ಮುಘಲ್ ಸರಾಯ್, ದೋರಾಹಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೋರಾಹಾ ಸರಾಯ್‍ನ ಮುಖ್ಯ ಪ್ರವೇಶದ್ವಾರ

ಮುಘಲ್ ಸರಾಯ್, ದೋರಾಹಾ ಅಥವಾ ದೋರಾಹಾ ಸರಾಯ್ ಪಂಜಾಬ್ ರಾಜ್ಯದ ಲುಧಿಯಾನ ಜಿಲ್ಲೆಯ ದೋರಾಹಾದಲ್ಲಿದೆ. ಇದನ್ನು ಜನಪ್ರಿಯವಾಗಿ 'ಮುಘಲ್ ಕಾರವಾನ್ ಸರಾಯ್' ಎಂದು ಕರೆಯಲಾಗುತ್ತದೆ. ಇದನ್ನು 'ಆರ್‌ಡಿಬಿ' ಕೋಟೆ ಎಂದೂ ಕರೆಯಲಾಗುತ್ತದೆ.[೧]

ಇತಿಹಾಸ[ಬದಲಾಯಿಸಿ]

ಮೊಘಲ್ ದೊರೆ ಜಹಾಂಗೀರ್‌ನು ಮುಘಲ್ ಕಾರವಾನ್‍ಗಳನ್ನು ಬೆಂಬಲಿಸುವುದಕ್ಕಾಗಿ ದೋರಾಹಾ ಸರಾಯ್ ಅನ್ನು ಮುಘಲ್ ಕಾರವಾನ್ ಸರಾಯ್‍ಗಳಾಗಿ ನಿರ್ಮಿಸಿದನು.[೨] ಒಂದು ಕಾಲದಲ್ಲಿ ಮೊಘಲರ ಉತ್ತಮ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿದ್ದ ಈ ಐತಿಹಾಸಿಕ ಸರಾಯ್ ಸರ್ಕಾರದ ಅಸಡ್ಡೆಯ ಧೋರಣೆಯಿಂದಾಗಿ ಇಂದು ಪಾಳು ಬಿದ್ದಿದೆ.[೩][೪]

ವಾಸ್ತುಕಲೆ[ಬದಲಾಯಿಸಿ]

ಮುಘಲ್ ಸರಾಯ್ 168 ಚದರ ಮೀಟರ್ ಪ್ರದೇಶವನ್ನು ಒಳಗೊಂಡಿದ್ದು, ಮಧ್ಯ, ದಕ್ಷಿಣ ಮತ್ತು ಉತ್ತರದ ಬದಿಗಳಲ್ಲಿ ಪ್ರಭಾವಶಾಲಿ ಪ್ರವೇಶದ್ವಾರಗಳಿವೆ. ದಕ್ಷಿಣದ ಪ್ರವೇಶದ್ವಾರವನ್ನು ಸಸ್ಯ ಮತ್ತು ಪ್ರಾಣಿಗಳ ವರ್ಣಚಿತ್ರಗಳಿಂದ ಸುಂದರವಾಗಿ ಅಲಂಕರಿಸಲಾಗಿದ್ದು, ಉತ್ತರದ ಪ್ರವೇಶದ್ವಾರವು ಹೂವಿನ ವಿನ್ಯಾಸಗಳನ್ನು ಹೊಂದಿದೆ. ಉತ್ತರ ಮತ್ತು ದಕ್ಷಿಣ ದ್ವಾರಗಳೆರಡೂ 'ಕಚ್ಚಾ ಮಾರ್ಗ'ಕ್ಕೆ ಸಂಪರ್ಕ ಹೊಂದಿವೆ. ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಸುಮಾರು 20 ಕೊಠಡಿಗಳಿದ್ದು ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ 30 ಕೊಠಡಿಗಳಿವೆ. ಅಲ್ಲದೆ, 3 ಕೊಠಡಿಗಳ ಭವ್ಯವಾದ ಸಂಲಗ್ನಕೋಣೆ ಇದೆ. ಭವ್ಯವಾದ ಕೋಟೆಯ ಪೂರ್ವ ಭಾಗಗಳಲ್ಲಿ 'ಹಮಾಮ್' ಅಥವಾ ಸ್ನಾನದ ಪ್ರದೇಶವಾಗಿ ಬಳಸಬಹುದಾದ ಕೆಲವು ಪ್ರದೇಶಗಳಿವೆ. ಬೆಳಕು ಮತ್ತು ಗಾಳಿಗೆ ಅವಕಾಶ ಕಲ್ಪಿಸುವ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹಲವು ಕೊಠಡಿಗಳಿವೆ. ಕೊಠಡಿಗಳಿಗೆ ಸಾಮಾನ್ಯವಾಗಿ ಓರೆಯಾದ ಗವಾಕ್ಷಿಗಳನ್ನು ನೀಡಲಾಗಿದೆ. ಛಾವಣಿಗಳನ್ನು ಸುಂದರವಾದ ಮತ್ತು ಉತ್ಸಾಹಭರಿತ ಬಣ್ಣಗಳಿಂದ ಚಿತ್ರಿಸಲಾಗಿದೆ, ಅವುಗಳ ಕುರುಹುಗಳನ್ನು ಈ ರಾಜಮನೆತನದ ಆದರೆ ಹಾಳಾದ ಕೋಟೆಯಲ್ಲಿ ಕಾಣಬಹುದು.[೫][೬] ಪಶ್ಚಿಮ ಭಾಗದಲ್ಲಿ ಮಸೀದಿ ಇದೆ, ಆದರೆ ಈಗ ಪಾಳು ಬಿದ್ದಿದೆ. ಇದನ್ನು ಅತ್ಯಂತ ಉತ್ಸಾಹಭರಿತ ಬಣ್ಣಗಳಲ್ಲಿ ಚಿತ್ರಿಸಲಾಗಿತ್ತು. ಮುಲ್ಲಾ ಅವರ ನಿವಾಸವಾಗಿರಬಹುದಾದ, ಮಸೀದಿಗೆ ಹೊಂದಿಕೊಂಡಂತೆ ಒಂದು ಅಂತಸ್ತಿನ ರಚನೆ ಇದೆ.

ಉಲ್ಲೇಖಗಳು[ಬದಲಾಯಿಸಿ]

 

  1. "List of Protected Monuments in Punjab, India" (PDF). Archived from the original (PDF) on 3 ಡಿಸೆಂಬರ್ 2021. Retrieved 12 October 2020.
  2. "Untitled Document". sikh-heritage.co.uk.
  3. "ಆರ್ಕೈವ್ ನಕಲು". Archived from the original on 2016-03-04. Retrieved 2021-09-16.
  4. "The Tribune, Chandigarh, India - Ludhiana Stories". tribuneindia.com.
  5. "Mughal Sarai Fort in Ludhiana, Historical Monuments in Ludhiana". www.ludhianaonline.in. Retrieved 2018-12-07.
  6. "Mughal Sarai - Built By Mughal Ruler "Jahangir"". www.discoveredindia.com. Retrieved 2018-12-07.