ಮಿಟಿ ಓರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗ್ರೀಕ್ ಭಾಷೆಯಲ್ಲಿ 'ಮಿಟಿ ಓರ ಎಂದರೆ 'ನೇತಾಡುವ ಕಲ್ಲು' ಅಥವಾ 'ಸ್ವರ್ಗಕ್ಕೆ ಹತ್ತಿರವಾದದ್ದು'ಎಂದರ್ಥ. ಪಿನಿಯೋಸ್ ನದಿ ಗ್ರೀಸ್ ದೇಶದ ಮಧ್ಯಭಾಗದಲ್ಲಿ ಪ್ರವಹಿಸುತ್ತದೆ. ಈ ನದಿ ಪಿಂಚುಸ್ ಬೆಟ್ಟಗಳ ಬದಿಯಲ್ಲಿ ತೆಸ್ಸಾಲಿ ಎಂಬ ಒಂದು ಸಮತಟ್ಟಾದ, ಫಲವತ್ತಾದ ಜಾಗದಲ್ಲಿರುವ ಕಡೆ ಕೆಲವಾರು 'ಮಿಟಿ ಓರ' ಶಿಲಾಬೆಟ್ಟಗಳ ಸಂಗ್ರಹವಿದೆ. ಈ 'ಮಿಟಿ ಓರ'ಗಳು,ನೆಲದಿಂದ ಮೇಲಕ್ಕೆದ್ದುಬಂದಂತೆ ತೋರುತ್ತವೆ, ಹಾಗೂ ಶಿಲಾಸ್ತಂಬಗಳಂತಿವೆ. ಕೆಲವಂತೂ ನೆಲದಿಂದ ಸುಮಾರು ೧,೮೦೦ ಅಡಿ ಎತ್ತರವಿವೆ. ಇಂತಹ ೭೦-೮೦ ಬೆಟ್ಟಗಳು ಈ ಭಾಗದಲ್ಲಿವೆ. ಅವು ಮಂಜಿನಿಂದ ಆವೃತವಾದಾಗ ಕೆಳಭಾಗಮಾತ್ರ ಗೋಚರಿಸುತ್ತಿದ್ದು ಅವುಗಳನ್ನು 'ಮಿಟಿಓರ' ಎಂದು ಕರೆಯಲಾಗುತ್ತದೆ. ಕೆಲವು ಭಾಗಗಳನ್ನು ಸೀಳಿದಂತಾಗಿ ಪ್ರಾಕೃತಿಕ ಗುಹೆಗಳಂತೆಯೊ ರಚನೆಯಾಗಿರುವುದು ಕಂಡುಬರುತ್ತದೆ. ಇವು ಸುಮಾರು ೫೦ ಸಾವಿರ ವರ್ಷಗಳಾಗಿರಬಹುದೆಂದು, 'ರೇಡಿಯೊ ಕಾರ್ಬನ್ ಅಧ್ಯಯನ'ದಿಂದೂ, ಇಲ್ಲಿ ಜನವಸತಿ ಇತ್ತೆಂದೂ ಕಂಡುಬರುತ್ತದೆ. ಯೂನಿಸೆಫ್ ಸಂಸ್ಥೆಯವರು ತಮ್ಮ 'ಪ್ರವಾಸಿ ತಾಣಗಳ ಪಟ್ಟಿ'ಯಲ್ಲಿ ಹೆಸರನ್ನು ದಾಖಲಿಸಿರುವುದರಿಂದ ಇದು ಹೆಚ್ಚು ಪ್ರಚಾರವನ್ನು ಪಡೆದಿದೆ.

ಧರ್ಮಗುರುಗಳ ನಿವಾಸ ಸ್ಥಾನ[ಬದಲಾಯಿಸಿ]

೯ ನೆಯ ಶತಮಾನದ ನಂತರ 'ಮಿಟಿ ಓರ' ದಲ್ಲಿ ಕೆಲವು ಕ್ರೈಸ್ತ ಧರ್ಮಗುರುಗಳು ಒಬ್ಬಂಟಿಯಾಗಿ ವಾಸಿಸಲು ಆರಂಭಿಸಿದರು. ಕೆಲವು ಶಿಲಾ ಬೆಟ್ಟಗಳು ಎತ್ತರ ಹಾಗೂ ಕಡಿದಾಗಿರುವ ಕಾರಣದಿಂದ ಹತ್ತಲು ಪಕ್ಕದ ಕಾಡಿನಲ್ಲಿ ಬೆಳೆದ ಮರದ ಬಳ್ಳಿಗಳ ಸಹಾಯವನ್ನು ಪಡೆಯುತ್ತಿದ್ದರಂತೆ. ಅಲ್ಲಿಗೆ ಹೋದಮೇಲೆ ಮತ್ಯಾರೂ ಮೇಲೆಬರದಂತೆ ಬುಟ್ಟಿಗಳನ್ನು ಮೇಲಕ್ಕೆಳೆದುಕೊಳ್ಳುತ್ತಿದ್ದರಂತೆ. ಸುಮಾರು ೧೧ ನೆಯ ಶತಮಾನದ ಅಂತ್ಯದಲ್ಲಿ ಮತ್ತು ೧೨ ನೆಯ ಶತಮಾನದ ಆದಿಭಾಗದಲ್ಲಿ ಈ ಬೆಟ್ಟದ ಮೇಲ್ತುದಿಯಲ್ಲಿ ಈಗ ಕಾಣುವ ಚರ್ಚುಗಳನ್ನು ’ಥಿಯೋ ಚೋರ್ಕೋಸ್’ ಎಂಬ ಕಟ್ಟಡಗಳ ನಿರ್ಮಾಣವಾಯಿತು. ಆ ವೇಳೆ ತುರ್ಕಿಯ ಅರಸರು ಗ್ರೀಸ್ ದೇಶದ ಫಲವತ್ತಾದ ತೆಸ್ಸಾಲಿ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಹಲವಾರುಬಾರಿ ದಾಳಿಮಾಡಿದ್ದರು. ಸಿಕ್ಕಸಿಕ್ಕಲ್ಲಿ ಬಲಾತ್ಕಾರವಾಗಿ ಧರ್ಮ ಪ್ರಚಾರ, ಕ್ರೈಸ್ತ ಗುರುಗಳನ್ನು ಹಿಂಸಿಸಿ ಕೊಲ್ಲುವಿಕೆ ಸಾಮಾನ್ಯವಾಗಿದ್ದವು. ಆಗ ಈ ದುಷ್ಟ ಶಕ್ತಿಗಳಿಂದ ವಿಮೋಚನೆಯನ್ನು ಪಡೆಯಲು, ತಮ್ಮ ಧರ್ಮ ರಕ್ಷಣೆಗೆ 'ಮಿಟಿ ಓರ' ಗಳು ಸುರಕ್ಷಿತವಾದ ಸ್ಥಳಗಳೆಂದು ತೀರ್ಮಾನಿಸಿ, ಕಾರ್ಯಾರಂಭಿಸಿದರೆಂದು ಇತಿಹಾಸಕಾರರ ಅಭಿಪ್ರಾಯ.

ಬ್ರಾಡ್ ರಾಕ್' ಪ್ರದೇಶದಲ್ಲಿ[ಬದಲಾಯಿಸಿ]

ಕ್ರಿ.ಶ. ೧೩೪೪ ರಲ್ಲಿ ಅಥನಾಸಿಯೋಸ್ ಎಂಬ ಧರ್ಮಗುರುವೊಬ್ಬರು ತಮ್ಮ ಅನೇಕ ಶಿಷ್ಯವೃಂದದೊಡನೆ 'ಬ್ರಾಡ್ ರಾಕ್' ಎಂಬ ಕಲ್ಲಿನ ಬೆಟ್ಟದ ಮೇಲೆ ’ಮೆಟಿಯೊರಾನ್ ಮೊನಾಸ್ಟರಿ’ಯ ನಿರ್ಮಾಣಮಾಡಿದರು. ತುರ್ಕಿಯ ಅರಸರ ಕಾಟವನ್ನು ತಡೆಯಲಾರದೆ ಬೇರೆ ಬೇರೆ ಬೆಟ್ಟಗಳ ಮೇಲೆ ಸುಮಾರು ೨೦ ಕ್ಕಿಂತಾ ಹೆಚ್ಚು ಮಠಗಳನ್ನು ನಿರ್ಮಿಸಲಾಯಿತು. ಕ್ರಿ.ಶ. ೧೫೧೭ ರಲ್ಲಿ ’ನೆಕ್ಟಾರಿಯೋಸ್’ ಹಾಗೂ 'ಥಿಯೋಫೆನಿಸ್’ ಎಂಬ ಗುರುಗಳು ’ಏರ್ ಲಾಮ್’ ಎಂಬ ಗುಡ್ಡದಲ್ಲಿ ಮತ್ತೊಂದು 'ಮಿಟಿ ಓರ' ವನ್ನು ನಿರ್ಮಿಸಿದರು. ಇದೇ ತರಹ ನಿರ್ಮಾಣಗೊಂಡ 'ಮಿಟಿ ಓರ'ಗಳ ಸಂಖ್ಯೆ ೩೦ ಕ್ಕೂ ಮೀರಿತ್ತು. ಆಶ್ರಯ ತಾಣಗಳು ಬೆಟ್ಟದ ಮೇಲೆ ಸಿಗುವ ಜಾಗಕ್ಕನುಸಾರವಾಗಿ ಕಟ್ಟಡಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾದವು. ಪಾದ್ರಿಗಳು, ಮತ್ತು ಶ್ರದ್ಧಾಳುಗಳು ಪ್ರತಿ ರವಿವಾರ ಅಥವಾ ಕೆಲವು ವಿಶೇಷದಿನಗಳಂದು ’ಥೌಪಿಯಾನಿ ಚರ್ಚ್’ನಲ್ಲಿ ಒಂದುಗೂಡುತ್ತಿದ್ದರು.

ಇಂದಿನ ಪರಿಸ್ಥಿತಿ[ಬದಲಾಯಿಸಿ]

ಸದ್ಯಕ್ಕೆ ಉಳಿದಿರುವ ಚರ್ಚ್ ಗಳ ಸಂಖ್ಯೆ ಕೇವಲ ೬ ಮಾತ್ರ. ೧೯ ನೆಯ ಶತಮಾನದ ತನಕ ಬುಟ್ಟಿಯಲ್ಲಿ ಕುಳಿತವರನ್ನು ಮೇಲಕ್ಕೆಳೆದುಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿತ್ತು. ೨೦ ನೆಯ ಶತಮಾನದಲ್ಲಿ ಹಲವಾರು ಸೌಲಭ್ಯಗಳು ಬಳಕೆಗೆ ಬಂದವು. ಉಳಿದ ೬ ಬೆಟ್ಟಗಳಿಗೆ ಹೋಗಿಬರಬಹುದು. ಸೇಂಟ್ ಸ್ಟೀಫನ್ ಮೊನಾಸ್ಟರಿ ಗೆ ಕಾರಿನಲ್ಲಿ ಹೋಗಲು ವ್ಯವಸ್ಥೆಯಿದೆ. ಉಳಿದಕಡೆ ಮೆಟ್ಟಿಲು ಹತ್ತಿ ಹೋಗಬೇಕು.

ದುರ್ಗಮ ಜಾಗದ ಮೋನಾಸ್ಟರಿಗಳು[ಬದಲಾಯಿಸಿ]

ಈಗ ಉಳಿದಿರುವ ರಚನೆಗಳಲ್ಲಿ 'ಗ್ರೇಟ್ ಮೆಟಿಯೋರಾನ್ ಮೋನಾಸ್ಟರಿ'ಯು ಅತಿ ದೊಡ್ಡದಾಗಿದೆ. ಇದು ೧೪ ನೇ ಶತಮಾನದ ವಿಶಿಷ್ಟ ರಚನೆಯಾಗಿದೆ. ಈಗ ಇದನ್ನು ವಸ್ತು ಸಂಗ್ರಹಾಲಯ'ವನ್ನಾಗಿ ಪರಿವರ್ತಿಸಿದ್ದಾರೆ. ಏರ್ ಲ್ಯಾಮ್ ಮೋನಾಸ್ಟರಿಯು ಎರಡನೆಯ ದೊಡ್ಡ ಕಟ್ಟಡವಾಗಿದ್ದು ಕ್ರಿ.ಶ.೧೫೪ ರಲ್ಲಿ ಕಟ್ಟಲಾಯಿತು. ಸೇಂಟ್ ಬಾರ್ಬರಾ ಮೋನಾಸ್ಟರಿ ೧೬ ನೆಯ ಶತಮಾನದಲ್ಲಿ ನಿರ್ಮಾಣವಾಗಿದ್ದು ಒಂದು ಸಮಯದಲ್ಲಿ ಮೇಲೆ ಹೋಗಲು ಅತಿ ಕಷ್ಟಕರವಾದ ರಚನೆಯದಾಗಿತ್ತು. ಆದರೆ ಈಗ ಪಕ್ಕದ ಬೆಟ್ಟಕ್ಕೆ ಸೇತುವೆಯೊಂದನ್ನು ನಿರ್ಮಾಣಮಾಡಿ ಅದರ ಮೂಲಕ ಹೋಗಲಾಗುತ್ತಿದೆ. ಸೇಂಟ್ ನಿಕೊಲಾಸ್ ಅನಪೌಸಾಸ್ ತಲುಪಲು ಈಗಲೂ ಕಷ್ಟವೇ .ಇದನ್ನು ಸಹಿತ ೧೬ ನೆಯ ಶತಮಾನದಲ್ಲಿ ನಿರ್ಮಿಸಲಾಗಿದ್ದು ಅಲ್ಲಿಗೆ ಹೋಗಲು ಸೌಲಭ್ಯಗಳು ಚೆನ್ನಾಗಿವೆ.

೨ ನೆಯ ವಿಶ್ವಮಹಾಯುದ್ಧದ ಪರಿಣಾಮ[ಬದಲಾಯಿಸಿ]

'ಎರಡನೆಯ ವಿಶ್ವ ಮಹಾಯುದ್ಧ'ದಲ್ಲಿ ಇಲ್ಲಿನ 'ಮಿಟಿ ಓರ' ಗಳ ರಚನೆಗಳು 'ಬಾಂಬ್ ದಾಳಿ'ಗೆ ತುತ್ತಾಗಿ ಸಂಪೂರ್ಣವಾಗಿ ನಾಶವಾದಮೇಲೆ, ಪುನಃ ಸುಂದರವಾಗಿ ದೊಡ್ಡದಾಗೊ ಪುನರ್ನಿರ್ಮಾಣ ಮಾಡಲಾಗಿದೆ. ಈಗ ಇದು 'ನನ್ ಗಳ ವಸತಿ-ಗೃಹ'ವಾಗಿದೆ.ಕ್ರಿ.ಶ. ೧೪೯೫ ರಲ್ಲಿ ನಿರ್ಮಿತವಾದ ಮತ್ತೊಂದು ಹೋಲಿ ಟ್ರಿನಿಟಿ ಎಂಬ ಮೋನಾಸ್ಟರಿಯನ್ನು ತಲುಪಲು ಈಗಲೂ ಕಷ್ಟ. ಎಲ್ಲಾ ೬ ತಾಣಗಳೂ ಆಧುನೀಕರಣಕ್ಕೆ ಹೊಂದಿಕೊಂಡು ಸಿದ್ಧವಾಗಿವೆ. ದೇಶ ವಿದೇಶಗಳಿಂದ ಬಂದ ಶ್ರ್ರದ್ಧಾಳುಗಳಿಗೆ ಪವಿತ್ರ ಸ್ಥಾನವಾಗಿವೆ.

ಪ್ರಕೃತಿ ಸಂದರ್ಯ ವರ್ಣಿಸಲಸದಳ[ಬದಲಾಯಿಸಿ]

ಅನೇಕ ಪರ್ಯಟಕರಿಗೆ ಒಂದು ಆಕರ್ಷಣೆಯ ತಾಣವಾಗಿದೆ. ಮೇಲಿಂದ ಕೆಳಗೆ ನೋಡಿದಾಗ ಕಾಣುವ ಹತ್ತಿರದ ’ಕಲಂಪಾಕ’ ವೆಂಬ ನಗರ, ಸುಂದರವಾಗಿ ಕಾಣಿಸುತ್ತದೆ. ಈಗ ಪ್ರವಾಸಿಗಳಿಗೆ ಇದೊಂದು ಆಕರ್ಶಣೆಯಾಗಿರುವ ಭಾಗ; ಮೊದಲು ಕ್ರೈಸ್ತ ಸನ್ಯಾಸಿಗಳು ತಲೆತಪ್ಪಿಸಿಕೊಂಡು 'ಮಿಟಿ ಓರ' ಗಳಲ್ಲಿ ಅಡಗಿಕೊಳ್ಳುವ ಸ್ಥಾನವಾಗಿತ್ತು.

"https://kn.wikipedia.org/w/index.php?title=ಮಿಟಿ_ಓರ&oldid=1165749" ಇಂದ ಪಡೆಯಲ್ಪಟ್ಟಿದೆ