ಮುಂಬೈನ, ಖಡ ಪಾರ್ಸಿ ವಿಗ್ರಹ

ವಿಕಿಪೀಡಿಯ ಇಂದ
Jump to navigation Jump to search

(೧೮೦೮-೧೮೮೭),

ಚಿತ್ರ:Khada parsi.jpg
'ಮುಂಬಯಿನ ಖಡಪಾರ್ಸಿ ಪುಥಳಿ'

'ಮಾನೊಕ್ ಜಿ,' ಅಂದಿನ, ಜಡ್ಜ್ ಮತ್ತು ಮುಂಬಯಿನ ಶೆರೀಫ್[ಬದಲಾಯಿಸಿ]

ಮುಂಬಯಿ ನ, 'ಖಡ ಪಾರ್ಸಿ', ಪ್ರತಿಮೆ,[೧]

 • 'ಶೆಟ್ ಕುರ್ಸೆಟ್ ಜಿ ಮಾನೊಕ್ ಜಿ', ೧೮೬೦ ರಲ್ಲಿ ಸ್ಥಾಪಿಸಲಾಯಿತು. 'ಮಾನೊಕ್ ಜಿ,ಯವರು ಒಬ್ಬ ಸುಪ್ರಸಿದ್ಧ ಪಾರ್ಸಿ ಮತೀಯ, ಹಾಗೂ, ಮುಂಬಯಿ ನಗರದ ಪ್ರತಿಶ್ಠಿತವ್ಯಕ್ತಿಗಳಲ್ಲಿ ಒಬ್ಬರಾಗಿದ್ದವರು. 'ಮಾನೊಕ್ ಜಿ,' ಯವರು, ಜಡ್ಜ್ ಮತ್ತು ಮುಂಬಯಿನ ಶೆರೀಫ್ ಆಗಿದ್ದರು. 'ಖಡ ಪಾರ್ಸಿ ಶಿಲ್ಪ,' ವನ್ನು ಅವರ ಕೊನೆಯ ಮಗ, 'ಮನೊಕ್ ಜಿ ಕುರ್ಸೆಟ್ ಜಿ,' ಯವರು, ೨೦,೦೦೦ ರೂಪಾಯಿಗಳನ್ನು ಕೊಟ್ಟು ತಮಗೆ ಬೇಕಾದಂತೆ ಹೇಳಿ ಮಾಡಿಸಿದರು.
 • 'ಮಾನೊಕ್ ಜೀ ಕುರ್ ಸೆಟ್ ಜೀ', ರವರು 'ಸ್ಮಾಲ್ ಕಾಸೆಸ್ ಕೋರ್ಟ್,' ನಲ್ಲಿ, 'ಜಡ್ಜ್,' ಆಗಿದ್ದರು. ಖಡ ಎಂದರೆ, ಲೋಹದ ಪ್ರತಿಮೆ ಎಂದರ್ಥ. ಕೆಲವರು ನಿಂತಿರುವ ಪಾರ್ಸಿ ಎಂದು ವ್ಯಾಖ್ಯಾನಿಸುತ್ತಾರೆ. ನಿಂತಿರುವುದು ಸರಿಯಾದ ಮಾತು. ಆದರೆ ಅದರ ನಿಜವಾದ ಅರ್ಥ, ಲೋಹದ ಪ್ರತಿಮೆ ಎಂದು. 'ಅಲೆಕ್ಸಾಂಡ್ರ ಹುಡುಗಿಯರ ಇಂಗ್ಲೀಷ್ ಹೈಸ್ಕೂಲ್,' ಕಟ್ಟಿಸಿದರು. ತದನಂತರ, ಈ 'ಪುಥಳಿ,' ಯನ್ನು ಅವರ ಪರಿವಾರದವರು, ಬೃಹನ್ ಮುಂಬಯಿ ನಗರಪಾಲಿಕೆಗೆ 'ಉಡುಗೊರೆ,' ಯಾಗಿ, ಕೊಟ್ಟರು. (BMC)
 • ಅದರ ಮುತುವರ್ಜಿಯಾಗಿ ನೋಡಿಕೊಳ್ಳಲು, ಬೇಕಾದ ಎರ್ಪಾಡುಗಳನ್ನು ಮಾಡಿಸಿದ್ದರು. ಶ್ರೀ. ಮನೊಕ್ ಜಿ, ಪ್ರತಿಮೆ, ಭೈಕಲ್ಲ ರೊಡ್ ಗಳ ಮಧ್ಯೆ. ಬೆಲ್ಲಾಸಿಸ್, ಕ್ಲಾರೆ, ಡಂಕನ್ ಮತ್ತು ರಿಪ್ಪನ್ ರೋಡ್, ಬಳಿ ಅವರ ಜ್ಞಾಪಕಾರ್ಥವಾಗಿ ಸ್ಥಾಪಿಸಿ ದ್ದಾರೆ. (೧೭೬೩-೧೮೪೫), ಆ ದಿನದ, 'ಮೌಂಟ್ ಚಿಲಿ' ಯಲ್ಲಿ ಜರುಗಿದ, 'The original of the fountain, Universal Exhibition', ನ ಸಮಯದಲ್ಲಿ ಚಿಲಿ ದೇಶದ ಸರ್ಕಾರ, ಹಿತ್ತಾಳೆಯಲ್ಲಿ 'ಮಾನೊಕ್ ಜಿ, ಯವರ ಪುಥಳಿಯ ನಮೂನೆಯನ್ನು, ಮಾಡಿಸಿ ಕಳಿಸಲು ಕೋರಿದ್ದರು. ಅದನ್ನು ಲಂಡನ್ ನ ಶಿಲ್ಪಿ, ನಿರ್ಮಿಸಿಕೊಟ್ಟರು.

'ಖಡ ಪಾರ್ಸಿ ಪುಥಳಿ',[ಬದಲಾಯಿಸಿ]

 • ಒಂದು ಶತಮಾನದ ತರುವಾಯ, ಇತಿಹಾಸದ ಪುಟಗಳನ್ನು ತಿರುವು ಹಾಕಿ ನೋಡಿದಾಗ, ಈ ಪ್ರತಿಮೆ, ನವನಾಗರೀಕತೆಯ ಜಾಲದ ಮಧ್ಯೆ ಸಿಕ್ಕಿಹಾಕಿಕೊಂಡಂತೆ ನಿಂತಿದೆ. ಇಂದಿನ ನವನಾಗರೀಕತೆಯ ಮಧ್ಯೆ, ಪುರಾತನ ಮುಂಬಯಿನ ನಂಟನ್ನು ಪ್ರತಿನಿಧಿಸುತ್ತಿದೆ. ಹಿಂದು ಉಡುಪನ್ನು ಧರಿಸಿದ, 'ಶೆಟ್ ಕುರ್ಸೆಟ್ ಜಿ ಮಾನೊಕ್ ಜಿ,' ಯವರ ಕೈನಲ್ಲಿ, ಪಾರ್ಸಿ ಧರ್ಮದ ಪವಿತ್ರ ಗ್ರಂಥ, 'ಆವೆಸ್ತ', ದ ಒಂದು ಪ್ರತಿಯಿದೆ. ಪ್ರತಿಮೆಯ ಕೆಳಭಾಗದಲ್ಲಿ 'Trust in God and be not daunted,' ಎಂದು ಬರೆದಿದೆ.
 • ಮನೊಕ್ ಜಿ ರವರ, ಪುಥಳಿಯ ಸುತ್ತಲೂ ೪ ದೊಡ್ಡ ದೀಪಗಳಿವೆ. ಸೊಂಟದ ಮಟ್ಟದಲ್ಲಿ ಈಗಲೂ ಚೆನ್ನಾಗಿ ಕಾಣಿಸುತ್ತವೆ. ಕೆಳಭಾಗದಲ್ಲಿ ೪ ದೀಪಗಳು ಇರಬೇಕು. ಆದರೆ ಅವು, ಈಗ ಕಾಣಿಸುತ್ತಿಲ್ಲ. '(Grade-I Heritage)' ಎಂದು ಪರಿಗಣಿಸಲಾಗಿದೆ. ರಸ್ತೆಯಲ್ಲಿ ಹೋಗಿಬರುವ, ಭಿಕ್ಷುಕರು, ಮತ್ತು ದಾರಿಹೋಕರುಗಳು, ಹಾಕರ್ ಗಳು, ಒಗೆದ ಬಟ್ಟೆಗಳನ್ನು ವಿಗ್ರಹದ ಮೇಲೆ ಹಾಕಿ ಒಣಗಿಸಲು ಉಪಯೋಗಿಸುತ್ತಿದ್ದಾರೆ.
 • ಕೆಲವರು ಭಿತ್ತಿ-ಚಿತ್ರಗಳನ್ನು ಅದರ ಮೇಲೆ ಅಂಟಿಸುತ್ತಾರೆ. ಶೆಟ್ ಕುರ್ಸೆಟ್ ಜಿ ಮನೊಕ್ ಜಿ', ರವರು ಬಹಳ ವರ್ಷಗಳಿಂದ, ಬಿಸಿಲು, ಮಳೆಗಳ ಮಧ್ಯೆ, ನಿಂತಿದೆ. ಮೇಲಾಗಿ ನೆರಳಿಗೆ ಯಾವ ಗಿಡಮರಗಳನ್ನೂ ನೆಟ್ಟಿಲ್ಲ. ಇತ್ತೀಚಿನ ದಿನಗಳಲ್ಲಿ, 'ಭೈಖಲ್ಲಾ ಇಲಾಖೆ, 'ಯ ಪ್ರದೇಶದಲ್ಲಿ ಎರಡು 'ಫ್ಲ್ ಓವರ್,' ಗಳನ್ನು ಕಟ್ಟಲಾಗಿದ್ದು, ಪ್ರತಿಮೆ ಸ್ವಲ್ಪ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿರುವಂತೆ ಭಾಸವಾಗುತ್ತದೆ.

" ಬಿ.ಎಮ್.ಸಿ", ಆದ್ಯತೆ ಕೊಡುತ್ತಿದೆ[ಬದಲಾಯಿಸಿ]

 • ಈಗ 'ಮುನಿಸಿಪಲ್ ಅಧಿಕಾರಿವರ್ಗ', ಈ ಪ್ರತಿಮೆಯನ್ನು 'eight Grade-I heritage,' ಎಂದು ನಿರ್ಧರಿಸಿದೆ. ಪಟ್ಟಣದ ಮಾನವನಿರ್ಮಿತ ಕುಶಲವಸ್ತುಗಳು 'ಖಡ ಪಾರ್ಸಿ,' ಯ ಪ್ರತಿಮೆ, ಮತ್ತು, ಉಳಿದ, ೭ ನೀರಿನಕಾರಂಜಿಗಳು, ಮತ್ತು ಮುಂಬಯಿ ನಗರದ, ("ಪ್ಯೌಉಸ್)," 'ಪೀಯೂಶ್, ಗಳನ್ನು ಹಿಂದಿನಂತೆಯೇ ಸಂರಕ್ಷಿಸಲು ಯೋಜನೆಯನ್ನು ಸಿದ್ಧಪಡಿಸುತ್ತಿದ್ದಾರೆ. ಮುಂಬಯಿನಲ್ಲಿ ಪ್ರತಿಮೆಗಳಿಗೇನು ಕಮ್ಮಿಯಿಲ್ಲ.
 • ಕೆಲವು ಪ್ರತಿಮೆಗಳು, ರಸ್ತೆಯ ಅಕ್ಕ-ಪಕ್ಕಗಳಲ್ಲಿ ಹೆಚ್ಚು ವಾಹನಗಳ ಓಡಾಟದ ಮಧ್ಯೆ ಸಿಕ್ಕಿಹಾಕಿಕೊಂಡು ಶಿಥಿಲವಾಗಿವೆ ; ಅಥವಾ ರೋಡ್ ಕ್ರಾಸಿಂಗ್ ಜಾಗದಲ್ಲಿ, ಜನಸಂದಣಿಯ ಮಧ್ಯೆ, ರಸ್ತೆಯ ಧೂಳು, ಗದ್ದಲ, ಹಾಗೂ ಜನರ ಉದ್ವಿಜ್ಞ ಜೀವನದ ಆತುರದಲ್ಲಿ, ಕಣ್ಮರೆಯಾಗಿವೆ. ಜನರಿಗೆ ಪರಿಚಿತವಾಗಿರುವ, ಬಾಲಗಂಗಾಧರ್ ತಿಳಕ್, ಮಹದೇವಗೋವಿಂದ ರಾನಡೆ, ವೀರ್ ಸಾವರ್ಕರ್, ಜೆಮ್ ಸೆಟ್ ಜಿ ನುಝರ್ ವಾನ್ ಜಿ ಟಾಟಾ, ಫಿರೋಜ್ ಶ ಮೆಹ್ತಾ, ಮಹಾತ್ಮಗಾಂಧಿ, ಬಾಬಾಸಾಹೇಬ್ ಅಂಬೇಡ್ಕರ್, ರಂತಹ ಕೆಲವು ಮಹಾವ್ಯಕ್ತಿಗಳನ್ನು ಬಿಟ್ಟರೆ, ಬೇರೆ ಪ್ರತಿಮೆಗಳು, ಬಹಳ ಚಿಂತಾಜನಿಕವಾದ ಸ್ಥಿತಿಯಲ್ಲಿವೆ. ಸೇವೆಮಾಡಿದ ಪ್ರಥಮರನ್ನು ಇಂದಿಗೂ ನೆನಪಿಸುತ್ತವೆ. ಈ ಮಹನೀಯರು ನಮ್ಮನಗರಕ್ಕೆ ಕೊಟ್ಟ ಸೇವೆಯನ್ನು ಸ್ಮರಿಸುವುದು, ಎಲ್ಲರ ಆದ್ಯಕರ್ತವ್ಯ.
 • ನಗರಾಡಳಿತ ಕಛೇರಿಯು ಈಗಾಗಲೇ ಕೆಲವು ಸಲಹಾಕಾರರನ್ನು ಕಂಡು ಚರ್ಚಿಸಿ, ಇವುಗಳನ್ನು ಮೊದಲಿನಸ್ಥಿತಿಗೆ ತರುವ ಕಾರ್ಯದ ಬಗ್ಗೆ ಮಾತು-ಕತೆ ನಡೆಸಿದ್ದಾರೆ.'ಟಿ.'ಪಂಕಜ್ ಜೋಶಿ', ದುರಸ್ತಿಯ ಕೆಲಸ ಕೈಗೆ ತೆಗೆದುಕೊಂಡಿದ್ದಾರೆ. ಅತಿ ಹಳೆಯ ಪಾರ್ಸಿ ವಿಗ್ರಹದ, ಗಾಳಿ, ಧೂಳು, ಬಣ್ಣವನ್ನು ಕೆಡಸಿ ವಿಗ್ರಹದ ಮೇಲೆ ಮಾಡಿದ ವಿವರಗಳು ಕಾಣದಷ್ಟು ಹಾಳುಮಾಡಿದೆ. ಕೆಲವು ವಿವರಗಳನ್ನು ನಾವು ಲೈಬ್ರರಿಯಿಂದ ಹುಡುಕಿ ತಿಳಿಯಬೇಕಾಗಿದೆ. ಹತ್ತಿರ ೪ ದೊಡ್ಡ ದೀಪಗಳಿವೆ. ಮೇಲಿನವರೆಗೆ ಅವಿಲ್ಲ. ಹಿತ್ತಾಳೆ ಹೊರಮೈನ ವರ್ಣರಂಜಿತ ನೋಟ ಈಗ ಕಾಣಿಸುತ್ತಿಲ್ಲ. ಸವೆದು ಹೋಗಿದೆ. ಇದರ ಇತಿಹಾಸವನ್ನು ಅಭ್ಯಾಸಮಾಡಿ ಎಲ್ಲವನ್ನು ಮೊದಲಿನಂತೆ, ಸಜ್ಜುಮಾಡಬೇಕಾದ ಅವಶ್ಯಕತೆಯಿದೆ.

'ಮುಂಬಯಿನ ವೈವಿಧ್ಯಮಯರಸ್ತೆವಾಹನಗಳು[ಬದಲಾಯಿಸಿ]

 • ಮುಂಬಯಿನ ೭ ನೀರಿನ ಚಿಲುಮೆಗಳು, ಮತ್ತು 'ಪ್ಯಾಉಸ್,' ನ್ನೂ ರೆಪೇರಿಮಾಡುವ ಆದ್ಯತೆಯಿದೆ. "ರುಸ್ತೊಮ್ ಜಿ ಮುಲ್ಜಿ ಫೌಂಟನ್", "ವೆಲಿಂಗ್ ಡನ್ ಫೌಂಟನ್", 'ಕಾಲ ಚೌಕಿ,'ಜಂಕ್ಷನ್, "ಫ್ಲೋರಾ ಫೌಂಟೆನ್, " ಜಾಗದಲ್ಲಿ ಎತ್ತಿನ ಗಾಡಿ ಗಳು, ಕುದುರೆಗಾಡಿಗಳು, 'ಹಾಥ್ ಗಾಡಿಗಳು', ಇತ್ಯಾದಿಗಳು, ದಿನವೆಲ್ಲಾ ಬಿರುಸಿನಿಂದ ಬೇರೆವಾಹನಗಳ ಜೊತೆಗೆ, ಸುತ್ತುವರೆದಿರುತ್ತವೆ. ಕುದುರೆ, ಎತ್ತುಗಳಿಗೆ, ಕೊನೆಯಪಕ್ಷ, ಕುಡಿಯುವ ನೀರನ್ನು ಒದಗಿಸುವ ವ್ಯವಸ್ಥೆ ಮಾಡುವುದು ಅತ್ಯಾವಶ್ಯಕ.
 • ಮೇವನ್ನು ತಿನ್ನಿಸಲು ಬೇರೆಕಡೆ ವ್ಯವಸ್ಥೆಮಾಡಲಾಗಿದೆ. ಜಾನುವಾರುಗಳಿಗೆ, ಮತ್ತು ಜನರ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆಯ 'ಪ್ಯಾಉಸ್,' ಗಳು. ಗೋಖಲೆ ರಸ್ತೆಯ 'ಪ್ಯಾಉಸ್,' ಅವುಗಳಲ್ಲೊಂದು. ಅಲಕ್ಷಕ್ಕೆ ಗುರಿಯಾಗಿರುವ ಇವನ್ನು ಗಮನಿಸುವುದು ಅತಿಮುಖ್ಯ. 'ಲಾಂಬ,' ರವರು, 'ವೆಲಿಂಗ್ ಡನ್ ಫೌಂಟೆನ್', ಸಮಿತಿಯಲ್ಲಿದ್ದಾರೆ. ಈ ರಿಪೇರಿ ಕೆಲಸಗಳನ್ನು ಬಹಳದಿನಗಳ ಹಿಂದೆಯೇ ಮಾಡಬೇಕಾಗಿತ್ತು.
 • ಮುಂದೆ 'ಖಡ ಪಾರ್ಸಿ ಸ್ಟಾಚ್ಯು' ಗೆ ಮತ್ತು ಫೌಂಟೆನ್ ಗಳಿಗೆ, ಫೌಂಟೆನ್ಸ್, ಪ್ಯಾಉಸ್ ಗಳಿಗೆ ಬಣ್ಣದ ಲೈಟ್ ಗಳನ್ನು ಹಾಕಿ, ಅವುಗಳ ಮಹತ್ವವನ್ನು ಮುಂಬಯಿ ನಗರದ ನಾಗರೀಕರಿಗೆ ಪರಿಚಯಿಸುವ ಕೆಲಸ ನಡೆಯುತ್ತಿದೆ. ಬಿ.ಎಮ್.ಸಿ ಅವಕ್ಕೆ ಫಲಕಗಳನ್ನು ಅಂಟಿಸಿ, ಮಾಹಿತಿ ಗಳನ್ನು ಕೊಡುವ ವಿಚಾರವಿದೆ. ಸುತ್ತಲೂ ಹೂವಿನಗಿಡಗಳನ್ನು ನೆಡುವ, ಕೆಲಸಕ್ಕೆ ಪ್ರಾಮುಖ್ಯತೆ, ಕೊಡಲಾಗುತ್ತಿದೆ. ಇತ್ಯಾದಿ. ಮುಂಬಯಿಕರ್ ಗಳು ಮುಂಬಯಿನ ಇತಿಹಾಸದ ಮಾಹಿತಿಗಳನ್ನು ಅರಸುವಾಗ, ತಿಳಿದು ಬರುವ ವಿಚಾರಗಳಲ್ಲಿ 'ಖಡ ಪಾರ್ಸಿ ವಿಗ್ರಹ'ವೂ ಒಂದು.

ಉಲ್ಲೇಖಗಳು[ಬದಲಾಯಿಸಿ]

 1. The Khada Parsi Monument In Byculla Has Been Restored, Mumbai Boss, JUNE 20, 2014