ಮಿತ್ರವಿಂದಾ ಕುಲಕರ್ಣಿ

ವಿಕಿಪೀಡಿಯ ಇಂದ
Jump to navigation Jump to search
ಮಿತ್ರವಿಂದಾ ಕುಲಕರ್ಣಿ
ಜನನ೧೯೪೪ ರ ಜುಲೈ ೧೭
ಧಾರವಾಡ
ರಾಷ್ಟ್ರೀಯತೆಭಾರತೀಯ

ಕರ್ನಾಟಕದ ಉತ್ತಮ ಬರಹಗಾರ್ತಿಯಲ್ಲೊಬ್ಬರು.ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದವರು. ಇವರ ಮೊದಲ ಸಾಹಿತ್ಯವು ಕಥಾ ಪ್ರಕಾರದಲ್ಲಿದೆ. ಇವರ ಕೆಲವು ಸಾಹಿತ್ಯಗಳು ಹಿಂದಿ ಭಾಷೆಯಿಂದ ಅನುವಾದಕೊಂಡಿವೆ.

  • ಇವರು ೧೯೪೪ ರ ಜುಲೈ ೧೭ ರಂದು ಜನಿಸಿದರು. ಮೂಲತಃ ಧಾರವಾಡದವರು. ತಂದೆ ಗುಂಡಾಸೂರ್ಯ ಹಾಗು ತಾಯಿ ಇಂದಿರಾಬಾಯಿ.
  • ನಾಟಕ ಕಲಾವಿದರಾದ ಜಿ. ಹೆಚ್. ಕುಲಕರ್ಣಿಯವರೊಂದಿಗೆ ವಿವಾಹವಾದರು, ಈ ದಂಪತಿಗಳು ಸಮಾನ ಹವ್ಯಾಸಗಳನ್ನು ಬೆಳಸಿಕೊಂಡಿದ್ದಾರೆ. ಈಗ ಎರಡು ವರ್ಷಗಳಿಂದ ಬಾಗಲಕೋಟೆಯಲ್ಲಿ ನೆಲೆಸಿದ್ದಾರೆ.
  • ಮಗಳು ತೃಪ್ತಿ ಹಾಗೂ ಅಳಿಯ ಅವಿನಾಶ್. ಸಂಗೀತದಲ್ಲಿ ಸಮಾನ ಅಸಕ್ತಿ ಹೊಂದಿದ ಇವರು ಸುರತ್ಕನಲ್ಲಿ ಭಜನ್ ಸಂಧ್ಯಾಗಳನ್ನು ನಡೆಸುತ್ತಿದ್ದರು.
  • ಹಿಂದಿ ಭಾಷೆಯಲ್ಲಿ ಸ್ನಾತಕೊತ್ತರ ಪದವಿ ಪಡೆದ ಇವರು ಉಪನ್ಯಾಸಕಿಯಾಗಿ ದುಡಿದರು.

ಕೃತಿಗಳು[ಬದಲಾಯಿಸಿ]

ಕಣ್ಣು ತೆರೆದಾಗ ಹೀಗೊಂದು ಹಾಸ್ಯ ಪ್ರಸಂಗ, ಹಿಂದಿ ಪಾಠ, ಚಿಂತನ[೧]

ಕಥಾಸಂಕಲನಗಳು[ಬದಲಾಯಿಸಿ]

ಸಂಕೋಲೆಯಾಚೆ, ಅಪರಾಜಿತೆ

ಕಿರುನಾಟಕಗಳು[ಬದಲಾಯಿಸಿ]

ಕೆಲಸ ಕೆಲಸ, ಮರಳಿ ಬಂದಾಗ, ಕ್ಷಮಯಾಧರಿತ್ರಿ

ಲೇಖನ ಸಂಕಲನ[ಬದಲಾಯಿಸಿ]

ಮಹಾದೇವಿಯವರ ಸಾಹಿತ್ಯ ದಲ್ಲಿ ಮಳೆ

ಕಿರುಕತೆ[ಬದಲಾಯಿಸಿ]

ಆ ನೋಟ

ಉಲ್ಲೇಖಗಳು[ಬದಲಾಯಿಸಿ]

  1. ಚಂದ್ರಗಿರಿ,ನಾಡೋಜ ಡಾ ಸಾರಾಅಬೂಬ್ಬಕರ್ ಅಭಿನಂದನಾ ಗ್ರಂಥ, ಸಂಪಾದಕರು ಡಾ ಸಬಿಹಾ, ಸಿರಿವನ ಪ್ರಕಾಶನ, ಬೆಂಗಳೂರು, ಮೊದಲ ಮುದ್ರಣ-೨೦೦೯, ಪುಟ ಸಂಖ್ಯೆ ೨೯೯