ಮಾರ್ಶ್‍ಮೆಲೊ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
White Marshmallows.jpg

ಮಾರ್ಶ್‍ಮೆಲೊ ಆಧುನಿಕ ರೂಪದಲ್ಲಿ, ವಿಶಿಷ್ಟವಾಗಿ ಸಕ್ಕರೆ ಹಾಗು/ಅಥವಾ ಮೆಕ್ಕೆ ಜೋಳದ ಸಿರಪ್, ನೀರು, ಮತ್ತು ಜೆಲಟಿನ್ ಅನ್ನು ಒಳಗೊಂಡಿರುವ, ಒಂದು ಸ್ಪಂಜಿನಂಥ ಸಾಂದ್ರತೆಗೆ ಕಡೆದ, ಚಿಕ್ಕ ಉರುಳೆಯಾಕಾರದ ಚೂರುಗಳಾಗಿ ಅಚ್ಚು ಮಾಡಲಾದ, ಮತ್ತು ಮೆಕ್ಕೆ ಜೋಳದ ಪಿಷ್ಟದಿಂದ ಲೇಪನ ಮಾಡಲಾದ ಒಂದು ಮಿಶ್ರಣ. ಕೆಲವು ಮಾರ್ಶ್‍ಮೆಲೊ ಪಾಕವಿಧಾನಗಳಿಗೆ ಮೊಟ್ಟೆ ಬೇಕಾಗುತ್ತದೆ. ಈ ಮಿಶ್ರಣವು ಮಾರ್ಶ್‍ಮೆಲೊ ಸಸ್ಯ ಆಲ್ಥೇಯಾ ಒಫ಼ಿಸಿನಾಲಿಸ್‍ನಿಂದ ತಯಾರಿಸಲಾದ ಒಂದು ಔಷಧೀಯ ಮಿಶ್ರಣದ ಆಧುನಿಕ ಸ್ವರೂಪ.