ಮಾರಾಟ ಪ್ರಕ್ರಿಯೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾರುಕಟ್ಟೆ ಎಂಬ ಪದವು ಇಂಗ್ಲೀಷ್ ಶಬ್ದವಾದ 'ಮಾರ್ಕೆಟ್'ನ ಕನ್ನಡ ರೂಪವಾಗಿದೆ. ಮಾರ್ಕೆಟ್ ಎಂಬ ಪದವು ಲ್ಯಾಟಿನ್ ಭಾಷೆಯ 'ಮಾರ್ಕೆಟಸ್' ಎಂಬ ಪದದಿಂದ ಬಂದಿದೆ. ಇದರ ಅರ್ಥ ವ್ಯಾಪಾರ ನಡೆಯುವ ಸ್ಥಳ. ಸಾಮಾನ್ಯವಾಗಿ ಮಾರುಕಟ್ಟೆ ಎಂದರೆ, ಮಾರಾಟಗಾರರು ಮತ್ತು ಗ್ರಾಹಕರು ಪರಸ್ಪರ ಭೇಟಿಮಾಡಿ ಸರಕು ಮತ್ತು ಸೇವೆಗಳನ್ನು ಮಾರಾಟ ಮಾಡುವ ಮತ್ತು ತೆಗೆದುಕೊಳ್ಳಲು ಒಂದು ಸ್ಥಳ ಎಂದು ಹೇಳಲಾಗುತ್ತದೆ. ಆದರೆ ವಿಶಾಲಾತ್ಮಕ ಮತ್ತು ಆಧುನಿಕ 0ಧೃಷ್ಟಿಯಲ್ಲಿ, ಮರುಕಟ್ಟೆಯ ಒಂದು ನಿರ್ದಿಷ್ಟ ಸ್ಥಳಕ್ಕೆ ಸಂಬಂದಿಸಿರುವುದಿಲ್ಲ. ಬದಲಾಗಿ ಮಾರಟಗಾರರು ಮತ್ತು ಗ್ರಾಹಕರು ಪ್ರತ್ಯಕ್ಷವಾಗಿ ಅಥವಾ ಯಾವುದಾದರೊಂದು ಸಂಪಕ೯ ಮಾಧ್ಯಮದ ಮೂಲಕ ಪರೋಕ್ಷವಾಗಿ ಸಂಪಕಿ೯ಸಿ ಸರಕು ಮತ್ತು ಸೇವೆಗಳನ್ನು ವಿನಿಮಯ ಮಾಡಿಕೊಳ್ಳುವ ಸನ್ನಿವೇಶವಾಗಿದೆ ಎಂದು ಅಥೈ೯ಸಬಗುದು. ಮಾರಾಟ ಪ್ರಕ್ರಿಯೆಯು ಗ್ರಾಹಕರ ಅವಶ್ಯಕತೆಗಳನ್ನು ಗುರುತಿಸುವ, ಆ ಅವಶ್ಯಕತೆಗಳಿಗೆ ಸರಿಹೊಂದುವಂತೆ ಸರಕುಗಳನ್ನು ಉತ್ಪಾದಿಸುವ ಮತ್ತು ಉತ್ಪಾದಿಸಿದ ಸರಕುಗಳನ್ನು ಗ್ರಾಹಕರಿಗೆ ಲಾಭಕ್ಕೆ ವಿತರಣೆ ಮಾಡುವ ಎಲ್ಲಾ ಚಟುವಟಿಕೆಗಳನ್ನು ಒಳಗೊಂಡಿದೆ. "ಇದು ಸರಕು ಮತ್ತು ಸೇವೆಗಳಿಗಿರುವ ಗ್ರಾಹಕರ ವಾಸ್ತವಿಕ ಮತ್ತು ಸಂಭವನೀಯ ಅಗತ್ಯಗಳನ್ನು ಗುರುತಿಸುವುದು ಮತ್ತು ಆ ಅಗತ್ಯಗಳನ್ನು ತೃಪ್ತಿಪಡಿಸಲು ಅವಶ್ಯಕವಾದ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಸಂಬಂಧಿಸಿದೆ"


ಮಾರಾಟ ನಿರ್ವಣೆ (Marketing Managment)[ಬದಲಾಯಿಸಿ]

ಮಾರುಕಟ್ಟೆ ಮತ್ತು ಮಾರಟ ಪ್ರಕ್ರಿಯೆಗಳ ಅರ್ಥವನ್ನು ತಿಳಿದುಕೊಂಡ ನಂತರ ಮಾರಟ ನಿರ್ವಹಣೆಯ ಅರ್ಥವನ್ನು ತಿಳಿದುಕೊಳ್ಳುವು ಅವಶ್ಯಕ. ಮಾರಟ ನಿರ್ವಹಣೆಯು ಕೆಲವು ನಿರ್ವಹಣಾ ಕಾರ್ಯಗಳನ್ನು ಒಳಗೊಂಡಿದೆ. ಇದು ಉತ್ಪಾದಕರು ಮತ್ತು ಗ್ರಾಹಕರ ನಡುವೆ ಸರಕು ಮತ್ತು ಸೇವೆಗಳು ವಿನಿಮಯವಾಗುವುದಕ್ಕೆ ಅಗತ್ಯವಾದ ಚಟುವಟಿಕೆಗಳನ್ನು ಯೇಜಿಸುವ, ಸಂಘಟಿಸುವ, ನಿರ್ದೇಶಿಸುವ ಮತ್ತು ನಿಯಂತ್ರಣ ಮಾಡುವ ಕಾರ್ಯಗಳಿಗೆ ಸಂಬಂಧಿಸಿದೆ. ಆದುದರಿಂದ ಮಾರಾಟ ನಿರ್ವಹಣೆಯು ಗ್ರಾಹಕರ ಸಂತೃಪ್ತಿಯೊಂದಿಗೆ ಸರಕು ವಿನಿಮಯದ ಅಪೇಕ್ಷಿತ ಗುರಿಗಳನ್ನು ಸಾಧಿಸುವುದರ ಮೇಲೆ ಕೇಂಧ್ರೀಕೃತಚವಾಗಿದೆ. ನಿರ್ವಹಣಾ ಶಾಸ್ತ್ರದ ದೃಷ್ಟಿಕೋನದಲ್ಲಿ, ಮಾರಾಟ ನಿರ್ವಹಣೆಯು ಮಾರಾಟ ಚಟುವಟಿಕೆಗಳನ್ನು ವಿಶ್ಲೇಷಿಸುವ, ಮಾರಾಟ ಕಾರ್ಯಯೋಜನೆಗಳನ್ನು ರೂಪಿಸಿ, ಜಾರಿಗೊಳಿಸುವ ಮತ್ತು ನಿಯಂತ್ರಣ ವ್ಯವಸ್ಷೆಯನ್ನು ಆಚರಣೆಗೆ ತರುವ ಕಾರ್ಯಗಳನ್ನು ಒಳಗೊಂಡಿದೆ. ಸಂಸ್ಥೆಯ ಉದ್ದೇಶಗಳನ್ನು ಯಶಸ್ವಿಯಾಗಿ ಸಾಧಿಸಲು ಅನುವಾಗುವಂತೆ ಈ ಎಲ್ಲ ಕಾರ್ಯಗಳನ್ನು ನಿರ್ವಹಿಸಬೇಕು.

ಮಾರಾಟ ಪ್ರಕ್ರಿಯೆ ಕಾರ್ಯಗಳು(Functions Of Marketing)[ಬದಲಾಯಿಸಿ]

ಆಧುನಿಕ ಮಾರಾಟ ಪ್ರಕ್ರಿಯೆಯು ಹಲವಾರು ಕಾರ್ಯಗಳನ್ನು ಒಳಗೊಂಡಿದೆ. ಸಂಸ್ಥೆಯ ಮಾರಾಟ ಚಟುವಟಿಕೆಗಳುನ್ನು ಅರ್ಥಪೂರ್ಣಗೊಳಿಸಲು ಈ ಎಲ್ಲಾ ಕಾರ್ಯಗಳನ್ನು ದಕ್ಷತೆಯಿಂದ ನಿರ್ವಹಿಸಬೇಕು. ಮಾರಾಟ ಪ್ರಕ್ರಿಯೆಯು ಒಳಗೊಂಡಿರುವ ಕೆಲವು ಪ್ರಮುಖ ಕಾರ್ಯಗಳನ್ನು ಈ ಕೆಳಗಿನಂತೆ ವಿವರಿಸಬಹುದು.

a) ಮಾರುಕಟ್ಟೆ ಮಾಹಿತಿ ಸಂಗ್ರಹಣೆ ಮತ್ತು ವಿಶ್ಲೇಷಣೆ(Gathering and analysing marketing informatiom): ಈ ಕಾರ್ಯವು ಮಾರುಕಟ್ಟೆ ಪರಿಸ್ಥಿತಿ ಬಗೆಗಿನ ಮಾಹಿತಿ ಸಂಗ್ರಹಿಸುವುದನ್ನು ಒಳಗೊಂಡಿದೆ. ಆಂದರೆ, ಸಂಭವನೀಯ ಗ್ರಾಹಕರ ಸಂಖ್ಯೆ, ಅವರು ವಾಸಿಸುವ ಪ್ರದೇಶ, ಅವರ ಆಯ್ಕೆಗಳು, ಕೊಳ್ಳುವ ಶಕ್ತಿ, ಖರೀದಿ ವರ್ತನೆ ಮುಂತಾದ ಮಾಹಿತಿ ಸಂಗ್ರಹಿಸುವುದಾಗಿದೆ. ಸಂಗ್ರಹಿಸಿದ ಮಾಹಿತಿ ವಿಶ್ಲೇಷಣೆಯ ಆಧಾರದ ಮೇಲೆ ಮಾರಾಟ ಸಂಸ್ಥೆಯು ಸರಕುಗಳ ಯಶಸ್ವಿ ಮಾರಾಟಕ್ಕೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

b)ಮಾರಾಟ ಯೋಜನೆ(Market planning): ಈ ಕಾರ್ಯವು ಸಂಸ್ಥೆಯ ಉದ್ದೇಶಗಳ ಪರಿಮಿತಿಯೊಳಗೆ ಮಾರಾಟ ಗುರಿಗಳನ್ನು ಸಾಧಿಸಲು ಸರಣಿ ಯೋಜನೆಗಳನ್ನು ಸಿದ್ಧಪಡಿಸುದನ್ನು ಒಳಗೊಂಡಿದೆ. ಉದಾಹರಣೆಗೆ,ಒಂದು ಸಂಸ್ಥೆಯು ತನ್ನ ಮಾರುಕಟ್ಟೆ ಪಾಲನ್ನು ಹಿಂದಿನ ವರ್ಷಕ್ಕಿಂತ ಶೇ.10ರಷ್ಟು ಹೆಚ್ಚಿಸಬೇಕೆಂದು ನಿರ್ಧರಿಸಿದರೆ, ಸಂಸ್ಥೆಯ ಮಾರಾಟ ವಿಭಾಗವು ಆ ಉದ್ದೇಶವನ್ನು ಈಡೇರಿಸಲು ಸಾಧ್ಯವಾದ ಕಾರ್ಯ ಮಾರ್ಗಗಳ್ಳನ್ನು ಯೇಜಿಸಬೇಕು.

c)ವಸ್ತು ವಿನ್ಯಾಸ ಮತ್ತು ಅಭಿವೃಧಿ(Product designing and development): ಸಂಗ್ರಹಿಸಿದ ಮಾರುಕಟ್ಟೆ ಮಾಹಿತಿಯು ಉತ್ಪಾದಕರಿಗೆ ಮತ್ತು ವಿಕ್ರಯದಾರರಿಗೆ ಗ್ರಾಹಕರಿಗೆ ಅವಶ್ಯಕತೆಗಳ ಬಗಗೆ ಸ್ಪಷ್ಟವಾದ ಕಲ್ಪನೆಯನ್ನು ನೀಡುತ್ತದೆ. ಇದರಿಂದ ಹೊಸ ಸರಕುಳನ್ನು ಯೋಜಿಸಿ, ಅಭಿವೃದ್ಧಿಪಡಿಸಬಹುದು ಅಥವಾ ಈಗಾಗಲೇ ಮಾರುಕಟ್ಟೆಯಲ್ಲಿರುವ ಸರಕುಗಳನ್ನು ಮಾರ್ಪಡಿಸಬಹುದು.

d)ಪ್ರಮಾಣೀಕರಣ ಮತ್ತು ವರ್ಗೀಕರಣ(Standardisation & grading): ಪ್ರಮಾಣೀಕರಣ ಮತ್ತು ವರ್ಗೀಕರಣದ ಮೂಲಕ ಸರಕುಗಳನ್ನು ಗುಣಮಟ್ಟ, ಗಾತ್ರ, ಬಣ್ಣ, ವನ್ಯಾಸ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳಗಿ ಅಥವಾ ವರ್ಗಳಾಗಿ ವಿಂಗಡಿಸಿ ಪ್ರತಿಯೊಂದು ವರ್ಗದ ಸರಕುಗಳು ಒಂದೇ ರೀತಿಯಾಗಿರುವಂತೆ ಮಾಡಲಾಗುತ್ತದೆ. ಇದು ಸರಕು ಬೇಡಿಕೆಯನ್ನು ವೃದ್ಧಿಸಲು ಮತ್ತು ಗ್ರಾಹಕರ ಸಂತೃಪ್ತಿಯನ್ನು ಅಧಿಕಗೊಳಿಸಲು ಸಹಕಾರಿಯಾಗಿದೆ.

e)ಸಂವೇಷ್ಟಿಸುವಿಕೆ ಅಥವಾ ಗಂಟುಕಟ್ಟುವಿಕೆ ಹಾಗೂ ಗುರುತುಪಟ್ಟಿ ಅಂಟಿಸುವುದು(Packing and labelling): ಸಂವೇಷ್ಟಿಸುವಿಕೆಯು ಸೂಕ್ತವಾದ ಪೆಟ್ಟಿಗೆ ,ಬುಟ್ಟಿ ಅಥವಾ ಕವರ್ಗಳಲ್ಲಿ ಸರಕುಗಳನ್ನು ಸಂರಕ್ಷಿಸಿಡುವ ಪ್ರಕ್ರಿಯೆಯಾಗಿದೆ. ಉತ್ತಮವಾದ ಸಂವೇಷ್ಟನವು ಸರಕುಗಳು ಹಾನಿಗೊಳಗಾಹುಚುದು, ಒಡೆದುಹೋಗುವುದು, ಅಥವಾ ಸೋರಿ ವ್ಯರ್ಥವಾಗುವುದನ್ನು ತಪ್ಪಿಸುತ್ತದೆ. ಸರಕುಗಳನ್ನು ಉತ್ತಮವಾಗಿ ವಿನ್ಯಾಸಗೊಳಿಸಿದ ಪ್ಯಾಕಿಂಗ್ ಸಾಧನದಿಂದ ಪ್ಯಾಕು ಮಾಡಿದ ನಂತರ ಗುರುತು ಪಟ್ಟಿಯನ್ನು ಅಂಟಿಸಬೇಕು. ಗುರುತು ಪಟ್ಟಿಯಲ್ಲಿ ಮುದ್ರಿಸಲಾಗಿರುವ ಮಾಹಿತಿಗಳು ಸರಕುಗಳನ್ನು ಸರಿಯಾಗಿ ಬಳಕೆ ಮಾಡಲು ಮಾರ್ಗದರ್ಶನವನ್ನು ನೀಡುತ್ತವೆ.

f)ಮುದ್ರೆ ಹಾಕುವಿಕೆ(Branding): ಮುದ್ರೆ ಹಾಕುವಿಕೆಯು ಸರಕಿಗೆ ವಿಶಿಷ್ಟವಾದ ಹೆಸರನ್ನು ನೀಡುವ ಚಟುವಟಿಕೆಯಾಗಿದೆ. ಇದು ಮಾರುಕಟ್ಟೆಯಲ್ಲಿ ಗ್ರಾಹಕರು ಸರಕು ಮತ್ತು ಸೇವೆಗಳನ್ನು ಸುಲಭವಾಗಿ ಗುರುತಿಸಲು ಮತ್ತು ವಿವಿಧ ಉತ್ಪಾದಕರ ಸರಕುಗಳನ್ನು ಪ್ರತ್ಯೇಕಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಗ್ರಾಹಕರಿಗೆ ಸಾಮಾನ್ಯ ವಸ್ತುಗಳಿಗಿಂತ ಬ್ರಾಂಡೆಡ್ ವಸ್ತುಗಳು ಹೆಚ್ಚು ಆಕರ್ಷಣೀಯವಾಗಿರುತ್ತವೆ.

g)ಗ್ರಾಹಕ ನೆರವಿನ ಸೇವೆಗಳು (Customer suppot service): ಇದು ಗ್ರಾಹಕರ ವಿಚಾರಣೆಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸುವುದು, ಅವರ ಕುಂದುಕೊರತೆಗಳನ್ನು ನಿವಾರಿಸುವುದು ಮತ್ತು ಗ್ರಾಹಕರಿಗೆ ತಾಂತ್ರಿಕ ನೆರವನ್ನು ಒದಗಿಸುವಂತಹ ಹಲವಾರು ಚಟುವಟಿಕೆಗಳನ್ನು ಒಳಗೊಂಡಿದೆ. ಈ ವಿಧದ ಸೇವೆಗಳು, ಗ್ರಾಹಕರು ಸರಕುಗಳನ್ನು ಮತ್ತೆ ಮತ್ತೆ ಖರೀದಿಸಲು ಉತ್ತೇಜನ ನೀಡುತ್ತವೆ.

i)ಪ್ರವರ್ತನೆ(Promotion): ಗ್ರಾಹಕರು ಸರಕು ಮತ್ತು ಸೇವೆಗಳನ್ನು ಕೊಂಡುಕೊಳ್ಳಲು, ಮರು-ಮಾರಾಟ ಮಾಡಲು, ಶಿಫಾರಸ್ಸು ಮಾಡಲು ಅಥವಾ ಬಳಸಲು, ಉತ್ಪಾದಕರು ಅಥವಾ ಮಾರಾಟಗಾರರು ಗ್ರಾಹಕರನ್ನು ಪ್ರೇರೇಪಿಸುವ ಚಟುವಟಿಕೆಯಾಗಿದೆ. ಇದು ಜಾಹೀರಾತು, ವೈಯಕ್ತಿಕ ಮಾರಾಟ, ಪ್ರಚಾರದಂತಹ ಹಲವಾರು ಚಟುವಟಿಕೆಗಳನ್ನು ಒಳಗೊಂಡಿದೆ. ಈ ಎಲ್ಲಾ ಕಾರ್ಯಗಳ ಉದ್ದೇಶವು ಗ್ರಾಹಕರಿಗೆ ಅವರ ಬಯಕೆಗಳನ್ನು ತೃಪ್ತಿಪಡಿಸುವ ಸರಕು ಮತ್ತು ಸೇವೆಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಬಗ್ಗೆ ಮಾಹಿತಿ ತಿಳಿಸುವ ಹಾಗು ಆ ಸರಕು ಮತ್ತು ಸೇವೆಗಳಲ್ಲಿ ಗ್ರಾಹಕರಿಗೆ ಆಸಕ್ತಿ ಹುಟ್ಟಿಸುವುದಕ್ಕೆ ಸಂಬಂಧಿಸಿದೆ.

j)ವಿತರಣಾ ಮಾರ್ಗದ ಆಯ್ಕೆ(Channelising distribution): ಇದು ಸರಕು ಮತ್ತು ಸೇವೆಗಳನ್ನು ಗ್ರಾಹಕರಿಗೆ ವಿತರಣೆ ಮಾಡಲು ಮಧ್ಯವರ್ತಿಗಳನ್ನು ಗುರುತಿಸುವುದು ಮತ್ತು ಅವರ ಸೇವೆಗಳನ್ನು ಬಳಸಿಕೊಳ್ಳುವುದನ್ನು ಒಳಗೊಂಡಿದೆ. ಸರಕು ಮತ್ತು ಸೇವೆಗಳ ಗುಣಲಕ್ಷಣದ ಆಧಾರದ ಮೇಲೆ ನಿರ್ದಿಷ್ಟವಾದ ವಿತರಣಾ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು.

k)ಸಾರಿಗೆ(Transport): ಸಾರಿಗೆಯು ಸರಕುಗಳನ್ನು ಉತ್ಪಾದನೆಯಾದ ಸ್ಥಳದಿಂದ ಅನುಭೋಗದ ಸ್ಥಳಕ್ಕೆ ಸಾಗಾಟ ಮಾಡುವ ಮೂಲಕ ಸ್ಥಳದ ತುಷ್ಟಿಗುಣವನ್ನು ಸೃಷ್ಟಿಸುತ್ತದೆ. ಸಾರಿಗೆ ವ್ಯವಸ್ಥೆಯನ್ನು ವಿಕ್ರಯದಾರ ಸ್ವಂತವಾಗಿ ಹೊಂದಿರಬಹುದು ಇಲ್ಲವೇ ಹೊರಗಿನಿಂದ ಬಾಡಿಗೆ ಆಧಾರದಲ್ಲಿ ಪಡೆಯಬಹುದು.

l)ದಾಸ್ತಾನುಗಾರಿಕೆ(warehousing): ಬೇಡಿಕೆಯ ನಿರೀಕ್ಷೆಯೊಂದಿಗೆ ಸರಕುಗಳನ್ನು ಅನುತೂಲಕರವಾದ ಸ್ಥಳದಲ್ಲಿ ಶೇಖರಿಸಿ, ಸಂರಕ್ಷಿಸಿಡುವುದೇ ದಾಸ್ತಾನುಗಾರಿಕೆಯಾಗಿದೆ. ಇದು ಸರಕುಗಳನ್ನು ದಾಸ್ತಾನು ಮಾಡುವುದು ಮತ್ತು ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಸರಬರಾಜು ಮಾಡುವ ಕಾರ್ಯದ ಮೂಲಕ ಕಾಲದ ತುಷ್ಟಿಗುಣವನ್ನು ಸೃಷ್ಟಿಸುತ್ತದೆ.

ಮಾರಾಟ ಮಿಶ್ರಣ (marketing Mix)[ಬದಲಾಯಿಸಿ]

ಮಾರಾಟ ಮಿಶ್ರಣ ಪರಿಕಲ್ಪನೆಯನ್ನು ಪ್ರಚುರಪಡಿಸಿದರು. ಸಂಸ್ಥೆಯ ವಿವಿಧ ಮಾರಾಟದ ಗುರಿಗಳನ್ನು ಸಾಧಿಸಲು ರೂಪಿಸಲಾದ ಸಮಗ್ರ ಮಾರಾಟ ಕಾರ್ಯ ತಂತ್ರಗಳನ್ನು ಮಾರಾಟ ಮಿಶ್ರಣ ಎಂದು ಕರೆಯಲಾಗುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಗ್ರಾಹಕರ ಸಂತೃಪ್ತಿಯನ್ನು ಕೇಂದ್ರವಾಹಿರಿಸಿಕೊಂಡು ಅದರ ಸುತ್ತ ಆವರ್ತನಗೊಳ್ಳುತ್ತಿರುವ ನಾಲ್ಕು ಮೂಲಾಂಶಗಳಾದ ಸರಕು(Product), ಬೆಲೆ(Price), ಪ್ರವರ್ತನೆ(Promotion), ಸ್ಥಳ(Place) ಅಥವಾ ಭೌತಿಕ ವಿತರಣೆಗಳನ್ನು(Phyisical Distribution)ಸಂಯೋಜಿಸುವುದನ್ನು ಅಥವಾ ಐಕ್ಯಗೊಳಿಸುವುದನ್ನ್ಯ್ ಮಾರಾಟ ಮಿಶ್ರಣ ಎಂದು ಕರೆಯಬಹುದು. ಈ ಮೂಲಾಂಶಗಳು ಮಾರಾಟ ಮಿಶ್ರಣದ "ನಾಲ್ಕು -ಪಿ" ಗಳೆಂದು ಜನಪ್ರಿಯಗೊಂಡಿವೆ.

ಮಾರಾಟ ಮಿಶ್ರಣದ ಮೂಲಾಂಶಗಳು[ಬದಲಾಯಿಸಿ]

ಮಾರಾಟ ಮಿಸ್ಗ್ರಣವು ಸರಕು, ಬೆಲೆ, ಪ್ರವರ್ತನೆ ಮತ್ತು ಸ್ಥಳ ಎಂಬ ನಾಲ್ಕು ಮೂಲಾಂಶಗಳಿಂದ ಸಂಯೋಜಿತವಾಗಿದೆ. ಈ ಮೂಲಾಂಶಗಳು ಮಾರಾಟ ಕಾರ್ಯತಂತ್ರ ನಿರ್ಧಾರದ ಕೇಂದ್ರಬಿಂದುಗಳಾಗಿವೆ.

A. ಸರಕು ಅಥವಾ ವಸ್ತು ಮಿಶ್ರಣ(Product mix): ಸರಕು ಮಾರಾಟ ಮಿಶ್ರಣದ ಪ್ರಮುಖ ಮೂಲಾಂಶಗಳಲ್ಲೊಂದಾಗಿದ್ದು, ಪ್ರಮುಖವಾದ ಸ್ಥಾನವನ್ನು ಪಡೆದಿದೆ. ಸರಕನ್ನು ತುಷ್ಟಿಗುಣಗಳ ಕಂತೆ ಅಥವಾ ಕಟ್ಟು ಎಂದು ಅರ್ಥೈಸಬಹುದು. ಆದರೆ ಮಾರಾಟ ಪ್ರಕ್ರಿಯೆಯ ದೃಷ್ಟಿಕೋನದಲ್ಲಿ, ಗ್ರಾಹಕರ ಬಯಕೆಗಳನ್ನು ತೃಪ್ತಿಪಡಿಸುವ ಯಾವುದೇ ವಸ್ತು, ಸೇವೆ ಅಥವಾ ಕಲ್ಪನೆಯನ್ನು ಸರಕು ಎಂದು ಹೇಳಬಹುದು. ಗ್ರಾಹಕರು ಸರಕುಗಳನ್ನು ಮಾರುಕಟ್ಟೆಯಲ್ಲಿ ಸುಲಭವಾಗಿ ಗುರುತಿಸಲು ಉತ್ಪಾದಕರು ವಿಶಿಷ್ಟವಾದ ಹೆಸರು ಅಥವಾ ಚಿಹ್ನೆಯನ್ನು ನೀಡಿರುತ್ತಾರೆ. ಸರಕು ಮಿಶ್ರಣವು ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತದೆ.

•ಮುದ್ರೆ (ಬ್ರಾಂಡ್)

•ಶೈಲಿ

•ಬಣ್ಣ

•ವಿನ್ಯಾಸ

•ಸರಕು ಅನುಕ್ರಮ

•ಸಂವೇಷ್ಟಿಸುವಿಕೆ ಅಥವಾ ಗಂಟು ಕಟ್ಟುವುದು

•ಭರವಸೆ

B. ಬೆಲೆ ಮಿಶ್ರಣ(Price mix): ಬೆಲೆಯು ಹಣದ ರೂಪದಲ್ಲಿ ವ್ಯಕ್ತಪಡಿಸಿದ ಸರಕಿನ ವಿನಿಮಯ ಮೌಲ್ಯವಾಗಿದೆ. ಉತ್ಪಾದಕರು ಮತ್ತು ಮಾರಾಟಗಾರರು ಸರಕಿಗೆ ಸೂಕ್ತವಾದ ಬೆಲೆಯನ್ನು ನಿಗದಿ ಮಾಡುವ ಮೂಲಕ ವಾಸ್ತವಿಕ ಲಾಭವನ್ನು ಗಳಿಸುತ್ತಾರೆ. ಬೆಲೆ ಮಿಶ್ರಣವು, ಸರಕಿನ ಮೇಲೆ ಮಾಡಿದ ಉತ್ಪಾದನೆ ಮತ್ತು ವಿತರಣಾ ವೆಚ್ಚಗಳನ್ನು ಸರಿದೂಹಿಸಿಕೊಂಡು ನ್ಯಾಯಯುತವಾದ ಲಾಭ ಸಂಪಾದಿಸಲು ಸಮಂಜಸವಾದ ಬೆಲೆಯನ್ನು ನಿಗದಿ ಮಾಡುವುದಕ್ಕೆ ಸಂಬಂಧಿಸಿದೆ. ಬೆಲೆ ಮಿಶ್ರಣ ಪ್ರಮುಖ ಅಂಶಗಳನ್ನು ಈ ಕೆಳಕಂಡಂತೆ ಗುರುತಿಸಬಹುದು.

•ಬೆಲೆ ನಿರ್ಧಾರದ ಕಾರ್ಯತಂತ್ರ.

•ಬೆಲೆ ನಿರ್ಧಾರ ನೀತಿ.

•ಸಾಲದ ನಿಬಂಧನೆಗಳು.

•ರಿಯಾಯಿತಿಗಳು ಅಥವಾ ಸೋಡಿ.

C. ಪ್ರವರ್ತನೆಯ ಮಿಶ್ರಣ(Promotion mix): ಪ್ರವರ್ತನೆಯು ಪ್ರಮುಖವಾಗಿ ಸಂಸ್ಥೆಯ ಸರಕು ಮತ್ತು ಸೇವಗಳ ಬಗ್ಗೆ ಸಂಭವನೀಯ ಗ್ರಾಹಕರಿಗೆ ಸ್ಪಷ್ಟವಾದ ಮಾಹಿತಿ ನೀಡುವ ಮತ್ತು ಸರಕು ಹಾಗೂ ಸೇವಗಳನ್ನು ಕೊಂಡುಕೊಳ್ಳುವಂತೆ ಗ್ರಾಹಕರನ್ನು ಪ್ರೇರೇಪಿಸುವ ಅಥವಾ ಮನವೊಲಿಸುವ ಚಟುವಟಿಕೆಗಳಿಗೆ ಸಂಬಂಧಿಸಿದೆ. ಪ್ರವರ್ತನೆಯ ಮಿಶ್ರಣವು ಈ ಕೆಳಗೆ ತಿಳಿಸಿರುವ ನಾಲ್ಕು ಮೂಲಾಂಶಗಳನ್ನು ಒಳಗೊಂಡಿದೆ. ಅವುಗಳೆಂದರೆ,

•ವ್ಯೆಯಕ್ತಿಕ ಮಾರಾಟ

•ಪ್ರಚಾರ

•ಜಾಹೀರಾತು

•ಮಾರಾಟ ಪ್ರವರ್ತನೆ

D. ಸ್ಥಳದ ಮಿಶ್ರಣ(Place mix): ಸ್ಥಳ ಅಥವಾ ಭೌತಿಕ ವಿತರಣೆಯ ಮಿಶ್ರಣವು ಸರಕು ಅಥವಾ ಸೇವೆಗಳು ಸರಿಯಾದ ಸಮಯ, ಸ್ಥಳ ಮತ್ತು ಪ್ರಮಾಣದಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡುವುದಕ್ಕೆ ಸಂಬಂಧಿಸಿದೆ. ಇದು ಸರಕು ಮತ್ತು ಸೇವೆಗಳು ಉತ್ಪಾದಕರಿಂದ ಗ್ರಾಹಕರೆಡೆಗೆ ಸರಾಗವಾಗಿ ಪ್ರವಹಿಸಲು ಅನುವು ಮಾಡುತ್ತದೆ. ಸ್ಥಳದ ಮಿಶ್ರಣವು ಪ್ರಮುಖವಾಗಿ ಸ್ಥಳ, ಕಾಲ ಮತ್ತು ಮಾಲಿಕತ್ವದ ತುಷ್ಟಿಗುಣವನ್ನು ನಿರ್ಮಿಸುತ್ತದೆ. ಸ್ಥಳದ ಮಿಶ್ರಣವು ಈ ಅಂಶಗಳನ್ನು ಒಳಗೊಂಡಿದೆ.

•ವಿತಾರಣಾ ಮಾರ್ಗಗಳು (ಮಧ್ಯವರ್ತಿಗಳು, ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು).

•ಭೌತಿಕ ವಿತರಣೆ (ಸಾರಿಹೆ, ದಾಸ್ತಾನುಗಾರಿಕೆ, ದಾಸ್ತಾನು ನಿರ್ವಹಣೆ).