ಮೀನಾಕ್ಷಿ ರಾಮಚಂದ್ರನ್
ಮೀನಾಕ್ಷಿ ರಾಮಚಂದ್ರನ್ [೧] ಇವರು ಬಹುಮುಖ ವ್ಯಕ್ತಿತ್ವದ ಸಾಹಿತಿ, ಸಂಘಟಕಿ. ಸಾಹಿತ್ಯವು ಭಾಷಾಧ್ಯಾಪಕರ ಒಡನಾಡಿ. ಮಂಗಳೂರಿನ ಪ್ರತಿಷ್ಠಿತ ಬೆಸೆಂಟ್ ಮಹಿಳಾ ವಿದ್ಯಾಸಂಸ್ಥೆಯ ಕನ್ನಡ ವಿಭಾಗದಲ್ಲಿ ೧೯೮೫ ರಿಂದ ೨೦೧೯ರ ವರೆಗೆ ಪ್ರಾದ್ಯಾಪಕರಾಗಿ ಹಾಗೂ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಇವರು ಸಾಹಿತಿ, ಅನುವಾದಕಿ, ವಾಗ್ಮಿ ಹಾಗೂ ಚಿಂತಕಿಯೂ ಆಗಿರುವರು. ಕಲಿಯಬೇಕು; ಕಲಿಸಬೇಕು. ವೃತ್ತಿಯಲ್ಲಿ ಉಪನ್ಯಾಸಕಿ ಆಗಿದ್ದ ಕೆ. ಮೀನಾಕ್ಷಿ ರಾಮಚಂದ್ರ ಅವರು ಕವನ ಕಲಿತು, ಕಲಿಸಿ ಕವಯಿತ್ರಿಯಾಗಿದ್ದರು.
ಹುಟ್ಟು ಮತ್ತು ಬಾಲ್ಯ
[ಬದಲಾಯಿಸಿ]ಮೂಲತಃ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಡಾಲು ಮೇರ್ಕಳದವರಾದ ಇವರು ಕನ್ನಡ, ಮಲಯಾಳಂ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಮಧ್ಯಮ ವರ್ಗದ ನೇಕಾರ ಕುಟುಂಬದಲ್ಲಿ ಹುಟ್ಟಿದ ಇವರ ತಂದೆ ಚಂದು ಚೆಟ್ಟಿಯಾರ್ ಮತ್ತು ತಾಯಿ ಸುಶೀಲ. ಇಬ್ಬರೂ ಸುಶಿಕ್ಷಿತರಾಗಿದ್ದು, ಸಾಹಿತ್ಯಸಕ್ತಿಯುಳ್ಳವರಾಗಿದ್ದರು. ಹೆತ್ತವರಿಗೆ ಒಟ್ಟು ಏಳು ಹೆಣ್ಣು ಮಕ್ಕಳು, ಮೀನಾಕ್ಷಿ ರಾಮಚಂದ್ರನ್ ಇವರು ಐದನೆಯವರು. ಅವರಿಗೆ ನಾಲ್ಕು ಜನ ಅಕ್ಕಂದಿರು ಹಾಗೂ ಇಬ್ಬರು ತಂಗಿಯಂದಿರು. ಅಂದಿನ ಕುಗ್ರಾಮದಲ್ಲಿ ಹುಟ್ಟಿದರೂ ಏಳು ಮಂದಿ ಹೆಣ್ಣು ಮಕ್ಕಳೂ ಶಿಕ್ಷಣ ಪಡೆದು ಉದ್ಯೋಗಕ್ಕೆ ಸೇರಿಕೊಂಡರು.
ಶಿಕ್ಷಣ
[ಬದಲಾಯಿಸಿ]ಮೀನಾಕ್ಷಿಯವರು ಪ್ರಾಥಮಿಕ ಶಿಕ್ಷಣವನ್ನು ತನ್ನ ಹುಟ್ಟೂರಾದ ಚೇವಾರಿನ ಶ್ರೀ ಶಾರದಾ ಎ.ಯು.ಪಿ ಶಾಲೆಯಲ್ಲಿ ಪಡೆದರು. ಪ್ರೌಢ ಶಿಕ್ಷಣವನ್ನು ಪೈವಳಿಕೆಯ ಕಾಯರ್ ಕಟ್ಟೆಯ ಸರಕಾರಿ ಶಾಲೆಯಲ್ಲಿ ಪಡೆದರು. ಎಳವೆಯಲ್ಲಿಯೇ ಕನ್ನಡ ವಿಷಯದಲ್ಲಿ ಆಸಕ್ತಿ ಹೊಂದಿದ್ದ ಮೀನಾಕ್ಷಿಯವರು ಶಾಲೆಯಲ್ಲಿ ನಡೆಯುವ ಸಂಗೀತ, ನೃತ್ಯ, ನಾಟಕ, ಮಾತ್ರವಲ್ಲದೆ ಪ್ರಬಂಧ ಸ್ಪರ್ದಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆಯುತ್ತಿದ್ದರು. ಕ್ರಾಂತಿಕಾರಕ ಮನೋಭಾವವನ್ನು ಬೆಳೆಸಿಕೊಂಡಿದ್ದ ಇವರು ವಿದ್ಯಾರ್ಥಿ ಸಂಘದ ನಾಯಕಿಯೂ ಆಗಿದ್ದರು. ಮೀನಾಕ್ಷಿಯವರ ಕಾಲೇಜು ಶಿಕ್ಷಣವು ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಾಯಿತು. ಅವರು ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ಶ್ರೇಣಿಯೊಂದಿಗೆ ಪಡೆದು ಕನ್ನಡದಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನೂ ಮುಗಿಸಿದ್ದಾರೆ. ಸೋದರ ಮಾವ ರಘು ಮಾಸ್ಟರವರಿಂದ ಸಂಗೀತ ಶಿಕ್ಷಣವನ್ನು ಮತ್ತು ತಾಯಿಯ ಸೋದರ ಸಂಬಂಧಿ ಉಪ್ಪಳ ಕೃಷ್ಣ ಮಾಸ್ಟರವರಿಂದ ನೃತ್ಯ ಶಿಕ್ಷಣವನ್ನೂ ಪಡೆದರು.
ವಿವಾಹ ಮತ್ತು ವೃತ್ತಿ ಜೀವನ
[ಬದಲಾಯಿಸಿ]ಪತಿ ಶ್ರೀ ರಾಮಚಂದ್ರ ಬಿಎಸ್ಎನ್ಎಲ್ ಉದ್ಯೋಗಿ. ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕಿಯಾಗಿ ವೃತ್ತಿಜೀವನ ಪ್ರಾರಂಭ. ಜತೆಗೆ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿಯೂ, ಸಂತ ಅಲೋಶಿಯಸ್ ಸಂಜೆ ಕಾಲೇಜಿನಲ್ಲಿಯೂ ಅರೆಕಾಲಿಕ ಉಪನ್ಯಾಸಕರಾಗಿ ದುಡಿಯುತ್ತಿದ್ದರು.
ಸಾಹಿತ್ಯ ಜೀವನ
[ಬದಲಾಯಿಸಿ]ಬಹುಭಾಷಾ ಪ್ರವೀಣೆಯಾದ ಮೀನಾಕ್ಷಿ ರಾಮಚಂದ್ರನ್ ಇವರು ತುಳು, ಕನ್ನಡ, ಮಲಯಾಳಂ ಹಿಂದಿ ಮತ್ತು ಇಂಗ್ಲೀಷ್ ಬಾಷೆಗಳಲ್ಲಿ ೨೫ ಕಿಂತಲೂ ಅಧಿಕ ಸ್ವತಂತ್ರ ಹಾಗೂ ಅನುವಾದಿತ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಮೂರು ಕೃತಿಗಳ ಸಂಪಾದನೆಯೊಂದಗೆ ಹಲವಾರು ಸ್ಮರಣೆ ಸಂಚಿಕೆಗಳ ಪ್ರಧಾನ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ವಿಭಿನ್ನ ಭಾಷೆಗಳಲ್ಲಿ ಬಿಡಿ ಬಿಡಿಯಾಗಿ ಬರೆದ ಕವಿತೆ, ಕತೆ, ವಿಮರ್ಶೆ ಲೇಖನಗಳು ಹಲವಾರು ಪತ್ತಿಕೆಗಳಲ್ಲಿ ಹಾಗೂ ಪುಸ್ತಕಗಳಲ್ಲಿ ಪ್ರಕಟಗೊಂಡಿವೆ. ಇವರ ಲೇಖನವು ಬೆಂಗಳೂರಿನ ಪದವಿ ತರಗತಿಗೆ ಪಠ್ಯವಾಗಿದೆ. ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಬಹಳಷ್ಟು ವಿಚಾರ ಸಂಕಿರಣಗಳಲ್ಲಿ, ಪ್ರಬಂಧಗಳನ್ನು ಮಂಡಿಸುವುದರೊಂದಿಗೆ ಗೋಷ್ಠಿಗಳ ಅಧ್ಯಕ್ಷತೆ, ದಿಕ್ಸೂಚಿ ಭಾಷಣ, ಸಂಪನ್ಮೂಲ ವ್ಯಕ್ತಿಯಾಗಿಯೂ ಪಾಲುಗೊಂಡಿದ್ದಾರೆ.[೨]
ಕೃತಿಗಳು
[ಬದಲಾಯಿಸಿ]- ಆಧ್ಯಾತ್ಮ ಪಥದ ಕೈಗಂಬ ಶ್ರೀ ನಾರಾಯಣ ಗುರುಗಳು
- ಮಾದರಿ ಶಿಕ್ಷಕಿ, ಸಮಾಜ ಸೇವಕಿ ಕೆ.ಎ.ರೋಹಿಣಿ
- ಕಾಸರಗೋಡಿನ ಸಾಹಿತ್ಯ ತಪಸ್ವಿನಿ ಡಾ. ಪ್ರಮೀಳಾ ಮಾಧವ್
- ಅರವಿಪುರದಿಂದ ಓಂಕಾರೇಶ್ವರದವರೆಗೆ
- ಪುಲಿಯುಡೆ ನಿಳಲ್
- ಅಭಯಾರ್ಥಿಗಳ್
- ಕನ್ನಡ ಮಲಯಾಳಂ ನಿಘಂಟು
- Short History of Manjeshwar Temple
- ಮಾತು ಒಂದು ವಿಸ್ಮಯ
- ತುಳುನಾಡಿನ ದೇವಾಂಗ ಸಮುದಾಯ
- Problems of weavers in Coastal Area
- ಚತುರ್ ವೈದ್ಯ ಭಾಷಾ ಬೋಧಿನಿ
- ಸೆರೆಯ ಹಿಂದಿನ ಅಭಾಗಿನಿಯರ ಕಥೆಗಳು
- ಅವಸ್ಥಾಂತರಂ
- ಜಡಿಮಳೆಯಲ್ಲೋರ್ವ ಜಮೀಲಾ
- ನರಾಧಮರ ನಡುವೆ
- ಶ್ರೀ ನಾರಾಯಣ ಗುರು ಸತ್ಯದರ್ಶನ
- ಶ್ರೀ ಗುರು ಸದ್ದರ್ಶನ
- ದಿವ್ಯ ಶಕ್ತಿ ಬಿಂಬ
- ಆತ್ಮೋಪದೇಶ ಶತಕ
- ಮಲಯಾಳದಲ್ಲಿ ಮಹಿಳಾ ಆತ್ಮಕಥೆಗಳು
- ಭಾರತೀಯರು ಮರೆಯಲಾಗದ ಸಾರಸ್ವತ ವಿದ್ವಾಂಸ ಡಾ, ರಾಮಕೃಷ್ಣ ಗೋಪಾಲ ಭಂಡಾರಕಾರ್
- ತುಳುವರ ಪ್ರಕೃತಿ ಪ್ರೀತಿ
- ಹಳಗನ್ನಡ ಕಾವ್ಯಗಳಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ
- ಕಾಸರಗೋಡಿನ ಕನ್ನಡಿಗ ಕಯ್ಯಾರರ ಕನ್ನಡ ಹೋರಾಟ
ಕವನ ಸಂಕಲನಗಳು
[ಬದಲಾಯಿಸಿ]- ಗೂಡುದೀಪದ ಬೆಳಕಿಗೆ
- ಒಳದನಿ
ಪ್ರಶಸ್ತಿಗಳು
[ಬದಲಾಯಿಸಿ]- ಅಖಿಲ ಭಾರತ ಮಟ್ಟದ ಕಾವ್ಯಪ್ರಶಸ್ತಿ (೨೦೦೩)
- ಸಾಹಿತ್ಯ ಪರಿಷತ್ ಕಥಾ ಪ್ರಶಸ್ತಿ (೨೦೦೯)
- ದೇವರ ದಾಸಿಮಯ್ಯ ಸಹಸ್ರಮಾನೋತ್ಸವ ಪ್ರಶಸ್ತಿ (೨೦೧೧)
- ಕಲ್ಲಚ್ಚು ಪ್ರಶಸ್ತಿ (೨೦೧೪)
- ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ (೨೦೧೯)
- ರೋಟರಿ ರಾಷ್ಟ್ರ ನಿರ್ಮಾತೃ ಪ್ರಶಸ್ತಿ (೨೦೨೩)
ಸಾಮಾಜಿಕ ಜೀವನ
[ಬದಲಾಯಿಸಿ]- ಮಂಗಳೂರಿನ ಕಲಾಭಿ ರಂಗಸಂಸ್ಥೆಯ ಸ್ಥಾಪಕ ಅಧ್ಯಕ್ಷೆ
- ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಅಧ್ಯಕ್ಷೆ
- ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕಿನ ಪಧಾಧಿಕಾರಿ
- ತುಳು ಪರಿಷತ್ತು ಮಂಗಳೂರು ಉಪಾಧ್ಯಕ್ಷೆ
- ಮಂಗಳೂರು ಆಕಾಶವಾಣಿಯ ನಾಟಕ ಹಾಗೂ ಗಮಕ ವಾಚನದ ಬಿ ಗ್ರೇಡ್ ಕಲಾವಿದೆ
ಉಲ್ಲೇಖ
[ಬದಲಾಯಿಸಿ]
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
- ↑ Yashodha Kumari. Bahumukha vyakthithvada sahiti, sanghtaki Dr. Meenakshi Ramachandra. Kannada Sangha Kanthavara(R).
- ↑ https://www.vijayavani.net/category/district/book-release-ceremony-3-1