ವಿಷಯಕ್ಕೆ ಹೋಗು

ಮುಟ್ಟಾಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಟ್ಟಾಳೆ ಅಡಿಕೆ ಮರದ ಹಾಳೆಗಳಿಂದ ಮಾಡಿದ ಟೋಪಿ. ಇದನ್ನು ಮುಟ್ಟಾಲೆ, ಮುಟ್ಟಾಳೆ, ಮುತ್ತಂಬಳೆ ಎಂದು ಕರೆಯುತ್ತಾರೆ. ರೈತರು ತಮ್ಮನ್ನು ತಾವು ಬಿಸಿಲು ಮತ್ತು ಮಳೆಯಿಂದ ರಕ್ಷಿಸಲು ಇದನ್ನು ಬಳಸುತ್ತಾರೆ. ದಿನನಿತ್ಯದ ಸಾಮಾನುಗಳನ್ನು ತುಂಬಲು ಮುತ್ತಾಲೆಯನ್ನೂ ತಲೆಯ ಮೇಲೆ ಹಾಕಿಕೊಳ್ಳುತ್ತಾರೆ. ಕೆಲಸ ಮಾಡುವಾಗ ತಲೆ ರಕ್ಷಣೆಗಾಗಿ ಇದು ಕಡಿಮೆ-ವೆಚ್ಚದಲ್ಲಿ ಮಾಡುವ ವಸ್ತಾಗಿದೆ. ಇದನ್ನು ಮಲೆನಾಡಿನಲ್ಲಿ ಹಾಳೆಕೊಟ್ಟೆ ಎಂದು ಕರೆಯುತ್ತಾರೆ. ಮೊಟ್ಪಾ ಲೆಂದ್ ಅರೆಬಾಸೆಯಲ್ಲಿ ಕರೆಯುತ್ತಾರೆ. []

ಮುಟ್ಟಾಳೆ

ಪದದ ಅರ್ಥ

[ಬದಲಾಯಿಸಿ]

ಮುಟ್ಟಾಳೆ - ಮುಟ್ಟ+ಪಾಲೆ , ಮುಟ್ಟ ಅಂದರೆ ತಲೆ, ಪಾಲೆ ಅಂದರೆ ಹಾಳೆ. ತಲೆಗೆ ಇಟ್ಟು ರಕ್ಸಣೆ ಮಾಡುವ ಒಂದು ಸಾಧನ.


ವಿಧಗಳು

[ಬದಲಾಯಿಸಿ]

ಗೋಂಪರ್ ಮುಟ್ಟಾಳೆ: ಈ ಮುಟ್ಟಾಳೆ ತುಂಬಾ ದಿನ ಬಾಳ್ವಿಕೆ ಇರುವುದಿಲ್ಲ. ಏಕೆಂದರೆ ಇದು ಹಸಿ ಹಸಿಯಾದ ಅಡಿಕೆಯ ಹಾಳೆಯಿಂದ ತಾತ್ಕಾಲಿಕವಾಗಿ ಮಾಡಿದ ಸಾಧನ ಇದು. ಇದನ್ನು ಬೇಗನೆ ತಯಾರಿಸಲು ಬರುತ್ತದೆ. ಇದರ ತಯಾರಿಗೆ ಹಾಳೆಯ ಒಳ ಪೊರೆಯನ್ನು ತೆಗೆಯುವುದಿಲ್ಲ. ಇದರಿಂದ ಇದು ತಲೆಗೆ ಮೃದುವಾಗಿ ಆರಾಮವಾಗಿ ಇರುತ್ತದೆ. ಇದನ್ನು ಬಿಸಿಲಿಗೂ ಮಳೆಗೂ ಬಳಸುವರು. ಹಾರೆ,ಪಿಕ್ಕಾಸು ಕೆಲಸವನ್ನು ಮಾಡುವಾಗ ಉಪಯೋಗಿಸುವರು. ಗೊಬ್ಬರ,ನೇಜಿ ಹೊರುವಾಗ ಬಳಸುತ್ತಾರೆ. ಇದರ ನೀರು ಮುಖಕ್ಕೆ ಬೀಳದಂತೆ ಗೋಂಪರ್ ರಕ್ಷಿಸುವ ಕೆಲಸ ಮಾಡುತ್ತದೆ. ನೀರು ಬಿದ್ದು ಗೋಂಪರ್ ಬೇಗನೆ ಕೊಳೆತು ಹೋಗುತ್ತದೆ. ಆಗ ಇದನ್ನು ಎಸೆದು ಪುನಃ ಹೊಸ ಗೋಂಪರ್ ಮಾಡುವ ಕ್ರಮ. ಇದನ್ನು ತುಳುನಾಡಿನ ಎಲ್ಲಾ ಕೃಷಿ ಕಾರ್ಮಿಕರು ಅಗತ್ಯ ಬಂದಾಗ ಅವರವರೇ ತಯಾರಿಸುವ ಮುಟ್ಟಾಲೆಯ ವಿನ್ಯಾಸ ಇದು. []


  • ಕನ್ನಿ ಮುಟ್ಟಾಲೆ

ಉಪಯೋಗಗಳು

[ಬದಲಾಯಿಸಿ]
ಮುಟ್ಟಾಳೆ

ಗೊಬ್ಬರ ತುಂಬುವಾಗ, ಸೊಪ್ಪು, ತಲಗೆರೆಗಳನ್ನು ತರುವಾಗ, ಮಣ್ಣು ತುಂಬುವಾಗೆಲ್ಲಾ ಮುಂತಾದ ಬೇಸಾಯದ ಕೆಲಸಗಳನ್ನು ಮಾಡುವಾಗ, ತಲೆಗೆ ಒತ್ತದ ಹಾಗೆ, ಈ ಮುಟ್ಟಾಳೆಯನ್ನು ಸಮಸ್ತ ತುಳುನಾಡಿನ ಬೇಸಾಯಗಾರರು ಮಾಡುತ್ತಾರೆ.

ಕೊರಗ ಜನಾಂಗದವರಿಂದ ಮುಟ್ಟಾಳೆಯ ತಯಾರಿ

[ಬದಲಾಯಿಸಿ]

ಕೊರಗರು ಮುಟ್ಟು ಪಾಳೆಯನ್ನು ತಯಾರಿಸುವ ವಿಧಾನದಲ್ಲಿ ಅಳತೆಗಳನ್ನು ತೆಗೆದುಕೊಂಡು ನಂತರ ಅದನ್ನು ತಯಾರಿಸುತ್ತಿದ್ದರು. ಆ ಕಾಲದಲ್ಲಿ ಅಳತೆ ಉಪಕರಣಗಳು ಇರಲಿಲ್ಲ. ಇದಕ್ಕಾಗಿ ಅವರು ಬಳಸಿದ ಸಾಧನವೆಂದರೆ ಅವರ ಹಿಮ್ಮಡಿಯಿಂದ ಕಾಲ್ಬೆರಳುಗಳವರೆಗೆ, "ಮುಟ್ಟು" ಆಗಿತ್ತು. ನಂತರ ಮರದ ಹಾಳೆಯನ್ನು ಕತ್ತರಿಸಿ ಅದನ್ನು ಹಗ್ಗದಿಂದ ಬಿಗಿಯಾಗಿ ಕಟ್ಟುವುದು. ಅದರ ಅಗಲವನ್ನು ಅಳೆಯುವುದು ಅನಿವಾರ್ಯವಲ್ಲ. ಅವರ ಮುಟ್ಟಿನ ಉದ್ದದಿಂದ ತಯಾರಾದ ಮುಟ್ಟು ಪಾಲೆಯು ಅವರ ತಲೆಯ ಮೇಲೆ ಬರುತ್ತದೆ. ಮುಟ್ಟು ಉದ್ದದ ಪಾಳೆಯೇ ಮುಟ್ಟಾಳೆ. ಕೊರಗರ ಜನಾಂಗದವರು ಮಾಡಿದ ಮೊದಲ ಮುತ್ತಲೆ ಎರಡೂ ದಿಕ್ಕಿಗೆ ಅಂಟಿಕೊಂಡಿತ್ತು. ಇದರ ವಿನ್ಯಾಸವು ವರ್ಷಗಳಲ್ಲಿ ಬದಲಾಗುತ್ತದೆ. ಹೆಬ್ಬೆರಳನ್ನು ಅಳೆಯುವ ಬದಲು ಕೈ ಬೆರಳುಗಳ ಉದ್ದವನ್ನು ಅಳೆಯುವ ಪರಿಪಾಠ ಹುಟ್ಟಿಕೊಂಡಿತು. ನಂತರದ ಕಾಲದಲ್ಲಿ ಮುಟ್ಟಾಳೆಗೆ ಬೇಡಿಕೆ ಹೆಚ್ಚಾದಾಗ ತುಳುನಾಡಿನಲ್ಲಿ ಇತರ ಜಾತಿಯವರೂ ಮುಟ್ಟಾಳೆ ತಯಾರಿಸಿದರು. ಮರದ ಹಾಳೆಯಿಂದ ಮಾಡಿದ ಮುತ್ತಲೆಯ ಹುಟ್ಟು ಮಳೆಗಾಲಕ್ಕೆ ಮಾತ್ರ ಅಲ್ಲ. ಮುತ್ತಾಳೆಯು ಹಾಳಾಗುವ ವಸ್ತುವಾಗಿದ್ದು ಅದನ್ನು ಎಚ್ಚರಿಕೆಯಿಂದ ತೆಗೆದಿಡಬೇಕು. []

ಮುಟ್ಟಾಳೆಯ ಇತರ ಉಪಗೋಗಗಳು

[ಬದಲಾಯಿಸಿ]

ಕೊರಗರು ಆರಂಭದಲ್ಲಿ ನೀರು ಕುಡಿಯಲು ಮತ್ತು ಹಗಲಿನಲ್ಲಿ ಅಡುಗೆ ಮಾಡಲು ಜುಟ್ಟು ಮುಟ್ಟಾಳೆ ಬಳಸುತ್ತಿದ್ದರು. ಬಿಸಿಲಿನಲ್ಲಿ ನಡೆಯುವಾಗ, ಮುಟ್ಟಾಳೆಯ ಎರಡೂ ತುದಿಗಳಲ್ಲಿ ಮರದ ಸೊಪ್ಪುಗಳನ್ನು ಕಟ್ಟುತ್ತಿದ್ದರು. ಆ ಕಾಲದಲ್ಲಿ ದೇಹಕ್ಕೆ ಬಟ್ಟೆ ಇರಲಿಲ್ಲ. ಉಳಿದವರಿಗೆ ಇದು ತುಂಬಾ ಕಷ್ಟದ ಸಮಯವಾಗಿತ್ತು. ಮುಖ ಮತ್ತು ಬೆನ್ನಿನ ಮೇಲೆ ಸೂರ್ಯನ ನೇರ ಶಾಖವನ್ನು ಕಡಿಮೆ ಮಾಡಲು ಈ ಸೊಪ್ಪುಗಳನ್ನು ಬಳಸಲಾಗುತ್ತಿತ್ತು. ಹಾಗೆಯೇ ನಡೆದು ಹೋಗುತಿದ್ದರೇ ಗಾಳಿ ಬಂದು ಸೊಪ್ಪುಗಳು ಅಲುಗಾಡುತ್ತಾ ಮತ್ತೆ ಗಾಳಿ ಬೀಸಿ ದೇಹಕ್ಕೆ ಸಂಪಾಗುತ್ತಿತ್ತು. []

ನಿಷೇಧಗಳು

[ಬದಲಾಯಿಸಿ]

ದೈವದ ಚಾಕರಿ ಮಾಡುವವರು, ಬೂತ ಕಟ್ಟುವವರು, ಮುಂತಾದವರೆಲ್ಲಾ ಮುಟ್ಟಾಳೆ ಧರಿಸುವ ಕ್ರಮ ಇಲ್ಲ.

ಮುಟ್ಟಾಳೆಯ ಕೆಲವು ತುಳುಗಾದೆಗಳು

[ಬದಲಾಯಿಸಿ]

ಸ್ಥಿತಳಾದ ಹೆಣ್ಣಿಗೆ ಚಿಕ್ಕವಯಸ್ಸಿನಲ್ಲಿ ಮದುವೆ ಆಗದಿದ್ದರೆ ಜನ ಹೀಗೆ ಹೇಳ್ತಾರೆ. ಮುಟ್ಟಲೆದಾಯಗ್ ಕೊರ್ಪುಜಿ, ಮುಂಡಾಸ್ ದಾಯೆ ಬರ್ಪುಜೆ

ಅಂದರೆ ಮುಟ್ಟಾಳೆದವರಿಗೆ ಕೊಡುವುದಿಲ್ಲ, ಮುಂಡಾಸಿನವರು ಬರುವುದಿಲ್ಲ.

ಮುಟ್ಟಾಳೆ ದೀಡಿಯರ ಮನಸ್ಸಿದ್ದಿ ಮುಂಡಾಸ್ ಕಟ್ಯರ ಎತ್ತುಜ್ಜಿ

ಅಂದರೆ ಮುಟ್ಟಾಳೆ ಇಡಲು ಮನಸಿಲ್ಲ, ಮುಂಡಾಸು ಕಟ್ಟಲು ಎಟುಕುವುದಿಲ್ಲ

ಉಲ್ಲೇಖಗಳು

[ಬದಲಾಯಿಸಿ]
  1. ರಾಮಕೃಷ್ಣ ಆಚಾರ್, ನಲಿಕೆ ಜನಾಂಗದ ಕುಣಿತಗಳು- ಒಂದು ಅಧ್ಯಯನ,೧೯೯೫, ಮಂಗಳೂರು ವಿಶ್ವವಿದ್ಯಾಲಯ
  2. ೨.೦ ೨.೧ ೨.೨ ಭಂಡಾರಿ, ಐ ಕೆ ಗೋವಿಂದ (16 July 2022). "ಮುಟ್ಟು ಪಾಲೆ ಮುಟ್ಟಾಲೆ". ಭಂಡಾರಿವಾರ್ತೆ.