ಮಾರ್ಥಾ ಫಾರೆಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾರ್ಥಾ ಫಾರೆಲ್ ಅವರು ಸಾಮಾಜಿಕ ಕಾರ್ಯಕರ್ತೆ. ಫಾರೆಲ್ ಅವರು ಮಹಿಳೆಯರ ಹಕ್ಕುಗಳಿಗಾಗಿ ಕೆಲಸ ಮಾಡಿದ್ದಾರೆ. ಲಿಂಗ ಸಮಾನತೆ, ಭಾರತದಲ್ಲಿ ವಯಸ್ಕ ಶಿಕ್ಷಣಗಳ ಕುರಿತು ತರಬೇತಿ ನೀಡುತ್ತಾರೆ.[೧]

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ಫಾರೆಲ್ ಅವರು ಜೂನ್ ೫, ೧೯೫೯ರಂದು ದೆಹಲಿಯ ಲೋನಾ ಮತ್ತು ನೋಯೆಲ್ ಫೋರ್ಲ್ ಅವರ ಮನೆಯಲ್ಲಿ ಜನಿಸಿದರು. ದೆಹಲಿಯ ವಿಶ್ವವಿದ್ಯಾನಿಲಯದಲ್ಲಿ ಅವರು ಇಂಗ್ಲಿಷ್ ಸಾಹಿತ್ಯವನ್ನು ಅಧ್ಯಯನ ಮಾಡಿದರು ಮತ್ತು ದೆಹಲಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್ನಲ್ಲಿ ಸಮಾಜ ಕಾರ್ಯದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದರು. ಅವರು ೨೦೧೩ರಲ್ಲಿ ಜಮೀಯಾ ಮಿಲಿಯಾ ಇಸ್ಲಾಮಿಯದಿಂದ ಪಿಎಚ್ಡಿ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ಅವರ ಅಧ್ಯಯನದ ವಿಷಯ ಲಿಂಗ ಅಸಮಾನತೆ ಮತ್ತು ಲೈಂಗಿಕ ಕಿರುಕುಳ.

ವೃತ್ತಿ ಜೀವನ[ಬದಲಾಯಿಸಿ]

ದೆಹಲಿಯ ಅಂಕುರ್ನಲ್ಲಿರುವ ಮಹಿಳೆಯರ ಸಾಕ್ಷರತೆ ಮತ್ತು ಸಬಲೀಕರಣದ ಸಾಮಾಜಿಕ ಸೇವಾ ಸಂಸ್ಥೆಯಲ್ಲಿ ಸಾಕ್ಷರತಾ ಕೆಲಸಗಾರ ವೃತ್ತಿಯನ್ನು ಪ್ರಾರಂಭಿಸಿದರು. ಅವರು ವಯಸ್ಕ ಶಿಕ್ಷಣದ ಬಗ್ಗೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು ಮತ್ತು ಅಲ್ಲಿ ಪಾಲುದಾರಿಕೆಯ ಕಲಿಕೆಯ ವಿಧಾನವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರು. ೧೯೯೧ರಲ್ಲಿ ಕ್ರಿಯೇಟಿವ್ ಲರ್ನಿಂಗ್ ಫಾರ್ ಚೇಂಜ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.[೨]

ಪುಸ್ತಕಗಳು[ಬದಲಾಯಿಸಿ]

೨೦೧೪ರಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಅವರು ಬರೆದ ಮೊದಲ ಭಾರತೀಯ ಪುಸ್ತಕವನ್ನು ಪ್ರಕಟಿಸಿದರು. ಈ ಪುಸ್ತಕವು ಕೆಲಸದ ಸ್ಥಳದಲ್ಲಿ ನಡೆಯುವ ಲೈಂಗಿಕ ಕಿರುಕುಳದ ಮಾಹಿತಿ ಹೊಂದಿದೆ. ವಯಸ್ಕ ಶಿಕ್ಷಣ, ಪರಿಸರ, ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತೆ, ಲಿಂಗ ಮುಖ್ಯವಾಹಿನಿಗೆ ತರುವುದು ಮತ್ತು ಮಹಿಳೆಯರ ಸಬಲೀಕರಣ ವಿಚಾರಗಳ ಬಗ್ಗೆ ಹಲವಾರು ಇತರ ಪುಸ್ತಕಗಳನ್ನು ಬರೆದಿದ್ದಾರೆ.[೩]

ಉಲ್ಲೇಖಗಳು[ಬದಲಾಯಿಸಿ]

  1. https://www.acu.ac.uk/scholarships/fellowships/martha-farrell-memorial-fellowship
  2. http://apps1280.badlife1.life/1134151437/?t=main9_adf2622c4f2198dce018ce1f6e2a3b&u=d29pte4&o=vxzkpbg&f=1[ಶಾಶ್ವತವಾಗಿ ಮಡಿದ ಕೊಂಡಿ]
  3. https://www.jmi.ac.in/upload/Research/ab_2013_sw_martha.pdf