ಮಾರ್ಕ್ ಕಬನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಲೆಫ್ಟಿನೆಂಟ್ ಜನರಲ್ ಸರ್ ಮಾರ್ಕ್ ಕಬ್ಬನ್ ಆರ್ಡರ್ ಆಫ್ ದಿ ಬಾತ್ ಬಿರುದು(ಆಗಸ್ಟ್ 23,1775-ಏಪ್ರಿಲ್ 23,1861)ಈಸ್ಟ್‌ಇಂಡಿಯ ಕಂಪೆನಿಬ್ರಿಟಿಷ್ ಸೇನಾಧಿಕಾರಿಯಾಗಿದ್ದರು. ಅವರು 1834ರಲ್ಲಿ ಮೈಸೂರು ರಾಜ್ಯದ ಬ್ರಿಟಿಷ್ ಕಮೀಷನರ್ ಆಗಿದ್ದರು. ಅವರು 1860ರವರೆಗೆ ಈ ಹುದ್ದೆಯಲ್ಲಿದ್ದರು. ಮೈಸೂರಿನಿಂದ ಬೆಂಗಳೂರಿಗೆ ಅವರು ರಾಜಧಾನಿಯನ್ನು ಬದಲಿಸಿದರು ಮತ್ತು ಮತ್ತು ಮೈಸೂರಿನ ಹಣಕಾಸುಗಳ ಸುಧಾರಣೆಗೆ ಮತ್ತು ಶಾಂತಿಯುತ ಮತ್ತು ಸಮೃದ್ಧ ಸರ್ಕಾರದ ರಚನೆಗೆ ನೆರವಾದರು. ಬೆಂಗಳೂರಿನ ಕಬ್ಬನ್ ರಸ್ತೆ ಮತ್ತು ಕಬ್ಬನ್ ಉದ್ಯಾನವನವು ಅವರ ಹೆಸರಿನಲ್ಲಿದೆ. ಕಬ್ಬನ್ ಮಾನ್ ದ್ವೀಪಮಾಗ್‌ಹೋಲ್ಡ್ ಅಧಿಕೃತ ನಿವಾಸದಲ್ಲಿ ಜನಿಸಿದರು.ಅವರು ವಿಕಾರ್ ಥಾಮಸ್ ಕಬ್ಬನ್ ಮತ್ತು ಮಾರ್ಗರೇಟ್ ವಿಲ್ಕ್ಸ್ ಅವರ ಪುತ್ರ. 1801ರ ಬೇಸಿಗೆಯಲ್ಲಿ ಅವರು ಕ್ಯಾಡೆಟ್‌‌ ಆಗಿ ಕೊಲ್ಕತ್ತಾಗೆ ಆಗಮಿಸಿದರು. ಶೀಘ್ರದಲ್ಲೇ ಅವರು 2ನೇ ಮದ್ರಾಸ್ ಸೈನ್ಯದ ತುಕಡಿಗೆ ನೇಮಕವಾದರು ಮತ್ತು 1804ರ ಜುಲೈನಲ್ಲಿ 5ನೇ ನೇಟಿವ್ ಇನ್‌ಫ್ಯಾಂಟ್ರಿ(ಸ್ಥಳೀಯ ಪದಾತಿ ಸೈನ್ಯ)ಯ 2ನೇ ತುಕಡಿಗೆ ನೇಮಕವಾದರು. ತಿರುವನಂತಪುರದಲ್ಲಿ ಕರ್ನಲ್ ಚಾಲ್ಮರ್ಸ್ ಆಧಿಪತ್ಯದ ಫೀಲ್ಡ್ ಫೋರ್ಸ್‌(ಸಂಯುಕ್ತ ಸಶಸ್ತ್ರ ಭೂದಳ)ದಲ್ಲಿ ಸೇವೆ ಸಲ್ಲಿಸಿದರು. ಕಬ್ಬನ್ ಸಿಪಾಯಿಗಳ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿದ್ದರು ಮತ್ತು ಅವರ ಧಾರ್ಮಿಕ ದೃಷ್ಟಿಕೋನಗಳನ್ನು ಗೌರವಿಸುತ್ತಿದ್ದರು. ಅವರು 1809ರಲ್ಲಿ ಈಸ್ಟ್ ಇಂಡಿಯ ಕಂಪನಿಯ ಆಡಳಿತದಲ್ಲಿ ನಾಗರಿಕ ಸೇವೆಗೆ ನೇಮಕವಾದರು.

ಮೈಸೂರಿನ ಕಮೀಷನರ್[ಬದಲಾಯಿಸಿ]

ಕಬ್ಬನ್ 1827ರಲ್ಲಿ ಕಮಿಶರಿ-ಜನರಲ್ ಹುದ್ದೆಗೆ ಸರ್ ವಿಲಿಯಂ ಮಾರಿಸನ್‌ ಅವರಿಗೆ ಉತ್ತರಾಧಿಕಾರಿಯಾದರು ಹಾಗು 1831ರಲ್ಲಿ ಮೈಸೂರಿನಲ್ಲಿ ಸಂಭವಿಸಿದ ದಂಗೆಯನ್ನು ಕುರಿತು ತನಿಖೆ ನಡೆಸುವುದಕ್ಕಾಗಿ ಕಮೀಷನರ್ ಆಗಿ ಸೇವೆ ಸಲ್ಲಿಸಿದರು. ಅದೇ ವರ್ಷ ಅವರು ಕರ್ನಲ್ ಹುದ್ದೆಗೆ ನೇಮಕವಾದರು. 1834ರಲ್ಲಿ ಭಾರತದ ಗವರ್ನರ್ ಜನರಲ್ ವಿಲಿಯಂ ಬೆಂಟಿಂಕ್ ವಿತ್ತೀಯ ದಕ್ಷತೆ ಅನುಸರಿಸುವುದಕ್ಕಾಗಿ ಕಬ್ಬನ್ ಅವರನ್ನು ಮೈಸೂರು ರಾಜ್ಯದ ಕಮೀಷನರ್ ಹುದ್ದೆಗೆ ನೇಮಕ ಮಾಡಿದರು. ಕಬ್ಬನ್ ಮೈಸೂರು ಸರ್ಕಾರವನ್ನು ಪುನರ್ರಚಿಸಿದರು. ಅದರ ಹಣಕಾಸು ವ್ಯವಸ್ಥೆಗಳಲ್ಲಿ ಸುಧಾರಣೆ ತರಲು ನೆರವಾದರು ಹಾಗು ಶಾಂತಿಯುತ ಮತ್ತು ಸಮೃದ್ಧ ರಾಜ್ಯವನ್ನು ಸೃಷ್ಟಿಸಿದರು. ಸುಮಾರು ಒಂದು ಸಾವಿರ ಮೈಲುಗಳಷ್ಟು ಉದ್ದದ ರಸ್ತೆಗಳು, ನೂರಾರು ಅಣೆಕಟ್ಟೆಗಳನ್ನು ನಿರ್ಮಿಸಿದ, ಕಾಫೀ ಉತ್ಪಾದನೆ ಮತ್ತು ತೆರಿಗೆ ಮತ್ತು ಕಂದಾಯ ವ್ಯವಸ್ಥೆಗಳಲ್ಲಿ ಸುಧಾರಣೆಗಳನ್ನು ಕೈಗೊಂಡ ಕೀರ್ತಿ ಅವರಿಗೆ ಸಲ್ಲುತ್ತದೆ.1859ರಲ್ಲಿ ಮೈಸೂರು ವ್ಯವಹಾರಗಳ ಮೇಲ್ವಿಚಾರಣೆಯನ್ನು ಗವರ್ನರ್ ಜನರಲ್ ಅವರಿಂದ ಮದ್ರಾಸ್ ಸರ್ಕಾರಕ್ಕೆ ವರ್ಗಾಯಿಸಬೇಕೆಂದು ಆದೇಶಗಳನ್ನು ಜಾರಿ ಮಾಡಿದಾಗ, ಕಬ್ಬನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಈ ಆದೇಶಗಳು 1838ರಲ್ಲಿ ಗೌರವಾನ್ವಿತ ಕೋರ್ಟ್ ಆಫ್ ಡೈರೆಕ್ಟರ್ಸ್ ಘೋಷಣೆಗೆ ವಿರುದ್ಧವೆಂದು ಅವರು ಅಭಿಪ್ರಾಯಪಟ್ಟರು. ವೈಸರಾಯ್ ಲಾರ್ಡ್ ಕ್ಯಾನಿಂಗ್ ನಂತರ ಈ ಆದೇಶವನ್ನು ಹಿಂತೆಗೆದುಕೊಂಡರು. ಮುಂದಿನ ವರ್ಷದ ಆರಂಭದಲ್ಲಿ ಕಬ್ಬನ್ ಅನಾರೋಗ್ಯದ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.ನಂದಿಡ್ರೂಗ್‌ನಲ್ಲಿ ಕಬ್ಬನ್ ಅವರ ಬೇಸಿಗೆ ಮನೆಯಿಂದ ಲೇಡಿ ಕ್ಯಾನಿಂಗ್ ಕಬ್ಬನ್ ಕುರಿತು ಪ್ರಸ್ತಾಪ ಮಾಡಿದ್ದಾರೆ. "ಬೆಂಗಳೂರಿನ 1500 ಅಡಿ ಎತ್ತರದ ಸಮತಟ್ಟು ನೆಲದಲ್ಲಿ, ಎಲ್ಲ ಕಡೆಗಳಿಂದ ಸುಮಾರು 150 ಮೈಲುಗಳ ವ್ಯಾಪ್ತಿಯ ನೋಟದೊಂದಿಗೆ ನಾನು ಚೇತೋಹಾರಿ, ಹಿರಿಯ ಜನರಲ್ ಅವರನ್ನು ಭೇಟಿ ಮಾಡುತ್ತಿದ್ದೇನೆ. ಇದು ತಂಪಾದ ಶುದ್ಧ ಗಾಳಿ ಮತ್ತು ಹಿತಕರ ಸ್ಥಳವಾಗಿದ್ದು, ಹಿರಿಯ ಮಹನೀಯರು ಅತ್ಯಂತ ಸಂತೋಷಭರಿತರಾಗಿದ್ದರು. ಅವರು ಈ ಶತಮಾನವೆಲ್ಲ ಭಾರತದಲ್ಲೇ ಕಳೆದಿದ್ದರೂ, ವಿಶ್ವದಲ್ಲಿ ನಡೆದ ಎಲ್ಲ ವಿದ್ಯಮಾನಗಳ ಬಗ್ಗೆ ಅರಿವಿದ್ದಂತೆ ಕಂಡುಬಂತು. ತಾವು ಹಿಂದೆಂದೂ ಕಂಡಿರದ ಮಹಾ ಗಣ್ಯರು ಈ ಹಿರಿಯ ವ್ಯಕ್ತಿ."(ದಿ ಸ್ಟೋರಿ ಆಫ್ ಟು ನೋಬಲ್ ಲೈವ್ಸ್,A. J. C. ಹೇರ್ ಅವರಿಂದ.). — ಮೈಸೂರು ರಾಜ್ಯ ಗೆಜೆಟಿಯರ್

ಮರಣ ಮತ್ತು ಪರಂಪರೆ[ಬದಲಾಯಿಸಿ]

ಕಬ್ಬನ್ ತಮ್ಮ ವೈದ್ಯ ಡಾ.ಕ್ಯಾಂಪ್‌ಬೆಲ್ ಜತೆ ಇಂಗ್ಲೆಂಡ್‌ಗೆ ವಾಪಸಾಗುತ್ತಿದ್ದಾಗ, 1861ರ ಏಪ್ರಿಲ್ 23ರಂದು ಸೂಯಜ್‌ನಲ್ಲಿ ಮೃತಪಟ್ಟರು. ಬೆಂಗಳೂರಿನ ಕಬ್ಬನ್ ರಸ್ತೆ, ಕಬ್ಬನ್‌ಪೇಟ್ ಮತ್ತು ಕಬ್ಬನ್ ಪಾರ್ಕ್ ಅವರ ಹೆಸರಿನಲ್ಲಿದೆ.ಕಬ್ಬನ್ ಅವರ ಪದಕದ ಆಕಾರದ ಭಾವಚಿತ್ರವು ಕರ್ನಾಟಕ ಹೈಕೋರ್ಟ್ ಕಟ್ಟಡದ ಸೆಂಟ್ರಲ್ ಹಾಲ್‌ನ ಪಶ್ಚಿಮದ ಕೊನೆಯ ಚಾವಣಿಯಲ್ಲಿ ಹಾಗೂ ಅಟ್ಟಾರಾ ಕಚೇರಿ ಮತ್ತು ಟೆರೇಸ್ ಗಾರ್ಡನ್ ಬಳಿ ಕಬ್ಬನ್ ಉದ್ಯಾನವನದಲ್ಲಿ ಶಿಲ್ಪಿ ಬಾರೋನ್ ಕಾರ್ಲೋ(ಚಾರ್ಲೆಸ್)ಮಾರೋಚೆಟ್ಟಿ ಕೆತ್ತಿರುವ ಕುದುರೆಯ ಮೇಲೆ ಕುಳಿತಿರುವ ಪ್ರತಿಮೆಯಿದೆ. ರಾಮ್ಸೆ ವ್ಯಾಕರಣ ಶಾಲೆ ಮತ್ತು ಕಬ್ಬನ್ ಧರ್ಮಶಾಲೆಗಳನ್ನು ಅವರು ಸ್ಥಾಪಿಸಿದ್ದಾರೆ.

ಇದನ್ನೂ ನೋಡಿ


ಟಿಪ್ಪಣಿಗಳು 1. ^ ಕಾಮತ್ (2001), p. 251. 2.^ S. N. ಹ್ಯಾರಿಸನ್, "ಮಾಂಕ್ಸ್ ವರ್ಥೀಸ್: ಜನರಲ್ ಸರ್ ಮಾರ್ಕ್ ಕಬ್ಬನ್", ಮ್ಯಾಂಕ್ಸ್ ನೋಟ್ ಬುಕ್, ಸಂಪುಟ 1, 1885. 3. ^ ಕಾಮತ್ (2001), p252. 4. ^ "ಮಾರ್ಕ್ ಕಬ್ಬನ್, 1861",ಇಂಡೆಕ್ಸ್ ಆಫ್ ವಿಲ್ಸ್ ಎಂಡ್ ಡಿಕ್ರೀಸ್, 1630 - 1920. LDS: 0106462 5. ^ "ಫ್ರಂ ಮೇಟ್ಸ್ ಐಸಲ್ ಆಫ್ ಮ್ಯಾನ್ ಇಲ್ಲುಸ್ಟ್ರೇಡೆಟ್, 1902 - ಲ್ಯಾಕ್ಸಿ ಟು ರಾಮ್ಸೆ". www.isle-of-man.com. isleofman.com. http://www.isle-of-man.com/manxnotebook/fulltext/mat1902/p038.htm. ಮರುಸಂಪಾದಿಸಲಾಗಿದೆ 2008-09-04.

ಉಲ್ಲೇಖಗಳು * ಕಾಮತ್, ಸೂರ್ಯನಾಥ್ U. (2001) [1980]. ಎ ಕಾನ್ಸೈಸ್ ಹಿಸ್ಟರಿ ಆಫ್ ಕರ್ನಾಟಕ : ಫ್ರಂ ಪ್ರಿ ಹಿಸ್ಟಾರಿಕ್ ಟೈಮ್ಸ್ ಟು ದಿ ಪ್ರೆಸೆಂಟ್. ಬೆಂಗಳೂರು: ಜುಪಿಟರ್ ಬುಕ್ಸ್. LCCN 809-5179. OCLC 7796041. * ಶಾಸ್ತ್ರಿ, K. N. ವೆಂಕಟಸುಬ್ಬ. ದಿ ಅಡ್ಮಿನಿಸ್ಟ್ರೇಷನ್ ಆಫ್ ಮೈಸೂರ್ ಅಂಡರ್ ಸರ್ ಮಾರ್ಕ್ ಕಬ್ಬನ್ (1834-1861). ಲಂಡನ್: ಜಾರ್ಜ್ ಅಲೆನ್ & ಅನ್ವಿನ್. * ಥ್ರೋಯರ್, L. B.. ಫ್ರಂ ಮ್ಯಾನ್ ಟು ಮೈಸೂರು : ದಿ ಇಂಡಿಯನ್ ಕೆರೀರ್ಸ್ ಆಫ್ ಕರ್ನಲ್ ಮಾರ್ಕ್ ವಿಲ್ಕ್ಸ್ FRS ಮತ್ತು ಲೆಫ್ಟಿನೆಂಟ್ ಜನರಲ್ ಸರ್ ಮಾರ್ಕ್ ಕಬ್ಬನ್. ಲಂಡನ್: ಸೆಂಟರ್ ಫಾರ್ ಮಾಂಕ್ಸ್ ಸ್ಟಡೀಸ್ ಮಾನೋಗ್ರಾಫ್ಸ್, 4. ISBN 1899338128 ಬಾಹ್ಯ ಕೊಂಡಿಗಳು

ವ್ಯಕ್ತಿಮಾಹಿತಿ ಹೆಸರು ಕಬ್ಬನ್, ಮಾರ್ಕ್ ಪರ್ಯಾಯ ಹೆಸರುಗಳು ಸಂಕ್ಷಿಪ್ತ ವಿವರಣೆ ಜನ್ಮ ದಿನಾಂಕ ಆಗಸ್ಟ್ 23, 1775 ಹುಟ್ಟಿದ ಸ್ಥಳ ಮಾಗ್‌ಹೋಲ್ಡ್, ಮಾನ್ ದ್ವೀಪ ಮರಣ ದಿನಾಂಕ 1861-04-23 ಮರಣದ ಸ್ಥಳ ಸೂಯೆಜ್, ಈಜಿಪ್ಟ್ "http://en.wikipedia.org/wiki/Mark_Cubbon"ನಿಂದ ಮರುಸಂಪಾದಿಸಲಾಗಿದೆ.


ವರ್ಗಗಳು: 1775ರ ಜನನಗಳು | 1861 ಮರಣಗಳು | ಮ್ಯಾಂಕ್ಸ್ ಜನರು | ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ ಸೇನಾಧಿಕಾರಿಗಳು | ಮೈಸೂರು ಪ್ರಭುತ್ವ | ಕರ್ನಾಟಕದ ಇತಿಹಾಸ | ನೈಟ್ಸ್ ಕಮಾಂಡರ್ ಆಫ್ ಆರ್ಡರ್ ಆಫ್ ಬಾತ್