ವಿಷಯಕ್ಕೆ ಹೋಗು

ಮುತ್ತಪ್ಪನ್ ದೇವಸ್ಥಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುತ್ತಪ್ಪನ್ ದೇವಸ್ಥಾನ

ಮುತ್ತಪ್ಪನ್ ದೇವಾಲಯವು ಒಂದು ಹಿಂದೂ ದೇವಾಲಯ. ಇದು ಕೇರಳದ ಕಣ್ಣೂರು ಜಿಲ್ಲೆಯ ತಾಲಿಪರಂಬ ಎಂಬ ಪ್ರದೇಶದಿಂದ ಸುಮಾರು ೧೦ ಕಿ. ಮೀ ದೂರದಲ್ಲಿರುವ ವಲಪಟ್ಟನಮಂ ನದಿ ದಡದಲ್ಲಿದೆ. ಈ ದೇವಾಲಯವನ್ನು "ಪರಸ್ಸಿನಿಕಡವು ಮುತ್ತಪ್ಪನ್" ದೇವಾಲಯ ಎಂದೂ ಕರೆಯಲಾಗುತ್ತದೆ. ದೇವಾಲಯದ ಪ್ರಧಾನ ಅಧಿದೇವತೆ ಶ್ರೀ ಮುತ್ತಪ್ಪನ್, ಇಲ್ಲಿ ಕಾಣಸಿಗುವ ಎರಡು ಪೌರಣಿಕ ಪಾತ್ರಗಳೆಂದರೆ ತಿರುವಪ್ಪನ್ ಮತ್ತು ವೆಲ್ಲಾಟ್ಟಂ. ಸ್ಥಳಿಯ ಸಂಪದ್ರಾಯದ ಪ್ರಕಾರ ಇದು ಜಾನಪದ ದೆವತೆಯಾಗಿದ್ದು, ವೈದಿಕ ದೇವತೆಯಾಗಿಲ್ಲ. ಆದರೆ ಇತ್ತೀಚಿಗೆ ಈ ದೇವರನ್ನು ವಿಷ್ಣು ಅಥವಾ ಶಿವ ಎಂದು ಸಂಯೋಜಿಸುವ ಪ್ರಯತ್ನ ನಡೆಯುತ್ತಿದೆ.[] ಈ ದೇವಾಲಯದ ಧಾರ್ಮಿಕ ಆಚರಣೆಗಳು ವಿಶಿಷ್ಟವಾಗಿದ್ದು, ಕೇರಳ ಇತರ ಹಿಂದೂ ದೇವಾಲಯಗಳು ಪಾಲಿಸುವ ಸಾತ್ವಿಕ ಬ್ರಾಹ್ಮಣ ವಿಧಿವಿಧಾನಗಳನ್ನ ಇಲ್ಲಿ ಅನುಸರಿಸುವುದಿಲ್ಲ. ಇಲ್ಲಿಯ ಪ್ರಮುಖ ರೂಢಿ ಎಂದರೆ ಮುತ್ತಪ್ಪನ್ ಎರಡು ಪಾತ್ರಗಳನ್ನು ಮುತ್ತಪ್ಪನ್ ತೆಯ್ಯಂ ಎಂಬ ಸಾಂಪ್ರದಾಯಿಕ ನೃತ್ಯದ ಮೂಲಕ ಆಚರಿಸುವುದಾಗಿದೆ. ಮೀನು,ಮಾಂಸ ಮತ್ತು ಹೆಂಡ ಇವು ಪ್ರಮುಖ ವಾಡಿಕೆಯ ಕೊಡುಗೆಗಳು.[][] Fish, meat and toddy are the customary offerings to Muthappan.[] ಮುತ್ತಪ್ಪನ್ ತಿರುವಪ್ಪನ್ ಮಹೋತ್ಸವಂ ಇಲ್ಲಿಯ ಮ್ರಮುಖ ಹಬ್ಬವಾಗಿದ್ದು, ಪ್ರತಿ ವರ್ಷ ಮಾರ್ಚ ತಿಂಗಳ ೧೯,೨೦,೨೧ ರಂದು ಮೂರು ದಿನಗಳ ಕಾಲ ಈ ಉತ್ಸವವನ್ನು ಆಚರಿಸಲಾಗುತ್ತದೆ.(ಮಾರ್ಚ ೩,೪,೫ ರಂದು ಅದಕ್ಕೆ ಹೊಂದುವಂತೆ ಆಚರಿಸಲಾಗುತ್ತದೆ).

ಮುತ್ತಪ್ಪನ ಪುರಾಣ

[ಬದಲಾಯಿಸಿ]

ಪೊನ್ನು ಮುತ್ತಪ್ಪನ ದಂತಕಥೆಯ ಆವೃತಿ ಇಲ್ಲಿ ನಿರೂಪಿಸಲ್ಪಟ್ಟಿದೆ: ಪಯ್ಯವೂರು ಎಂಬ ಹಳ್ಳಿಯ ಅಯ್ಯಂಕಾರ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ನಡುವಜಿ ಮತ್ತು ಆಕೆಯ ಪತ್ನಿ ಪಡಿಕುಟ್ಟಿ ಅಂತರ್ಜನಂ.ಈ ದಂಪತಿಗಳಿಗೆ ಮಕ್ಕಳಿರುವುದಿಲ್ಲ. ಈಕೆ ಶಿವನ ಪರಮ ಭಕ್ತೆಯಾಗಿದ್ದಳು. ಒಂದು ನದಿ ನದಿಯಲ್ಲಿ ಸ್ನಾನ ಮಾಡಿ ಹಿಂದಿರುಗುವಾಗ ಹೂ ತುಂಬಿದ ಬುಟ್ಟಿಯೊಂದರಲ್ಲಿ ಮಗುವೊಂದು ತೇಲಿಬರುತ್ತಿರುವುದ್ದನ್ನು ಕಂಡು ಆಕೆ ಇದು ಶಿವನ ಆಶೀರ್ವಾದವೇ ಇರಬೇಕೆಂದು ಅದನ್ನು ತೆಗೆದುಕೊಳ್ಳುತ್ತಾಳೆ. ಆಕೆಯ ಪತಿಯು ಕೂಡ ಆ ನಂಬಿಕೆಯಿಂದಲೇ ಮುಗುವನ್ನು ಸ್ವೀಕರಿಸುತ್ತಾನೆ. ಹೀಗೆ ಬೆಳೆಯುತ್ತ ಹೋದ ಮಗು ತನ್ನ ಬಾಲ್ಯದಿಂದಲೂ ದೀನರ ಮತ್ತು ಬಡವರ ಪ್ರಯೋಜನಕ್ಕಾಗಿಯೇ ದುಡಿಯುತ್ತದೆ.ಆದರೆ ಈತ ದೊಡ್ಡವನಾಗುತ್ತ ಹೋದಂತೆ ಬ್ರಾಹ್ಮಣ ಕುಟುಂಬದಲ್ಲಿ ನಿಷೇಧವಿದ್ದ ಬೇಟೆ ಆಡುವುದು ಮತ್ತು ಮಾಂಸ ತಿನ್ನುವ ಅಭ್ಯಾಸಗಳಲ್ಲಿ ತೊಡಗಿದ್ದು ಕುಟುಂಬಕ್ಕೆ ಪ್ರಾಣಸಂಕಟವಾಗಿ ಪರಿಣಮಿಸಿತು. ಆದ ಕಾರಣ ಕುಟುಂಬದವರು ಅವನ ಈ ವರ್ತನೆಗೆ ವಿರೋಧ ವ್ಯಕ್ತಪಡಿಸುತ್ತಾರೆ. ಆಗ ಹುಡುಗ ಅವರ ದೋಷಾರೋಪಣೆಗಳನ್ನು ಭರಿಸಲಾಗದೆ ಮನೆ ತೊರೆಯಲು ನಿರ್ಧರಿಸುತ್ತಾನೆ. ತಾಯಿ ಅವನನ್ನು ನಿಲ್ಲಿಸಲು ಪ್ರಯತ್ನಸಿದಾಗ ಆತ ಕೋಪದಿಂದ ಆಕೆಯನ್ನ ನೋಡುತ್ತಾನೆ ಮತ್ತು ಆ ತಕ್ಷಣ ತನ್ನ ಪೋಷಕರ ಮುಂದೆ ತನ್ನ ನಿಜವಾದ ದೇವಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ಆಕೆ ತನ್ನ ಮಗನ ಮುಂದೆ ತಲೆಬಾಗುತ್ತಾಳೆ. ಈ ಸಂದರ್ಭದಲ್ಲಿ ಆಕೆ ತನ್ನ ಮಗನ ಬಳಿ ಪೋಯಿಕಣ್ಣು ಎಂಬ ಒಂದು ರೀತಿಯ ಗುರಾಣಿಯಿಂದ ಕಣ್ಣುಗಳನ್ನು ಮುಚ್ಚಿಕೊಳ್ಳಲು ವಿನಂತಿಸಿಕೊಳ್ಳುತ್ತಾಳೆ. ಏಕೆಂದರೆ ಅಂತಹ ಕಣ್ಣಿನ ನೋಟದ ಕಿರಣಗಳಿಗೆ ಇಡೀ ಜಗತ್ತನ್ನೇ ಬದಲಾಯಿಸುವ ಶಕ್ತಿ ಇದೆ ಎಂಬ ಭಯ ಆಕೆಯಲ್ಲಿ ಆವರಿಸತ್ತು.ತನ್ನ ತಾಯಿಯ ಮಾತಿನಂತೆ ಆತ ತನ್ನ ಕಣ್ಣುಗಳನ್ನು ಗುರಾಣಿಯಿಂದ ಮುಚ್ಚಿಕೊಂಡು ಕುಟುಂಬವನ್ನು ತೊರೆದು, ನಂತರ ಅಲ್ಲಿಂದ್ದ ಮಲಬಾರಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿದನು ಅವುಗಳೆಂದರೆ ಕುಣ್ಣತೂರ್ಪಡಿ, ಪುರಲಿಮಾಲ್, ಪಾಡ್ವಿಲ್, ಥಿಲಿಯೆನ್ಕೇರಿ, ಕಣ್ಣಾಪುರಂ, ಪರಸ್ಸಿನಕಡವು ಮತ್ತು ವಲ್ಲುವನಕಡವ.[][] ದಂತಕಥೆಯು ಮತ್ತಪ್ಪನನ್ನು ಒಬ್ಬ ಬುಡಕಟ್ಟು ಕುಟುಂಬದ ಜೊತೆ ಹೋಲಿಕೆ ಮಾಡುತ್ತದೆ. ಎಕೆಂದರೆ ಆ ದೇವಗಣವುಳ್ಳ ಹುಡುಗನ ಹೆಸರು ಮುತ್ತಪ್ಪನ್. ಇದರ ಪ್ರಕಾರ ಮುತ್ತಪ್ಪನ್ನು ಕುಣ್ಣತೂರ್ಪಡಿ ಎಂಬ ಹಳ್ಳಿಯನ್ನು ತಲುಪಿದಅಗ ಅವನಿಗೆ ಚಂತನ್ ಎಂಬ ಬುಡಕಟ್ಟು ಮನುಷ್ಯ ಸಿಗುತ್ತಾನೆ. ಒಂದು ದಿನ ಮುತ್ತಪ್ಪನ್, ಚಂತನ್ ಈಚಲು ಮರದ ರಸವನ್ನು ತೆಗೆಯುವುದನ್ನು ನೋಡಿ ಅದನ್ನು ತಾನು ಕೇಳುತ್ತಾನೆ. ಆದರೆ ಚಂತನ್ ಕೊಡಲು ನಿರಾಕರಿಸುತ್ತಾನೆ. ತಕ್ಷಣ ಚಂತನ್ ಶಾಪಕ್ಕೊಳಗಾಗಿ ಕಲ್ಲಾಗಿಬಿಡುತ್ತಾನೆ. ಆದರೆ ಚಂತನ್ ಹೆಂಡತಿ ತನ್ನ ಗಂಡನನ್ನು ಮರಳಿ ಪಡೆಯಲು ತಾನು ಧನುರ್ಮಾಸದಲ್ಲಿ ಊಟ್ಟು, ತಿರುವಪ್ಪನಂ ಮತ್ತು ಅಮೃತಕಳಸಂ ಎಂಬ ಪೂಜೆಗಳನ್ನು ಮಾಡಿ ಪ್ರಾರ್ಥಿಸುವುದಾಗಿ ಹುಡುಗನಲ್ಲಿ ಮೊರೆಯಿಡುತ್ತಾಳೆ. ಹುಡುಗನು ಮೊದಲು ಅದನ್ನು ನಿರಾಕರಿಸಿದರೂ, ನಂತರ ಅವ ಗಂಡನನ್ನು ವಾಪಸ್ಸು ಕೊಡುತ್ತಾನೆ. ಚಂತನ್ ಕುಟುಂಬವು ಹುಡುಗನ ಮನ ಒಲಿಸಿಕೊಳ್ಳಲು ಪೂಜೆಗಳನ್ನು ಮಾಡಿ ಅವನನ್ನು ಮುತ್ತಪ್ಪನ್ ಎಂಬ ಹೆಸರಿನಿಂದ ಕರೆಯುತ್ತಾರೆ. ಏನೇ ಆದರೂ, ಇನ್ನೊಂದು ದಂತಕಥೆಯ ಪ್ರಕಾರ ಚಂತನ್ ಇಲ್ಲದಾಗ ಮುತ್ತಪ್ಪನ್ ತೆಂಗಿನ ಮರವನ್ನು ಹತ್ತಿ ಈಚಲು ರಸದ ಭರಣಿಯನ್ನು ಬರಿದು ಮಾಡಿದ. ಚಂತನನು ಬಂದು ಮುತ್ತಪ್ಪನ್ ಕೈಯಲ್ಲಿರುವ ಭರಣಿಯನ್ನು ನೋಡಿ ಉದ್ರೇಕಿತನಾಗುತ್ತಾನೆ ಮತ್ತು ಆ ಹುಡುಗ ಹೇಳಿದ್ದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾನೆ. ಕ್ಷಣಾರ್ಧದಲ್ಲಿ ಚಂತನನು ಶಾಪಕ್ಕೊಳಗಾಗುತ್ತಾನೆ.[] ಕರಕಟ್ಟದಾಂ ಎಂಬ ಕುಟುಂಬಕ್ಕೆ ಸೇರಿದ ಕುಣ್ಣತೂರ್ಪಡಿ ಹತ್ತರದ ಹಳ್ಳಿಯ ಮುಖ್ಯಸ್ಥನಿಗೆ ಈ ಘಟನೆ ತಿಯುತ್ತದೆ ಮತ್ತು ಆತ ಮುತ್ತಪ್ಪನನ್ನು ತನ್ನ ಕುಟುಂಬಕ್ಕೆ ಆಹ್ವಾನಿಸುತ್ತನೆ. ಈ ಕಾರಣದಿಂದ ಕುಣ್ಣತೂರ್ಪಡಿ ಹಳ್ಳಿಯ ಜನರು ಮುತ್ತಪ್ಪನನ್ನು ಒಲಿಸಿಕೊಳ್ಳಲು ಪೂಜೆ ಪುನಸ್ಕಾರಗಳನ್ನು ಆರಂಭಿಸುತ್ತಾರೆ. ದಂತಕಥೆಯ ಪ್ರಕಾರ ಮುತ್ತಪ್ಪನನ್ನು ಆತನ ಪ್ರಯಾಣದುದ್ದಕ್ಕೂ ಸದಾ ಒಂದು ನಾಯಿ ಹಿಂಬಾಲಿಸುತ್ತಿರುತ್ತದೆ. ಆದ್ದರಿಂದ ಮುತ್ತಪ್ಪನ್ ದೇವಾಲಯಗಳಲ್ಲಿ ನಾಯಿಯನ್ನು ದೈವ ಸಮಾನವೆಂದು ಪರಿಗಣಿಸಲಾಗುತ್ತದೆ ಮತ್ತು ದೇವಾಲಯದ ಪ್ರವೇಶ ದ್ವಾರದ ಎರಡು ಬದಿಗಳಲ್ಲಿ ನಾಯಿಯ ಮೂರ್ತಿ ಇರುತ್ತದೆ.[]

ದಂತಕಥೆಯ ಮತ್ತೊಂದು ಆವೃತ್ತಿಯು ಮುತ್ತಪ್ಪನನ್ನು ತಿಯ್ಯ ಎಂಬ ಹೆಂಗಸಿನ ಮಗನೆಂದು ಚಿತ್ರಿಸುತ್ತದೆ. ಆದ್ದರಿಂದ ತಿಯ್ಯ ಜಾತಿಗೆ ಸೆರಿದ ಜನರು ಮುತ್ತಪ್ಪನನ್ನು ಆರಾ‍ಧ್ಯ ದೇವ ಎಂದು ಪರಿಗಣಿಸುತ್ತಾರೆ.[]

ಮುತ್ತಪ್ಪನ್ ದೇವಾಲಯ ಇರುವ ಇತರ ಸ್ಥಳಗಳು

[ಬದಲಾಯಿಸಿ]

ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಅನೇಕ ಮುತ್ತಪ್ಪನ್ ದೇವಾಲಯಗಳಿದ್ದು, ಕರ್ನಾಟಕ ರಾಜ್ಯದ ಕೂರ್ಗ್ ಜಿಲ್ಲೆಯಲ್ಲಿ ಕೂಡ ಈ ದೇವಾಲಯವಿದೆ. ಈ ಸ್ಥಳದಲ್ಲಿ ದೇವರು ಹೇಗೆ ಪ್ರಸಿದ್ಧಿ ಪಡೆಯಿತೆಂಬುದನ್ನು ಇದು ತಿಳಿಸುತ್ತದೆ. ಪ್ರತಿಯೊಂದು ಮಡಪ್ಪುರಕ್ಕೂ ಅದರದ್ದೇ ಆದ ಸಂಪ್ರದಾಯವಿದೆ. ಶ್ರೀ ಮುತ್ತಪ್ಪನ್ ದೇವಾಲಯ ಹೇಗೆ ನಿರ್ಮಾಣವಾಯಿತು ಎಂಬುದರ ಬಗ್ಗೆ ಕುತೂಹಲಕಾರಿ ಕಥೆಯಿದೆ. ಕೊರೊತ್ ಕುಟುಂಬದ ಹಿರಿಯ ಸದಸ್ಯ (ಶಿಕ್ಷಕನಾಗಿ ಪ್ರಶಂಸನೀಯ ಸಾಧನೆಗೈದು “ಇಜ್ಹುತಚನ್ “ಎಂದು ಪ್ರಸಿದ್ಧಿ ಪಡೆದಿರುವ ವಿದ್ವಾಂಸ) ಈಗ ಮುತ್ತಪ್ಪನ್ ದೇವಾಲಯವೆಂದು ನಾಮಕರಣಗೊಂಡಿರುವ ಸ್ಥಳಕ್ಕೆ ನಿಯಮಿತವಾಗಿ ಭೇಟಿ ನಿಡುತ್ತಿದ್ದ ಮತ್ತು ಮಧು ಎಂಬ ಮದ್ಯವನ್ನು ಸೇವಿಸುತ್ತಿದ್ದ. ಆತ ತನ್ನ ಭಕ್ತಿಯಂತೆ ಮಧು ಕುಡಿಯುವ ಮೊದಲು ಅವರು ಸಮೀಪದ ಹಲಸಿನಹಣ್ಣಿನ ಮರಕ್ಕೆ ಕೆಲವೊಂದು ಹನಿಗಳನ್ನು ಅರ್ಪಿಸುತ್ತಿದ್ದರು. ಅವರ ಈ ಅಭ್ಯಾಸ ದಿನವೂ ಹೀಗೆ ಮುಂದುವರೆಯಿತು. ಅವರ ಸಾವಿನ ಹಲವಾರು ವರ್ಷಗಳ ನಂತರ,ಹಳ್ಳಿಗರು ಗಂಭಿರ ಸಮಸ್ಯೆಗಳನ್ನು ಎದುರಿಸಲು ಆರಂಭಿಸಿದರು. ಈ ಎಲ್ಲ ಸಮಸ್ಯೆಗಳಿಗೆ ಕಾರಣವನ್ನು ಕಂಡುಹಿಡಿಯಲು ಅವರು ಜೋತಿಷಿಯ ಮೊರೆಯೋದರು. ಆ ಹಿರಿಯ ವ್ಯಕ್ತಿಯ ಅರ್ಪಣೆಯಿಂದಾಗಿ ದೇವರು ಇಲ್ಲಿ ವಾಸಸ್ಥಾನವನ್ನು ಕಂಡುಕೊಂಡಿದ್ದಾನೆ. ಆ ವ್ಯಕ್ತಿಯ ಮರಣದ ನಂತರ ಮುತ್ತಪ್ಪನಿಗೆ ಯಾವುದೇ ಮಧು(ಮದ್ಯ) ಸಿಗಲಿಲ್ಲ.ಇದರಿಂದ ಆತ ಕೋಪಗೊಂಡು ಹಳ್ಳಿಯ ಜನರನ್ನು ಅನೇಕ ಸಂಕಷ್ಟಗಳಿಗೆ ಒಳಪಡಿಸಿದ. ಅವರನ್ನು ಸಮಾದಾನಗೊಳಿಸಲು ಹಳ್ಳಿಗರು ಒಂದು ದೇವಾಲಯವನ್ನು ನಿರ್ಮಿಸಿದರು. ಕೊರೊತ್ ಕುಟುಂಬಕ್ಕೆ ದೇವಾಲಯವನ್ನು ನೋಡಿಕೊಳ್ಳುವ ಅಧಿಕಾರ ದೊರೆಯಿತು. ಆಧುನಿಕ ಕಾಲದಲ್ಲಿ ದೇವಾಲಯವನ್ನು ಉತ್ತೇಜಿಸಲು ಒಂದು ಸಮಿತಿಯನ್ನು ರಚಿಸಲಾಗಿದ್ದು, ಇದರ ಪರಿಣಾಮವಾಗಿ ಇಂದು ಪ್ರತಿದಿನ ನೂರಾರು ಜನರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಭಕ್ತಾದಿಗಳಲ್ಲಿ ದೇವ ತಮ್ಮ ಎಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ಮತ್ತು ತಮ್ಮ ಕ್ಷೇಮಾಭಿವೃದ್ಧಿಯನ್ನು ಕಾಪಾಡುತ್ತದೆ ಎಂಬ ನಂಬಿಕೆ ಇದೆ.

ಕ್ರಿಯಾವಿಧಿಗಳು ಮತ್ತು ಉತ್ಸವಗಳು

[ಬದಲಾಯಿಸಿ]

ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಶ್ರೀ ಮುತ್ತಪ್ಪನ್ ನ ಎರಡು ಪಾತ್ರಗಳಾದ ತಿರುವಪ್ಪನ್ ಮತ್ತು ವೆಲ್ಲಾಟ್ಟಾಂನ ಪೂಜೆಗಳನ್ನು ನಡೆಸಲಾಗುತ್ತದೆ. ವೃಶ್ಚಿಕಂನ 16 (ಇದು ಮಲೆಯಾಳಂ ಡಿ. 1 ಅಥವಾ 2 ನೇ ದಿನಕ್ಕೆ ಅನುರೂಪವಾಗಿದೆ.) ರಂದು ನಡೆಯುವ ಪುತಾರಿ ತಿರುವಪ್ಪನ್ ದೇವಾಲಯದ ಪ್ರತಿ ವರ್ಷದ ಪ್ರಥಮ ತಿರುವಪ್ಪನಾಗಿದೆ. ಇದು ಆ ಪ್ರದೇಶದ ಸುಗ್ಗಿ ಕಾಲಕ್ಕೆ ಸಂಬಂಧಿಸಿದೆ. ದೇವಾಲಯದ ವರ್ಷದ ಕೊನೆಯ ತಿರುವಪ್ಪನಾ ಕನ್ನಿ 30 ರಂದು ನಡೆಯುತ್ತದೆ.[] ತಿರುವಪ್ಪನಾ ಈ ದಿನಗಳಂದು ನಡೆಯುವುದಿಲ್ಲ.

  • ಪ್ರತಿವರ್ಷ ತುಲಂ 1 ರಿಂದ ವೃಶ್ಚಿಕಂ 15 ರವರೆಗೆ
  • ಕಾರಕ್ಕಿಟಕಂ ಮತ್ತು ತುಲಂನ ಅಮಾವಾಸ್ಯೆ ದಿನದಂದು
  • ದೇವಾಲಯದ “ನಿರಾ” ದಿನದಂದು
  • ಮಡಪ್ಪುರ ಕುಟುಂಬದವರಲ್ಲಿ ಸಾವಾಗಿದ್ದಾಗ

ಜನಪ್ರಿಯ ಅರ್ಪಣೆಗಳು

[ಬದಲಾಯಿಸಿ]

ಭಕ್ತಾದಿಗಳು ಶ್ರೀ ಮುತ್ತಪ್ಪನಿಗೆ ನೀಡುವ ಸಾಂಪ್ರದಾಯಿಕ ಅರ್ಪಣೆಗಳೆಂದರೆ ಪೈಂಕುಟ್ಟಿ, ವೆಲ್ಲಾಟ್ಟಾಂ ಮತ್ತು ತಿರುವಪ್ಪನಾ. ದೇವಾಲಯದ ಮಟಯಾನ್ ಎಂಬ ಪ್ರಧಾನ ಪುರೋಹಿತನಿಗೆ ನೀಡುವ ಅರ್ಪಣೆಗಳೆಂದರೆ ವೆಚ್ಹರಿಂಗಟ್ (ಬೇಯಿಸಿದ ಬಾಳೆ ಹಣ್ಣಿನ ಮಿಶ್ರಣ, ಮೆಣಸು, ಅರಿಶಿನ ಹುಡಿ ಮತ್ತು ಉಪ್ಪು), ನೀರ್ಕರಿ (ಕಚ್ಚಾ ಅಕ್ಕಿ ಹುಡಿಯ ಮಿಶ್ರಣ, ಉಪ್ಪು, ಅರಿಶಿನ ಹುಡಿ ಮತ್ತು ಉಪ್ಪು), ಬೇಯಿಸಿದ ಗ್ರಾಂ ಅಥವಾ ತೆಂಗಿನ ಕಾಯಿಯ ಚೂರುಗಳು, ಹೆಂಡ ಅಥವಾ ಸಟ್ಟ ಒಣ ಮೀನುಗಳನ್ನು ಅರ್ಪಿಸಲಾಗುತ್ತದೆ.[] ನಾಯಿಗಳು ಮತ್ತು ನಾಯಿ ಮರಿಗಳನ್ನು ಪರಸ್ಸಿನಿಕಡವು ದೇವಾಲಯದಲ್ಲಿ ನಂಬಿಕೆಯಿದ್ದರೂ ಇಂದು ಅರ್ಪಣೆಗಳಾಗಿ ಸ್ವೀಕರಿಸುವುದಿಲ್ಲ. ಇದಕ್ಕೆ ಕಾರಣ ನಾಯಿಗಳಲ್ಲಿ ಕಾಣಿಸಿಕೊಳ್ಳುವ ಅನಾರೋಗ್ಯವಾಗಿರಬಹುದಾಗಿದೆ. ಇಂದು ದೇವಾಲದಲ್ಲಿ ಕೆಲವೇ ನಾಯಿಗಳಿದ್ದು ಅವುಗಳನ್ನು ದೇವಾಲಯದ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ದೇವಾಲಯಕ್ಕೆ ಬೇರೆ ನಾಯಿಗಳು ಪ್ರವೇಶಿಸಿದರೆ ದೇವಾಲಯದ ನಾಯಿಗಳು ಅವುಗಳನ್ನು ಅಟ್ಟಿಸಿಕೊಂಡು ಹೋಗುತ್ತವೆ. ಬೀದಿನಾಯಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರತಿವರ್ಷ ತಾಲಿಪರಂಬಾ ಪುರಸಭೆಯ ಅಧಿಕಾರಿಗಳು ಹಿಡಇಯುವ ಕಾರ್ಯಾಚರಣೆಯಲ್ಲಿ ತೊಡಗುತ್ತಾರೆ.

ಸಾರಿಗೆ ವ್ಯವಸ್ಥೆ

[ಬದಲಾಯಿಸಿ]

ಪರಸ್ಸಿನಿಕಡವು ಕಣ್ಣೂರಿನಿಂದ 22 ಕಿ.ಮೀ ದೂರದಲ್ಲಿದೆ. ಕಣ್ಣೂರು ಪುರಸಭೆಯ ಬಸ್ ನಿಲ್ದಾಣ ದೇವಾಲಯಕ್ಕೆ ಹತ್ತಿರವಿರುವ ಪ್ರಮುಖ ಬಸ್ ನಿಲ್ದಾಣವಾಗಿದೆ.[]

  • ಹತ್ತಿರದ ರೈಲ್ವೇ ನಿಲ್ದಾಣ: ಕಣ್ಣೂರಿನಿಂದ 16 ಕಿ.ಮೀ ದೂರದಲ್ಲಿದೆ.
  • ಹತ್ತಿರದ ವಿಮಾನ ನಿಲ್ದಾಣ: ಕಣ್ಣೂರಿನಿಂದ 110 ಕಿ.ಮೀ ದೂರದಲ್ಲಿರುವ ಕರಿಪುರ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ, ಕೊಜ್ಹಿಕೊಡೆ.

ಉಲ್ಲೇಖನ

[ಬದಲಾಯಿಸಿ]
  1. ೧.೦ ೧.೧ "Muthappan festival". The Hindu. January 24, 2012. Retrieved August 27, 2012.
  2. ೨.೦ ೨.೧ ೨.೨ "About Muthappan". Railway Muthappan. Archived from the original on ಫೆಬ್ರವರಿ 23, 2012. Retrieved August 27, 2012.
  3. A Sreedhara Menon (2008). Cultural Heritage of Kerala. D C Books. p. 42. ISBN 978-81-264-1903-6. Retrieved 25 August 2012.
  4. ೪.೦ ೪.೧ "Muthappan". Global Openness Community. Retrieved August 25, 2012.
  5. ೫.೦ ೫.೧ "Muthappan Theyyam". Theyyam.org. Archived from the original on ಅಕ್ಟೋಬರ್ 12, 2007. Retrieved August 25, 2012.
  6. "Rituals". railway Muthappan. Archived from the original on ಏಪ್ರಿಲ್ 24, 2012. Retrieved August 27, 2012.
  7. "How to reach". Archived from the original on 2013-05-10. Retrieved 2014-04-21.