ಮಿಮಿಕ್ರಿ ಮಹೇಶ್
Mimicry Mahesh | |
---|---|
ಜನನ | ಏಪ್ರಿಲ್ 5, 1980 ಗರ್ಗೇಶ್ವರಿ |
ಮಿಮಿಕ್ರಿ ಮಹೇಶ್ ಎಂದೇ ಪ್ರಖ್ಯಾತಿ ಪಡೆದಿರುವ ಮಹೇಶ್ ಕುಮಾರ್ ಎಂ. ಸಿ. ಅವರು ಧ್ವನಿ ತರಬೇತಿ ಶಾಲೆಯಾದ ದಿ ಗೋಲ್ಡನ್ ವಾಯ್ಸ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಆಗಿದ್ದು ಕರ್ನಾಟಕದ ಹಾಸ್ಯನಟ [೧], ಧ್ವನಿ ಕಲಾವಿದ, ಮತ್ತು ನಟ.
ಮಹೇಶ್ ಅನೇಕ ಹಾಸ್ಯ ಆಲ್ಬಂಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಸುವರ್ಣ ನ್ಯೂಸ್ ಕನ್ನಡದಲ್ಲಿ ಪ್ರಸಾರವಾದ ದೂರದರ್ಶನ ಕಾರ್ಯಕ್ರಮ ಉಡೀಸ್ ಅನ್ನು ನಡಿಸಿದ್ದಾರೆ. 2016 ರಲ್ಲಿ ಮಿಮಿಕ್ರಿ ದಯಾನಂದ್ ಮತ್ತು ಸಿಹಿ ಕಹಿ ಚಂದ್ರು ಅವರೊಂದಿಗೆ ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾದ ಹಾಸ್ಯದ ರಸ ಎಂಬ ಕಿರುತೆರೆ ಶೋನಲ್ಲಿ ನಟಿಸಿದ್ದಾರೆ ಮತ್ತು ಕಾಮಿಡಿ ಕಿಲಾಡಿಗಳು ಮತ್ತು ಮಜಾ ಟಾಕೀಸ್ ಸೃಜನ್ ಅವರೊಂದಿಗೆ ಮಮ್ಮಿ ನಂ. 1 ಶೋ ನಲ್ಲಿ ಪಾಲ್ಗೊಂಡಿದ್ದಾರೆ. ಅವರು ಪ್ರಮುಖ ಮಿಮಿಕ್ರಿ ಕಲಾವಿದರು ಮತ್ತು ಮಿಮಿಕ್ರಿ ದಯಾನಂದ್, ಸುಧಾ ಬರಗೂರು, ಪ್ರೊ.ಕೃಷ್ಣೇಗೌಡ, ಪ್ರಾಣೇಶ್, ಮಾಸ್ಟರ್ ಹಿರಣ್ಣಯ್ಯ, ಮಿಮಿಕ್ರಿ ಗೋಪಿ ಮುಂತಾದ ಸ್ಟ್ಯಾಂಡಪ್ ಹಾಸ್ಯಗಾರರೊಂದಿಗೆ[೨] ವೇದಿಕೆ ಹಂಚಿಕೊಂಡಿದ್ದಾರೆ. ಪ್ರತಿ ವರ್ಷ ಗೋಲ್ಡನ್ ವಾಯ್ಸ್ ನ ವಾರ್ಷಿಕೋತ್ಸವದ ಅಂಗವಾಗಿ, ಆಗಸ್ಟ್ ತಿಂಗಳಿನಲ್ಲಿ ಗೋಲ್ಡನ್ ವಾಯ್ಸ್ ಧ್ವನಿ ಹಬ್ಬ ಮತ್ತು ಮಿಮಿಕ್ರಿ ಮಹಾಮೇಳವನ್ನು ಆಚರಿಸಲಾಗುತ್ತದೆ. 2022ರ ಆಗಸ್ಟ್ 15ರಿಂದ 21ರವರೆಗೆ ಇದೇ ಧ್ವನಿ ಹಬ್ಬವನ್ನು ಕರ್ನಾಟಕಾದ್ಯಂತ ಧ್ವನಿ ಕಲಾವಿದರು ಮತ್ತು ಮಿಮಿಕ್ರಿ ದಿಗ್ಗಜರನ್ನು ಒಂದೇ ವೇದಿಕೆ ಮೇಲೆ ಸೇರಿಸುವ ಸಲುವಾಗಿ "ಕರ್ನಾಟಕ ಧ್ವನಿ ಹಬ್ಬ" Archived 2022-10-24 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ಮಿಮಿಕ್ರಿ ಮಹಾಮೇಳವನ್ನು ಆಚರಿಸಲಾಗುತ್ತಿದೆ.[೩]
ಆರಂಭಿಕ ಜೀವನ
[ಬದಲಾಯಿಸಿ]ಮಹೇಶ್ ಕುಮಾರ್ ಅವರು ಮೈಸೂರು ಸಮೀಪದ ಗರ್ಗೇಶ್ವರಿಯಲ್ಲಿ 5 ಏಪ್ರಿಲ್ 1980 ರಂದು ಜನಿಸಿದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಂಡ್ಯದ ಅಭಿನವ ಭಾರತಿ ವಿದ್ಯಾ ಕೇಂದ್ರದಲ್ಲಿ (ಎಬಿವಿಕೆ) ಪಡೆದರು ಮತ್ತು ಅವರು P.E.S ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. 2006 ರಿಂದ ಜುಲೈ 2018 ರವರೆಗೆ ಬೆಂಗಳೂರಿನ ಸಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಎಚ್ಒಡಿ ಆಗಿದ್ದರು. ಅವರು ಮಿಮಿಕ್ರಿ ಮತ್ತು ಧ್ವನಿ ನಟನೆಗೆ ಬಲವಾಗಿ ಆಕರ್ಷಿತರಾದರು ಮತ್ತು ಅವರು ತಮ್ಮ ಕೆಲಸವನ್ನು ಬಿಟ್ಟು ಆಗಸ್ಟ್ 2018 ರಲ್ಲಿ "ದಿ ಗೋಲ್ಡನ್ ವಾಯ್ಸ್" ಸಂಸ್ಥೆಯನ್ನು ಪ್ರಾರಂಭಿಸಿದರು.
ಫಿಲ್ಮೋಗ್ರಫಿ
[ಬದಲಾಯಿಸಿ]ಮಹೇಶ್ ಅವರು ಇತ್ತೀಚೆಗೆ ಒಂಭತ್ತನೇ ದಿಕ್ಕು [೪]ಎಂಬ ಸಿನಿಮಾದಲ್ಲಿ ನಟಿಸಿದ್ದು, ಪಾಪ ಪಾಂಡು, ಸಿಲ್ಲಿ ಲಲ್ಲಿ, ಚಿರಸ್ಮರಣೆ, ಉಗೆ ಉಗೆ ಮಾಧೇಶ್ವರ ಮುಂತಾದ ಧಾರಾವಾಹಿಗಳಲ್ಲಿ ಮತ್ತು ಉಪೇಂದ್ರರ ಸೂಪರ್, ಗಿರೀಶ್ ಕಾಸರವಳ್ಳಿ ನಿರ್ದೇಶನದ ಕೂರ್ಮಾವತಾರ, ಸಖಿ, ಮಾಸ್ಟರ್ ಪೀಸ್, ವಾಸ್ಕೋಡಿಗಾಮ, ರವಿ ಹಿಸ್ಟರಿ, ಇಲ್ಲದೇ ಇರುವ, ಭರತ ಬಾಹುಬಲಿ, ಕೌರ್ಯ, ಡಿಎಡಿ (ದೇವರಾಜ್ ಅಲಿಯಾಸ್ ಡೆವಿಡ್), ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ, ಗ್ರೇ ಗೇಮ್ಸ್ ಮುಂತಾದ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಅವರು ಕಮಾಂಡೋ, ಜಗಮಲ್ಲ, ಬಿಗಿಲ್ ಮುಂತಾದ ಚಲನಚಿತ್ರಗಳಿಗೆ ತಮಿಳಿನಿಂದ ಕನ್ನಡಕ್ಕೆ ಡಬ್ಬಿಂಗ್ ಮಾಡಿದ್ದಾರೆ ಮತ್ತು ಡಿಸ್ಕವರಿ ಕನ್ನಡ ಸಾಕ್ಷ್ಯಚಿತ್ರಗಳಿಗೆ ಧ್ವನಿ ನೀಡಿದ್ದಾರೆ. ಅವರು ವಾಟರ್ ಬಾಟಲ್, ವಿಷ, ಬಾಂಬರ್ಸ್, ದೇವರು, ಬ್ರಹ್ಮ, ಬ್ಯಾಕ್ಟೀರಿಯಾದಂತಹ ವೆಬ್ ಸರಣಿಗಳಲ್ಲಿ ವಿವಿಧ ಪಾತ್ರಗಳಿಗೆ ಮತ್ತು ಪ್ರಾಜೆಕ್ಟ್ 9191, ಉಂದೇಖಿ 2, ಕಟ್ಮಂಡು ಕನೆಕ್ಷನ್ ಮತ್ತು ಮಹಾರಾಣಿಯಂತಹ ಕೆಲವು ಸೋನಿಲಿವ್ ಸರಣಿಗಳಿಗೆ ಧ್ವನಿ ನೀಡಿದ್ದಾರೆ ಮತ್ತು ಜನಪ್ರಿಯ ಕನ್ನಡ ಡಬ್ಬಿಂಗ್ ಧಾರಾವಾಹಿಗಳಾದ ರಾಧಾ ಕೃಷ್ಣ[೫], CID, ಲಕ್ಷ್ಮಿಯಂತಹವುದಕ್ಕೆ ಧ್ವನಿಯಾಗಿದ್ದಾರೆ.
ದಿ ಗೋಲ್ಡನ್ ವಾಯ್ಸ್
[ಬದಲಾಯಿಸಿ]ಮಹೇಶ್ ಅವರು "ದಿ ಗೋಲ್ಡನ್ ವಾಯ್ಸ್" ಎಂಬ ತಮ್ಮದೇ ಆದ ಧ್ವನಿ ತರಬೇತಿ ಶಾಲೆಯನ್ನು ಪ್ರಾರಂಭಿಸಿದ್ದು, ಇದರಲ್ಲಿ ಅವರು ಮಿಮಿಕ್ರಿ, ಸ್ಟ್ಯಾಂಡಪ್ ಕಾಮಿಡಿ, ವಾಯ್ಸ್ ಓವರ್, ವಾಯ್ಸ್ ಆಕ್ಟಿಂಗ್, ಡಬ್ಬಿಂಗ್, ಸೌಂಡ್ ಡಿಸೈನ್ ಮತ್ತು ವಾಯ್ಸ್ ಕಲ್ಚರ್ ಕುರಿತು ಸಂಪನ್ಮೂಲ ಕಾರ್ಯಾಗಾರಗಳನ್ನು, ಆಡ್ವಾನ್ಸ್ಡ್ ಕೋರ್ಸ್‌ಗಳನ್ನು ನಡೆಸುತ್ತಾರೆ. ಫೆಬ್ರವರಿ 2022 ರವರೆಗೆ ಅವರು ದಿ ಗೋಲ್ಡನ್ ವಾಯ್ಸ್ ಮೂಲಕ 360 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ[೬].
ದಿ ಗೋಲ್ಡನ್ ವಾಯ್ಸ್ ನಡೆಸುವ ಹಲವಾರು ಕೋರ್ಸ್‌ಗಳು ಹಾಗೂ ಕಾರ್ಯಾಗಾರಗಳಲ್ಲಿ ಒಂದಾದ ಜಿ. ವಿ. ಮೆಗಾ ಹ್ಯಾಕಥಾನ್[೭] ಧ್ವನಿ ಕಲಾವಿದರಿಗೆ ಒಂದು ಮೂರು ತಿಂಗಳ ಜ್ಞಾನ ಭರಿತ ಕಾರ್ಯಾಗಾರ ಹಾಗೂ ಸ್ಪರ್ಧೆಯಾಗಿದ್ದು ಅನೇಕ ಧ್ವನಿ ದಿಗ್ಗಜರು ಇದರಲ್ಲಿ ಭಾಗವಹಿಸುವವರಿಗೆ ಧ್ವನಿ ಕ್ಷೇತ್ರ, ವೈಯಕ್ತಿಕ ಜೀವನ, ದುಡಿಮೆ, ಎಲ್ಲದರ ಕುರಿತು ಸೆಷನ್ಸ್ ತೆಗೆದುಕೊಳ್ಳುತ್ತಾರೆ.
ಪ್ರಶಸ್ತಿಗಳು ಮತ್ತು ಮನ್ನಣೆಗಳು
[ಬದಲಾಯಿಸಿ]- 2006 ರಲ್ಲಿ ಬಿಗ್ 92.7 ಎಫ್‌ಎಂ ನಡೆಸಿದ ರಾಜ್ಯ ಮಟ್ಟದ ಮಿಮಿಕ್ರಿ ಸ್ಪರ್ಧೆಯಾದ ಡೂಪ್ಲಿಕೇಟ್ ನ್ಂಬರ್. 1 ಪ್ರಶಸ್ತಿ.
- ಬಿಗ್ 92.7 FM ಗಾಗಿ ಕಾಮಿಡಿ RJ ಆಗಿ ಆಯ್ಕೆಯಾಗಿದ್ದಾರೆ.
- ಮೇ ೩, ೨೦೨೪ರಂದು ನಡೆದ ಯೂನಿಕಾರ್ನ್ ಕೋಚ್ ಸಮಿಟ್‌ನಲ್ಲಿ ಎಮರ್ಜಿಂಗ್ ಯೂನಿಕಾರ್ನ್ ಪ್ರಶಸ್ತಿ.
- ೧ ಏಪ್ರಿಲ್ ೨೦೨೪ರಂದು ಚೆನ್ನೈನಲ್ಲಿ ನಡೆದ ಇಂಟರ್‌ನೆಟ್ ಲೈಫ್‍ಸ್ಟೈಲ್ ಹಬ್‍ನಲ್ಲಿ ಅತ್ಯುತ್ತಮ ಆನ್‍ಲೈನ್ ಕೋಚಿಂಗಿಗೆ ಹಾಲ್ ಆಫ್ ಫೇಮ್ ಪ್ರಶಸ್ತಿ.
ಉಲ್ಲೇಖಗಳು
[ಬದಲಾಯಿಸಿ]- ↑ https://www.youtube.com/watch?v=1CWBhFd4ZqI
- ↑ https://vijaykarnataka.com/news/mandya/mandya-madduru-vidyavrdhaka-trust-diamond-jubllee-feb-18th/articleshow/57169695.cms?minitv=true
- ↑ "ಆರ್ಕೈವ್ ನಕಲು". Archived from the original on 2022-08-16. Retrieved 2022-08-16.
- ↑ https://www.imdb.com/name/nm13502562/
- ↑ "ಆರ್ಕೈವ್ ನಕಲು". Archived from the original on 2022-03-04. Retrieved 2022-03-04.
- ↑ https://web.archive.org/web/20220305173921/https://www.kalamadhyama.com/post/%E0%B2%AE-%E0%B2%AE-%E0%B2%95-%E0%B2%B0-%E0%B2%A6%E0%B2%AF-%E0%B2%A8-%E0%B2%A6-%E0%B2%85%E0%B2%B5%E0%B2%B0-%E0%B2%A1%E0%B2%AC-%E0%B2%AC-%E0%B2%97-%E0%B2%85%E0%B2%A8-%E0%B2%AD%E0%B2%B5%E0%B2%97%E0%B2%B3
- ↑ "ಆರ್ಕೈವ್ ನಕಲು". Archived from the original on 2023-01-24. Retrieved 2023-01-24.