ವಿಷಯಕ್ಕೆ ಹೋಗು

ಮುಂಬೈನ ಮಹಾಲಕ್ಷ್ಮಿ ದೇವಸ್ಥಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಹಾಲಕ್ಷ್ಮಿ ದೇವಸ್ಥಾನದ ಪ್ರವೇಶದ್ವಾರ

ಮಹಾಲಕ್ಷ್ಮಿ ದೇವಸ್ಥಾನವು ಭಾರತದ ಮುಂಬೈ ನಗರದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಇದು ದೇವಿ ಮಹಾತ್ಮ್ಯಂನ ಪ್ರಧಾನ ದೇವತೆ ಮಹಾಲಕ್ಷ್ಮಿಗೆ ಸಮರ್ಪಿತವಾಗಿದೆ. ಈ ದೇವಸ್ಥಾನವನ್ನು ೧೮೩೧ ರಲ್ಲಿ ಹಿಂದೂ ವ್ಯಾಪಾರಿ ಧಕ್ಜಿ ದಾದಾಜಿ (೧೭೬೦-೧೮೪೬) ನಿರ್ಮಿಸಿದರು. [೧]

ಇತಿಹಾಸ[ಬದಲಾಯಿಸಿ]

೧೭೮೫ ರ ಸುಮಾರಿನಲ್ಲಿ ನಿರ್ಮಿಸಲಾದ ಈ ದೇವಾಲಯದ ಇತಿಹಾಸವು ಹಾರ್ನ್‌ಬಿ ವೆಲ್ಲಾರ್ಡ್‌ನ ಕಟ್ಟಡದೊಂದಿಗೆ ಸಂಪರ್ಕ ಹೊಂದಿದೆ. ವೆಲ್ಲಾರ್ಡ್‌ನ ಸಮುದ್ರದ ಗೋಡೆಯ ಭಾಗಗಳು ಎರಡು ಬಾರಿ ಕುಸಿದ ನಂತರ, ಮುಖ್ಯ ಎಂಜಿನಿಯರುಗಳಾದ ಪಥರೆ ಪ್ರಭು, ರಾಮ್‌ಜಿ ಶಿವಾಜಿ ಪ್ರಭು, ವರ್ಲಿ ಬಳಿಯ ಸಮುದ್ರದಲ್ಲಿ ದೇವಿ ಪ್ರತಿಮೆಯ ಕನಸು ಕಂಡರು. ಆ ಕನಸಿನ ಹುಡುಕಾಟಡದಲ್ಲಿ, ಆ ಕನಸನ್ನು ಮರಳಿ ಪಡೆಯುತ್ತ ಅದಕ್ಕಾಗಿ ಒಂದು ದೇವಸ್ಥಾನವನ್ನು ನಿರ್ಮಿಸಿದನು.

ಒಳಗೆ[ಬದಲಾಯಿಸಿ]

ಮಹಾಲಕ್ಷ್ಮಿ ದೇವಸ್ಥಾನದಲ್ಲಿ ತ್ರಿದೇವಿ ದೇವತೆಗಳಾದ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿಯ ಚಿತ್ರಗಳಿವೆ. ಮೂರೂ ಚಿತ್ರಗಳನ್ನು ಮೂಗಿನ ಉಂಗುರಗಳು, ಚಿನ್ನದ ಬಳೆಗಳು ಮತ್ತು ಮುತ್ತಿನ ಹಾರಗಳಿಂದ ಅಲಂಕರಿಸಲಾಗಿದೆ. ಮಹಾಲಕ್ಷ್ಮಿಯ ಚಿತ್ರವು ಮಧ್ಯದಲ್ಲಿ ಕಮಲದ ಹೂವುಗಳನ್ನು ಹಿಡಿದಿರುವಂತೆ ತೋರಿಸಲಾಗಿದೆ. ಈ ದೇವಾಲಯದ ಕಾಂಪೌಂಡ್ ಹಲವಾರು ಅಂಗಡಿಗಳನ್ನು ಹೊಂದಿದ್ದು, ಹೂವಿನ ಹಾರಗಳು ಮತ್ತು ಇತರ ಸಾಮಗ್ರಿಗಳನ್ನು ಭಕ್ತರು ಪೂಜೆಗೆ ಮತ್ತು ನೈವೇದ್ಯಕ್ಕೆ ಬಳಸುತ್ತಾರೆ.

ನವರಾತ್ರಿ ಉತ್ಸವ[ಬದಲಾಯಿಸಿ]

ನವರಾತ್ರಿ ಆಚರಣೆಯ ಸಮಯದಲ್ಲಿ ಭಕ್ತಾದಿಗಳು ದೂರದ ಪ್ರದೇಶಗಳಿಂದ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಈ ಸಂದರ್ಭದಲ್ಲಿ ದೇವಿಯನ್ನುವಿಶೇಶವಾಗಿ ಅಲಂಕರಿಸಲಾಗಿರುತದೆ. ಭಕ್ತಾದಿಗಳು ದೇವಿಗೆ ಪೂಜೆ ಅರ್ಪಿಸುವ ತೆಂಗಿನಕಾಯಿ, ಹೂವುಗಳು ಮತ್ತು ಸಿಹಿತಿಂಡಿಗಳನ್ನು ಹಿಡಿದುಕೊಂಡು ದೀರ್ಘ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕು.

ತಲುಪುವುದು ಹೇಗೆ[ಬದಲಾಯಿಸಿ]

ದೇವಾಲಯವು, ಮಹಾಲಕ್ಷ್ಮಿ ರೈಲು ನಿಲ್ದಾಣದಿಂದ 1 ಕಿಮೀ ದೂರದಲ್ಲಿದೆ.

ತ್ರಯಂಬಕೇಶ್ವರ ದೇವಸ್ಥಾನ ಮತ್ತು ಮಹಾದೇವ ಕಾಲೇಶ್ವರ ದೇವಸ್ಥಾನವು ದೇವಾಲಯದ ಸಮೀಪದಲ್ಲಿದೆ.

ಸಹ ನೋಡಿ[ಬದಲಾಯಿಸಿ]

  • ಮುಂಬೈನ ಇತಿಹಾಸ 

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. "Read the ebook Bombay place-names and street-names; an excursion into the by-ways of the history of Bombay City by Samuel Townsend Sheppard". Archived from the original on 2021-10-03. Retrieved 2021-10-03.