ವಿಷಯಕ್ಕೆ ಹೋಗು

ಮುನಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುನಶಿ ಒಂದು  ಪರ್ಷಿಯನ್ ಶಬ್ದವಾಗಿದೆ. ಮೂಲತಃ ಇದನ್ನು ಗುತ್ತಿಗೆದಾರ, ಬರಹಗಾರ, ಅಥವಾ ಕಾರ್ಯದರ್ಶಿಗೆ ಬಳಸಲಾಗುತ್ತಿತ್ತು. ನಂತರ ಮೊಘಲ್ ಸಾಮ್ರಾಜ್ಯ ಹಾಗೂ ಬ್ರಿಟಿಷ್ ಭಾರತದಲ್ಲಿ, ಸ್ಥಳೀಯ ಭಾಷೆಯ ಶಿಕ್ಷಕರು, ವಿವಿಧ ವಿಷಯಗಳ ಶಿಕ್ಷಕರು, ವಿಶೇಷವಾಗಿ ಆಡಳಿತ ತತ್ವಗಳು, ಧಾರ್ಮಿಕ ಪಠ್ಯಗಳು ವಿಜ್ಞಾನ ಮತ್ತು ತತ್ತ್ವಶಾಸ್ತ್ರದ ವಿಷಯಗಳಿಗಾಗಿ ಬಳಸಲಾಗುತ್ತಿತ್ತು. ಯೂರೋಪಿಯನ್ನರು ಇವರನ್ನು ಕಾರ್ಯದರ್ಶಿಗಳು ಹಾಗೂ ಅನುವಾದಕರಾಗಿ ಕೂಡ ನೇಮಕ ಮಾಡಿಕೊಳ್ಳುತ್ತಿದ್ದರು.[]

ವಿಶೇಷವಾಗಿ ಬ್ರಿಟಿಷ್ ಭಾರತದಲ್ಲಿ, ಭಾಷೆಗಳ ಮೇಲೆ ಪರಿಣಿತಿ ಸಾಧಿಸಿದ ವ್ಯಕ್ತಿಗಳಿಗೆ ಈ ಶಬ್ದವನ್ನು ಗೌರವದ ಬಿರುದಾಗಿ ಬಳಸಲಾಗಿತ್ತು. ಯಾರ ಪೂರ್ವಜರು ಈ ಬಿರುದನ್ನು ಪಡೆದಿದ್ದರೊ ಆ ಜನರಿಗೆ ಇದು ಅಡ್ಡ ಹೆಸರಾಯಿತು. ಅವರಲ್ಲಿ ಕೆಲವರು ವಿವಿಧ ಅರಸರ ರಾಜ್ಯಗಳಲ್ಲಿ ಮಂತ್ರಿಗಳು ಹಾಗೂ ಆಡಳಿತಗಾರರಾಗಿ ಕೂಡ ಕಾರ್ಯನಿರ್ವಹಿಸಿದ್ದರು ಮತ್ತು ಇವರನ್ನು ಕುಲೀನರು ಎಂದು ಪರಿಗಣಿಸಲಾಗಿತ್ತು.

ಉಲ್ಲೇಖಗಳು

[ಬದಲಾಯಿಸಿ]
  1.  Chisholm, Hugh, ed. (1911). "Munshi" . Encyclopædia Britannica. Vol. 19 (11th ed.). Cambridge University Press. {{cite encyclopedia}}: Cite has empty unknown parameters: |separator= and |HIDE_PARAMETER= (help)
"https://kn.wikipedia.org/w/index.php?title=ಮುನಶಿ&oldid=925684" ಇಂದ ಪಡೆಯಲ್ಪಟ್ಟಿದೆ