ಮುಂಬೈ ನಗರದ ಡಬ್ಬಾವಾಲಾಗಳು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಮುಂಬಯಿ ನಗರದ ಡಬ್ಬಾವಾಲಾಗಳು'

ಪರಿವಿಡಿ

ಡಬ್ಬಾವಾಲರ, 'ಊಟದ ಡಬ್ಬಗಳ ವಿತರಣೆಯ ಕಲ್ಪನೆ,' ಬಂದ ಬಗೆ[ಬದಲಾಯಿಸಿ]

ಇದರ ಮೂಲ ಕಲ್ಪನೆ ಬಂದದ್ದು, ಬ್ರಿಟಿಷ್ ಆಫೀಸರ್ ಗಳು ನಮ್ಮ ದೇಸಿ ಆಹಾರವನ್ನು ಇಷ್ಟಪಡುತ್ತಿರಲಿಲ್ಲ. ಇದು ಸುಮಾರು, ೧೨೫ ವರ್ಷಗಳ ಹಿಂದಿನ ಮಾತು. ಅವರ ಬಟ್ಲರ್ ಗಳು ಮನೆಯಿಂದ ಮಾಡಿದ ಅಡಿಗೆ, ಅಥವ ಟಿಫಿನ್ ಗಳನ್ನು 'ಟಿಫಿನ್ ಬಾಕ್ಸ್,' ಗಳಲ್ಲಿ ತುಂಬಿ ಕಳಿಸಿಕೊಡುತ್ತಿದ್ದರು. ಆದನ್ನು ಆಫೀಸ್ ಗಳಿಗೆ ಸರಿಯಾದ ಸಮಯಕ್ಕೆ ವಿಲೇವಾರಿಮಾಡುವ ಜವಾಬ್ದಾರಿ ತೆಗೆದುಕೊಂಡ ಜನಗಳೇ, 'ಡಬ್ಬಾವಾಲರುಗಳು'. ಅವರನ್ನು 'ಟಿಫಿನ್ ವಾಲಾಸ್,' ಎನ್ನುವವರು ಇದ್ದಾರೆ. ಇಂತಹ,ಬೇಕಾದಷ್ಟು ಕಲೋನಿಯಲ್ ಪದ್ಧತಿಗಳು, ನಮ್ಮ ಭಾರತೀಯ ಜನಜೀವನದಲ್ಲಿ ಹಾಸು-ಹೊಕ್ಕಿವೆ. ಅದರಲ್ಲಿ ಈ ಪದ್ಧತಿಯೂ ಒಂದು ಎಂದು ಹೇಳಲು ಅಡ್ಡಿಯಿಲ್ಲ. ಕೆಲವು ಡಬ್ಬಾವಾಲರುಗಳು, ಮಾಲಿಕರ ಮನೆಯಲ್ಲಿ ಅಡುಗೆ-ಕೆಲಸ ಮಾಡಿ ವಿತರರಣೆಯ ಕೆಲಸವನ್ನೂ, ಮಾಡುತ್ತಿರಬಹುದು. ಮುಂಬಯಿ ನಲ್ಲಿ ಡಬ್ಬಾವಾಲರ ಸಂಘಟನೆ ಬಹಳ ಬಲವಾಗಿಯೂ, ಹಾಗೂ ಸುವ್ಯವಸ್ಥಿತವಾಗಿಯೂ ಇದೆ. ಮುಂಬಯಿ ನ ಡಬ್ಬಾವಾಲಗಳೆಂದು ಸುಪ್ರಸಿದ್ಧಿಪಡೆದಿರುವ, ಊಟದ-ಡಬ್ಬಗಳನ್ನು ವಿಲೇವಾರಿಮಾಡುವ ಒಂದು ಸರಳ ಸುವ್ಯವಸ್ಥಿತ ಸಂಸ್ಥೆಯಾಗಿ ಬೆಳೆದಿದೆ. ಇದೊಂದು,'ಬ್ರಾಂಡ್ ನೇಮ್,' ಆಗಿದ್ದು, ಕೇವಲ ಮುಂಬಯಿ ನ ನಾಗರಿಕರಿಗೆ ಮಾತ್ರ ಸೀಮಿತವಾಗಿದೆ. ಸರಳವಾಗಿ ವಿವರಿಸಬೇಕೆಂದರೆ, ಮನೆಯಲ್ಲಿ ಮಾಡಿದ, ಊಟದ ಊಟದ ಸಾಮಗ್ರಿಗಳನ್ನು ಟಿಫಿನ್ ಕ್ಯಾರಿಯರ್ ಗಳಿಗೆ ಹಾಕಿ, ವ್ಯವಧಾನದಿಂದ ಮೊದಲೇ ತಿಳಿಸಿದ ಸ್ಥಳಗಳಿಗೆ ವಿಲೇವಾರಿಮಾಡುವ, ಒಂದು ದಕ್ಷವ್ಯವಸ್ಥೆ- ಮುಂಬಯಿ ನ ಡಬ್ಬಾವಾಲರ, 'ಮುಂಬಯಿ ಟಿಫಿನ್ ಬಾಕ್ಸ್ ಕ್ಯಾರಿಯರ್ಸ್ ಅಸೋಸಿಯೇಷನ್.' ಆಫೀಸ್ ಗಳಲ್ಲಿ ಕೆಲಸಮಾಡುವ ಜನರಲ್ಲಿ ಕ್ಯಾಂಟಿನ್ ನಲ್ಲಿ ಊಟವನ್ನು ಇಚ್ಛಿಸದ ಜನರಿಗೆ, ಮನೆಯಲ್ಲಿ ಮಾಡಿದ ತಾಜಾ-ಖಾನ ಬೇಕಾದರಿಗೆ ಮಾತ್ರ, ಈ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿದ ಊಟವನ್ನು ಒದಗಿಸುತ್ತದೆ. ಊಟದ ನಂತರ ಕಾದಿದ್ದು ,ಖಾಲಿಯಾದ ಲಂಚ್ ಬಾಕ್ಸ್ ಗಳನ್ನು ಸಂಗ್ರಹಿ, ಅವನ್ನು ಅವರವರ ಮನೆಗಳಿಗೆ, ತಲುಪಿಸುವ ಈ ವ್ಯವಸ್ಥೆ ನಿಜಕ್ಕೂ ಅನುಕರಣೀಯವಾಗಿದೆ. ಇದು, ಹೇಳಿದಷ್ಟು ಸುಲಭವಾದ ಕಾರ್ಯವಲ್ಲ.

ಡಬ್ಬಾವಾಲಾ ಕೆಲಸದ ಕಾರ್ಯ ವೈಖರಿ[ಬದಲಾಯಿಸಿ]

ಮುಂಬಯಿನಗರದ ಉದ್ದಗಲಕ್ಕೂ ಊಟದ ಡಬ್ಬವನ್ನು, ಸಾಗಿಸಿ ಬಳಕೆದಾರರಿಗೆ, ಸಕಾಲದಲ್ಲಿ ಮುಟ್ಟಿಸುವ ಪ್ರಕ್ರಿಯೆ, ಅನನ್ಯ. ಮುಂಬಯಿ ನಂತಹ ಜನನಿಬಿಡ ಪ್ರದೇಶದಲ್ಲಿ ಒಂದು ಚದರ ಕಿ.ಮೀ.ನಲ್ಲಿ, ೧೯,೩೭೩ ಜನರಿದ್ದಾರೆ. ಅವರ ಮಧ್ಯೆ ಊಟದ ಡಬ್ಬಗಳನ್ನು ತಲೆಯಮೇಲೆ ಹೊತ್ತುಕೊಂಡು ಹೋಗಿ, ಕೊಟ್ಟು, ಮತ್ತೆ ಖಾಲಿ ಡಬ್ಬ ವಾಪಸ್ ತರುವುದು ಕಷ್ಟವಾದ ಕೆಲಸ. ಒಬ್ಬರು ರೈಲಿನಲ್ಲಿ ಸರಿಯಾಗಿ ಪ್ರಯಾಣಿಸುವುದೇ ಕಷ್ಟವಾಗಿರುವಾಗ, ಟಿಫಿನ್ ತೆಗೆದುಕೊಂಡು ಹೋಗುವುದು ಕನಸೇ ಸರಿ. ಮನೆಗೆ ಹೋಗಿ ಉಟಮಾಡಿ ಬರಲು ಕಷ್ಟ. ಕೆಲವು ಕೆಫೆಗಳು ಕೂಡ ,ಊಟದ ಸಾಮಗ್ರಿಗಳನ್ನು ಡಬ್ಬಗಳಲ್ಲಿ ತುಂಬಿ ಕಳಿಸಿಕೊಡುತ್ತಾರೆ. ತಿಂಗಳಿ ನಿಗದಿಯಾದ ಸೇವಾ ಶುಲ್ಕವನ್ನು ಅವರಿಗೆ ಕೊಟ್ಟರಾಯಿತು. ಬೊಂಬಾಯಿನ ಡಬ್ಬವಾಲರುಗಳ ಸುದೀರ್ಘ ಇತಿಹಾಸವಿದೆ. ಹಾಗೂ ಅವರದೇ ಒಂದು ಭದ್ರವಾಗಿ ಹೆಣೆದ ಸಮುದಾಯವಿದೆ. ಮನೆಯ ಬಾಗಿಲಿಗೆ ಬಂದು, ಸೈಕಲ್ ಗಳ ಮೇಲೆ ಊಟದ ಡಬ್ಬಗಳನ್ನು ತೆಗೆದುಕೊಂಡು ಹೋಗುತ್ತಾರೆ. ಈ ಡಬ್ಬಗಳನ್ನು ಬೇರೆ ಇದಕ್ಕಾಗಿ ಕಾದಿರುವ ಡಬ್ಬಾವಾಲರುಗಳು, ಇವೆಲ್ಲ ಡಬ್ಬಗಳನ್ನೂ ಸಂಗ್ರಹಿಸಿ, ಅದರ ಮೇಲೆ ಕೈನಲ್ಲಿ ಕೆಲವು ಮಾರ್ಕ್ ಗಳನ್ನು ಮಾಡುತ್ತಾರೆ. ಬಳಕೆದಾರರ ಹೆಸರು, ವಿಳಾಸ, ಹಾಗೂ, ಸಮೀಪದ ರೈಲ್ವೆ ಸ್ಟೇಷನ್ ಇತ್ಯಾದಿ ವಿವಿರಗಳು ಅದರಲ್ಲಿ ಇರುತ್ತವೆ. ಈ ವಿವರಗಳ ಕೋಡ್ ನಮಗೆ, ಗೊತ್ತಾಗುವುದಿಲ್ಲ. ಇನ್ನುಳಿದ ಡಬ್ಬಾವಾಲರುಗಳು, ಅವನ್ನು ವ್ಯವಸ್ಥಿತವಾಗಿ ವಿಂಗಡಿಸಿ, ರೈಲ್ವೆ ಕೋಚ್ ನಲ್ಲಿ ಇಡುತ್ತಾರೆ. ಯಾವ ರೈಲ್ವೆ ಸ್ಟೇಷನ್ ನಲ್ಲಿ ಅದನ್ನು ಅನ್ ಲೋಡ್ ಮಾಡಬೇಕು, ಬಳಕೆದಾರರ, ವಿಳಾಸ ಇತ್ಯಾದಿ ವಿವರಗಳಿರುತ್ತವೆ. ಇವೆಲ್ಲಾ ಡಬ್ಬಾವಾಲರು, ಸುಮಾರುವರ್ಷಗಳಿಂದ ಇದೇಕೆಲಸವನ್ನು ನಿರಂತರವಾಗಿ ಮಾಡುತ್ತಿರುವ ಅನುಭವದಿಂದ, ನಿರ್ಣಯಿಸಿ, ನಿರ್ಧರಿಸಿಮಾಡಿದ ಫಲಿತದಿಂದ ಎಂದು, ಧಾರಾಳವಾಗಿ ಹೇಳಬಹುದು.

ಡಬ್ಬಾವಾಲಾ ಇತಿಹಾಸ ಹಳೆಯದು[ಬದಲಾಯಿಸಿ]

ಸನ್, ೧೮೮೦, ರಷ್ಟು ಹಿಂದೆಯೇ, ಇದನ್ನು ನೋಂದಾಯಿಸಲಾಗಿತ್ತು. 'ದ ನವಿ ಮುಂಬಯಿ ಟಿಫಿನ್ ಬಾಕ್ಸ್ ಸಪ್ಲೈರ್ಸ್ ಟ್ರಸ್ಟ್,' ಮುಂಬಯಿ ನಲ್ಲಿ ಪ್ರಥಮವಾಗಿ ನೋಂದಾಯಿಸಿದ ಕಂಪೆನಿ. ಮಹಾರಾಷ್ಟ್ರದ, 'ಮಹದೇವ್ ಹವಜಿ ಬಾಚ್ಚೆ,' ಎಲ್ಲರಂತೆ ಒಬ್ಬ ವಲಸೆಕಾರ, ಈ ಉದ್ಯೋಗವನ್ನು ಮೊಟ್ಟಮೊದಲಿಗೆ ಪ್ರಾರಂಭಿಸಿದರು, ಶುರುವಿನಲ್ಲಿ ಅವರ ಜೊತೆಯಲ್ಲಿದ್ದವರು, ೧೦೦ ಜನರು ಮಾತ್ರ. ೧೯೩೦, ರಲ್ಲಿ 'ಚಾರಿಟಿ ಟ್ರಸ್ಟ್,' ನಲ್ಲಿ ಹೆಸರನ್ನು ನೋಂದಾಯಿಸಲಾಯಿತು. ೧೯೫೬ ರಲ್ಲಿ, ಅದೇ ಸಂಸ್ಥೆ 'ನೂತನ್ ಮುಂಬಯಿ ಟಿಫಿನ್ ಬಾಕ್ಸ್ ಸಪ್ಲೈರ್ಸ್ ಟ್ರಸ್ಟ್' ವಾಣಿಜ್ಯಶಾಖೆಯ ರೂಪವನ್ನು ತಳೆದು, ೧೯೬೮ ರಲ್ಲಿ ನೊಂದಾಯಿಸಲಾಯಿತು. 'ಮುಂಬಯಿ ಟಿಫಿನ್ ಬಾಕ್ಸ್ ಕ್ಯಾರಿಯರ್ಸ್ ಅಸೋಸಿಯೇಷನ್,' ನ ಈಗಿನ ಅಧ್ಯಕ್ಷರು, ರಘುನಾಥ್ ಮೆದ್ಗೆ. ಗ್ರಾಹಕರ ತೃಪ್ತಿಯೇ ತಮ್ಮ ಪರಮ ಧ್ಯೇಯಗಳಲ್ಲೊಂದಾಗಿದೆ ಎಂದು ಹೇಳಿ, ಅವರಿಗೆ ಇನ್ನೂ ಅತ್ಯುತ್ತಮ ಸೇವೆಯನ್ನು ನೀಡುವುದೇ ತಮ್ಮ ಗುರಿಯಾಗಿರುವುದಾಗಿ ಹೇಳಿದ್ದಾರೆ. ಈಗ, ಅಸೋಸಿಯೇಷನ್ ಕಾರ್ಯಚಟುವಟಿಕೆಗಳಲ್ಲಿ ಕೆಲವು ಬದಲಾವಣೆಗಳಾಗಿವೆ. ಇದರಬಗ್ಗೆ ಒಂದು ಪ್ರಸ್ತುತಿಯನ್ನು ಡಬ್ಬಾವಾಲರುಗಳು, 'ಟೈಮ್ ಮ್ಯಾನೇಜ್ಮೆಂಟ್', 'ಗ್ರಾಹಕರ ತೃಪ್ತಿ', 'ವೃತ್ತಿ-ನಿಷ್ಠೆ', 'ತಪ್ಪಿನಿಂದ ಮುಕ್ತಪದ್ದತಿ', ಮತ್ತಿತರ ಕುಶಲತೆಗಳನ್ನು 'ಕೈಗಾರಿಕೆಯ ಉನ್ನತ-ವೃತ್ತಿಪರ'ರಿಗೆ ನೀಡಿದ್ದಾರೆ.

ದಬ್ಬಾವಾಲರ ಕಾರ್ಯಕುಶಲತೆಯ ಬಗ್ಗೆ ಪುಸ್ತಕ ಹೊರಬಂದಿದೆ[ಬದಲಾಯಿಸಿ]

'ಶ್ರೀ. ಅಗರ್ ವಾಲಾ,' ಬರೆದುಪ್ರಸ್ತುತ ಪಡಿಸಿದ, "Dabbawalas' of Mumbai-Masters of Supply Chain Management,"ಒಂದು ಉಪಯುಕ್ತವಾದ ಹೊತ್ತಿಗೆ, ಡಬ್ಬಾವಾಲರ ಕುಶಲ ಕಾರ್ಯವೈಖರಿಯನ್ನು ಸರಿಯಾದ ರೀತಿಯಲ್ಲಿ ವಿವರಿಸಿ ಮಾಹಿತಿನೀಡಿರುವ ಸಂಶೋಧನಾ-ಗ್ರಂಥವೊಂದು, ಹೊರಬಂದಿದೆ. ಈ ಪುಸ್ತಕವನ್ನು ಅಗರ್ ವಾಲ್ " ಬಾಂಬೆ ಛೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ" ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಬಿಡುಗಡೆಮಾಡಿದ್ದಾರೆ.

ಡಬ್ಬಾವಾಲರುಗಳ ಕೆಲಸದಲ್ಲಿ, ಇರುವ ಸೂಕ್ಷ್ಮ, ಹಾಗೂ ಸಂಕೀರ್ಣವಾದ ಸಂಗತಿಗಳು[ಬದಲಾಯಿಸಿ]

ಈ ಸಂಘಟನೆಯಲ್ಲಿ ಕೆಲಸಮಾಡುವರೆಲ್ಲಾ ಸಮಾನರು. ಯಾವ ಡಬ್ಬಾವಾಲ ಎಲ್ಲಿ ಕೆಲಸಮಾಡುತ್ತಾನೆ ಮುಖ್ಯವಲ್ಲ. ಪ್ರತಿ ಡಬ್ಬಾವಾಲನಿಗೂ ಸರಾಸರಿ, ೨ ರಿಂದ ೪ ಸಾವಿರ ರುಪಾಯಿ ಸಂಬಳ ಸಿಗುತ್ತದೆ. ೨೫-೫೦ ಬ್ರಿಟಿಷ್ ಪೌಂಡ್ ಗಳು ಇಲ್ಲವೇ ೪೦-೮೦ ಅಮೆರಿಕನ್ ಡಾಲರ್. ಪ್ರತಿದಿನ, ೧೭೫,೦೦೦ ಅಥವಾ ೨೦೦,೦೦೦ ಲಂಚ್ ಬಾಕ್ಸ್ ಗಳು ವಿತರಿತವಾಗುತ್ತವೆ. ಸುಮಾರು, ೪,೫೦೦ ದಿಂದ ೫,೦೦೦ ಅರೆಕಲಿತ ಡಬ್ಬಾವಾಲಗಳು ಇದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಡಿಮೆ ಫೀ ಮತ್ತು ಸಮಯಕ್ಕೆ ಸರಿಯಾಗಿ ಮಾಡುವ ಕೆಲಸ. ಒಂದು ಸರ್ವೇಕ್ಷಣೆಯ ವರದಿಯಪ್ರಕಾರ, ೧೬,೦೦೦,೦೦೦, ಡಬ್ಬಾಗಳನ್ನು ಡೆಲಿವರಿ ಮಾಡಿದರೂ ಸಿಕ್ಸ್ (six sigma performance) ಕಾರ್ಯನಿರ್ವಹಣೆಯ ಮಟ್ಟವೆಂದು ಕರೆಯಲ್ಪಡುತ್ತದೆ. ಇದಕ್ಕೆ ದೊರೆತ ರೇಟಿಂಗ್ ೯೯.೯೯೯೯೯೯ ಅಂಕಗಳು.

ಬಿ.ಬಿ.ಸಿ,' ತಯಾರಿಸಿರುವ ಸಾಕ್ಷಿಚಿತ್ರದಲ್ಲಿ ಡಬ್ಬವಾಲಾಗಳನ್ನು , ಪ್ರಿನ್ಸ್ ಚಾರ್ಲ್ಸ್ ರವರು ಭೆಟ್ಟಿಮಾಡಿರುವ ಪ್ರಸಂಗವಿದೆ[ಬದಲಾಯಿಸಿ]

ಹೆಚ್ಚಿನ ವಿಷಗಳಿಗೆ ಸಂಪರ್ಕಿಸಬೇಕಾದಲ್ಲಿ ಡಬ್ಬಾವಾಲಗಳ ವೇಳೆಗೆ ತಕ್ಕಹಾಗೆ ಸಮಯವನ್ನು ಅನುಸರಿಸಿಕೊಂಡು, ನಾವು ನಮ್ಮ ಸಮಯವನ್ನು ಕಾಯ್ದಿರಿಸಿಕೊಳ್ಳಬೇಕು. ಅವರ ಸಮಯ ಮುಂಜಾನೆಯಿಂದಲೇ ಪ್ರಾರಂಭವಾಗುವುದರಿಂದ ಬದಲಾವಣೆ ಅಶಕ್ಯ. ಬ್ರಿಟನ್ ದೊರೆಯವರ ಸಂದರ್ಶನದ ಘಟನೆಯನಂತಹ ಅವರಿಗೆ ಪ್ರಚಂಡ ಜನಪ್ರಿಯತೆ ಬಂತು. ಕೆಲವು ಡಬ್ಬಾವಾಲಗಳನ್ನು ಅತಿಧಿಯಾಗಿ ದೊಡ್ಡ, ಬಿಸಿನೆಸ್ ಹೌಸಸ್ ನಲ್ಲಿ ಕರೆಯುತ್ತಾರೆ. ಇದನ್ನು ಊಹಿಸಲೂ ಸಾಧ್ಯವಿಲ್ಲ. ಪಾಶ್ಚಿಮಾತ್ಯರಿಗೆಲ್ಲರಿಗೂ ಅಚ್ಚರಿಯಾಗಿದೆ. ಯಾವ ಆಧುನಿಕ ತಂತ್ರಜ್ಞಾನ, ನಿರ್ವಣಾ ಪದ್ಧತಿಗಳ ಪ್ರಶಿಕ್ಷಣದ ಸಹಾಯ, ತರಪೇತಿಯೂ ಇಲ್ಲದೆ ಇಷ್ಟು ಸುವ್ಯವಸ್ಥಿತವಾಗಿ ನಡೆಯುತ್ತಿದೆ. 'ದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ, ಯ ಪ್ರಕಾರ ೨೦೦೭ ವರ್ಷದ, ೧೨೫ ವರ್ಷಹಳೆಯ ಡಬ್ಬಾವಾಲ ಇಂಡಸ್ಟ್ರಿ ೫-೧೦%/ವಾರ್ಷಿಕವಾಗಿ ಸಫಲತೆ, ಮತ್ತು ಮುಂದುವರೆಯುತ್ತಲೇ ಇದೆ. ಈ ಡಬ್ಬಾವಾಲಾ ಇಂಡಸ್ಟ್ರಿಯ ವ್ಯವಹಾರವು ಸಾಲಾನ ೪೦ ಕೋಟಿರೂಪಾಯಿನದಾಗಿದೆಯೆಂದು ಅವರ ಸಂಘದ ಅಧ್ಯಕ್ಷ, ಮೆಡ್ಗೆ ಹೇಳಿದ್ದಾರೆ.

'ಗುಡುಗಿರಲಿ', 'ಸಿಡಿಲಿರಲಿ', 'ಪಿಡುಗಿರಲಿ,' ಡಬ್ಬಾವಾಲರಿಗೆ ಅವೆಲ್ಲಾ ಸವಾಲೇ ಅಲ್ಲ ;ನಿರಂತರಸೇವೆಯೇ ಅವರ ಆದ್ಯತೆ[ಬದಲಾಯಿಸಿ]

'ಗುಡುಗಿರಲಿ,' 'ಸಿಡಿಲಿರಲಿ', 'ಪಿಡುಗಿರಲಿ,' ಡಬ್ಬಾವಾಲರಿಗೆ ಅವೆಲ್ಲಾ ಸವಾಲೇ ಅಲ್ಲ. ಹವಾಮಾನದ ವೈಪರೀತ್ಯಗಳಲ್ಲೂ, ಎಡೆ-ತಡೆಯಿಲ್ಲದ, ನಿರಂತರಸೇವೆ ಅನುಕರಣೀಯವಾಗಿದೆ. 'ಹೈಟೆಕ್' ಎಂದು ಹೇಳಲು ಬಾರದಿದ್ದರೂ, ಇದರ ಸೇವೆ ಹೈಟೆಕ್ ಉದ್ಯೋಗಗಳಲ್ಲಿ ಕೆಲಸಮಾಡುತ್ತಿರುವ ಬಿಝಿನೆಸ್ ಎಕ್ಸಿಕ್ಯೂಟಿವ್ ಗಳಿಗೆಲ್ಲಾ ದೊರೆಯುತ್ತಿದೆ. ಡಬ್ಬಾಗಳನ್ನು ಡೆಲಿವರಿ ಮಾಡುವ ವ್ಯಕ್ತಿ ಇಂದಿಗೂ ಕೆಲವೊಮ್ಮೆ ಬರಿಕಾಲಿನಲ್ಲಿ, (information technology), ತನ್ನ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿದ್ದಾನೆ. ಈಗ ಅಲ್ಪ-ಸ್ವಲ್ಪ ಬಳಸುತ್ತಿದ್ದಾರೆ. SMS ಮಾಡಿ ಬುಕ್ ಮಾಡಬಹುದು. ಒಂದು ವೆಬ್ ಸೈಟ್,mydabbawala.com, ಆನ್ ಲೈನ್ ಪ್ರಕ್ರಿಯೆ ಈಗಾಗಲೇ ಲಭ್ಯ.' ಕಸ್ಟಮರ್ ಫೀಡ್ ಬ್ಯಾಕ್' ಸೇವೆಯೂ ಇದೆ. 'ಟೀಮ್ ವರ್ಕ್', ಅತ್ಯಾಧುನಿಕ ಮ್ಯಾನೇಜರ್ ಗಳಿಗೂ ಈರ್ಷೆಯಾಗುವಷ್ಟು. ಸಫಲತೆ, ಎಲ್ಲರೂ ಒಗ್ಗಟ್ಟಾಗಿ ಕೆಲಸಮಾಡುವುದರಿಂದ. ಡಬ್ಬಾವಾಲಗಳ ಯಶಸ್ಸು, ಅವರ, ಕೆಲಸದಲ್ಲಿ ನಿಷ್ಟೆ, ಸಮಯಪ್ರಜ್ಞೆ, ಕೆಲಸಮಾಡುವ ಇಚ್ಛೆ, ಹಾಗೂ ತ್ಯಾಗದಿಂದ ಹಾಸಲಾಗಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಕೆಲವರಿಗೆ ಕೇವಲ ಅಕ್ಷರಗಳನ್ನು ಕೂಡಿಸಿಕೊಂಡು ಓದಲು ಮಾತ್ರಬರುತ್ತದೆ. ಈಗಲೂ ಬರಿಗಾಲಿನಲ್ಲಿ ಓಡಾಟ. ಕೆಲವೇ ವಿಲೇವಾರಿ ಮಾಡುವ ಹೆಂಗಸರು. ಈ ಅಭಿಯಾನದಲ್ಲಿ ಕೊಂಡಿಗಳಾಗಿ, ಕೆಲಸಮಾಡುತ್ತಿದ್ದಾರೆ. ಲೆಖ್ಖ ಇಡುವಪದ್ಧತಿ, ಯಾವಹಂತದಲ್ಲೂ ಇಲ್ಲ. 'ಸರಳವಾದ ಬಣ್ಣದ ಮಾರ್ಕ್ ಅಷ್ಟೆ.

ಅವರ ಕೆಲಸ ಮತ್ತು ವಹಿವಾಟಿನ-ವೈಖರಿ ಸದಾ ಅನುಕರಣೀಯ[ಬದಲಾಯಿಸಿ]

'ಮ್ಯಾನೇಜ್ ಮೆಂಟ್' ನಲ್ಲಿ ಅನೇಕ ಮೇಲ್ಪದರಗಳಿಲ್ಲ. ಕೇವಲ ೩ ಮಟ್ಟಗಳು-ಪ್ರತಿ ಡಬ್ಬಾವಾಲನೂ ದೇಣಿಗೆ ಕೊಡಬೇಕು ಹಣದ ರೂಪದಲ್ಲಿ ಅಥವಾ ಬೇರೆ ತರಹ. ಕನಿಷ್ಠ ಬಂಡವಾಳ ೨ ಸೈಕಲ್, ಮರದ ಒಂದು, ಕ್ರೇಟ್-tiffin ಬಾಕ್ಸ್ ಗಳನ್ನು ಅದರಲ್ಲಿ ಕಲೆಹಾಕಲು. ಬಿಳಿ ಹತ್ತಿಬಟ್ಟೆಯ, 'ಕುರ್ತಾ-ಪೈಜಾಮ ಮತ್ತು ಗಾಂಧಿ ಟೋಪಿ, ಅದೇ ಟ್ರೇಡ್ ಮಾರ್ಕ್' ಅವರಿಗೆ ಬರುವ ಆದಾಯದಲ್ಲಿ ಪ್ರತಿ-ಯುನಿಟ್ ಗೆ ಇಷ್ಟು ಎಂದು ಲೆಕ್ಕ ಮಾಡಿ ಹಂಚಲಾಗುತ್ತದೆ. ತಡೆಯಿಲ್ಲದ ಸೇವೆ ಹವಾಮಾನದ ವೈಪರಿತ್ಯತೆ, ಅಥವಾ ಬೇರೆಯೇನೂ ಸವಾಲುಗಳೇ ಅಲ್ಲ. ಮಳೆಗಾಲ, ತಪ್ಪದೆ ಬರುತ್ತವೆ. ಗುಡುಗಿರಲಿ, ಸಿಡಿಲಿರಲೆ, ಪಿಡುಗಿರಲಿ ಅವರಿದ್ದಾರೆ. ಬಹಳ ಹಿಂದೆ,ಡಬ್ಬಾಗಳಲ್ಲೇ ಪುಟ್ಟ ಚೀಟಿಯಲ್ಲಿ ಬರೆದಿಟ್ಟು, ಸುದ್ದಿಯನ್ನು ಕೊಡುತ್ತಿದ್ದರು. ಈಗ ದಿನಗಳು ಬದಲಾಗಿವೆ. ಡಬ್ಬಾವಾಲರೆಲ್ಲರ ಕೈನಲ್ಲೂ 'ಮೊಬೈಲ್,' ಗಳಿವೆ.

ಸಲ್ಮಾನ್ ರಶ್ದಿಯವರ, ಕಾದಂಬರಿಯಲ್ಲಿನ ಡಬ್ಬಾವಾಲ, ಒಂದು ದಿನ, 'ಸಿನೆಮಾ ನಟ,' ನಾಗುತ್ತಾನೆ[ಬದಲಾಯಿಸಿ]

ಸಲ್ಮಾನ್ ರಶ್ದಿಯವರ ವಿವಾದಾತ್ಮಕ ನಾಲೆಲ್, 'ಸಟಾನಿಕ್ ವರ್ಸಿಸ್' ನಲ್ಲಿ ಇಬ್ಬರು ಮುಖಂಡರಲ್ಲಿ ಒಬ್ಬನು ಗಿಬ್ರೀಲ್ ಫರಿಶ್ತ, ಇಸ್ಮೈಲ್ ನಜ್ಮುದ್ದೀನ್ ಎಂಬ ಹೆಸರಿನಲ್ಲಿ ಒಬ್ಬ ಡಬ್ಬಾವಾಲನಿಗೆ ಜನಿಸುತ್ತಾನೆ. ನಾವೆಲ್ ನಲ್ಲಿ ಫರಿಶ್ತ ತನ್ನ ೧೦ ವರ್ಷದ ವಯಸ್ಸಿನಲ್ಲೇ, ತಂದೆಯವರ ಜೊತೆ ಸೇರಿಕೊಳ್ಳುತ್ತಾನೆ. ಬಾಂಬೆಯ ಎಲ್ಲಾ ಪ್ರದೇಶಗಳಿಗೂ ಊಟದ ಡಬ್ಬಗಳನ್ನು ವಿಲೆವಾರಿಮಾಡುತ್ತಾ, ಕೊನೆಗೆ ರಸ್ತೆಯಲ್ಲಿನ ಮನೆಯಿಂದ ಮುಕ್ತಿ ದೊರೆತು, ದೊಡ್ಡ ಸಿನೆಮಾ ನಟನಾಗುತ್ತಾನೆ. ಡಬ್ಬಾವಾಲಗಳಿಗೆ ಏನೋ ಸಬೂಬು ಸಿಗುತ್ತದೆ, ಇನ್ಪೆಕ್ಟರ್ ಘೋಟೆ ನಾವೆಲ್, "ಡೆಡ್ ಆನ್ ಟೈಮ್", ನಲ್ಲಿಯೂ ಡಬ್ಬಾವಾಲನ ಒಂದು ಭೂಮಿಕೆಯಿದೆ. ಹಾಗಾಗಿ ಡಬ್ಬಾವಾಲರುಗಳು ನಮ್ಮ ಮುಂಬಯಿ ಜನರಿಗೆ ಚಿರಪರಿಚಿತರಾಗಿದ್ದಾರೆ.

ಹೆಚ್ಚಿನ ವಿವರಗಳಿಗೆ ಕೆಳಗೆ ನಮೂದಿಸಿರುವ ಮಹಾಶಯರುಗಳನ್ನು/ಸಂಸ್ಥೆಗಳನ್ನು ಸಂಪರ್ಕಿಸಿ :[ಬದಲಾಯಿಸಿ]

೧. Pathak R.C. (1946, Reprint 2000). The Standard Dictionary of the Hindi Language, Varanasi: Bargava Book Depot,pp. 300,680

2. Bombay Dabbawalas go high-tech.

3. Amberish K Diwanji, "Dabbawallahs: Mumbai's best managed business", Rediff.com, November 4, 2003.

4. In India, Grandma Cooks, They Deliver.

5. BBC News: India's tiffinwalas fuel economy.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  • Official Website of the Mumbai Dabbawalas
  • Thakker, Pradip, Mumbai's amazing Dabbawalas, rediff.com, 11 November 2005
  • Shekhar Gupta, Our computer is our head and our Gandhi cap is the cover to protect it from the sun or rain,
  • Indian Express, Walk the Talk, NDTV 24x7.
  • Hart, Jeremy. "The Mumbai working lunch", The Independent Online, The Independent group, London, 2006-03-19. Retrieved on 2007-03-20.
  • "Indian lunchbox carriers to attend the Royal nuptials", Evening Standard (London), Associated Newspapers Ltd, 2005-04-05. Retrieved on 2007-03-20.
  • Retrieved from "http://en.wikipedia.org/wiki/Dabbawala"
  • http://en.wikipedia.org/wiki/Image:Dabba.jpg.