ಮಾರ್ಮಲೇಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾರ್ಮಲೇಡ್ ಸಕ್ಕರೆ ಮತ್ತು ನೀರಿನೊಂದಿಗೆ ಕುದಿಸಲಾದ ಸಿಟ್ರಸ್ ಹಣ್ಣುಗಳ ರಸ ಮತ್ತು ಸಿಪ್ಪೆಯಿಂದ ತಯಾರಿಸಲಾದ ಒಂದು ಹಣ್ಣಿನ ಪ್ರಿಜ಼ರ್ವ್. ಇದನ್ನು ಕಮ್‍ಕ್ವಾಟ್‍ಗಳು, ನಿಂಬೆಗಳು, ಲೈಮ್‍ಗಳು, ಗ್ರೇಪ್‍ಫ಼್ರೂಟ್‍ಗಳು, ಮ್ಯಾಂಡರಿನ್ ಕಿತ್ತಳೆಗಳು, ಕಿತ್ತಳೆಗಳು, ಬರ್ಗಮಟ್ ಕಿತ್ತಳೆಗಳು ಮತ್ತು ಇತರ ಸಿಟ್ರಸ್ ಹಣ್ಣುಗಳು, ಅಥವಾ ಇವುಗಳ ಯಾವುದೇ ಸಂಯೋಜನೆಯಿಂದ ಉತ್ಪಾದಿಸಬಹುದು. ಮಾರ್ಮಲೇಡ್ ಸಾಮಾನ್ಯವಾಗಿ ಅದರ ಹಣ್ಣಿನ ಸಿಪ್ಪೆಯ ಬಳಕೆಯ ಕಾರಣ ಜ್ಯಾಮ್‍ನಿಂದ ಭಿನ್ನವಾಗಿದೆ. ಅದನ್ನು ಜ್ಯಾಮ್‍ನಿಂದ ಬಳಸಲಾದ ಹಣ್ಣುಗಳಿಂದಲೂ ಪ್ರತ್ಯೇಕಿಸಬಹುದು.