ಜೊತೆಗೆ ರಾಷ್ಟ್ರೀಯ ಯುವ ಮೋರ್ಚಾ ಹುಬ್ಬೆರುವಂತೆ ಮಾಡಿದರು. ಇದರ ಬೆನ್ನಲ್ಲೇ ಜಲಿಯನ್ ವಾಲಾಬಾಗ್ ತರಹದ ಘಟನೆ ನಮ್ಮ ಕರ್ನಾಟಕದಲ್ಲಿ ನಡೆದಿದೆ ಎಂಬ ಸುದ್ದಿ ಕಿವಿಗೆ ಬಡೆಯುತ್ತೆ. ಕೆಲ ಇತಿಹಾಸಕಾರರನ್ನು ಸಂಪರ್ಕಿಸಿ ನಡೆದ ಘಟನೆಯನ್ನು ಅರಿತು ತನ್ನ ತಂಡದೊಂದಿಗೆ ಬೀದರಕಡೆ ಪ್ರವಾಸಕ್ಕೆ ಹೊರಟರು. ಬೀದರಿನ ಗೊರಟಾ ತಲುಪಿ ಅಲ್ಲಿನ ವಾಸಿಗಳನ್ನು ಸಂಪರ್ಕಿಸಿ ಅಲ್ಲಿನ ನೈಜ ಘಟನೆಗಳ ಜೊತೆಗೆ ನಿಜಾಮರ ಕಾಲದ ಅವಶೇಷಗಳನ್ನು ಕಣ್ಣಾರೆ ಕಂಡು ಭಾವಪರ್ವಶರಾಗಿ ಅಲ್ಲಿಯೇ ಘನಘೋರ ಹತ್ಯಾಕಾಂಡವನ್ನು ದೇಶಕ್ಕೆ ಪರಿಚಯಯಿಸುವ ಸಂಕಲ್ಪ ಮಾಡಿ ಬೆಂಗಳೂರಿಗೆ ವಾಪಸ್ಸಾಗಿ ಪಕ್ಷದ ಹಿರಿಯರ ಜೊತೆ ಮಾತನಾಡಿ, ಅವರಿಗೆ ವಾಸ್ತವತೆಯನ್ನು ಮನದಟ್ಟು ಮಾಡಿ ಗೊರಟಾ ಹುತಾತ್ಮ ಸ್ಮಾರಕ ನಿರ್ಮಾಣಕ್ಕೆ ಅನುಮತಿ ಪಡೆದರು. ಇದರ ಚಾಲನೆಗೆ ಖುದ್ದು ಅಂದಿನ ರಾಷ್ಟ್ರೀಯ ಅಧ್ಯಕ್ಷರಾದ ಮಾನನೀಯ ಅಮಿತ್ ಶಾ ಅವರೇ ಗೊರಾಟಗೆ ಬಂದರು. ಭಾರತೀಯ ರಾಜಕಾರಣದಲ್ಲಿ ಚಾಣಕ್ಯ ಎಂದೇ ಹೆಸರು ಮಾಡಿರುವ ಅಮಿತ್ ಶಾ ಅವರು ಕರ್ನಾಟಕದ ಒಂದು ಮೂಲೆಯಲ್ಲಿರುವ ಗೊರಟಾ ಎಂಬ ಕುಗ್ರಾಮಕ್ಕೆ ಗುದ್ದಲಿ ಪೂಜೆಗೆ ಬಂದರು ಎಂದರೆ ಸಾಮಾನ್ಯದ ಮಾತಲ್ಲ. ಅಂದಿನಿಂದಲೇ ಕರ್ನಾಟಕದ ರಾಜಕೀಯ ರಂಗದಲ್ಲಿ ರೈತನ ಮಗನಾದ ಮುನಿರಾಜುಗೌಡ ಅವರ ಕುರಿತು ಲೆಕ್ಕಾಚಾರಗಳು ಪ್ರಾರಂಭವಾದವು. ಅಂದಿನ ಸಿದ್ದರಾಮಯ್ಯನವರ ದುರಾಡಳಿತಕ್ಕೆ ರಾಜ್ಯದ ಜನ ತತ್ತರಿಸಿ ಹೋಗಿದ್ದರು. ಜನರ ಪ್ರತಿ ಸಮಸ್ಯೆಗಳನ್ನು ತನ್ನ ಸ್ವಂತ ಸಮಸ್ಯೆಗಳಂತೆ ಭಾವಿಸಿ, ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಮಾಡಬಹುದಾದ ಹೋರಾಟಗಳನ್ನು ಯುವ ಮೋರ್ಚಾ ಮೂಲಕ ಮಾಡುತ್ತ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸಿಂಹಸ್ವಪ್ನವಾಗಿ ಪರಿಣಮಿಸಿದ್ದರು. ರಾಜ್ಯದಲ್ಲಿ ರೈತರು ಸಾಲ ಭಾದೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ರೈತ ಸಾಂತ್ವನ ಯಾತ್ರೆ ಎಂಬ ಹೆಸರಿನ ಮೂಲಕ ರೈತರಲ್ಲಿ ಆತ್ಮ ಸ್ಥೈರ್ಯ ತುಂಬುವಂತಹ ಭಾವನಾತ್ಮಕ ಕೆಲಸವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದರು. ಕೆ.ಎಫ್,ಡಿ ಹಾಗೂ ಪಿಎಫ್.ಐ ಆಗುಂತಕ ಸಂಘಟನೆಗಳನ್ನು ನಿಷೇಧಿಸುವಂತೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿ, ಈ ಹೋರಾಟದಲ್ಲಿ ಖುದ್ದು ತಾವೇ ಬಂಧಿಯಾದರು. ಇಂತಹ ಹೋರಾಟಗಳನ್ನು ಮಾಡಿದ ಹಿನ್ನೆಲೆಯಲ್ಲಿ ಅನೇಕ ಪ್ರಕರಣಗಳು ಮುನಿರಾಜುಗೌಡರ ದಾಖಲಾಗಿವೆ. ಈ ಯುವಕನಲ್ಲಿನ ನಾಯಕತ್ವ ಗುಣ ಹಾಗೂ ಎಲ್ಲ ಬೆಳವಣಿಗೆಗಳನ್ನು ದೂರದಿಂದ ವಿಕ್ಷಿಸುತ್ತಿದ್ದ ಬಯಲುಸೀಮೆ ಜನರು ತಮಗೆ ಮೂಲಭೂತವಾಗಿ ಇದ್ದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿದರು. ಸಂಘದ ಸಂಸ್ಕಾರ ಹಾಗೂ ಮನೆಯ ಸಂಸ್ಕೃತಿಯಲ್ಲಿ ಬೆಳೆದ ಮುನಿರಾಜುಗೌಡ ಅವರು ಮೊದಲೇ ಭಾವನಾತ್ಮಕ ಜೀವಿ. ಬಯಲುಸೀಮೆ ಜನರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಈ ಭಾಗದ ಜನರಿಗೆ ಅವಶ್ಯವಿರುವ ನೀರಿಗಾಗಿ ಶಾಶ್ವತ ನೀರಾವರಿ ಯೋಜನೆಯನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಶಾಶ್ವತ ನಿರಾವರಿ ಪಾದಯಾತ್ರೆಯನ್ನು ಹಮ್ಮಿಕೊಂಡೇಬಿಟ್ಟರು. ಸುಮಾರು 5000 ಜನರನ್ನೊಳಗೊಂಡ ಈ ಪಾದಯಾತ್ರೆ ಜನಮನ್ನಣೆ ಗಳಿಸಿತು. ಆ ಭಾಗದ ಜನರು ತಮ್ಮ ಕಣ್ಣೀರಿಗೆ ಶಾಶ್ವತ ಪರಿಹಾರ ಕೊಡಿಸುವ ನಾಯಕ ಎಂಬ ಉದ್ಘಾರದೊಂದಿಗೆ ಮುನಿರಾಜುಗೌಡ ಅವರ ಬೆನ್ನಿಗೆ ನಿಂತರು. ಅನೇಕರ ಅಸಹಕಾರ, ರಾಜ್ಯ ಸರ್ಕಾರದ ಹೋರಾಟ ದಮನ ತಂತ್ರಗಳ ಮದ್ಯೇಯೂ ಬೆಂಗಳೂರಿನ ವರೆಗೂ ಪಾದಯಾತ್ರೆ ಅವ್ಯಾಹತವಾಗಿ ಸಾಗಿತು. ಸಿದ್ದರಾಮಯ್ಯನವರ ಕುತಂತ್ರ ಹಾಗೂ ಮೊಂಡುತನದಿಂದಾಗಿ ಬಂದನಕ್ಕೊಳಗಾದರು. ರಾಜ್ಯದಲ್ಲಿ ಯಡಿಯೂರಪ್ಪನವರ ನಂತರ ಮತ್ತೊಬ್ಬ ಹೋರಾಟಗಾರ ಸಿಕ್ಕ ಎಂಬ ಆಶಯ ಜನರಲ್ಲಿ ಮೂಡಿತು.

2014 ರ ಲೋಕಸಭಾ ಚುನಾವಣೆಯಲ್ಲಿ ಯುವಕರನ್ನು ಒಗ್ಗೂಡಿಸಿ ತನ್ನ ಸಂಘಟನಾ ಕ್ಷಮತೆಯನ್ನು ಪ್ರದರ್ಶಿಸಿದ್ದ ಮುನಿರಾಜುಗೌಡ ಅವರಿಗೆ ಅಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿ ರಾಜ್ಯದ ರಾಜಕೀಯದಲ್ಲಿ ದೈತ್ಯರೆನಿಸಿಕೊಂಡ ಡಿ.ಕೆ ಸಹೋದರರನ್ನು ಎದುರಿಸುವ ಎದೆಗಾರಿಕೆ ತೊರಿಸಿದ್ದು ಇದೇ ಮುನಿರಾಜುಗೌಡ. ಚುನಾವಣೆಗೆ ಅವರ ಎದುರು ಸ್ಪರ್ಧಿಸಲು ಯಾರು ತಯಾರಿಲ್ಲದ ಸಂದರ್ಭದಲ್ಲಿ, ಕ್ಷೇತ್ರದ ಬಗ್ಗೆ ಅಲ್ಪ ಮಾಹಿತಿಯೂ ಇಲ್ಲದಂತಹ ಸಮಯದಲ್ಲಿ ಪಕ್ಷದ ಸೂಚನೆಯಂತೆ ಅತೀ ದೊಡ್ಡ ಕ್ಷೇತ್ರದಲ್ಲಿ ಸುತ್ತಾಡಿ ಕನಕಪುರದ ಕಲಿಗಳನ್ನು ಸುಸ್ತಾಗಿಸಿದ್ದಂತೂ ಸತ್ಯ. ಯಾವಾಗಲೂ ಪರಿವಾರದ ಪ್ರಮುಖರ ಮಾರ್ಗದರ್ಶನದಂತೆ ತಮ್ಮ ರಾಜಕೀಯ ಪಟ್ಟುಗಳನ್ನು ಹಾಕುತ್ತಾ ಬಂದಿರುವ ಮುನಿರಾಜುಗೌಡ ಅವರಿನ್ನು 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಅಕಾಡಕ್ಕೆ ಪಕ್ಷ ಇಳಿಸುತ್ತದೆ. ಯಾವುದೇ ಚಕಾರವೆತ್ತದೆ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಅಣತಿಯಂತೆ ಅತ್ಯಂತ ಕ್ಲಿಷ್ಟಕರವಾದ, ಅತ್ಯಂತ ಪ್ರಬುದ್ಧ ಮತದರಾರನ್ನು ಹೊಂದಿರುವ ಅಷ್ಟೇ ಕೊಳಚೆ ಪ್ರದೇಶವನ್ನು ಹೊಂದಿರುವ ಅತೀ ಉದ್ದನೆಯ ವಿಧಾನಸಭಾ ಕ್ಷೇತ್ರವಾದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಓಡಾಡಿ, ನಾಯಕತ್ವದ ಕೊರತೆಯಿಂದ ಹಾಗೂ ವಿರೋಧಿಗಳ ಹಾವಳಿಯಿಂದ ಭಯಭೀತರಾಗಿ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದ ಕಾರ್ಯಕರ್ತರಿಗೆ ಮನೋಭಲವನ್ನು ತುಂಬುತ್ತ ಸಂಘಟನೆ ಮಾಡಿಕೊಂಡು ಚುನಾವಣೆಗೆ ಅಣಿಯಾದರು. ಅಲ್ಲಿನ ಜನರೊಂದಿಗೆ ಬೆರತು ಸಮಸ್ಯೆಗಳನ್ನು ಅರಿತರು. ತನ್ನ ಯುವಕರ ಪಡೆಯನ್ನು ಅಖಾಡಕ್ಕೆ ಇಳಿಸಿ ಚುನಾವಣೆಯ ಪಟ್ಟುಗಳನ್ನು ಪ್ರಾರಂಭಿಸಿದರು. ವಿರೋಧಿಗಳ ಅತಿರೇಕದ ಹಾವಳಿ ಇವರನ್ನು ಬಿಡಲಿಲ್ಲ. ಅದರೂ ಜಗ್ಗದೇ ಕಲ್ಲು ಬಂಡೆಯಂತೆ ಸೆಟೆದು ನಿಂತರು. ಮುನಿರಾಜುಗೌಡರ ಈ ನಾಯಕತ್ವ ಗುಣ ಅಲ್ಲಿನ ಪ್ರಮುಖರನ್ನು ಆಕರ್ಶಿಸಿತು. ವಿರೋಧ ಪಕ್ಷದ ಅನೇಕ ನಾಯಕರು ಅಲ್ಲಿನ ದುರಾಡಳಿತದ ವಿರುದ್ಧ ಬಂಡೆದ್ದು ಮುನಿರಾಜುಗೌಡ ಅವರ ಪರವಾಗಿ ನಿಂತರು. ತನ್ನ ಗಟ್ಟಿತನದ ಕಾರಣದಿಂದಾಗಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜನರ ಮನ ಗೆದ್ದರೂ ಕುತಂತ್ರದಿಂದ ನಡೆದ ಚುನಾವಣೆಯಲ್ಲಿ ಪರಾಭವವಾಗಬೇಕಾಯಿತು. ಅಂದಿನ ಕಾಂಗ್ರೆಸ್ ಅಭ್ಯರ್ಥಿ ಸೃಷ್ಟಿಸಿದ್ದ ನಕಲಿ ಮತದಾರ ಗುರುತಿನ ಚೀಟಿ ಜಾಲವನ್ನು ಹಡಿದು ಚುನಾವಣಾ ಆಯೋಗಕ್ಕೆ ಒಪ್ಪಿಸಿದಾಗ ಭಾರತವೇ ಬೆಚ್ಚಿಬಿದ್ದಿತ್ತು. ಅಂತಹ ಕುತಂತ್ರಿ ಮತ್ತೊಮ್ಮೆ ಶಾಸಕನಾಗಿ ಒಬ್ಬ ಸಾಮಾಜಿಕ ಕಳಕಳಿ ಇದ್ದ ಯುವಕ ಸೋಲಬೇಕಾಯಿತು. ಅನೇಕ ಅಡೆತಡೆಗಳನ್ನು ಎದುರಿಸಿಯೂ ರಾಜಕಾರಣದಿಂದ ವಿಮುಖರಾಗದೆ ತಾವು ನಂಬಿ ಬಂದ ಸಿದ್ಧಾಂತದ ಅಡಿಯಲ್ಲಿ ಇವತ್ತಿಗೂ ಕೆಲಸ ಮಾಡುತ್ತಿರುವುದು ಅವರ ನಿಷ್ಠಾವಂತಿಕೆಗೆ ಹಿಡಿದ ಕೈಗನ್ನಡಿ.

ಮಾನ್ಯ ಯಡಿಯೂರಪ್ಪನವರು ರಾಜ್ಯಾಧ್ಯಕ್ಷರಾದ ಸಂದರ್ಭದಲ್ಲಿ ಮುನಿರಾಜುಗೌಡ ಅವರು ರಾಜ್ಯ ಕಾರ್ಯದರ್ಶಿ ಹಾಗೂ ಹಾಸನ ಸಂಘಟನಾ ಉಸ್ತುವಾರಿಯಾಗಿ ನೇಮಕಗೊಂಡರು. ಇವರ ಸಂಘಟನಾ ಕೌಶಲ್ಯದ ಪರಿಣಾಮವಾಗಿ ಕಾರ್ಯಕರ್ತರೇ ಇಲ್ಲದಂತಹ ಜಿಲ್ಲೆಯಲ್ಲಿ ಸಂಘಟನೆ ಮಾಡುವ ಮೂಲಕ ಹಾಸನ ವಿಧಾನಸಭಾ ಕ್ಷೆತ್ರವನ್ನು ಗೆಲ್ಲುವಂತೆ ಮಾಡಿದ ಗಿರಿಮೆ ಇವರಿಗೆ ಸಲ್ಲುತ್ತದೆ. ಜನತಾದಳದ ಭದ್ರ ಕೋಟೆಯನ್ನು ನುಚ್ಚು ನೂರು ಮಾಡಿದ ಹೆಗ್ಗಳಿಕೆಗೆ ಪಾತ್ರರಾದರು. ನಿರಂತರ ಪ್ರವಾಸ ಹಾಗೂ ಸಂಘಟನಾ ಚಟುವಟಿಕಗಳಿಗೆ ಒತ್ತು ನೀಡುವ ಮುನಿರಾಜುಗೌಡ ಅವರನ್ನು ರಾಜ್ಯ ಬಿಜೆಪಿ 2018 ರ ಚುನಾವಣೆಗಾಗಿ ಸಮಯ ನೀಡುವ ಕಾರ್ಯಕರ್ತರನ್ನು ಪೂರ್ಣಾವಧಿ ಹೊರಡಿಸುವ ರಾಜ್ಯ ಸಂಚಾಲಕನೆಂಬ ಮಹತ್ತರ ಜವಾಬ್ದಾರಿಯನ್ನು ನೀಡಿತು. ಅನೇಕ ಕಾರ್ಯಕರ್ತರನ್ನು ಖುದ್ದಾಗಿ ಮಾತನಾಡಿಸಿ ಚುನಾವಣೆ ಕಾರ್ಯಕ್ಕೆ ಹೊರಡುವಙತೆ ಪ್ರೇರೇಪಿಸಿ ಪಂಡಿತ ದೀನದಯಾಳ್ ವಿಸ್ತಾರಕ ಯೋಜನೆಯಲ್ಲಿ ಅನೇಕ ಕಾರ್ಯಕರ್ತರು ಪೂರ್ಣಾವಧಿ ಕೆಲಸ ಮಾಡುವಂತೆ ಮಾಡಿ ಚುನಾವಣೆಯಲ್ಲಿ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುವಂತೆ ಮಾಡುವಲ್ಲಿ ಪರೋಕ್ಷವಾಗಿ ಮುನಿರಾಜುಗೌಡರ ಕೆಲಸವೂ ಸಹಾಯಕವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಅದಾದನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಫಲಾನುಭವಿಗಳ ಮತಗಳನ್ನು ಬಿಜೆಪಿ ಯತ್ತ ಸೆಳೆಯುವಳ್ಳಿ ಕಾರ್ಯಕ್ರಮ ರೂಪಿಸಿದ ಚಾಣಾಕ್ಷತೆ ಮುನಿರಾಜುಗೌಡ ಅವರದ್ದು.

ಸದಾ ಕಾರ್ಯಕರ್ತರ ಒಳಿತನ್ನು ಬಯಸುವ ಮುನಿರಾಜುಗೌಡ ಅವರಿಗೆ ಶ್ರೀ ನಳಿನ್ ಕುಮಾರ್ ಕಟೀಲು ಅವರ ಅಧ್ಯಕ್ಷತೆಯಲ್ಲಿ ಮತ್ತೊಮ್ಮೆ ರಾಜ್ಯ ಕಾರ್ಯದರ್ಶಿಯನ್ನಾಗಿ ನಿಯುಕ್ತಿ ಮಾಡಲಾಯಿತು. ರಾಜ್ಯ ಘಟಕದಿಂದ ನಡೆದ ಗ್ರಾಮ ಸ್ವರಾಜ್ಯ ಸಮಾವೇಶ ಹಾಗೂ ಜನಸೇವಕ್ ಸಮಾವೇಶದಲ್ಲಿ ರೂಪಿಸಲಾದ ತಂಡಗಳ ಸಂಚಾಲಕಾರಗಿ ಸದ್ಯ ಚಿತ್ರದುರ್ಗ ಜಿಲ್ಲೆಯ ಪ್ರಭಾರಿಯಾಗಿ ಗ್ರಾಮ ವಾಸ್ತವ್ಯ ಮಾಡಿದ ಹೆಗ್ಗಳಿಕೆಗೆ ಪಾತ್ರರಾದರು. ಇಷ್ಟೆಲ್ಲಾ ಅಲ್ಲದೇ ರಾಷ್ಟ್ರೀಯ ಬಿಜೆಪಿ ಸೂಚನೆಯ ಮೇರೆಗೆ ಪುದುಚೇರಿ ವಿಧಾನಸಭಾ ಚುನಾವಣೆಗಾಗಿ ರಾಜಭವನ ಕ್ಷೇತ್ರದ ಹೊಣೆ ಹೊತ್ತು ಸತತವಾಗಿ ಪ್ರವಾಸ ಮಾಡಿ, ಅಲ್ಲಿನ ಕಾರ್ಯಕರ್ತರ ವಿಶ್ವಾಸ ಗೆಲ್ಲುವುದರ ಜೊತೆಗೆ ಸಂಘಟನೆಗೆ ಹೊಸಬರನ್ನು ಜೋಡಿಸುವ ಕೆಲಸದಲ್ಲಿ ತಲ್ಲಿನರಾಗಿದ್ದಾರೆ. ಬೂತ್ ಸಶಕ್ತಿಕರಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಒಬ್ಬ ನಿಜವಾದ ಸಂಘಟನಾಕಾರನ ಕೌಶಲ್ಯತೆಯನ್ನು ಬಿಂಬಿಸುತ್ತದೆ. ರಚನಾತ್ಮಕ, ಸಂಘಟನಾತ್ಮಕ ಹಾಗೂ ಹೋರಾಟತ್ಮಕ ವಿಷಯಗಳಲ್ಲಿ ಮುನಿರಾಜುಗೌಡ ಪರಿಣಿತರು. ತನ್ನ ಸಿದ್ಧಾಂತದ ಜೊತೆಗೆ ಎಂದಿಗೂ ರಾಜಿ ಮಾಡಿಕೊಂಡವರಲ್ಲ. ರಾಜಕೀಯ ವಿರೋಧಿಗಳ ಜೊತೆ ಸ್ವಾರ್ಥಕ್ಕಾಗಿ ಕೈ ಜೋಡಿಸಿದವರಲ್ಲ. ರಾಜಕೀಯ ಬೆದರಿಕೆಗೆ ಎಂದು ಜಗ್ಗದವರಲ್ಲ, ತನ್ನೊಡನೆ ನಿಂತ ತನ್ನವರಿಗಾಗಿ ಕಾರಣ ಹೇಳಿದ್ದಿಲ್ಲ. ಕಾರ್ಯಕರ್ತರಿಗೆ ಆದ ಅವಮಾನವನ್ನು ಸಹಿಸಿದವರಲ್ಲ. ಯಾವತ್ತೂ ಸೋತು ಮನೆಯಲ್ಲಿ ಕುಂತವರಲ್ಲ. ರಾಜಕೀಯ ಹೊಡೆತಗಳಿಂದ ಘಾಸಿಗೊಂಡರು ಯಾರಿಗೂ ಬಗ್ಗಿದವರಲ್ಲ.

ಪಕ್ಷದ ಒಳಗೆ ಹಾಗೂ ಹೊರಗಿನ ಅಡೆತಡೆಗಳೇಲ್ಲವನ್ನೂ ಎದುರಿಸಿ ರಾಜ್ಯದ ಯುವ ನಾಯಕನಾಗಿ ಬೆಳೆದು ನಿಂತಿರುವುದು ನಮ್ಮ ಕಣ್ಣ ಮುಂದಿದೆ.

ಮುನಿರಾಜುಗೌಡ ಇಂದು ಬಿಜೆಪಿಗಷ್ಟೇ ಸೀಮಿತವಾಗದೇ, ರಾಜ್ಯದ ರಾಜಕೀಯ ಸಮುದ್ರದಲ್ಲಿ ಬೃಹದಾದ ಹಡಗಿನಂತೆ ಸಾಗುತ್ತಿದ್ದಾರೆ. ಅವರೊಟ್ಟಿಗೆ ಬಂದವರಿಗೆ ಅವರಲ್ಲಿರುವ ಸೂಕ್ಷ್ಮ ಭಾವನೆಗಳು ಕಾಣದೇ ಇರಲಾರವು. ಸ್ನೇಹ ಜೀವಿಯಾದ ಮುನಿರಾಜುಗೌಡ ಕರ್ನಾನಟಕದ ಭವಿಷ್ಯದಲ್ಲಿ ಉತ್ತುಂಗದಲ್ಲಿ ಇದ್ದೇ ಇರುತ್ತಾರೆ ಎಂಬುದು ಸೂರ್ಯ ಚಂದ್ರರಷ್ಟೇ ಸತ್ಯ.

  • ಸಾಮಾಜಿಕ ಜೀವನವನ್ನು ಸದಾ ಜೀವಂತವಾಗಿಸುವ ಸಾಮಾಜಿಕ ಚಟುವಟಿಕೆಗಳ ಪ್ರತಿಬಿಂಬ
  • ಕಾಲೇಜು ದಿನಗಳಲ್ಲಿ ಎನ್.ಸಿ.ಸಿ ಕೆಡೆಟ್ ಆಗಿ ಶೂಟಿಂಗ್ ನಲ್ಲಿ ಚಿನ್ನದ ಪದಕ ಗಳಿಕೆ.
  • ವಿವೇಕಾನಂದ ಯುವ ವೇದಿಕೆ ಮುಖಾಂತರ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲೆ ಶೇಕಡಾ 80% ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಶಾಲಾ ಶುಲ್ಕಗಳ ಪಾವತಿ
  • ವಿವೇಕಾನಂದ ಯುವ ವೇದಿಕೆಯ ಮುಖಾಂತರ ಉಚಿತವಾಗಿ ವಯಸ್ಕರಿಗೆ ಕಿವಿ ತಪಾಸಣೆ ಮತ್ತು ಕಣ್ಣು ತಪಾಸಣಾ ಶಿಬಿರಗಳ ಆಯೋಜನೆ
  • ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಕನಸಿನ ಕೂಸಾದ ಸ್ವಚ್ಚ ಭಾರತ ಅಭಿಯಾನ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಮಾಡತ್ತಾ ಅನುಷ್ಠಾನಕ್ಕೆ ತರವಂತೆ ಯವ ಸಮುದಾಯಕ್ಕೆ ಪ್ರೇರಣೆ
  • ಡಿ.ಕೆ ರವಿ ಆತ್ಮಹತ್ಯೆ ಖಂಡಿಸಿ ರಾಜ್ಯ ಸರ್ಕಾರದ ದುರಾಡಳಿತ ಹಾಗೂ ಈ ಪ್ರಕರಣವನ್ನು ಸಿ.ಬಿ.ಐ ಗೆ ವಹಿಸುವಂತೆ ಕೋರಿ ಕೋಲಾರದಿಂದ ಬೆಂಗಳೂರಿನ ವರೆಗೆ ಸಾವಿರಾರು ಯುವ ಸಮುದಾಯದೊಂದಿಗೆ ಬೈಕ್ ರ್ಯಾಲಿ
  • ಅಸಮರ್ಥ ಗೃಹ ಸಚಿವ ಕೆ.ಜೆ ಜಾರ್ಜ್ ವಿರುದ್ದ ರಾಜ್ಯಾದಾದ್ಯಂತ ಹೋರಾಟ, ಸಾವಿರಾರು ಕಾರ್ಯಕರ್ತರ ಬಂಧನ
  • ಕಾರ್ಗಿಲ್ ವಿಜಯ ದಿವಸ ಮತ್ತು ಯೋಧರಿಗರ ನಮನ ಕಾರ್ಯಕ್ರಮಗಳು
  • ವಿವೇಕಾನಂದ ಜಯಂತಿಯಂದು ಪಂಜಿನ ಮೆರವಣಿಗೆಗಳ ಆಯೋಜನೆ ಹಾಗೂ ಯುವಕರಲ್ಲಿ ನಶೆ ಮುಕ್ತ ಸಮಾಜ ನಿರ್ಮಿಸುವ ಶಪತವನ್ನು ಕೈಗೊಳ್ಳುವ ಕಾರ್ಯಕ್ರಮಗಳ ಯೋಜನೆ.
  • ಭಾರತ ಗೆಲ್ಲಿಸಿ ನರೇಂದ್ರ ಮೋದಿಯವರ ಸಮಾವೇಶಕ್ಕೆ ಕರ್ನಾಟಕದಲ್ಲಿ ಪ್ರಥಮಭಾರಿಗೆ ಯುವಮೋರ್ಚಾ ವತಿಯಿಂದ ಪ್ರಚಾರ ವಾಹನಗಳಿಗೆ ಚಾಲನೆ, “ಯುವ ಮೋರ್ಚಾ ಹೋರ್ಡಿಂಗ್ಸ್ ಓನ್ ವೀಲ್”
  • ಅಟಲ್ ಜೀ ಹುಟ್ಟುಹಬ್ಬದಂದು "ಸ್ಕೂಲ್ ಚಲೇ ಹಮ್" ರಾಜ್ಯದೆಲ್ಲೆಡೆ ಕಾರ್ಯಕ್ರಮ
  • ಖೇಲೇಗಾ ಯುವ ಜೀತೇಗಾ ಭಾರತ್ – ಕ್ರಿಕೇಟ್ ಪಂದ್ಯಾವಳಿಗಳ ಮೂಲಕ ಯುವಕರ ಸಂಘಟನೆ
  • ಗ್ರಾಮ ಪಂಚಾಯತ್ ಚುನವಣೆಗೆ ಮೊದಲು ಬಿಜೆಪಿ ನಡೆಸಿದ್ದ ಗ್ರಾಮಸ್ವರಾಜ್ಯ ಸಮಾವೇಶದ ಶ್ರೀ ಕೆ,ಎಸ್ ಈಶ್ವರಪ್ಪರವರ ನೇತೃತ್ವದ ತಂಡದ ಸಂಚಾಲಕರಾಗಿ ಯಶಸ್ವಿ ಸಮಾವೇಶಗಳನ್ನು *ಸಂಘಟಿಸಿ ಅತೀ ಹೆಚ್ಚು ಬಾಜಾಪಾ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿದ ಹಿರಿಮೆ
  • ಗ್ರಾಮ ಪಂಚಾಯತ್ ಚುಣಾವಣೆಯಲ್ಲಿ ಗೆದ್ದಿರುವ ಭಾಜಾಪಾ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭವಾದ ಜನಸೇವಕ ಸಮಾವೇಶದಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ *ಗೊವಿಂದ ಕಾರಜೋಳರವರ ನೇತೃತ್ವದ ತಂಡದ ಸಂಚಾಲಕರಾಗಿ ಯಶಸ್ವಿ ಸಮಾವೇಶಗಳನ್ನು ಸಂಘಟಿಸಿದ ಹಿರಿಮೆ.