ಮಿಖಾಯಿಲ್ ಶೊಲೊಖೋವ್

ವಿಕಿಪೀಡಿಯ ಇಂದ
Jump to navigation Jump to search

'ಮಿಖಾಯಿಲ್ ಶೊಲೊಖೋವ್,' Mikhail Aleksandrovich Sholokhov (Russian: Михаи́л Алекса́ндрович Шо́лохов)

(ಮೇ,೨೪,೧೯೦೫–ಫೆಬ್ರವರಿ,೨೧,೧೯೮೪)

'ಮಿಖಾಯಿಲ್ ಶೊಲೊಖೋವ್,' ಸನ್, ೧೯೬೫ ರ, ನೋಬೆಲ್ ಪ್ರಶಸ್ತಿವಿಜೇತರು[ಬದಲಾಯಿಸಿ]

ರಷ್ಯದ 'ಮಿಖಾಯಿಲ್ ಅಲೆಕ್ಸಾಂಡ್ರೋವಿಚ್ ಶೊಲೊ ಖೋವ್,' ೧೯೬೫ ರ ನೋಬೆಲ್ ಪ್ರಶಸ್ತಿ ವಿಜೇತರು. ಅವರ, ’ಮತ್ತು ಡಾನ್ ನದಿ ನಿಧಾನವಾಗಿ ಪ್ರವಹಿಸುತ್ತದೆ(And Quiet flows the Don)' ಎಂಬ ಮಹಾಕಾದಂಬರಿ, ಜಗದ್ವಿಖ್ಯಾತವಾಗಿದೆ. ಇದರಲ್ಲಿ ೪ ಭಾಗಗಳಿವೆ.

ಜನನ ಹಾಗೂ ಬಾಲ್ಯ[ಬದಲಾಯಿಸಿ]

'ಮಿಖಾಯಿಲ್ ಶೊಲೊಖೋವ್,' ರಷ್ಯದ ಡಾನ್ ಪ್ರಾಂತ್ಯದ ರೈತ ಪರಿವಾರದಲ್ಲಿ ಜನಿಸಿದವರು. ವಿದ್ಯಾಭ್ಯಾಸಕ್ಕಾಗಿ ಅವರನ್ನು ತಂದೆ, ಮಾಸ್ಕೋನಗರಕ್ಕೆ ಕಳುಹಿಸುತ್ತಾರೆ. ಹದಿನೈದರ ಹರೆಯದಲ್ಲೇ ಓದು ನಿಲ್ಲಿಸಬೇಕಾದ ಪರಿಸ್ಥಿತಿಬಂದು, ಅವರು ತಮ್ಮ ಊರಿಗೆ ಹಿಂದಿರುಗುತ್ತಾರೆ. ಶಾಲೆಯ ಅಧ್ಯಾಪಕ, 'ಫುಡ್ ಇನ್ಸ್ ಪೆಕ್ಟರ್' ಮುಂತಾದ, ಕೆಲವು ವೃತ್ತಿಗಳನ್ನುಮಾಡಿ, ಪತ್ರಕರ್ತನಾಗುವ ಹಂಬಲದಿಂದ ಪುನಃ ಮಾಸ್ಕೊ ನಗರಕ್ಕೆ ಹೋದರು. ಜೀವನೋಪಾಯಕ್ಕಾಗಿ ದೈಹಿಕ ಶ್ರಮದ ಕೆಲಸಗಳನ್ನು ಅವರು ಮಾಡಬೇಕಾಯಿತು. ೧೯೨೪ ರಲ್ಲಿ ಊರಿಗೆ ಮರಳಿದ, 'ಮಿಖಾಯಿಲ್ ಶೊಲೊಖೋವ್,' ತಮ್ಮ ಮೊಟ್ಟಮೊದಲ ಪುಸ್ತಕವನ್ನು 'Tales from Don,' ಬರೆದು, ರಲ್ಲಿ ಪ್ರಕಟಿಸಿದರು. ಕೊಸಕ್ ಜನಾಂಗದವರು, ಮೊದಲನೆಯ ವಿಶ್ವಯುದ್ಧದ ಸಮಯದಲ್ಲಿ, ಅನುಭವಿಸಿದ ಕಷ್ಟ ಕಾರ್ಪಣ್ಯಗಳನ್ನು ಕುರಿತಾದ ಕಾದಂಬರಿ. ಮುಂದೆ'ಮಿಖಾಯಿಲ್ ಶೊಲೊಖೋವ್, ರು,ಒಂದು ಮಹಾಕಾದಂಬರಿಯನ್ನು ಬರೆಯುವ ಆಶೆಯಿಂದ ೧೪ ವರ್ಷಗಳ (೧೯೨೬-೧೯೪೦) ಕಠಿಣ ಪರಿಶ್ರಮದ ಬಳಿಕ, ಮುಗಿಸಿ ಪ್ರಕಟಿಸಿದರು.

'ಡಾನ್,' ಕಾದಂಬರಿ ರಚಿಸಿದರು[ಬದಲಾಯಿಸಿ]

ಕಮ್ಯೂನಿಸ್ಟ್ ಪಕ್ಷದ ಸದಸ್ಯರಾದರು. ಪ್ರಕಾಶನಕ್ಕೆ ಕೊಟ್ಟ 'ಡಾನ್' ಕಾದಂಬರಿಯನ್ನು ವಿಮರ್ಶಕರು, ಅಲ್ಲಲ್ಲಿ ಕತ್ತರಿಪ್ರಯೋಗಮಾಡಿ, ಕಸಿಮಾಡಿದ ನಂತರ ಪ್ರಕಟಿಸಿದ್ದಾರೆ. ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದ ಸಮಯದಲ್ಲಿ ಕಮ್ಯುನಿಷ್ಟರಿಗೆ ಸರಿಬೀಳದ ಕೆಲವು ಪ್ರಸಂಗಗಳನ್ನು ಕೂಡಲೇ ಪ್ರಕಟನೆಯನ್ನು ನಿಲ್ಲಿಸಬೇಕೆಂದು ಕಮ್ಯೂನಿಸ್ಟ್ ಆಡಳಿತ, ಕಟ್ಟಾಜ್ಞೆಮಾಡಿತು. ಸ್ಟಾಲಿನ್ ರವರ ಮಧ್ಯಸ್ತಿಕೆಯಮೇರೆಗೆ ಕಾದಂಬರಿ ಹೇಗೋ ಪ್ರಕಟವಾಯಿತು. ಇಂದಿನ ದಿನಗಳಲ್ಲಿ ಮೂಲರೂಪದಲ್ಲಿದ್ದಂತೆ ಪುನಃ ಪ್ರಕಟಿಸಲು ಪ್ರಯತ್ನ ನಡೆಯುತ್ತಿದೆ. ೧೦ ವರ್ಷಗಳ ಕಾಲದಲ್ಲಿ, ಕೊಸಕ್ ಜನರ ವಿರುದ್ಧ, ’ಬೋಲ್ಷೆವಿಕ್ ಕಮ್ಯುನಿಸ್ಟರು 'ಕೊಸಕ'ರಮೇಲೆ ದಬ್ಬಾಳಿಕೆ ಸಾಧಿಸಲು, ಪ್ರಯತ್ನಿಸಿದ್ದರು.

ಕಾದಂಬರಿ, 'ಮೆಲೆಖೊವ್' ಎಂಬ ಪರಿವಾರದ ಸುತ್ತ ಹೆಣೆಯಲ್ಪಟ್ಟಿದೆ[ಬದಲಾಯಿಸಿ]

'ಆಗಸ್ಟೆ ಜಾರ್ ನಕೇಂದ್ರ ಪ್ರಭುತ್ವ' ದಿಂದ ಬಿಡಿಸಿಕೊಂಡ ಕೊಸಾಕರಿಗೆ ಮತ್ತೊಂದು ಕೇಂದ್ರಾಡಳಿತದ ಅಗತ್ಯವಿರಲಿಲ್ಲ. ಕಾದಂಬರಿ 'ಮೆಲೆಖೊವ್' ಎಂಬ ಪರಿವಾರದ ಸುತ್ತ ಹೆಣೆಯಲ್ಪಟ್ಟಿದೆ. ಅವರ ಮೂಲ ಪುರುಷ, ಒಬ್ಬ ವೀರ ಸೈನಿಕ. ಆತ ತುರ್ಕಿಯ ಒಬ್ಬ ಗುಲಾಮಳನ್ನು ವಿವಾಹವಾಗಿದ್ದ. ಈ ವಂಶದವರಿಗೆ ಒಳ್ಳೆಯ ಹೆಸರಿದ್ದರೂ, ’ತುರುಕರೆಂಬ’ ಅಡ್ಡಹೆಸರು ಅಂಟಿಕೊಂಡಿತ್ತು. ಈ ಕುಟುಂಬದ ’ಗ್ರಿಗರಿ’ ಯೆಂಬ ಯುವಕ, ತಮ್ಮ ಕುಟುಂಬದೊಡನೆ ಆತ್ಮೀಯತೆಯಿಂದಿದ್ದ ಮತ್ತೊಂದು ಪರಿವಾರದ ವಿವಾಹಿತ ಯುವತಿ ’ಆಕ್ಸೀನಿಯ’ಳ ಜೊತೆಗೆ ಓಡಿಹೋಗುತ್ತಾನೆ. ಇದು ಎರಡು ಕುಟುಂಬಗಲ್ಲಿ ತಲೆದೋರುವ ಘರ್ಷಣೆಗೆ ನಾಂದಿಯಾಗುತ್ತದೆ. ಕೊನೆಯಲ್ಲಿ ಗ್ರಿಗರಿಗೆ ತಾನು ಪ್ರೀತಿಸಿದ ಹುಡುಗಿ ತಾನು ಕೆಲಸಮಾಡುವ 'ಎಸ್ಟೇಟ್ ನ ಮಾಲಿಕನ ಮಗ'ನನ್ನು ಪ್ರೀತಿಸುತ್ತಿದ್ದಾಳೆಂಬ ಅರಿವಾಗಿ, ನಿರಾಸೆಯಿಂದ ಆತ ತನ್ನ ಪತ್ನಿಯ ಬಳಿಗೆ ಹಿಂದಿರುಗುತ್ತಾನೆ. ಕಾದಂಬರಿಯಲ್ಲಿ ಇವೆಲ್ಲಾ ವಿಷಯಗಳನ್ನು ಅತ್ಯಂತ ಮನೋಜ್ಞವಾಗಿ ಹೆಣೆಯಲಾಗಿದೆ.

ರಶ್ಯನ್ ಸಮಾಜದಲ್ಲಾದ ಬದಲಾವಣೆಗಳ ಚಿತ್ರಣ[ಬದಲಾಯಿಸಿ]

ಇಲ್ಲಿ ನಾವು ಕಾಣುವುದು ರಶ್ಯನ್ ಸಮಾಜದ ಚಲನಶೀಲತೆಯನ್ನು, ಒಂದು ಹಳೆಯ ಸಂಪ್ರದಾಯದಿಂದ ಹೊಸ-ವ್ಯವಸ್ಥೆಗೆ ಹೇಗೆ ಪರಿವರ್ತಿತವಾಗುತ್ತದೆ ಎನ್ನುವುದನ್ನು. ’ಗ್ರಿಗರಿ’ ಮೊದಲು ’ಬಿಳಿ ಸೈನ್ಯ’ದ ಕಡೆಯಿದ್ದವನು ನಂತರ ’ಕೆಂಪು ಸೈನ್ಯ’ದ ಕಡೆಗೆ ವಾಲಿದವನು. ’ಗೆರಿಲ್ಲಾ’ಗಳ ಜೊತೆಗೂಡಿ ಕೆಂಪುಸೈನ್ಯದ ವಿರುದ್ಧ ಕಾದಾಡಿದವನು. ಹೀಗೆ ಈ ಕಾದಂಬರಿ,’ರಷ್ಯದ ಕ್ರಾಂತಿ’, ಮೊದಲನೆಯ ಮಹಾಯುದ್ಧ, ಹಾಗೂ ಅಂತರ್ಯುದ್ಧದ ಸಾಹಿತ್ಯೀಕರಣವಾಗಿಯೂ ಪ್ರಸ್ತುತವಾಗಿದೆ. ಕೆಲವು ರು ಈಕಾದಂಬರಿಯನ್ನು 'ಟಾಲ್ ಸ್ಟಾಯ್' ರವರ, ’ವಾರ್ ಅಂಡ್ ಪೀಸ್,’ ಗೆ ಹೋಲಿಸುತ್ತಾರೆ.

'ಮಿಖಾಯಿಲ್ ಶೊಲೊಖೋವ್' ರವರ ಕೃತಿಗಳು,'ಟಾಲ್ ಸ್ಟಾಯ್' ರವರ ಕಾದಂಬರಿಗಳನ್ನು ಹೋಲುತ್ತಿದ್ದವು[ಬದಲಾಯಿಸಿ]

ಜನರ ಬದುಕು ಅವರು ರೂಪಿಸಿಕೊಂಡಂತಿದೆ. ಆದರೂರಾಜಕೀಯ ಹಾಗೂ ಸಾಮಾಜಿಕ ಬದಲಾವಣೆಗಳು, ಮತ್ತು ಯುದ್ಧಗಳು, ಉತ್ಪನ್ನವಾಗುವ ಅನಿಶ್ಚತತೆಗಳನ್ನು 'ಶೊಲೊಖೋವ್' ಚಿತ್ರಿಸಲು ಇಚ್ಛಿಸುತ್ತಾರೆ. 'ಶೊಲೊಖೋವ್' ರವರ ಬರವಣಿಗೆಯ ಶೈಲಿಯು, ಅಂದಿನ ಜನರ ಬದುಕಿನ ಸೂಕ್ಷ್ಮಾತಿ-ಸೂಕ್ಷ್ನ ಸನ್ನಿವೇಶಗಳನ್ನು ಬರಹದಲ್ಲಿ, ಪುನರ್ನಿರ್ಮಿಸುವ ಕಲೆ, 'ಟಾಲ್ ಸ್ಟಾಯ್' ರನ್ನು ನೆನೆಪಿಗೆ ತರುತ್ತದೆ. ಕಾದಂಬರಿ, ’ಆಂಡ್ ಕ್ವಯೆಟ್ ಫೋಸ್ ದ ದಾನ್

’ಕೃತಿಚೌರ್ಯ’ದ ಸುಳ್ಳು ಆರೋಪಕ್ಕೆ ಬಲಿಯಾದರು[ಬದಲಾಯಿಸಿ]

ಅಲೆಕ್ಸಾಂಡರ್ ಸೋಲ್ಝೆನಿಟ್ಸನ್’ ಸಹಿತ ಕೆಲವರು, ಅದೊಂದು ’ಕೃತಿಚೌರ್ಯ’ವೆಂದು, ಸುಳ್ಳು ಆರೋಪವನ್ನು ಹೊರಿಸುತ್ತಾರೆ. ಇದನ್ನು ಸುಳ್ಳೆಂದು ಸಾಬೀತುಮಾಡಲು, ಹಸ್ತಪ್ರತಿಯನ್ನು ತೋರಿಸಲು ಸಾಧ್ಯವಾಗಿರಲಿಲ್ಲ. ಈಗ ’ಹಸ್ತಪ್ರತಿ’ ಸಹಿತ, ಹಲವಾರು ಸಾಕ್ಷಿಗಳು ದೊರೆತು, ಈ ಕಾದಂಬರಿ' ಮಿಖಾಯಿಲ್ ಶೊಲೊಖೋವ್' ರವರ ಸ್ವಂತ ರಚನೆಯೆನ್ನುವುದು ಖಚಿತವಾಗಿ ಸಾಬೀತಾಗಿದೆ. ’ನೋಬೆಲ್ ಪ್ರಶಸ್ತಿ’, ’ಸ್ಟಾಲಿನ್ ಪ್ರಶಸ್ತಿ’ಗಳು, ಕಾದಂಬರಿಯ ಉತ್ಕೃಷ್ಟತೆಯನ್ನು ಸಾರಿ ಹೇಳುತ್ತವೆ. ಮುಂದೆ ರವರು, ಸುಮಾರು ೨೮ ವರ್ಷಗಳನ್ನು 'Vergin Soil of Tarnid,' ಯೆಂಬ ಕಾದಂಬರಿಯನ್ನು ರಚಿಸಲು 'ಮಿಖಾಯಿಲ್ ಶೊಲೊಖೋವ್' ವ್ಯಯಿಸುತ್ತಾರೆ. ಈ ಕಾದಂಬರಿಗೂ ’ಲೆನಿನ್ ಪಾರಿತೋಷಕ’ ಪ್ರಾಪ್ತವಾಯಿತು.

'The Fate of a Man,'ಯೆಂಬ ಕೃತಿ, ಜನರನ್ನು ಆಕರ್ಶಿಸುವಲ್ಲಿ ವಿಫಲವಾಯಿತು[ಬದಲಾಯಿಸಿ]

೧೯೫೭ ರಲ್ಲಿ 'ಮಿಖಾಯಿಲ್ ಶೊಲೊಖೋವ್' ರವರು, 'The Fate of a Man,' ಎಂಬ ಕಿರು-ಕಾದಂಬರಿಯನ್ನು ಬರೆದರು. ವಿಮರ್ಶಕರ ಪ್ರಕಾರ ಈ ಕಾದಂಬರಿಯು ಸತ್ವಹೀನವಾಗಿದ್ದು ಓದುಗರ ಮೆಚ್ಚುಗೆಯನ್ನು ಗಳಿಸುವಲ್ಲಿ ವಿಫಲವಾಯಿತು. ಕಮ್ಯುನಿಷ್ಟ್ ವಕ್ತಾರರೊಬ್ಬರ ವರದಿಯಂತಿದ್ದ ಈ ಕಾದಂಬರಿಯನ್ನು ಜನ ಒಪ್ಪಿಕೊಳ್ಳಲಿಲ್ಲ.

ಮರಣ[ಬದಲಾಯಿಸಿ]

'ಮಿಖಾಯಿಲ್ ಶೊಲೊಖೋವ್' ರವರು ರಷ್ಯಾದಲ್ಲೇ ನೆಲಸಿ, ತಮ್ಮ ವೃದ್ಧಾಪ್ಯದಲ್ಲೂ ಸರಕಾರಕ್ಕೆ ಬೇಕಾದ ವ್ಯಕ್ತಿಯೊಬ್ಬರಾಗಿ ಸಹಜವಾದ ಮರಣವನ್ನು ಪಡೆದರು.