ಮಾವುತ
ಮಾವುತನು (ಮಾವಟಿಗ) ಆನೆ ಸವಾರ, ತರಬೇತಿದಾರ, ಅಥವಾ ಪಾಲಕನಾಗಿರುತ್ತಾನೆ. ಸಾಮಾನ್ಯವಾಗಿ, ಒಬ್ಬ ಮಾವುತನು ಹುಡುಗನಾಗಿದ್ದಾಗ ಕುಟುಂಬ ವೃತ್ತಿಯಲ್ಲಿ ಕೆಲಸ ಮೊದಲುಮಾಡುತ್ತಾನೆ.[೧] ಆಗ ಅವನ ಜೀವನದಲ್ಲಿ ಮುಂಚಿತವಾಗಿ ಅವನಿಗೆ ಒಂದು ಆನೆಯನ್ನು ನಿಗದಿ ಮಾಡಲಾಗುತ್ತದೆ. ಆನೆ ಮತ್ತು ಅದರ ಮಾವುತ ಇಬ್ಬರೂ ತಮ್ಮ ಜೀವನಗಳಾದ್ಯಂತ ಪರಸ್ಪರ ಬಂಧನಕ್ಕೆ ಒಳಪಟ್ಟಿರುತ್ತಾರೆ.
ಉಪಕರಣ
[ಬದಲಾಯಿಸಿ]ಮಾವುತರು ಬಳಸುವ ಅತಿ ಸಾಮಾನ್ಯ ಉಪಕರಣಗಳೆಂದರೆ ಸರಪಳಿಗಳು ಮತ್ತು ಅಂಕುಶ. ಅಂಕುಶವು ಆನೆಯ ತರಬೇತಿ ಮತ್ತು ನಿಭಾವಣೆಯಲ್ಲಿ ಬಳಸಲಾದ ಒಂದು ಚೂಪಾದ ಲೋಹದ ಕೊಕ್ಕೆಯಾಗಿರುತ್ತದೆ. ಇದರಿಂದ ಆನೆಯ ತಲೆಗೆ, ಮತ್ತು ಪ್ರಾಣಿಯು ಅತ್ಯಂತ ಸಂವೇದನಶೀಲವಾದ ಬಾಯಿ ಹಾಗೂ ಒಳಕಿವಿಯಂತಹ ಪ್ರದೇಶಗಳಲ್ಲಿ ತಿವಿಯಲಾಗುತ್ತದೆ.
ಭಾರತದಲ್ಲಿ, ವಿಶೇಷವಾಗಿ ಕೇರಳದಲ್ಲಿ, ಮಾವುತರು ಆನೆಗಳನ್ನು ನಿಯಂತ್ರಿಸಲು ಮೂರು ಪ್ರಕಾರಗಳ ಸಾಧನಗಳನ್ನು ಬಳಸುತ್ತಾರೆ, ಅವುಗಳೆಂದರೆ, ೩.೫ ಅಡಿ ಉದ್ದ ಮತ್ತು ಸುಮಾರು ೧ ಅಂಗುಲ ದಪ್ಪವಾದ ಕೊಕ್ಕೆ, ೧೦.೫ ಅಡಿ ಉದ್ದ ಮತ್ತು ಸುಮಾರು ೧ ಅಂಗುಲ ದಪ್ಪವಾದ ಉದ್ದನೆಯ ಕೋಲು; ಮತ್ತು ಚಿಕ್ಕ ಕೋಲು.