ವಿಷಯಕ್ಕೆ ಹೋಗು

ಮಾರಿಯೊ ವಾರ್ಗಸ್ ಲೋಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
The Marquis of Vargas Llosa
ಮಾರಿಯೊ ವಾರ್ಗಸ್ ಲೋಸ

Mario Vargas Llosa at the XIII Prix Diálogo (2016)


ಜನನ (1936-03-28) ಮಾರ್ಚ್ ೨೮, ೧೯೩೬ (ವಯಸ್ಸು ೮೮)
Arequipa, Arequipa, Peru

ಜನನ ಹಾಗೂ ಬಾಲ್ಯ

[ಬದಲಾಯಿಸಿ]

'ಮಾರಿಯೊ ವಾರ್ಗಸ್ ಲೋಸ'ರವರು, ಲ್ಯಾಟಿನ್ ಅಮೆರಿಕದ ಪೆರು ರಾಜ್ಯದ 'ಅರೆಕ್ವಿಪ' ಎಂಬಲ್ಲಿ ಮಾರ್ಚ್, ೨೮, ೧೯೩೬ ರಲ್ಲಿ ಜನಿಸಿದರು. ಸನ್, ೨೦೧೦ರ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ದಕ್ಷಿಣ ಅಮೆರಿಕದಲ್ಲಿ ಜನಿಸಿದ ಸ್ಪಾನಿಷ್ ಮಾತೃಭಾಷೆಯ ಇಂಗ್ಲಿಷ್ ಲೇಖಕ, 'ಮಾರಿಯೊ ವಾರ್ಗಸ್ ಲೋಸ'ರವರು ಗಳಿಸಿದ್ದಾರೆ. ದಕ್ಷಿಣ ಅಮೆರಿಕದ 'ಪೆರು'ವಿನ ೭೪ ವರ್ಷ ಹರೆಯದ,'ಮಾರಿಯೊ ವಾರ್ಗಸ್ ಲೋಸ'ರವರು, ಸ್ಪಾನಿಷ್ ಭಾಷೆಯನ್ನಾಡುವ ಜಗತ್ತಿನ ಕಾವ್ಯಾಸಕ್ತರಿಗೆಲ್ಲಾ ಪ್ರಿಯರಾದವರು. ತಮ್ಮ ಸಾಹಿತ್ಯಿಕ-ವೃತ್ತಿಜೀವನದಲ್ಲಿ 'ಮಾರಿಯೊ ವಾರ್ಗಸ್ ಲೋಸ' ರವರು ಬರೆದ ಹಲವಾರು ಕಾದಂಬರಿಗಳಲ್ಲಿ, ಸುಮಾರು ೩೦ ಕ್ಕು ಹೆಚ್ಚು ಕಾದಂಬರಿ, ನಾಟಕ, ಟೀಕೆ-ಟಿಪ್ಪಣಿಗಳು, ಮತ್ತು ಪ್ರಬಂಧಗಳು, ಹೆಚ್ಚು ಗುರುತಿಸಲ್ಪಟ್ಟಿವೆ. ಅವರ 'ಕಾನ್ವರ್ಸೇಷನ್ ಇನ್ ದ ಕೆಥೆಡ್ರೆಲ್,' 'ಗ್ರೀಗ್ ಹೌಸ್' ಎಂಬ ಕೃತಿಗಳು ಅತಿ ಮುಖ್ಯವಾದವುಗಳು. ೧೯೯೫ ರಲ್ಲಿ, ಅವರಿಗೆ 'ಸರ್ವಾಂಟೆಸ್' ಬಹುಮಾನ ದೊರೆತಿತ್ತು. ಈ ಪ್ರಶಸ್ತಿ ಜಗತ್ತಿನ ಸ್ಪಾನಿಷ್ ಮಾತಾಡುವ, ಬರೆಯುವ, ಪ್ರತಿಭೆಗಳು ಗುರುತಿಸುವ, 'ಅತ್ಯಂತ ಪ್ರತಿಷ್ಠಿತ ಸಾಹಿತ್ಯ ಗೌರವ ಪ್ರಶಸ್ತಿ'ಯೆಂದು ಹೇಳಲಾಗಿದೆ.

೧೯೬೦ ರ ಹಿಂದೆಯೇ 'ಮಾರಿಯೊ ವಾರ್ಗಸ್ ಲೋಸ'ರವರು ಹಲವಾರು ಕಾದಂಬರಿ ಹಾಗೂ 'ಸಾಹಿತ್ಯಿಕ ಕೃಷಿ'ಯನ್ನು ಹುಲುಸಾಗಿ ಅಭ್ಯಸಿಸಿದ್ದರು

[ಬದಲಾಯಿಸಿ]

ಸನ್, ೧೯೬೦ ರಲ್ಲಿ, 'ಮಾರಿಯೊ ವಾರ್ಗಸ್ ಲೋಸ' ರವರ ಕಾದಂಬರಿ, 'ದ ಟೈಮ್ ಆಫ್ ದ ಹೀರೋ' ಪ್ರಕಟಿತವಾದ ಬಳಿಕ, 'ಅಂತಾರಾಷ್ಟ್ರೀಯ ಮನ್ನಣೆ' ಪ್ರಾಪ್ತವಾಗಿತ್ತು. ಇದೇ ತರಹದ ಇನ್ನೋರ್ವ ಲ್ಯಾಟಿನ ಅಮೆರಿಕದ, (ಕೊಲಂಬಿಯದ) ಲೇಖಕ, 'ಗೇಬ್ರಿಯೆಲ್ ಗಾರ್ಸಿಯ ಮಾರ್ಕ್ವೆಲ್' ರವರು, ಸನ್. ೧೯೮೨ ರಲ್ಲಿ, 'ನೋಬೆಲ್ ಸಾಹಿತ್ಯ ಪ್ರಶಸ್ತಿ,'ಯನ್ನು ಪಡೆದು ಭಾರಿ ಸುದ್ದಿಯಲ್ಲಿದ್ದರು.

'ಮಾರಿಯೋ' ರವರು ನಡೆದುಬಂದ ಹಾದಿ

[ಬದಲಾಯಿಸಿ]
  • 'The Time of the Hero,' ಪ್ರಥಮ ಕಾದಂಬರಿ ಪ್ರಕಟಿತವಾದದ್ದು, ೧೯೬೩ ರಲ್ಲಿ,
  • 'ಪೆರುದೇಶ'ದ 'ಅಧ್ಯಕ್ಷಪದವಿ'ಗೆ ಚುನಾವಣೆಯಲ್ಲಿ ನಿಂತು ಸೋಲನ್ನನುಭವಿಸಿದರು. ಸ್ಪಾನಿಷ್ ನಾಗರಿಕತ್ವವನ್ನು ಪಡೆದು 'ಸ್ಪೇನ್' ದೇಶಕ್ಕೆ ಹೋದರು.
  • ದಕ್ಷಿಣ ಅಮೆರಿಕದ ಸುಪ್ರಸಿದ್ಧ ಹಿರಿಯ ಲೇಖಕ, 'ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ ವಿಜೇತ', 'ಗೇಬ್ರಿಯೆಲ್ ಗಾರ್ಸಿಯ ಮಾರ್ಕ್ವಿಸ್' ರ ಜೊತೆಯಲ್ಲಿ ಅತ್ಯಂತ ಸ್ನೇಹದಿಂದಿದ್ದರು. ಆದರೆ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಅವರಲ್ಲಿ ವೈರಬೆಳೆದು ಅದು ಮಿತಿಮೀರಿ ವಿಕೋಪಕ್ಕೆ ಹೋಯಿತು. ಅದು ಎಷ್ಟು ವಿಷಮತೆಯ ಅತಿರೇಕಕ್ಕೆ ಹೋಯಿತೆಂದರೆ, ಅವರು ಒಬ್ಬರನ್ನೊಬ್ಬರು ಕಣ್ಣೆತ್ತಿ ನೋಡಲೂ ನಿರಾಕರಿಸುತ್ತಿದ್ದರು.

ಮೆಕ್ಸಿಕೊನಗರದ ಥಿಯೇಟರ್ ನಲ್ಲಿ 'ಚಕಮಕಿ ಮಾತು' ನಡೆದು ಪರಿಸ್ಥಿತಿ ಬಿಗಡಾಯಿಸಿತು

[ಬದಲಾಯಿಸಿ]

'ಮೆಕ್ಸಿಕೊ ನಗರ'ದ ’ಥಿಯೇಟರ್’ ಒಂದರಲ್ಲಿ ಒಸ್ ರವರು ಕೊಟ್ಟ ’ಪಂಚ್’ ನಿಂದ ಗೇಬ್ರಿಯೆಲ್ ಗಾರ್ಸಿಯ, ಚೇತರರಿಸಿಕೊಳ್ಳಲು ಸಾಧ್ಯವಾಗದೆ, ಅವರ ಕಣ್ಣಿನಕೆಳಗೆ 'ಕಪ್ಪು ಛಾಯೆ' ಮೂಡಿತು. ಜನಪ್ರಿಯತೆಯ ಶಿಖರದಲ್ಲಿದ್ದ ಒಸ ರವರು ಬರೆದ ಕೆಲವಾರು ಪುಸ್ತಕಗಳು, ಚಲನಚಿತ್ರಗಳಾದವು. ಜನರು ಆಸಕ್ತಿಯಿಂದ ಅವನ್ನು ವೀಕ್ಷಿಸುತ್ತಿದ್ದರು. 'ಮಾರಿಯೊ ವಾರ್ಗಸ್ ಲೋಸ'ರವರು, ಚಲನ-ಚಿತ್ರಗಳಿಗೆ ’ಚಿತ್ರಕತೆ’ ಬರೆಯುವುದರಲ್ಲಿ ನಿಸ್ಸೀಮರು.

'ಮಾರಿಯೊ ವಾರ್ಗಸ್ ಲೋಸ'ರವರು ಬರೆದು ಪ್ರಸ್ತುತಪಡಿಸಿದ ಜನರ ಅತ್ಯಂತ ಪ್ರೀತಿಯ 'ಚಲನ-ಚಿತ್ರಗಳು'

[ಬದಲಾಯಿಸಿ]
  • 'Tune in Tomorrow'
  • 'Aunt Julia and'

'ಮಾರಿಯೊ ವಾರ್ಗಸ್ ಲೋಸ' ರವರು ಬರೆದ ಅತ್ಯಂತ ಪ್ರಮುಖ ಜನಪ್ರಿಯ-ಕಾದಂಬರಿಗಳು

[ಬದಲಾಯಿಸಿ]
  • 'The Green house'
  • 'Conversation in the Cathedral'
  • 'The feast of the Goat'
  • 'Who killed Palomino Molero'
  • 'In praise of the step mother'
  • 'Note books of Don Rigoberto'
  • 'The Bad Girl'