ವಿಷಯಕ್ಕೆ ಹೋಗು

ಮಿಂಟೋ ನೇತ್ರ ಚಿಕಿತ್ಸಾ ಪ್ರಾದೇಶಿಕ ಸಂಸ್ಥೆ

ನಿರ್ದೇಶಾಂಕಗಳು: 12°57′42.93″N 77°34′18.84″E / 12.9619250°N 77.5719000°E / 12.9619250; 77.5719000
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಿಂಟೋ ನೇತ್ರ ಚಿಕಿತ್ಸಾ ಪ್ರಾದೇಶಿಕ ಸಂಸ್ಥೆ
Minto Eye Hospital
Geography
ಸ್ಥಳಚಾಮರಾಜಪೇಟೆ, ಬೆಂಗಳೂರು, ಕರ್ನಾಟಕ, India
ಕಕ್ಷೆಗಳು12°57′42.93″N 77°34′18.84″E / 12.9619250°N 77.5719000°E / 12.9619250; 77.5719000
Organisation
Fundingಸರ್ಕಾರಿ ಆಸ್ಪತ್ರೆ
ಆಸ್ಪತ್ರೆ ಪ್ರಕಾರತಜ್ಞ / ಬೋಧನೆ
ಅಂಗಸಂಸ್ಥೆಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ
Services
ಹಾಸಿಗೆ300
History
ಸ್ಥಾಪನೆ1913
Links
ಜಾಲತಾಣhttp://www.bmcri.org/minto_hosp.html
ಪಟ್ಟಿಗಳುHospitals in India

ಮಿಂಟೋ ಕಣ್ಣಿನ ಆಸ್ಪತ್ರೆ ಬೆಂಗಳೂರಿನಲ್ಲಿರುವ ಸರ್ಕಾರಿ ಕಣ್ಣಾಸ್ಪತ್ರೆ ಮತ್ತು ರೆಫರಲ್ ಸೆಂಟರ್ ಆಗಿದೆ. ಅತ್ಯಂತ ಹಳೆಯ ವಿಶೇಷ ಕಣ್ಣಿನ ಆಸ್ಪತ್ರೆಗಳಲ್ಲಿ ಒಂದಾಗಿದೆ. ಇದನ್ನು 1913 ರಲ್ಲಿ ಸ್ಥಾಪಿಸಲಾಯಿತು,ಇದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಭಾಗವಾಗಿದೆ. ಕಣ್ಣಿನ ರೋಗಗಳನ್ನು ಚಿಕಿತ್ಸಿಸುತ್ತದೆ.ಇದು ವಿಶ್ವದ ಅತ್ಯಂತ ಹಳೆಯ ವಿಶೇಷ ಕಣ್ಣಿನ ಆಸ್ಪತ್ರೆಗಳಲ್ಲಿ ಒಂದಾಗಿದೆ. []

ಹಿನ್ನಲೆ

[ಬದಲಾಯಿಸಿ]

ಬೆಂಗಳೂರಿನ ಸಂತೆಪೇಟೆಯ ರಸ್ತೆಯಲ್ಲಿ 1896ರಲ್ಲಿ ಒಂದು ಸಣ್ಣ ನೇತ್ರ ಚಿಕಿತ್ಸೆಯ ಕ್ಲಿನಿಕ್‌ ಪ್ರಾರಂಭವಾಯಿತು. ಈ ಸಂಸ್ಥೆಯು ಸ್ಥಾಪಿತವಾಗಿರುವ ಹಾಲಿ ಕಟ್ಟಡವನ್ನು 1913ರಲ್ಲಿ ಕಟ್ಟಲಾಯಿತು.ಮಿಂಟೋ ಕಣ್ಣಾಸ್ಪತ್ರೆಯು 1913 ರಲ್ಲಿ ಸ್ಥಾಪಿತವಾಗಿ ಜನವರಿ 1982ರಲ್ಲಿ ಮಿಂಟೋ ನೇತ್ರ ಚಿಕಿತ್ಸಾ ಪ್ರಾದೇಶಿಕ ಸಂಸ್ಥೆಯಾಗಿ ಬೆಳೆಯಿತು. ವೈಸರಾಯ್‌ ಮಿಂಟೋ ಅವರ ನೆನಪಿಗಾಗಿ ಇದನ್ನು 'ಮಿಂಟೋ ಆಸ್ಪತ್ರೆ' ಎಂದು ನಾಮಕರಣ ಮಾಡಿದರು. ಕಣ್ಣಿಗೆ ಸಂಬಂಧಿಸಿರುವ ರೋಗಿಗಳಿಗೆ ಚಿಕಿತ್ಸೆ ನೀಡುವುದು ಮತ್ತು ಅಂಧತ್ವ ನಿವಾರಣೆ ಈ ಆಸ್ಪತ್ರೆಯ ಮೂಲ ಉದ್ದೇಶ.

ಸೌಲಭ್ಯಗಳು

[ಬದಲಾಯಿಸಿ]

ಈ ಆಸ್ಪತ್ರೆಯಲ್ಲಿ 300 ಜನ ಒಳ ರೋಗಿಗಳಿಗೆ  ಸೌಲಭ್ಯಗಳನ್ನು ಹೊಂದಿದೆ. ನಾಲ್ಕು  ಶಸ್ತ್ರಚಿಕಿತ್ಸಾ ಕೋಣೆಗಳಿವೆ. ಮಕ್ಕಳ ನೇತ್ರ ಚಿಕಿತ್ಸೆ, ಮೆಳ್ಳೆಗಣ್ಣು ಚಿಕಿತ್ಸೆ, ಸಂಪರ್ಕ ಮಸೂರದ ಸೇವೆ, ಗ್ಲುಕೋಮ, ವಿಬ್ರಿಯೋರೆಟಿನ ದೃಷ್ಟಿ ದೋಷದ ಚಿಕಿತ್ಸೆ, ಕಣ್ಣಿನ ಬ್ಯಾಂಕ್‌ನ ಸೇವೆಗಳು ಲಭ್ಯವಿವೆ.ಮಿಂಟೋ ಹಾಸ್ಪಿಟಲ್ಸ್ ತನ್ನ ಸೇವೆಗಳನ್ನು ಕರ್ನಾಟಕದ ಬಡವರಿಗೆ ಮತ್ತು ಅಗತ್ಯವಿರುವವರಿಗೆ ಮತ್ತು ಅದರ ನೆರೆಯ ರಾಜ್ಯಗಳಿಗೆ ಸಬ್ಸಿಡಿ ದರದಲ್ಲಿ ಸೇವೆಯನ್ನು ನೀಡುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "ಮಿಂಟೋ ನೇತ್ರ ಚಿಕಿತ್ಸಾ ಪ್ರಾದೇಶಿಕ ಸಂಸ್ಥೆ". www.vijaykarnataka.indiatimes.com ,31 August 2017.
  2. "Eye' for ingenious". www.newindianexpress.com , 31 August 2017.

ಬಾಹ್ಯ ಕೊಂಡಿಗಳು

[ಬದಲಾಯಿಸಿ]