ವಿಷಯಕ್ಕೆ ಹೋಗು

ಮೀನಾಕ್ಷಿ ರಾಧಾಕೃಷ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನರ್ತನ ವಲಯದಲ್ಲಿ ಹಲವಾರು ಸುಪ್ರಸಿದ್ಧ ನೃತ್ಯ ಕೋವಿದರನ್ನು ತಯಾರುಮಾಡಿ ರಾಷ್ಟ್ರಕ್ಕೆ ಸಮರ್ಪಿಸಿದ ಮೈಸೂರು ಶೈಲಿಯ ಗುರು, ಕೋಲಾರದ ಕಿಟ್ಟಪ್ಪನವರ ಮೊಮ್ಮಗಳಾದ ಮೀನಾಕ್ಷಿ ರಾಧಾಕೃಷ್ಣ ತನ್ನ ಅಜ್ಜನವರ ನೃತ್ಯ ಸಂಪ್ರದಾಯ ಪರಂಪರೆಯನ್ನು ಅತ್ಯುತ್ತಮ ರೀತಿಯಲ್ಲಿ ಮುಂದುವರೆಸಿಕೊಂಡು ಹೋದರು. ಮೀನಾಕ್ಷಿ ತನ್ನ ೭ ನೆಯ ವಯಸ್ಸಿನಲ್ಲೇ ತನ್ನ ದೊಡ್ಡಪ್ಪ, 'ನಟುವನಾರ್ ಗುಂಡಪ್ಪ'ನವರ ಮಾರ್ಗದರ್ಶನದಲ್ಲಿ ಭರತನಾಟ್ಯವನ್ನು ಅಭ್ಯಾಸಮಾಡಿದರು. ಅವರ ರಂಗ ಪ್ರವೇಶ, ೧೯೫೪ ರಲ್ಲಿ ಜರುಗಿತು. ಮುಂದೆ 'ಗುರು, ಸಿ. ರಾಧಾಕೃಷ್ಣನ್' ರವರ ಬಳಿ ತಮ್ಮ ನೃತ್ಯ ಶಿಕ್ಷಣ ಮುಂದುವರೆಸಿ, ಅವರನ್ನೇ ವಿವಾಹವಾದರು. 'ಭರತ ಕಲಾಮಣಿ 'ಎಂದು ಪ್ರಸಿದ್ಧರಾಗಿದ್ದ ಸಿ.ರಾಧಾಕೃಷ್ಣನ್ ರವರು, ಮೀನಾಕ್ಷಿಯವರ ಕಲಾರಾಧನೆಯಿಂದ ಪ್ರಸನ್ನರಾದರು. ಸತಿ-ಪತಿಯರು, ಭಾರತದಾದ್ಯಂತ ಹಲವಾರು ನೃತ್ಯ ಪ್ರದರ್ಶನಗಳನ್ನು ಪ್ರದರ್ಶಿಸಿ, ರಸಿಕರ ಮನಸ್ಸನ್ನು ಸೂರೆಗೊಂಡರು.

ಚಿತ್ರರಂಜನಿ ಕಲಾಕ್ಷೇತ್ರ

[ಬದಲಾಯಿಸಿ]

ಪತಿಯವರ ಜೊತೆಗೂಡಿ 'ಚಿತ್ರರಂಜನಿ' ಯೆಂಬ ನೃತ್ಯ ಶಾಲೆಯನ್ನು ಸ್ಥಾಪಿಸಿ, ಅನೇಕ ಶ್ರೇಷ್ಠ ಕಲಾವಿದರನ್ನು ತಯಾರುಮಾಡಿದರು. ಈ ದಂಪತಿಗಳ ವಿಶೇಷ ಕೊಡುಗೆಯೆಂದರೆ,

  • ಆಲಯ ನೃತ್ಯಗಳು
  • ಶ್ರೀಕರಾದಿ ೩೫ ತಾಳಗಳ ತಿಲ್ಲಾನಗಳು.

ಒಳ್ಳೆಯ ಗಾಯಕಿ

[ಬದಲಾಯಿಸಿ]

'ವಿದುಷಿ ಮೀನಾಕ್ಷಿ ರಾಧಾಕೃಷ್ಣ 'ಅತ್ಯುತ್ತಮ ಗಾಯಕಿ. ಮದರಾಸ್ ಆಕಾಶವಾಣಿ ಮತ್ತು ಹಲವಾರು ಗಾಯನ ಸಬೆಗಳಲ್ಲಿ ಒಳ್ಳೆಯ ಸಂಗೀತ ಕಾರ್ಯಕ್ರಮಗಳನ್ನು ಕೊಡುತ್ತಾ ಬಂದಿದ್ದಾರೆ. ನಟನೆಯಲ್ಲೂ ಒಳ್ಳೆಯ ಪರಿಶ್ರಮವನ್ನು ಹೊಂದಿದ ಮೀನಾಕ್ಷಿಯವರು, ನಾಟಕಗಳಲ್ಲಿ ಪಾತ್ರವಹಿಸಿದ್ದಾರೆ. ಚಲನ ಚಿತ್ರವಲಯದಲ್ಲೂ ನೃತ್ಯ ಪಾತ್ರಗಳಲ್ಲಿ ಕೈಯ್ಯಾಡಿಸಿದ್ದಾರೆ. ಎಂ. ವಿ. ಸುಬ್ಬಯ್ಯ ನಾಯ್ಡುರವರ ತಂಡ ಮತ್ತು ರಾಜಕುಮಾರ್ ರವರೊಂದಿಗೆ ಪ್ರಮುಖ ಪಾತ್ರದಲ್ಲಿ ಪಾಲ್ಗೊಂಡಿದ್ದರು.

ಹಂಸಗೀತೆ ಚಿತ್ರದಲ್ಲಿ

[ಬದಲಾಯಿಸಿ]

ಸುಪ್ರಸಿದ್ಧ ಹಿರಿಯ ನಟ, ನಿರ್ದೇಶಕ, ಜಿ.ವಿ.ಅಯ್ಯರ್ ರವರು ನಿರ್ಮಿಸಿದ, ಹಂಸಗೀತೆ ಎಂಬ ಕನ್ನಡ ಚಲನ ಚಿತ್ರದಲ್ಲಿ ನೃತ್ಯಾಂಗನೆಯ ಪಾತ್ರದಲ್ಲಿ ಮಿಂಚಿದ್ದಾರೆ. ಆ ಚಿತ್ರದ ಸಂಗೀತ ನಿರ್ದೇಶನವನ್ನು ಮೀನಾಕ್ಷಿಯವರ ಪತಿ, ರಾಧಾಕೃಷ್ಣರೇ ನಿರ್ವಹಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಒಂದು ಶಾಖೆ

[ಬದಲಾಯಿಸಿ]

ಹೊಸ ಶಾಖೆಯೊಂದನ್ನು ತೆರೆದು ಮಕ್ಕಳಿಗೆ ನಾಟ್ಯವನ್ನು ಕಲಿಸುತ್ತಿದ್ದಾರೆ.

ಪ್ರಶಸ್ತಿ, ಬಿರುದುಗಳು

[ಬದಲಾಯಿಸಿ]
  • ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿ ತನ್ನ ೧೯೯೨-೯ರ ಸಾಲಿನ ಪ್ರಶಸ್ತಿಯನ್ನು ನೀಡಿ “ಕರ್ನಾಟಕ ಕಲಾ ತಿಲಕ” ಬಿರುದಿನಿಂದ ಗೌರವಿಸಿದೆ