ಮಾನ್ವೆಲ್ ಟಾಮಾಯೊ ಇ ಬೊಯಸ್
ಮಾನ್ವೆಲ್ ಟಾಮಾಯೊ ಇ ಬೊಯಸ್ (1829-1898). 19ನೆಯ ಶತಮಾನದ ಸ್ಪೇನಿನ ಪ್ರಸಿದ್ಧ ನಾಟಕಕಾರರಲ್ಲಿ ಒಬ್ಬ.
ತಾಯಿ ಜಾಕ್ವಿನಾ ಬೊಯಸ್ ಸುಪ್ರಸಿದ್ಧ ನಟಿಯಾಗಿದ್ದುದರಿಂದ ಈತನಿಗೂ ಮತ್ತು ರಂಗಭೂಮಿಗೂ ನಿಕಟಸಂಬಂಧವಿತ್ತು.
ನಾಟಕಗಳು
[ಬದಲಾಯಿಸಿ]ಈತನ ಅಚ್ಚಾದ ಮೊದಲ ನಾಟಕಗಳೆಂದರೆ ಷಿಲರ್‍ನನ್ನು ಆದರಿಸಿ ಬರೆದ ಜ್ವಾನ ಡಿ ಆರ್ಕೊ (1847) ಮತ್ತು ಏಂಜಲ (1852). ವರ್ಜೀನಿಯ (1853) ಎಂಬ ಕೃತಿ ಆಲ್‍ಫಿಯರಿಯ ಶೈಲಿಯಲ್ಲಿ ರಚಿಸಿದ ನಾಟಕೀಯ ಪ್ರಬಂಧ. ಈತನ ಲ ಲೋಕುರ ಡಿ ಅಮೊರ್ (1855) ನಾಟಕ ಈತನನ್ನು ಸ್ಪೇನಿನ ಹಿರಿಯ ಮಟ್ಟದ ನಾಟಕಕಾರನನ್ನಾಗಿ ಮಾಡಿತು. ಹಿಜ ಇ ಮೇದ್ರೆ (1855) ಎಂಬ ಈತನ ಮತ್ತೊಂದು ನಾಟಕ ಯಶಸ್ವಿಯಾಗಲಿಲ್ಲ. ಲ ಬೋಲ ಡಿ ನಯೀವ್ (1856) ಎಂಬ ರೂಪಕ ಈತನ ಶ್ರೇಷ್ಠ ಕೃತಿ ಎನಿಸಿದೆ. ಅನಂತರ ಕೆಲವು ವರ್ಷಗಳು ಹಣಕಾಸಿನ ಬಿಗಿಯಿಂದಾಗಿ ಟಾಮಾಯೊ ಸ್ವತಂತ್ರ ಕೃತಿಗಳ ರಚನೆಯನ್ನು ಬದಿಗೊತ್ತಿ ಲಿಯಾನ್ ಲಾಯ, ಜೂಲ್ಸ್ ಸ್ಯಾಂಡೊ ಮತ್ತು ಎಮಿಲಿ ಓಜ್ಯಾಯೆರನ್ನು ಆಧರಿಸಿ ಕೃತಿಗಳನ್ನು ರಚಿಸಬೇಕಾಯಿತು. ಈ ಸಮಯದಲ್ಲಿ ಈತ ರಚಿಸಿದ ಏಕೈಕ ಸ್ವತಂತ್ರ ಕೃತಿ ಲಾನ್ಸೆಸ್ ಡಿ ಆನರ್ (1863), ಇದು ಬಹುವಾಗಿ ಸಾರ್ವಜನಿಕರ ವಿವಾದಕ್ಕೊಳಗಾದ ಕೃತಿ.